Tuesday, March 31, 2020

ವಿಶ್ವಾದ್ಯಂತ ಒಂದೇ ದಿನ1 ಲಕ್ಷ ಹೊಸಬರಿಗೆ ಸೋಂಕು ಜಾಗತಿಕ ಸಾವಿನ ಸಂಖ್ಯೆ 39,074, ಸೋಂಕು 8,04,073

ವಿಶ್ವಾದ್ಯಂತ ಒಂದೇ ದಿನ1 ಲಕ್ಷ ಹೊಸಬರಿಗೆ ಸೋಂಕು
ಜಾಗತಿಕ ಸಾವಿನ ಸಂಖ್ಯೆ 39,074, ಸೋಂಕು 8,04,073
ಭಾರತ: 2000 ಸೋಂಕು ಪ್ರಕರಣ, ಒಟ್ಟು ಸಾವು 35
ನವದೆಹಲಿ: ವಿಶ್ವಾದ್ಯಂತ ಕೊರೋನಾವೈರಸ್ ಸಾಂಕ್ರಾಮಿಕ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ 2020 ಮಾರ್ಚ್ 31ರ ಮಂಗಳವಾರ  ಒಂದೇ ದಿನದಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು ಜಾಗತಿಕ ಸೋಂಕಿತರ ಸಂಖ್ಯೆ ,೦೪,೦೭೩ಕ್ಕೆ ಏರಿದೆ. ಸೋಂಕಿಗೆ ಬಲಿಯಾದವರ ಸಂಖ್ಯೆ ಜಗತ್ತಿನಲ್ಲಿ ೩೯,೦೭೪ಕ್ಕೆ ಏರಿತು.
ಭಾರತದಲ್ಲಿ ಒಂದೇ ದಿನದಲ್ಲಿ 146  ಮಂದಿ ಕೊರೋನಾವೈರಸ್ ಪಾಸಿಟಿವ್ ವರದಿ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆಯನ್ನು 2000ಕ್ಕೆ ಏರಿಸಿದೆ. ಒಟ್ಟು ಸಾವಿನ ಸಂಖ್ಯೆ 35ಕ್ಕೆ ಏರಿತು.
ಯುರೋಪಿನಲ್ಲಿ ಶೀಘ್ರವೇ ಪರಿಸ್ಥಿತಿ ಸ್ಥಿರಗೊಳ್ಳಲು ಆರಂಭವಾಗಲಿದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯೂ ಎಚ್ ) ಹೇಳಿದ್ದರೂ, ಕೊರೋನಾವೈರಸ್ ಸೋಂಕಿನಲ್ಲಿ ಅಮೆರಿಕ ಮತ್ತು ಇಟಲಿಯ ಬಳಿಕ ಚೀನಾವನ್ನು ಮೀರಿಸಿದ ಮೂರನೇ ರಾಷ್ಟ್ರದ ಸ್ಥಾನಕ್ಕೆ ಸ್ಪೇನ್ ಏರಿತು.
ಅಮೆರಿಕದಲ್ಲಿ ವರ್ಜಿನಿಯಾ, ಮೇರಿಲ್ಯಾಂಡ್ ರಾಜ್ಯಗಳಲ್ಲಿ ತುರ್ತುಪರಿಸ್ಥಿತಿ ಜಾರಿಗೊಳಿಸಿ ಜನರಿಗೆ ಮನೆಗಳ ಒಳಗೇ ಇರುವಂತೆ ಆಜ್ಞಾಪಿಸಲಾಯಿತು. ಬೆನ್ನಲ್ಲೇ ವಾಷಿಂಗ್ಟನ್ ನಗರದಲ್ಲೂ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಯಿತು. ಒಂದು ಮಿಲಿಯ (೧೦ ಲಕ್ಷ) ಅಮೆರಿಕನ್ನರನ್ನು ಕೊರೋನಾವೈರಸ್ ಸೋಂಕು ಪತ್ತೆ ಸಲುವಾಗಿ ಪರೀಕ್ಷಿಸಲಾಗುತ್ತಿದ್ದು ಇದೊಂದು ಮೈಲಿಗಲ್ಲು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದರು.

ನಿಜಾಮುದ್ದೀನ್: ೪೪೧ ಮಂದಿಗೆ ರೋಗಲಕ್ಷಣ:
ಭಾರತದಲ್ಲಿ ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮರ್ಕಜ್ ಮಸೀದಿಯಿಂದ ತಬ್ಲಿಘಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ೧೫೦೦ ಮಂದಿಯನ್ನು ಮಂಗಳವಾರ ಸ್ಥಳಾಂತರಗೊಳಿಸಲಾಗಿದ್ದು ಅವರ ಪೈಕಿ ೨೪ ಜನರು, ೪೧ ಮಂದಿ ವಿದೇಶೀ ಯಾತ್ರಿಕರು ಮತ್ತು ೨೨ ಮಂದಿ ವಿದೇಶೀ ಯಾತ್ರಿಕರ ನಿಕಟ ಬಂಧುಗಳು ಸೇರಿದಂತೆ ೯೭ ಪ್ರಕರಣಗಳನ್ನು ವಿಶ್ಲೇಷಿಸಲಾಗಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ, ಯಾವುದೇ ಸಮುದಾಯ ವರ್ಗಾವಣೆ ಕಂಡು ಬಂದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.

ಕೊರೋನಾವೈರಸ್ ವಿರುದ್ಧದ  ನಮ್ಮ ಸಾಮೂಹಿಕ ಹೋರಾಟದಲ್ಲಿ ಸರ್ಕಾರವನ್ನು ಬೆಂಬಲಿಸುವಂತೆ ಜನರಿಗೆ ಮನವಿ ಮಾಡಿದ ಅವರು ಧಾರ್ಮಿಕ ನಾಯಕರು ಸಾಮೂಹಿಕ ಸಮಾವೇಶಗಳನ್ನು ಸಂಘಟಿಸುವುದರಿಂದ ದೂರ ಉಳಿಯಬೇಕು ಎಂದು ಆಗ್ರಹಿಸಿದರು.

ನವರಾತ್ರಿ (ಹಿಂದೂ ಉತ್ಸವ) ನಡೆಯುತ್ತಿದೆ, ಆದರೆ ಯಾರೂ ದೇವಾಲಯದಲ್ಲಿ ಇಲ್ಲ, ಗುರುದ್ವಾರಗಳು ಖಾಲಿ ಖಾಲಿಯಾಗಿವೆ. ಮೆಕ್ಕಾ ಖಾಲಿಯಾಗಿದೆ, ವೆಟಿಕನ್ ನಗರ ಖಾಲಿಯಾಗಿದೆ. ರೋಗವು ಮುಂದುವರೆದ ರಾಷ್ಟ್ರಗಳನ್ನು ಕೂಡಾ ಬಿಟ್ಟಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಬೇಜವಾಬ್ದಾರಿಯುತವಾಗಿ ವರ್ತಿಸಿದರೆ, ನಾವು ಸಮಸ್ಯೆಗಳನ್ನು ಆಹ್ವಾನಿಸಿಕೊಳ್ಳುತ್ತೇವೆ ಎಂದು ಕೇಜ್ರಿವಾಲ್ ಹೇಳಿದರು.

ನಿಜಾಮುದ್ದೀನ್ ಮಸೀದಿ ಪ್ರಕರಣದ ಬಗ್ಗೆ ವಿವರಗಳನ್ನು ನೀಡಿದ ಮುಖ್ಯಮಂತ್ರಿ ಒಟ್ಟು ,೫೪೮ ಜನರನ್ನು ಮರ್ಕಜ್ ಕಟ್ಟಡದಿಂದ ಹೊರತರಲಾಗಿದ್ದು ಅವರ ಪೈಕಿ ೪೪೧ ಜನರಲ್ಲಿ ರೋಗ ಲಕ್ಷಣಗಳು ಕಂಡು ಬಂದಿವೆ ಎಂದು ಹೇಳಿದರು.

ನಾವು ಅವರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದು ಅವರನ್ನು ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ರೋಗಲಕ್ಷಣಗಳು ಕಂಡು ಬರದ ,೧೦೭ ಮಂದಿಯನ್ನು ಏಕಾಂತವಾಸಕ್ಕೆ (ಕ್ವಾರಂಟೈನ್) ಕಳುಹಿಸಲಾಗಿದೆ ಎಂದು ಅವರು ನುಡಿದರು.

ತಬ್ಲಿಘಿ ಜಮಾತ್: ಪ್ರಕರಣ ದಾಖಲು
ದಕ್ಷಿಣ ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ಧಾರ್ಮಿಕ ಸಮಾವೇಶವನ್ನು ಸಂಘಟಿಸಿದ್ದಕ್ಕಾಗಿ ತಬ್ಲಿಘಿ ಜಮಾತ್‌ನ ಮೌಲಾನಾ ಸಾದ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸ್ ಕಮೀಷನರ್ ಮಂಗಳವಾರ ರಾತ್ರಿ ಪ್ರಕಟಿಸಿದರು.

ಸರ್ಕಾರದ ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ೧೮೯೭ರ ಸಾಂಕ್ರಾಮಿಕ ರೋಗಗಳ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಇತರ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.

ಬಸ್ತಿ ನಿಜಾಮುದ್ದೀನ್ನ ಮರ್ಕಜ್ ನಿರ್ವಹಣೆಯಲ್ಲಿ ಸರ್ಕಾರ ನೀಡಿದ್ದ ನಿರ್ದೇಶನಗಳನ್ನು ಉಲ್ಲಂಘಿಸಲಾಗಿದೆ ಎಂದು ಅವರು ನುಡಿದರು. ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸುಮಾರು ೧೫೦೦ ಜನರ ಪೈಕಿ ೪೪೧ ಮಂದಿಯಲ್ಲಿ ಕೊರೋನಾವೈರಸ್ ರೋಗ ಲಕ್ಷಣಗಳು ಕಂಡು ಬಂದಿವೆ ಎಂದು ಅವರು ನುಡಿದರು.

No comments:

Advertisement