My Blog List

Sunday, March 29, 2020

ಭಾರತ: ಕೊರೋನಾ ವೈರಸ್ ಗೆದ್ದವರ ಸಂಖ್ಯೆ ೮೬

ಭಾರತ: ಕೊರೋನಾ ವೈರಸ್ ಗೆದ್ದವರ ಸಂಖ್ಯೆ ೮೬
ಶೇ.೧೦ರಷ್ಟು ಕೋವಿಡ್ ಸೋಂಕಿತರು ಚೇತರಿಕೆ
ನವದೆಹಲಿ: ದೇಶಾದ್ಯಂತ ಕೊರೋನಾವೈರಸ್ ಮಹಾಮಾರಿ ಸೋಂಕಿತರ ಸಂಖ್ಯೆ 1000 ದಾಟಿದ್ದು, ಸಾವನ್ನಪ್ಪಿದವರ ಸಂಖ್ಯೆ 27ಕ್ಕೆ ತಲುಪಿದೆ ಈಮಧ್ಯೆ, ಭಾರತದಲ್ಲಿ ಸುಮಾರು ೮೬ ಮಂದಿ ಕೋವಿಡ್- ೧೯ ಸೋಂಕಿತರು ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ 2020 ಮಾರ್ಚ್ 29ರ ಭಾನುವಾರ ಭಾನುವಾರ ಪ್ರಕಟಿಸಿತು.

ದೇಶಾದ್ಯಂತ ಕೊರೋನಾವೈರಸ್ ಸೋಂಕು ಪೀಡಿತರ ಸಂಖ್ಯೆ ಕ್ಷಿಪ್ರವಾಗಿ ಹರಡುತ್ತಿರುವುದರ ನಡುವೆ ಇದೊಂದು ನೆಮ್ಮದಿ ನೀಡುವ ಸುದ್ದಿಯಾಗಿದ್ದು, ಕೋವಿಡ್ ೧೯ ಸೋಂಕಿತರಲ್ಲಿ ಶೇ.೧೦ರಷ್ಟು ಮಂದಿ ಗುಣಮುಖರಾಗುತ್ತಿದ್ದಾರೆ. ದೇಶದಲ್ಲಿ ೮೬ ಮಂದಿ ಕೋವಿಡ್ ೧೯ ಪೀಡಿತರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ವಿವರಿಸಿತು.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೋವಿಡ್ ೧೯ ಸೋಂಕಿನ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರ ಮತ್ತು  ಕೇರಳ ಎರಡೇ ರಾಜ್ಯಗಳಲ್ಲಿ ಕೊರೋನಾವೈರಸ್  ಸೋಂಕು ಪೀಡಿತರ ಸಂಖ್ಯೆ ಒಟ್ಟು ೪೦೦ರ ಸಮೀಪದಲ್ಲಿದೆ.

ಮಹಾರಾಷ್ಟ್ರದಲ್ಲಿ ಕೋವಿಡ್ ೧೯ ಸೋಂಕಿತರ ಸಂಖ್ಯೆ ೧೮೬ಕ್ಕೆ ಏರಿದ್ದು, ಈವರೆಗೆ ಆರು ಮಂದಿ ಸಾವನ್ನಪ್ಪಿದ್ದಾರೆ. ೨೫ ಕೊರೋನಾವೈರಸ್ ಪೀಡಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಕೇರಳದಲ್ಲಿ  ಕೊರೋನಾವೈರಸ್ ಸೋಂಕು ಪೀಡಿತರ ಸಂಖ್ಯೆ ೧೮೨ಕ್ಕೆ ಏರಿದೆ. ದೇಶದಲ್ಲಿ ಈಗಾಗಲೇ ೨೫ ಜನರು ಸಾವನ್ನಪ್ಪಿದ್ದು, ೧೫ ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ವಿವರ ನೀಡಿದೆ.

No comments:

Advertisement