Sunday, March 1, 2020

ಮೊಟೆರಾ ಜನಸ್ತೋಮ ನೋಡಿ ಟ್ರಂಪ್ ಬೆರಗು..!

ಮೊಟೆರಾ ಜನಸ್ತೋಮ ನೋಡಿ ಟ್ರಂಪ್ ಬೆರಗು..!
ವಾಷಿಂಗ್ಟನ್ (ಅಮೆರಿಕ): ತಮ್ಮ ಇತ್ತೀಚಿನ ಎರಡು ದಿನಗಳ ಭಾರತ ಪ್ರವಾಸದ ವೇಳೆ ಅಹಮದಾಬಾದ್ ಸಮೀಪದ ಮೊಟೆರಾದ ಸರ್ದಾರ್ ವಲ್ಲಭಭಾಯ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೇರಿದ್ದ ಜನಸಾಗರವನ್ನು ಕಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆರಗಾಗಿದ್ದಾರೆ.

 ದಕ್ಷಿಣ ಕೊರೊಲಿನಾ ರಾಜ್ಯದಲ್ಲಿ ಅಧ್ಯಕ್ಷೀಯ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಭಾರತ ಪ್ರವಾಸದಿಂದ ತಾವು ಉಲ್ಲಸಿತನಾಗಿರುವುದಾಗಿ  2020 ಮಾರ್ಚ್ 02 ರ ಭಾನುವಾರ ಹೇಳಿಕೊಂಡರು.

‘ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗಿಯಾದ ಜನಸ್ತೋಮ ನನ್ನನ್ನು ಬೆರಗುಗೊಳಿಸಿದೆ.
ಅಮೆರಿಕದ ಈ ಸಭಾಂಗಣದಲ್ಲಿ  ೬೦ ಸಾವಿರ ಜನರಿಗೆ ಕೂರಲು ಅವಕಾಶವಿದ್ದರೂ ಹೆಚ್ಚೆಂದರೆ ೧೫ ಸಾವಿರ ಜನ ಪಾಲ್ಗೊಂಡಿದ್ದಾರೆ. ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನ ಭಾಗವಹಿಸಿದ್ದರು. ಇಷ್ಟೊಂದು ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ನೋಡಿದ ಬಳಿಕ ನನಗೆ ಅಮೆರಿಕದಲ್ಲಿ ನಡೆಯುತ್ತಿರುವ ಸಭೆಗಳು ದೊಡ್ಡದೆನಿಸುತ್ತಿಲ್ಲ. ನಮಸ್ತೆ ಟ್ರಂಪ್ ಕಾರ್ಯಕ್ರಮದ ಅನುಭವ ಎಂದಿಗೂ ಮರೆಯಲಾಗದ ಕ್ಷಣ’ ಎಂದು ಹೇಳಿದರು.

ಪ್ರಧಾನಿ ಮೋದಿ ಒಬ್ಬ ಅಸಾಮಾನ್ಯ ನಾಯಕ. ಭಾರತೀಯರು ತಮ್ಮ ಪ್ರಧಾನಿ ಮೋದಿ ಅವರನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಮೊಟೆರಾ ಕ್ರೀಡಾಂಗಣದ ಸಭೆಯೇ ಸಾಕ್ಷಿ ಎಂದಿರುವ ಟ್ರಂಪ್, ಇಂತಹ ಅಭೂತಪೂರ್ವ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿದ್ದಕ್ಕೆ ಮೋದಿಗೆ ಅಭಾರಿಯಾಗಿದ್ದೇನೆ ಎಂದು ಧನ್ಯವಾದ ಅರ್ಪಿಸಿದ್ದಾರೆ.

ಪತ್ನಿ ಮೆಲೆನಿಯಾ ಜತೆ ಆಗಮಿಸಿದ್ದ ಟ್ರಂಪ್ ಕುಟುಂಬ ಫೆ. ೨೪ ಮತ್ತು ೨೫ ರಂದು ಭಾರತ ಪ್ರವಾಸದಲ್ಲಿ ಅಹಮದಾಬಾದ್, ಆಗ್ರಾ, ದೆಹಲಿಯಲ್ಲಿ ಸುತ್ತಾಡಿತ್ತು.

No comments:

Advertisement