Saturday, March 14, 2020

ಕೊರೋನಾ ’ವಿಪತ್ತು’ಕೇಂದ್ರ ಅಧಿಸೂಚನೆ, ಮೃತರ ಕುಟುಂಬಕ್ಕೆ ೪ ಲಕ್ಷ ರೂ ಪರಿಹಾರ

ಕೊರೋನಾ  ವಿಪತ್ತುಕೇಂದ್ರ ಅಧಿಸೂಚನೆ,  ಮೃತರ ಕುಟುಂಬಕ್ಕೆ ಲಕ್ಷ ರೂ ಪರಿಹಾರ
ನವದೆಹಲಿ: ಕೊರೋನಾ ವೈರಸ್ ಸೋಂಕು ಇನ್ನೂ ಒಬ್ಬರಿಗೆ ತಗುಲಿ ದೇಶದಲ್ಲಿ ಸೋಂಕಿತರ ಸಂಖ್ಯೆ ೮೪ಕ್ಕೆ ಏರುತ್ತಿದ್ದಂತೆಯೇಕೋವಿಡ್-೧೯ನ್ನುವಿಪತ್ತುಎಂಬುದಾಗಿ 2020 ಮಾರ್ಚ್  14ರ ಶನಿವಾರ  ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಎಲ್ಲ ಕೊರೋನಾವೈರಸ್ ಸಾವುಗಳಿಗೂರಾಜ್ಯ ವಿಪತ್ತು ಪರಿಹಾರ ನಿದಿಯಿಂದ (ಎಸ್ಡಿಆರ್ಎಫ್) ಲಕ್ಷ ರೂಪಾಯಿಗಳ ಎಕ್ಸ್- ಗ್ರಾಷಿಯಾ ನೀಡುವುದಾಗಿ ಪ್ರಕಟಿಸಿತು.

ಇದೇ ವೇಳೆಗೆ ಭಾರತದಲ್ಲಿ ಮಂದಿ ಕೊರೋನಾವೈರಸ್ ಸೋಂಕಿತರು ಗುಣಮುಖರಾಗಿದ್ದು, ದೇಶದಲ್ಲಿ ಗುಣಮುಖರಾದವರ ಸಂಖ್ಯೆ ೧೦ಕ್ಕೆ ಏರಿದ ಸಂತಸದ ವರ್ತಮಾನವೂ ಬಂದಿತು.

ಜಗತ್ತಿನಾದ್ಯಂತ ಕೊರೋನಾವೈರಸ್ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ದೇಶಗಳ ಮಧ್ಯೆ ಗಡಿಗಳನ್ನು ದಿಗ್ಬಂಧನಕ್ಕೆ ಒಳಪಡಿಸಿ ಸೋಂಕು ಹರಡದಂತೆ ತಡೆಯುವ ಯತ್ನಗಳನ್ನು ತೀವ್ರಗೊಳಿಸಲಾಯಿತು.

ಭಾರತದಲ್ಲಿ ಕೋವಿಡ್-೧೯ ವ್ಯಾಪಕಗೊಳ್ಳುತ್ತಿರುವುದನ್ನು ಅನುಸರಿಸಿ ಮತ್ತು ಕೋವಿಡ್ -೧೯ನ್ನು ಸಾಂಕ್ರಾಮಿಕ ಪಿಡುಗು ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯೂಎಚ್) ಘೋಷಿಸಿದ್ದನ್ನು ಅನುಸರಿಸಿ ಕೇಂದ್ರ ಸರ್ಕಾರವು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ನೀಡಲು ಸಾಧ್ಯವಾಗುವಂತೆ ಸೋಂಕನ್ನುವಿಪತ್ತುಎಂಬುದಾಗಿ ಅಧಿಸೂಚನೆ ಹೊರಡಿಸಲು ಸರ್ಕಾರ ನಿರ್ಧರಿಸಿದೆಎಂದು ಗೃಹ ಸಚಿವಾಲಯವು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ. ಏಕಕಾಲಿಕ ವಿಶೇಷ ಕ್ರಮವಾಗಿ ಸರ್ಕಾರ ನಿರ್ಧಾರ ಕೈಗೊಂಡಿತು.

ಪರಿಹಾರ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡ ವ್ಯಕ್ತಿಗಳು ಸೇರಿದಂತೆ ಕೊರೋನಾವೈರಸ್ ಪರಿಣಾಮವಾಗಿ ಮೃತರಾದವರ ಕುಟುಂಬಗಳಿಗೆ ಲಕ್ಷ ರೂಪಾಯಿಗಳ ಪರಿಹಾರ (ಎಕ್ಸ್-ಗ್ರಾಷಿಯಾ) ಪಾವತಿ ಮಾಡಲಾಗುವುದು ಎಂದೂ ಪತ್ರದಲ್ಲಿ ತಿಳಿಸಲಾಯಿತು.
ಪರಿಹಾರ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡ ವ್ಯಕ್ತಿಗಳೂ ಸೇರದಿದಂತೆ ಕೊರೋನಾವೈರಸ್ನಿಂದಾಗಿ ಮೃತರಾದ ಪ್ರತಿ ವ್ಯಕ್ತಿಗೆ ಸೂಕ್ತ ಅಧಿಕಾರಿಯ ಪ್ರಮಾಣಪತ್ರವನ್ನು ಅನುಸರಿಸಿ ಲಕ್ಷ ರೂಪಾಯಿಗಳ ಪರಿಹಾರವನ್ನು ಒದಗಿಸಬೇಕುಎಂದು ಪತ್ರ ಹೇಳಿದೆ.

ಭಾರತದಲ್ಲಿ ಕೊರೋನಾವೈರಸ್ ಪರಿಣಾಮವಾಗಿ ಈವರೆಗೆ ಎರಡು ಸಾವುಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ ೮೦ ದಾಟಿದೆ.

ಹಲವಾರು ರಾಜ್ಯಗಳುಆರೋಗ್ಯ ತುರ್ತುಸ್ಥಿತಿಘೋಷಣೆ ಮಾಡಿ, ಸೋಂಕು ಹರಡದಂತೆ ತಡೆಯಲು ಮುಂಜಾಗರೂಕತಾ ಕ್ರಮವಾಗಿ ಹಲವಾರು ನಗರಗಳಲ್ಲಿ ಶಿಕ್ಷಣ ಸಂಸ್ಥೆಗಳು, ಮಾಲ್ಗಳು, ಚಿತ್ರಮಂದಿರಗಳನ್ನು ಮುಚ್ಚುವಂತೆ ಆಜ್ಞಾಪಿಸಿವೆ.

ಭಾರತದಲ್ಲಿ ಕಳೆದ ಒಂದು ವಾರದಿಂದ ಸೋಂಕು ದೃಢಪಟ್ಟವರ ಸಂಖ್ಯೆ ಏರುತ್ತಿದ್ದರೂ, ಸೋಂಕು ತೀವ್ರ ಸ್ವರೂಪದಲ್ಲಿ ಇಲ್ಲ. ಜೈಪುರದಲ್ಲಿ ದಾಖಲಾದ ಇಬ್ಬರು ರೋಗಿಗಳ ಹೊರತಾಗಿ ಉಳಿದವರಿಗೆ ಕೋವಿಡ್-೧೯ ಪ್ರಕರಣಗಳನ್ನು ನಿಭಾಯಿಸಲುಮಿತವಾಗಿ ಬಳಸುವಂತೆಸೂಚಿಸಲಾಗಿರುವ ಎಚ್ಐವಿ/ಏಡ್ಸ್ ನಿರೋಧಕ ಔಷಧವನ್ನು ಬಳಸಬೇಕಾದ ಅಗತ್ಯ ಬಂದಿಲ್ಲ.

ಬೆಂಗಳೂರಿನಿಂದ ಪರಾರಿಯಾದ ಮಹಿಳೆ: ಮಧ್ಯೆ ತನ್ನ ಪತಿಗೆ ಕೊರೋನಾವೈರಸ್ ಸೋಂಕು ತಗುಲಿದೆ ಎಂಬುದಾಗಿ ತಿಳಿದ ತತ್ ಕ್ಷಣವೇ ಪರಾರಿಯಾಗಿದ್ದ ಮಹಿಳೆ ದೆಹಲಿ ಮತ್ತು ಆಗ್ರಾಕ್ಕೆ ಭೇಟಿ ನೀಡಿದ್ದಳೆಂಬ ಮಾಹಿತಿ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಪತಿಗೆ ಕೊರೋನಾವೈರಸ್ ಸೋಂಕು ತಗುಲಿರುವುದು ಖಚಿತಪಟ್ಟ ಹಿನ್ನೆಲೆಯಲ್ಲಿ ಏಕಾಂಗಿ ವಾಸದಲ್ಲಿದ್ದ ಗೂಗಲ್ ಕಂಪೆನಿಯ ಉದ್ಯೋಗಿಯೊಬ್ಬರ ಪತ್ನಿ ಗುರುವಾರ ಪರಾರಿಯಾಗಿದ್ದು, ಶುಕ್ರವಾರ ಆಗ್ರಾದ ವಸತಿ ಕಾಲೋನಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮಹಿಳೆ ಕಣ್ಮರೆಯಾಗಿರುವುದು ವರದಿಯಾದ ತತ್ ಕ್ಷಣವೇ ಆಕೆಯನ್ನು ಪತ್ತೆ ಹಚ್ಚಲು ಶೋಧ ಆರಂಭಿಸಲಾಗಿತ್ತು. ರೈಲ್ವೇ ಸಚಿವಾಲಯವು ಆಗ್ರಾ ಅಧಿಕಾರಿಗಳಿಗೆ ಆಕೆ ಇರಬಹುದಾದ ನಿಖರ ತಾಣದ ಮಾಹಿತಿ ನೀಡಿದ್ದು, ಆಕೆ ಬೆಂಗಳೂರಿನಿಂದ ವಿಮಾನದ ಮೂಲಕ ದೆಹಲಿಗೆ ಹೋಗಿ ಅಲ್ಲಿಂದ ಆಗ್ರಾಕ್ಕೆ ರೈಲಿನ ಮೂಲಕ ತೆರಳಿದ್ದರು. ನಗರದ ರೈಲ್ವೇ ಕಾಲೋನಿಯಲ್ಲಿನ ತನ್ನ ಹೆತ್ತವರ ಮನೆಯಲ್ಲಿ ಹೋಳಿ ಆಚರಣೆ ಸಲುವಾಗಿ ಆಕೆ ತೆರಳಿದ್ದರು ಎಂದು ವರದಿಗಳು ಹೇಳಿವೆ.

೨೫ರ ಹರೆಯದ ಮಹಿಳೆಯನ್ನು ಆಗ್ರಾದ ಸರೋಜಿನಿ ನಾಯ್ಡು ಮೆಡಿಕಲ್ ಕಾಲೇಜಿನ ಏಕಾಂಗಿ ವಾಸದ ವಾರ್ಡಿಗೆ ಒಯ್ಯಲಾಗಿದ್ದು ಅಲ್ಲಿ ಅವರನ್ನು ತೀವ್ರ ನಿಗಾಕ್ಕೆ ಒಳಪಡಿಸಲಾಗಿದೆ. ಗಂಟಲ ದ್ರವದ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.

ಈಮಧ್ಯೆ, ರೈಲ್ವೇ ಅಧಿಕಾರಿಗಳು ಮಹಿಳೆಯ ತಂದೆ ಮತ್ತು ಸಹೋದರಿಯನ್ನು ೧೪ ದಿನಗಳ ಅವಧಿಗೆ ಏಕಾಂಗಿ ವಾಸಕ್ಕೆ ತೆರಳುವಂತೆ ಸೂಚಿಸಿದ್ದಾರೆ. ಕುಟುಂಬದ ಉಳಿದ ಮಂದಿಯ ಮೇಲೂ ತೀವ್ರ ನಿಗಾ ಇರಿಸಲಾಗಿದೆ.

ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಗೂಗಲ್ ನೌಕರ ಮತ್ತು ಅವರ ಪತ್ನಿ ಇತ್ತೀಚೆಗೆ ಇಟಲಿಯಿಂದ ಮಧುಚಂದ್ರ (ಹನಿಮೂನ್) ಮುಗಿಸಿಕೊಂಡು ವಾಪಸಾಗಿದ್ದರು. ಇಟಲಿಯು ಯುರೋಪಿನಲ್ಲಿ ಕೋವಿಡ್ -೧೯ ಅಥವಾ ಕೊರೋನಾವೈರಸ್ ಸೋಂಕಿನ ಕೇಂದ್ರವಾಗಿದೆ.
ಪತಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ದೃಢ ಪಟ್ಟ ಬಳಿಕ ಮಹಿಳೆ ಕಣ್ಮರೆಯಾದ ಪ್ರಕರಣ ಭಾರೀ ತಳಮಳಕ್ಕೆ ಕಾರಣವಾಗಿತ್ತು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೋವಿಡ್-೧೯ ಹೊರಬಿಟ್ಟ ಉಸಿರಿನ ಸಂಪರ್ಕಕ್ಕೆ ಬಂದಾಗ ಹರಡುತ್ತದೆ. ಅಂದರೆ, ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಉಸಿರು ಹೊರಹಾಕಿದಾಗ ಸಂಪರ್ಕಕ್ಕೆ  ಬಂದವರಿಗೆ ಅದು ತಗುಲುತ್ತದೆ. ಅಂದರೆ, ವೈರಸ್ ಹರಡದಂತೆ ತಡೆಯಲು ಸಲಹೆ ಮಾಡಲಾಗಿರುವ ಅತ್ಯುತ್ತಮ ಉಪಾಯ ಎಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.

ಭಾರತದಲ್ಲಿ ೮೦ಕ್ಕೂ ಹೆಚ್ಚು ಕೊರೋನಾವೈರಸ್ ಸೋಂಕು ತಗುಲಿದ ಪ್ರಕರಣಗಳು ವರದಿಯಾಗಿದ್ದು ಕನಿಷ್ಠ ಸಾವು ಸಂಭವಿಸಿದೆ. ೬೮ರ ಹರೆಯದ ಮಹಿಳೆಯೊಬ್ಬರು ದೆಹಲಿಯಲಿ ಶುಕ್ರವಾರ ರಾತ್ರಿ ಸಾವನ್ನಪಿದರೆ, ಗುರುವಾರ ಸಾವನ್ನಪ್ಪಿದ  ೭೬ರ ಹರೆಯದ ಉತ್ತರ ಕರ್ನಾಟಕದ ವೃದ್ಧನಿಗೆ ಕೊರೋನಾವೈರಸ್ ಸೋಂಕು ಖಚಿತಪಟ್ಟಿತ್ತು.

ಕೊರೋನಾಸಾವುಗಳನ್ನು ಅನುಸರಿಸಿ ಸರ್ಕಾರವು ಗಡಿಗಳನ್ನು ಮುಚ್ಚಿದ್ದಲ್ಲದೆ ರಾಜತಾಂತ್ರಿಕರನ್ನು ಹೊರತು ಪಡಿಸಿ ಉಳಿದವರ ವೀಸಾಗಳನ್ನು ಏಪ್ರಿಲ್ ೧೫ರವರೆಗೆ ಅಮಾನತುಗೊಳಿಸಿದೆ.
೩೭ ಅಂತಾರಾಷ್ಟ್ರೀಯ ಗಡಿ ಚೆಕ್ ಪೋಸ್ಟ್ ಗಳ ಪೈಕಿ ೧೮ನ್ನು ಮುಚ್ಚಲಾಗಿದೆ ಎಂದು ಗೃಹಸಚಿವಾಲಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದರು.

ಕೇರಳ, ದೆಹಲಿ, ಕರ್ನಾಟಕ ಸೇರಿದಂತೆ ಹಲವಾರು ರಾಜ್ಯ ಸರ್ಕಾರಗಳು ಮಾಲ್ಗಳು, ಚಿತ್ರಮಂದಿರಗಳು, ಶಾಲೆ ಕಾಲೇಜುಗಳನನು ರದ್ದು ಪಡಿಸಿವೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಗಳನ್ನೂ ರದ್ದು ಪಡಿಸಿದೆ.

ಶನಿವಾರ ಬಂಗಾಳ ಮತ್ತು ಗೋವಾ ಕೂಡಾ ಇಂತಹುದೇ ಕ್ರಮಗಳನ್ನು ಪ್ರಕಟಿಸಿವೆ. ಇದರ ಜೊತೆಗೆ ಶಂಕಿತ ಕೋವಿಡ್ -೧೯ ಪ್ರಕರಣ ಕಂಡು ಬಂದು ಹಿನ್ನೆಲೆಯಲ್ಲಿ ಪ್ರಮುಖ ಐಟಿ ಕಂಪೆನಿಯಾದ ಇನ್ ಫೋಸಿಸ್ ಕೂಡಾ ತಾತ್ಕಾಲಿಕವಾಗಿ ಬೆಂಗಳೂರು ಕಚೇರಿಯನ್ನು ಮುಚ್ಚಿ ಆವರಣವನ್ನು ಶುಚಿಗೊಳಿಸಲಾಗುವುದು ಎಂದು ಹೇಳಿದೆ.

ಕಳೆದ ವರ್ಷ ಡಿಸೆಂಬರಿನಲ್ಲಿ ಚೀನಾದ ವುಹಾನ್ ಜಿಲ್ಲೆಯ ಮಾರುಕಟ್ಟೆಯಲ್ಲಿ ಮೊತ್ತ ಮೊದಲಿಗೆ ಕಂಡು ಬಂದ ಕೊರೋನಾವೈರಸ್ ಈಗಾಗಲೇ ವಿಶ್ವಾದ್ಯಂತ ೫೦೦೦ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿದ್ದು, . ಲಕ್ಷ ಜನರಿಗೆ ಸೋಂಕು ತಗುಲಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್-೧೯ನ್ನು ಸಾಂಕ್ರಾಮಿಕ ಪಿಡುಗು ಎಂಬುದಾಗಿ ಘೋಷಿಸಿದೆ.

No comments:

Advertisement