My Blog List

Wednesday, March 4, 2020

ನಿರ್ಭಯಾ ಪ್ರಕರಣ: ಪವನ್ ಗುಪ್ತ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ

ನಿರ್ಭಯಾ ಪ್ರಕರಣ: ಪವನ್ ಗುಪ್ತ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ
ನವದೆಹಲಿ:  ೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳ ಪೈಕಿ ಒಬ್ಬನಾದ ಪವನ್ ಗುಪ್ತ ಸಲ್ಲಿಸಿದ್ದ ಕ್ಷಮಾದಾನ ಕೋರಿಕೆ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 2020 ಮಾರ್ಚ್  04ರ ಬುಧವಾರ ತಿರಸ್ಕರಿಸಿದರು. ಇದಕ್ಕೆ ಮುನ್ನ ದೆಹಲಿ ಸರ್ಕಾರವು ಗುಪ್ತ ಕ್ಷಮಾದಾನ ಕೋರಿಕೆ ಅರ್ಜಿಯನ್ನು ತಿರಸ್ಕರಿಸುವಂತೆ ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಿತ್ತು.

ನಾಲ್ವರು ಅಪರಾಧಿಗಳ ಪೈಕಿ ಪವನ್ ಗುಪ್ತ ಮಾತ್ರವೇ ತನ್ನ ಎಲ್ಲ ಕಾನೂನುಬದ್ಧ ಪರಿಹಾರಗಳನ್ನು ಬಳಸಿಕೊಳ್ಳಲು ಬಾಕಿ ಉಳಿದಿದ್ದ ವ್ಯಕಿಯಾಗಿದ್ದ.

ಸೋಮವಾರ ಪವನ್ ಗುಪ್ತ ಪರ ವಕೀಲ  ಎಪಿ ಸಿಂಗ್ ಅವರು ಪವನ್ ಗುಪ್ತ ರಾಷ್ಟ್ರಪತಿಯವರಿಗೆ ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸಿರುವುದನ್ನು ಗಮನಕ್ಕೆ ತಂದ ಬಳಿಕ ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಮಾರ್ಚ್ ೦೩ರ ಮಂಗಳವಾರಕ್ಕೆ ನಿಗದಿಯಾಗಿದ್ದ ಗಲ್ಲು ಶಿಕ್ಷೆ ಜಾರಿಯನ್ನು ಮುಂದಿನ ಆದೇಶದವರೆಗೆ ಮುಂದೂಡಿದ್ದರು.

ಮುಕೇಶ್ ಸಿಂಗ್, ಪವನ್ ಗುಪ್ತ, ವಿನಯ್ ಕುಮಾರ್ ಶರ್ಮ ಮತ್ತು ಅಕ್ಷಯ್ ಕುಮಾರ್ ನಾಲ್ಕು ಮಂದಿ ಅಪರಾಧಿಗಳನ್ನು ಮಾರ್ಚ್ ೩ರ ಮಂಗಳವಾರ ಬೆಳಗ್ಗೆ ಗಂಟೆಗೆ ಗಲ್ಲಿಗೆ ಏರಿಸಬೇಕಾಗಿತ್ತು.

ಇದಕ್ಕೆ ಮುನ್ನ ಸೋಮವಾರ ಪವನ್ ಗುಪ್ತ ಗಲ್ಲು ಜಾರಿಗೆ ತಡೆ ನೀಡುವಂತೆ ಕೋರಿ ಪವನ್ ಗುಪ್ತ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಬೆನ್ನಲ್ಲೇ ರಾಷ್ಟ್ರಪತಿಗೆ ಕ್ಷಮಾದಾನ ಕೋರಿಕೆ ಅರ್ಜಿ ಸಲಿಸಿದ ಪವನ್ ಗುಪ್ತ ಹೊಸ ಅರ್ಜಿ ಸಲ್ಲಿಸುವ ಮೂಲಕ ವಿಚಾರವನ್ನು ದೆಹಲಿ ನ್ಯಾಯಾಲಯದ ಗಮನಕ್ಕೆ ತಂದಿದ್ದ.

ಸೋಮವಾರ ಬೆಳಗ್ಗೆ ಪವನ್ ಗುಪ್ತ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದ ಬಳಿಕ ಆತ ರಾಷ್ಟ್ರಪತಿಯವರಿಗೆ ತನ್ನ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಸಲ್ಲಿಸಿದ್ದ.

೨೦೧೨ರ ಡಿಸೆಂಬರ್ ತಿಂಗಳಲ್ಲಿ ರಾಜಧಾನಿಯಲ್ಲಿ ನಾಲ್ವರು ಅಪರಾಧಿಗಳು ಮತ್ತು ಒಬ್ಬ ಬಾಲಾಪರಾಧಿ ಸೇರಿದಂತೆ ಒಟ್ಟು ಮಂದಿ ೨೩ರ ಹರೆಯದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆಸಿದ್ದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣ ಇದು. ಮಾಧ್ಯಮಗಳು ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದ ವಿದ್ಯಾರ್ಥಿನಿಯನ್ನು ನಿರ್ಭಯಾ ಎಂಬುದಾಗಿ ಕರೆದವು.

ಆರು ಮಂದಿ ಆರೋಪಿಗಳ ಪೈಕಿ ರಾಮ್ ಸಿಂಗ್ ಎಂಬ ಒಬ್ಬ ಆರೋಪಿ ವಿಚಾರಣಾ ಕಾಲದಲ್ಲಿಯೇ ತಿಹಾರ್ ಸೆರೆಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಂದು ಆಪಾದಿಸಲಾಗಿದೆ.
ಬಾಲಾಪರಾಧಿಯನ್ನು
  ಬಾಲಾಪರಾಧಿ ನ್ಯಾಯಮಂಡಳಿ ಆದೇಶದಂತೆ ಮೂರು ವರ್ಷಗಳ ಸುಧಾರಣಾ ಗೃಹವಾಸದ ಶಿಕ್ಷೆ ಅನುಭವಿಸಿದ ಬಳಿಕ ೨೦೧೫ರಲ್ಲಿ ಅಜ್ಞಾತ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ ತಿಹಾರ್ ಸೆರೆಮನೆಯಲ್ಲಿ ಇರುವ ಉಳಿದ ನಾಲ್ವರಿಗೆ ನ್ಯಾಯಾಲಯವು ವಿಚಾರಣೆ ಬಳಿಕ ಮರಣದಂಡನೆ ವಿಧಿಸಿತ್ತು.

ಬುಧವಾg ಬೆಳವಣಿಗೆಯೊಂದಿಗೆ ನಾಲ್ವರು ಅಪರಾಧಿಗಳ ಎಲ್ಲಾ ಕಾನೂನು ರಹದಾರಿಗಳು ಅಂತ್ಯಗೊಂಡಿವೆ.  ಹೀಗಾಗಿ ಮುಂದಿನ ಹದಿನೈದು ದಿನಗಳಲ್ಲಿ ಅವರನ್ನು ಗಲ್ಲಿಗೇರಿಸುವ ಸಾಧ್ಯತೆ ಇದೆ. ಸಂಬಂಧ ನಾಲ್ವರ ವಿರುದ್ಧ ಹೊಸ ಡೆತ್ ವಾರಂಟನ್ನು ದೆಹಲಿ ನ್ಯಾಯಾಲಯ ಹೊರಡಿಸಲಿದೆ.

೨೦೧೪ ಶತ್ರುಘ್ನ ಚೌಹಾಣ್ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳ ಪ್ರಕಾರ, ಅಪರಾಧಿಗಳಿಗೆ ತಮ್ಮ ವ್ಯವಹಾರಗಳನ್ನು ತೀರ್ಮಾನಿಸಲು ಮರಣದಂಡನೆಗೆ ಗುರಿಯಾಗುವ ತಯಾರಿ ಮಾಡಿಕೊಳ್ಳಲು ೧೪ ದಿನಗಳ ಕಾಲಾವಕಾಶ ನೀಡಬೇಕು.

ಡಿಸೆಂಬರ್ ೧೬-೧೭, ೨೦೧೨ ಮಧ್ಯರಾತ್ರಿಯಲ್ಲಿ ಚಲಿಸುವ ಬಸ್ಸಿನಲ್ಲಿ ೨೩ ವರ್ಷದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಾಲ್ವರು ಅಪರಾಧಿಗಳು ಮತ್ತು ಇತರ ಇಬ್ಬರು ಸಾಮೂಹಿಕ ಅತ್ಯಾಚಾರ ಮಾಡಿ ಅತ್ಯಂತ  ಕ್ರೂರವಾಗಿ ಹಿಂಸಿಸಿ ಬಸ್ಸಿನಿಂದ ಹೊರಕ್ಕೆ ಎಸೆದಿದ್ದರು.
ಸಂತ್ರಸ್ಥ ಯುವತಿ ಮುಂದಿನ ಕೆಲ ದಿನಗಳ ಕಾಲ ಜೀವನ್ಮರಣ ಹೋರಾಟದ ಬಳಿಕ ಸಿಂಗಾಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

No comments:

Advertisement