Wednesday, March 4, 2020

ಕೊರೋನಾವೈರಸ್: ಪ್ರಧಾನಿ ಮೋದಿ, ಶಾ, ನಡ್ಡಾ ಹೋಳಿ ಇಲ್ಲ

ಕೊರೋನಾವೈರಸ್ ಎದುರಿಸಲು ಭಾರತ ಸರ್ವ ಸಜ್ಜು
 ಪ್ರಧಾನಿ ಮೋದಿ, ಶಾ, ನಡ್ಡಾ ಹೋಳಿ ಇಲ್ಲ
ನವದೆಹಲಿ: ಕೋವಿಡ್-೧೯ (ಕೊರೋನಾವೈರಸ್) ಸೋಂಕಿನ ಹರಡುವಿಕೆಯನ್ನು ತಡೆಯಲು ಭಾರತ ಸರ್ವ ಸನ್ನದ್ಧವಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರು ವರ್ಷ   ಹೋಳಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದಾಗಿ ಪ್ರಕಟಿಸಿ, ಜನತೆಗೂ ಬಹಿರಂಗ ಹೋಳಿ ಆಚರಣೆ ಮಾಡದಂತೆ 2020 ಮಾರ್ಚ್  04ರ ಬುಧವಾರ ಮನವಿ ಮಾಡಿದರು.
ರಾಷ್ಟ್ರವು ಕೋವಿಡ್ -೧೯ (ಮಾರಕ ಕೊರೋನಾ ವೈರಸ್) ಹರಡುವಿಕೆಯನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ ಎಂದು ಬುಧವಾರ ಇಲ್ಲಿ ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದ ವಿವಿಧ ಭಾಗಗಳಲ್ಲಿ ಕೊರೋನಾವೈರಸ್ ಸೋಂಕು ತಗುಲಿರುವ ಬಗ್ಗೆ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ತಾವು ವರ್ಷ ಹೋಳಿ ಮಿಲನ್ ಹಬ್ಬದಲ್ಲಿ (ಹೋಳಿ ರಂಗಿನ ಆಟ) ತಾವು ಪಾಲ್ಗೊಳ್ಳುವುದಿಲ್ಲ ಎಂದು ನುಡಿದರು.

ಕೊರೋನಾವೈರಸ್ ಹಬ್ಬದಂತೆ ತಡೆಯಲು ಅಗತ್ಯ ಕ್ರಮಗಳನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕು ಎಂದು ಶಾ ಮನವಿ ಮಾಡಿದರು.

ಹೋಳಿಯು ಭಾರತೀಯರಿಗೆ ಅತ್ಯಂತ ಮಹತ್ವದ ಹಬ್ಬ. ಆದರೆ ಕೊರೋನಾವೈರಸ್ ಹಿನ್ನೆಲೆಯಲಿ ವರ್ಷ ಯಾವುದೇ ಹೋಳಿ ಮಿಲನ್ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳದಿರಲು ನಾನು ನಿರ್ಧರಿಸಿದ್ದೇನೆ. ಮತ್ತು ಪ್ರತಿಯೊಬ್ಬರಿಗೂ ಸಾಮೂಹಿಕವಾಗಿ ಆಚರಿಸದೇ ಇರುವ ಮೂಲಕ ನಿಮ್ಮ ಹಾಗೂ ನಿಮ್ಮ ಕುಟುಂಬದ ಯೋಗಕ್ಷೇಮವನ್ನು ನೋಡಿಕೊಳ್ಳಿ ಎಂದು ಮನವಿ ಮಾಡುವೆ ಎಂದು ಶಾ ಟ್ವೀಟ್ ಮಾಡಿದರು.

ಇದಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ತಾವು ವರ್ಷ ಯಾವುದೇ ಹೋಳಿ ಮಿಲನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿರುವುದಾಗಿ ಪ್ರಕಟಿಸಿದ್ದರು.

ಕೊರೋನಾವೈರಸ್ ಹರಡದಂತೆ ತಡೆಯಲು ಸಮೂಹಕೂಟಗಳನ್ನು ಕಡಿಮೆ ಮಾಡುವಂತೆ ತಜ್ಞರು ಸಲಹೆ ಮಾಡಿರುವುದರಿಂದ ತಾವು ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿರುವುದಾಗಿ ಪ್ರಧಾನಿ ಹೇಳಿದ್ದರು.

ಪ್ರಧಾನಿಯವರ ಉದಾಹರಣೆಯನ್ನು ಅನುಸರಿಸಿರುವ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅರು ಕೂಡಾ ವರ್ಷ ತಾವು ಹೋಳಿ ಹಬ್ಬ ಆಚರಿಸುವುದಿಲ್ಲ ಮತ್ತು ಯಾವುದೇ ಹೋಳಿ ಮಿಲನ್ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪ್ರಕಟಿಸಿದ್ದಾರೆ.

ಪ್ರಸ್ತುತ ವರ್ಷ ಮಾರ್ಚ್ ೧೦ರ ಮಂಗಳವಾರ ಹೋಳಿ ಹಬ್ಬ ಬಂದಿದೆ.

ಕೊರೋನಾವೈರಸ್ ಹರಡದಂತೆ ತಡೆಯಲು ಭಾರತ ಸರ್ವ ಸನ್ನದ್ಧವಾಗಿದ್ದು ಎಲ್ಲ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದೆ ಎಂದು ಗೃಹ ಸಚಿವರು ಹೇಳಿದರು.

ಇದನ್ನು ತಡೆಯಲು ಎಲ್ಲ ಮಹತ್ವದ ಕ್ರಮಗಳನ್ನೂ ಕೈಗೊಳ್ಳುವಂತೆ ನಾನು ಪ್ರತಿಯೊಬ್ಬರಿಗೂ ಮನವಿ ಮಾಡುತ್ತೇನೆ. ಕೆಲವು ಮೂಲಭೂತ ಸ್ವಯಂ ರಕ್ಷಣಾ ಕ್ರಮಗಳು ಎಷ್ಟು ಸರಳವಾಗಿವೆ ಎಂದರೆ ಆಗಾಗ ಕೈತೊಳೆದುಕೊಳ್ಳುವುದನ್ನು ಮತ್ತು ಶುಚಿಯಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ಅವರು ನುಡಿದರು.

ಭಾರತದಲ್ಲಿ ಈವರೆಗೆ ೨೮ ಕೋವಿಡ್ -೧೯ ಪ್ರಕರಣಗಳು ದೃಢ ಪಟ್ಟಿದ್ದು, ಅವುಗಳ ಪೈಕಿ ಒಬ್ಬ ವ್ಯಕ್ತಿ ದೆಹಲಿಯ ಆಗ್ರಾ ನಿವಾಸಿ ಹಾಗೂ ಮಂದಿ ಆತನ ಕುಟುಂಬದವರು, ೧೬ ಮಂದಿ ಇಟಲಿ ಪ್ರಜೆಗಳು ಮತ್ತು ಅವರ ಜೊತೆ ಇದ್ದ ಒಬ್ಬ ಭಾರತೀಯ ಚಾಲಕ, ತೆಲಂಗಾಣದ ಒಬ್ಬ ವ್ಯಕ್ತಿ ಮತ್ತು ಇದಕ್ಕೆ ಮುನ್ನ ಕೇರಳದಲ್ಲಿ ಪತ್ತೆಯಾಗಿದ್ದ ಮೂರು ಪ್ರಕರಣಗಳು ಸೇರಿವೆ.

ಭಾರತದ ವಿಮಾನ ನಿಲ್ದಾಣಗಳಲ್ಲಿ ಈವರೆಗೆ ,೮೯,೦೦ ಜನರನ್ನು ತಪಾಸಣೆ ಮಾಡಲಾಗಿದ್ದು, ನೇಪಾಳ ಗಡಿಯಲ್ಲಿ ಸುಮಾರು ೨೭,೦೦೦ಕ್ಕೂ ಹೆಚ್ಚು ಮಂದಿಯನ್ನು ಪ್ರಸ್ತುತ ಸಾಮೂಹಿಕ ನಿಗಾದಲ್ಲಿ ಇಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಹೇಳಿದ್ದರು.

ಮಧ್ಯೆ, ಜೈಪುರ ಆಸ್ಪತ್ರೆಯಲ್ಲಿ ಏಕಾಂಗಿ ವಾಸದ ವಾರ್ಡಿಗೆ ದಾಖಲಾಗಿರುವ ಇಟಲಿಯ ಇಬ್ಬರು ಕೊರೋನಾವೈರಸ್ ಸೋಂಕಿತ ನಾಗರಿಕರ ಜೊತೆಗೆ ಸಂಪರ್ಕಕ್ಕೆ ಬಂದಿದ್ದ ೨೧೫ ಮಂದಿಯನ್ನು ಗುರುತಿಸಲಾಗಿದೆ ಎಂದು ರಾಜಸ್ಥಾನ ಸರ್ಕಾರ ಬುಧವಾರ ತಿಳಿಸಿತು.

No comments:

Advertisement