ಲೋಕಸಭೆಯಿಂದ ೭ ಕಾಂಗ್ರೆಸ್ ಸಂಸದರ ಅಮಾನತು
ನವದೆಹಲಿ: ಲೋಕಸಭಾ ಅಧ್ಯಕ್ಷ ಓಂ ಪ್ರಕಾಶ್ ಬಿರ್ಲಾ ಅವರ ಮೇಜಿನಿಂದ ಕಾಗದ ಪತ್ರಗಳನ್ನು ಕಿತ್ತುಕೊಂಡದ್ದಕ್ಕಾಗಿ ಮತ್ತು ಸದನದ ನಿಯಮಾವಳಿಗಿಗೆ ಅಗೌರವ ತೋರಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದ ೭ ಮಂದಿ ಸಂಸತ್ ಸದಸ್ಯರನ್ನು ಸದನದಿಂದ ಮುಂಗಡಪತ್ರ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸುವ ನಿರ್ಣಯವನ್ನು ಲೋಕಸಭೆಯು 2020 ಮಾರ್ಚ್ 05ರ ಗುರುವಾರ ಕೈಗೊಂಡಿತು.
ಅಮಾನತುಗೊಂಡಿರುವ ಸದಸ್ಯರು: ಗೌರವ್ ಗೊಗೋಯಿ, ಟಿ.ಎನ್. ಪ್ರತಾಪನ್, ಡೀನ್ ಕುರಿಯಾಕೋಸ್, ಮನಿಕಾ ಟ್ಯಾಗೋರ್, ರಾಜಮೋಹನ್ ಉನ್ನಿಥನ್, ಬೆನ್ನಿ ಬೆಹನನ್ ಮತ್ತು ಗುರುಜೀತ್ ಸಿಂಗ್ ಔಜ್ಲಿಯಾ.
ಪಕ್ಷದ ಸಂಸದರನ್ನು ಸದನ ಕಲಾಪದಿಂದ ಅಮಾನತುಗೊಳಿಸಿದ್ದು ಸೇಡಿನ ಕ್ರಮ ಎಂಬುದಾಗಿ ಕಾಂಗ್ರೆಸ್ ಪಕ್ಷವು ಬಳಿಕ ಟೀಕಿಸಿತು.
No comments:
Post a Comment