My Blog List

Monday, March 2, 2020

ಕೊರೋನಾವೈರಸ್: ೫ ರಾಷ್ಟ್ರಗಳ ಪ್ರವಾಸಕ್ಕೆ ನಿರ್ಬಂಧ

ಕೊರೋನಾವೈರಸ್: ರಾಷ್ಟ್ರಗಳ ಪ್ರವಾಸಕ್ಕೆ ನಿರ್ಬಂಧ
ಜೈಪುರದಲ್ಲೂ ಒಬ್ಬರ ಮೇಲೆ ನಿಗಾ
ನವದೆಹಲಿ: ನವದೆಹಲಿ ಮತ್ತು ತೆಲಂಗಾಣದಲ್ಲಿ ಇಬ್ಬರು ವ್ಯಕ್ತಿಗಳಿಗೆ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢ ಪಟ್ಟ ಬೆನ್ನಲ್ಲೇ ಕೇಂದ್ರ ಸರ್ಕಾರವು ಚೀನಾ, ಇರಾನ್, ಕೊರಿಯಾ, ಸಿಂಗಾಪುರ ಮತ್ತು ಇಟಲಿ ಐದು ರಾಷ್ಟ್ರಗಳ ಅನಗತ್ಯ ಪ್ರವಾಸಗಳನ್ನು ಮುಂದೂಡುವಂತೆ ಜನರಿಗೆ  2020 ಮಾರ್ಚ್ 02ರ ಸೋಮವಾರ ಸಲಹೆ ಮಾಡಿತು.

ಕೊರೋನಾವೈರಸ್ ಸೋಂಕು ಪತ್ತೆಯ ಹಿನ್ನೆಲೆಯಲಿ ಭಾರತವು ಪ್ರಯಾಣಿಕರ ತಪಾಸಣೆಯನ್ನು ಇನ್ನಷ್ಟು ಬಿಗಿಗೊಳಿಸಿದೆ ಮತ್ತು ಕೊರೋನಾವೈರಸ್ ಸೋಂಕಿನ ಮುಷ್ಠಿಗೆ ಸಿಲುಕಿರುವ ರಾಷ್ಟ್ರಗಳಲ್ಲಿ ಅನಗತ್ಯ ಪ್ರವಾಸ ಮಾಡುವುದನ್ನು ಕೈಬಿಡುವಂತೆ ಜನತೆಗೆ ಸಲಹೆ ಮಾಡುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅವರು ಇಲ್ಲಿ ಹೇಳಿದರು.

೨೧ ವಿಮಾನ ನಿಲ್ದಾಣಗಳು ಸಮುದ್ರ ತಡಿಯ , ೧೨ ಪ್ರಮುಖ ಬಂದರುಗಳು ಮತ್ತು ಸಣ್ಣ ಬಂದರುಗಳಲ್ಲಿ ಪ್ರಯಾಣಿಕರ ಪರಿಶೀಲನೆ ನಡೆಸಲಾಗುತ್ತಿದ್ದು, ವಿಮಾನ ನಿಲ್ದಾಣಗಳಲ್ಲಿ ,೫೭,೪೩೧ ಪ್ರಯಾಣಿಕರನ್ನು ಮತ್ತು ಸಮುದ್ರ ದಂಡೆಯ ಪ್ರಮುಖ ಹಾಗೂ ಸಣ್ಣ ಬಂದರುಗಳಲ್ಲಿ ೧೨,೪೩೧ ಪ್ರಯಾಣಿಕರನ್ನು ತಪಾಸಣೆಗೆ ಗುರಿಪಡಿಸಲಾಗಿದೆ ಎಂದು ಹರ್ಷವರ್ಧನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚೀನಾ, ಇರಾನ್, ಕೊರಿಯಾ, ಸಿಂಗಾಪುರ ಮತ್ತು ಇಟಲಿಗೆ ಅನಗತ್ಯ ಪ್ರವಾಸಗಳನ್ನು ಮಾಡಬೇಡಿ ಎಂದು ನಾವು ಭಾರತೀಯರಿಗೆ ಸಲಹೆ ಮಾಡುತ್ತೇವೆ. ಪರಿಸ್ಥಿತಿಯನ್ನು ಅನುಸರಿಸಿ ಪ್ರವಾಸೀ ನಿರ್ಬಂಧಗಳನ್ನು ಇತರ ದೇಶಗಳಿಗೂ ವಿಸ್ತರಿಸಬಹುದು ಎಂದು ಅವರು ನುಡಿದರು.

ಚೀನಾ ಮತ್ತು ಇರಾನಿನ ವೀಸಾ ಸವಲತ್ತು ಅಮಾನತು ಮುಂದುವರೆಯುವುದು. ಇತರ ದೇಶಗಳಿಗೂ ಇದು ವಿಸ್ತರಣೆಯಾಗಬಹುದು ಎಂದು ಅವರು ನುಡಿದರು.

ನವದೆಹಲಿ ಮತ್ತು ತೆಲಂಗಾಣದ ಪ್ರಕರಣಗಳು ಸೇರಿ ಭಾರತದಲ್ಲಿ ಕೊರೋನಾವೈರಸ್ ಸೋಂಕು ಖಚಿತ ಪಟ್ಟ ಐದು ಪ್ರಕರಣಗಳು ಬೆಳಕಿಗೆ ಬಂದಂತಾಗಿದೆ.

ಜೈಪುರದಲ್ಲಿ ವ್ಯಕ್ತಿಯ ಮೇಲೆ ನಿಗಾ: ಮಧ್ಯೆ,  ಕೊರೋನಾವೈರಸ್ ಸೋಂಕಿನ ಲಕ್ಷಣಗಳು ಇರುವ ವ್ಯಕ್ತಿಯೊಬ್ಬನ ಮೇಲೆ  ಜೈಪುರದ ಎಸ್ ಎಂಎಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಇರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ವ್ಯಕ್ತಿಗೆ ಕೊರೋನಾವೈರಸ್ ಸೋಂಕು ತಗುಲಿದೆಯೇ ಎಂಬುದು ಖಚಿತವಾಗಿಲ್ಲ. ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

No comments:

Advertisement