My Blog List

Sunday, March 1, 2020

ದಂಗೆಕೋರರಿಂದ ರಕ್ಷಣೆಗಾಗಿ ’ಮಹಾದೇವ’ನ ಮೊರೆ ಹೊಕ್ಕ ದೆಹಲಿ ಜನ..!

ದಂಗೆಕೋರರಿಂದ ರಕ್ಷಣೆಗಾಗಿ 'ಮಹಾದೇವ ಮೊರೆ ಹೊಕ್ಕ ದೆಹಲಿ ಜನ..!
ನವದೆಹಲಿ: ಈಶಾನ್ಯ ದೆಹಲಿಯ ಶಿವ ವಿಹಾರದ ಹಿಂದೂ ನಿವಾಸಿಗಳು ಜೈ ಶ್ರೀ ರಾಮ್ ಪಠಣವನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ಗಲಭೆಕೋರರ ವಿರುದ್ಧ ತಮ್ಮ ವಸಾಹತುಗಳನ್ನು ಕಾಪಾಡುವ ಪ್ರಯತ್ನದಲ್ಲಿ ಅವರು ಈಗ ರಾತ್ರಿ ಜಾಗರಣೆ ವೇಳೆ  ಹರ್ ಹರ್ ಮಹಾದೇವ್ ಮತ್ತು ವೀರ್ ಭಜರಂಗಿ ಘೋಷಣೆಗಳನ್ನು ಬಳಸುತ್ತಿದ್ದಾರೆ.

ಈಶಾನ್ಯ ದೆಹಲಿಯಲ್ಲಿ ಮೂರು ದಿನಗಳ ಹಿಂಸಾಚಾರದ ನಂತರ, ಶಿವ ವಿಹಾರದ ವಸಾಹತುಗಳು ಭೂತ ಪಟ್ಟಣಗಳಾಗಿ ಮಾರ್ಪಟ್ಟಿವೆ. ಹೆಚ್ಚಿನ ಮುಸ್ಲಿಂ ಕುಟುಂಬಗಳು ನಗರ ಮತ್ತು ಅದರಾಚೆ ಸುರಕ್ಷಿತ ಸ್ಥಳಗಳಿಗಾಗಿ ತೆರಳಿದ್ದು ಪ್ರದೇಶವನ್ನು ತೊರೆದಿವೆ. ಉಳಿದಿರುವ ನಿವಾಸಿಗಳು ಭಾನುವಾರದಿಂದ ಮಲಗಿಲ್ಲ.

ಪ್ರದೇಶದ ಸ್ಥಳೀಯರು ರಾತ್ರಿಯ ಊಟದ ನಂತರ ಒಟ್ಟುಗೂಡುತ್ತಾರೆ, ಸಣ್ಣ ಬೆಂಕಿಯನ್ನು ಹಚ್ಚುತ್ತಾರೆ ಮತ್ತು ಸೂರ್ಯೋದಯವಾಗುವವರೆಗೂ ಗಲಭೆಕೋರರ ವಿರುದ್ಧ ತಮ್ಮ ವಸಾಹತುಗಳನ್ನು ಕಾಪಾಡುತ್ತಾರೆ. ಗುರುವಾರ ರಾತ್ರಿ ಸುಮಾರು ೧೦೦ ಪುರುಷರ ಸಭೆಯು ರಾತ್ರಿ ಕಾವಲಿನ ಸಮಯದಲ್ಲಿ ಜೈ ಶ್ರೀ ರಾಮ್ ಪಠಣವನ್ನು ತ್ಯಜಿಸಲು ನಿರ್ಧರಿಸಿತು.

’‘ಪ್ರದೇಶದ ಮಹಿಳೆಯರು, ಮಕ್ಕಳು ಮತ್ತು ಹಿರಿಯ ಸದಸ್ಯರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಘೋಷಣೆಗಳನ್ನು ಕೂಗುತ್ತಾ ಇಡೀ ಪ್ರದೇಶದ ಸುತ್ತಲೂ ಕಾವಲು ನಡೆಯುತ್ತೇವೆ. ನಾವು ಈಗ ಹರ ಹರ  ಮಹಾದೇವ್, ವೀರ್ ಭಜರಂಗಿ ಮಂತ್ರವನ್ನು ನಮ್ಮ ಘೋಷಣೆಯಾಗಿ ಬಳಸುತ್ತೇವೆ. ಯಾಕೆಂದರೆ, ಗಲಭೆಯ ಸಮಯದಲ್ಲಿ, ಜೈ ಶ್ರೀ ರಾಮ್ ಎಂದು ಕೂಗಿದ, ನಮ್ಮ ವಸಾಹತುಗಳಿಗೆ ಪ್ರವೇಶಿಸಿ ಮನೆಗಳು ಮತ್ತು ಅಂಗಡಿಗಳನ್ನು ಸುಟ್ಟುಹಾಕುವ ಅನೇಕ ಗುಂಪುಗಳು ಇದ್ದವು. ದುಷ್ಕರ್ಮಿಗಳು ಮತ್ತು ದಂಗೆಕೋರರ ನಡುವೆ ವ್ಯತ್ಯಾಸವನ್ನು ತೋರಿಸಲು, ನಮ್ಮ ಘೋಷಣೆಯನ್ನು ಬದಲಾಯಿಸಲು ನಾವು ನಿರ್ಧರಿಸಿದ್ದೇವೆ ಎಂದು ಪೂರ್ವ ಕಮಲ್ ವಿಹಾರದ ಸ್ಥಳೀಯ ನಿವಾಸಿ ಅಶುತೋಷ್ ಪ್ರಕಾಶ್ ರಾಣಾ ಹೇಳಿದರು.

ಪೌರತ್ವ  (ತಿದ್ದುಪಡಿ) ಕಾಯ್ದೆ ವಿರೋಧಿ ಪ್ರತಿಭಟನೆ, ಧರಣಿಗಳ ಸಮಯದಲ್ಲಿ ಕಾಯ್ದೆ ಪರ-ವಿರೋಧಿ ಗುಂಪುಗಳು ಮುಖಾಮುಖಿಯಾಗಿ ಪ್ರದೇಶದಲ್ಲಿ ಆರಂಭಿಸಿದ ಪ್ರದರ್ಶನಗಳು ಭಾನುವಾರ ಹಿಂಸಾತ್ಮಕ ಸ್ವರೂಪ ಪಡೆದಿತ್ತು. ಮೂರು ದಿನಗಳಲ್ಲಿ ಹಿಂಸಾಚಾರ ಎಲ್ಲೆಡೆ ವ್ಯಾಪಿಸಿ, ರಾಜಧಾನಿಯನ್ನು ತಲ್ಲಣಗೊಳಿಸಿತು. ಈಶಾನ್ಯ ದೆಹಲಿಯಾದ್ಯಂತ ಹಿಂಸಾಚಾರಲ್ಲಿ ೪೨ ಮಂದಿ ಸಾವನ್ನಪ್ಪಿದರು ಮತ್ತು ೨೫೦ ಕ್ಕೂ ಹೆಚ್ಚು ಜನರು ಗಾಯಗೊಂಡರು.

ಮನೆಗಳು, ಧಾರ್ಮಿಕ ಸ್ಥಳಗಳನ್ನು ಸುಟ್ಟುಹಾಕಲಾಯಿತು. ಭಾರೀ ಸಂಖ್ಯೆಯ ವಾಹನಗಳನ್ನು ಸಹ ಹಾನಿ ಪಡಿಸಲಾತು. ಹಿಂಸಾಚಾರ ಎಸಗುವಾಗ ಗುಂಪುಗಳು ಧಾರ್ಮಿಕ ಘೋಷಣೆಗಳನ್ನು ಕೂಗುತ್ತಿದ್ದ ಹಲವಾರು ವೀಡಿಯೊಗಳು ವೈರಲ್ ಆದವು. ಜೈ ಶ್ರೀ ರಾಮ್ ಎಂದು ಜಪಿಸುವ ಗುಂಪುಗಳು ಸಂರಕ್ಷಕರು ಎಂಬ ನೆಪದಲ್ಲಿ ನುಗ್ಗಿ ಜನರನ್ನು ಬಗ್ಗು ಬಡಿದು ನಂತರ ಸ್ವತಃ ಹಾನಿಗೊಳಗಾದವು ಎಂದು ಪ್ರದೇಶದ ಸ್ಥಳೀಯರು ಮಾಹಿತಿ ನೀಡಿದರು.

’‘ಜೈ ಶ್ರೀ ರಾಮ್ ಎಂದು ಜಪಿಸಿ ನಮ್ಮ ವಸಾಹತುಗಳಿಗೆ ಪ್ರವೇಶಿಸಿzವರು ಗಲಭೆಕೋgರಾಗಿದ್ದರು. ಅವರು ಮನೆಗಳು, ಅಂಗಡಿಗಳನ್ನು ಸುಟ್ಟು ಪರಾರಿಯಾಗಿದ್ದಾರೆ. ಅವರು ಧಾರ್ಮಿಕ ಘೋಷಣೆಗಳನ್ನು ಜಪಿಸಿದರೆ ಜನರು ಅವರನ್ನು ತಡೆಯುವುದಿಲ್ಲ ಎಂದು ಅವರಿಗೆ ತಿಳಿದಿತ್ತು ಆದರೆ ಹಿಂಸಾಚಾರವನ್ನು ಹರಡಲು ಅವರು ಬಂದಿದ್ದಾರೆ ಎಂದು ನಾವು ನಂತರ ಅರಿತುಕೊಂಡೆವು ಎಂದು ರಾಣಾ ಹೇಳಿದರು.

ಗಲಭೆಯ ನಂತರ, ಪ್ರದೇಶದ ಸ್ಥಳೀಯರು ಜೈ ಶ್ರೀರಾಮ್ ಘೋಷಣೆಯನ್ನು ಬಿಟ್ಟು ಬಿಟ್ಟಿದ್ದಾರೆ. ಶಿವ ವಿಹಾರದ ದೇವಾಲಯಗಳು ಸಹ ಈಗ ಹರ ಹರ ಮಹಾದೇವ್ ಮತ್ತು ಜೈ ಭಜರಂಗಿ ಘೋಷಣೆಗಳನ್ನು ಮೊಳಗಿಸುತ್ತಿವೆ.

ಗುರುವಾರ ಹಿಂಸಾಚಾರವು ಮುಗಿಯುತ್ತದೆ ಎಂದು ನಿರೀಕ್ಷಿಸಿದ್ದಾಗ ಕೂಡಾ ಯುವಕರ ಗುಂಪು "ಭೀಕರ ಘೋಷಣೆ" ಎಂದು ಜಪಿಸುತ್ತಾ, ಅಂಗಡಿಗಳಿಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು.

ನಾವು ಕಳೆದ ಒಂದು ವಾರದಿಂದ ಕೆಲಸ ಮಾಡುತ್ತಿಲ್ಲ. ನಾವು ಇಡೀ ರಾತ್ರಿ ಎಚ್ಚರದಲ್ಲಿ ಇರುತ್ತೇವೆ ಮತ್ತು ಬೆಳಗ್ಗೆ ಸ್ವಲ್ಪ ಸಮಯ ಮಲಗುತ್ತೇವೆ. ನಾವು ಮನೆಯ ನಮ್ಮ ದೈನಂದಿನ ದಿನಸಿಗಳ ಬಗ್ಗೆ ಚಿಂತಿಸಬೇಕಾಗಿದೆ. ಭಯದಿಂದಾಗಿ ಅಂಗಡಿಗಳು ತೆರೆದಿಲ್ಲ ಮತ್ತು ಸರಬರಾಜು ಮಾಡುವುದು ಕೂಡ ಒಂದು ಸಮಸ್ಯೆಯಾಗಿದೆ ಎಂದು ಇನ್ನೊಬ್ಬ ಸ್ಥಳೀಯ ನಿವಾಸಿ ಕೈಲಾಶ್ ಚಂದ್ರ ಹೇಳಿದರು.

ಶಿವ ವಿಹಾರ್ ವಸತಿ ಪ್ರದೇಶವು ದೆಹಲಿ ಮತ್ತು ಉತ್ತರ ಪ್ರದೇಶದ ಗಡಿಯಲ್ಲಿದೆ. ’‘ಗಡಿಯುದ್ದಕ್ಕೂ ಬಂದು ಹಿಂಸಾಚಾರ ಹರಡಿ ಹೊರಟುಹೋದ ಜನರಿದ್ದರು. ಹೆಚ್ಚಿನ ಪುರುಷರು ಮುಖದ ಮೇಲೆ ಹೆಲ್ಮೆಟ್ ಮತ್ತು ಸ್ಕಾರ್ಫ್ ಧರಿಸಿದ್ದರು ಆದರೆ ನಾವು ನೋಡಿದ ಯಾವುದೇ ಮುಖಗಳನ್ನು ಗುರುತಿಸಲು ಸಹ ನಮಗೆ ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.

ಬೀಗ ಹಾಕಿದ ಮುಸ್ಲಿಂ ಮನೆಗಳ ಸಾಲುಗಳು ಮತ್ತು ಯಾರೂ ಹೊರಗೆ ಹೆಜ್ಜೆ ಹಾಕದ ಕಾರಣ, ಪ್ರದೇಶವು ಹಗಲಿನಲ್ಲಿ  ಪರಿತ್ಯಕ್ತ ಪಟ್ಟಣದಂತೆ ಕಾಣುತ್ತದೆ. ರಾತ್ರಿಯಲ್ಲಿ, ಪುರುಷರು ರಕ್ಷಣೆಗಾಗಿ ತಮ್ಮ ಜೇಬಿನಲ್ಲಿ ಮೆಣಸಿನ ಪುಡಿಯ ಸಣ್ಣ ಸಣ್ಣ ಪೊಟ್ಟಣಗಳೊಂದಿಗೆ ಗುಂಪುಗಳಲ್ಲಿ ಸುತ್ತಾಡುತ್ತಾರೆ.

’‘ ಪ್ರದೇಶದ ಮಹಿಳೆಯರು ಹೊರಗೆ ಕಾವಲು ಕಾಯುವವರಿಗೆ ಚಹಾ ಮತ್ತು ಬಿಸ್ಕತ್ತು ನೀಡಲು ಸರದಿಗಳಲ್ಲಿ ಕಾಯುತ್ತಾರೆ. ನಾವು ಭಯಭೀತರಾಗಿದ್ದೇವೆ ಆದರೆ ಗಲಭೆಕೋರರಿಗೆ ದಾರಿ ಮಾಡಿಕೊಡಲು ನಾವು ಸಿದ್ಧರಿಲ್ಲ ಎಂದು ಕೈಲಾಶ್ ಚಂದ್ರ ಅವರು 2020 ಫೆಬ್ರುವರಿ 29ರ ಶುಕ್ರವಾರ ರಾತ್ರಿ ಜಾಗರಣೆಗಾಗಿ ತಯಾರಿ ನಡೆಸುತ್ತಾ ಹೇಳಿದರು.

No comments:

Advertisement