Thursday, March 19, 2020

ಮಾರ್ಚ್ ೨೨ರ ಭಾನುವಾರ ’ಜನತಾ ಕರ್ಫ್ಯೂ’: ಪ್ರಧಾನಿ ಮೋದಿ ಘೋಷಣೆ

ಮಾರ್ಚ್ ೨೨ರ  ಭಾನುವಾರ  'ಜನತಾ ಕರ್ಫ್ಯೂ': ಪ್ರಧಾನಿ  ಮೋದಿ  ಘೋಷಣೆ
ಕೊರೋನಾ ತಡೆಗಾಗಿ  ಸಂಕಲ್ಪಮತ್ತು  ಸಂಯಮಕ್ಕೆ  ಕರೆ
ನವದೆಹಲಿ: ಇಡೀ ವಿಶ್ವವನ್ನೇ ಬಾಧಿಸಿರುವ ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಟದ ಜಾಗೃತಿಗಾಗಿ 2020 ಮಾರ್ಚ್ ೨೨ರ ಭಾನುವಾರ ಬೆಳಗ್ಗೆ ಗಂಟೆಯಿಂದ ರಾತ್ರಿ ಗಂಟೆಯವರೆಗೆ  ಜನತಾ ಕರ್ಫ್ಯೂವಿಧಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು  2020 ಮಾರ್ಚ್  19ರ ಗುರುವಾರ ಜನತೆಗೆ ಕರೆ ನೀಡಿದರು. ಆರ್ಥಿಕ ಸ್ಥಿತಿ ನಿಭಾವಣೆಗಾಗಿಆರ್ಥಿಕ ಕಾರ್ಯಪಡೆರಚನೆಯನ್ನೂ   ಅವರು ಪ್ರಕಟಿಸಿದರು.

ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಅವರುಕೊರೋನಾ ವಿರುದ್ಧದ ಜಾಗೃತಿಗಾಗಿ ನಾವುಜನತಾ ಕರ್ಫ್ಯೂವಿಧಿಸಿಕೊಳ್ಳಬೇಕಾದ ಅಗತ್ಯವಿದೆ. ಇದೇ ಭಾನುವಾರ ಮಾರ್ಚ್ ೨೨ರಂದು ಬೆಳಗ್ಗೆ ೭ರಿಂದ ರಾತ್ರಿ ೯ರವರೆಗೆ  ದೇಶಾದ್ಯಂತಜನತಾ ಕರ್ಫ್ಯೂಜಾರಿಯಲ್ಲಿರುತ್ತದೆ. ಇದು ಜನರೇ ಜನರಿಗೋಸ್ಕರ ಹಾಕಿಕೊಳ್ಳುವ ಸ್ವಯಂ ನಿರ್ಬಂಧ. ಇದನ್ನು ಪ್ರತಿಯೊಬ್ಬ ನಾಗರಿಕರೂ ಪಾಲಿಸಬೇಕುಎಂದು ಹೇಳಿದರು.

ಇದು ನಮ್ಮ ಸ್ವಯಂ ನಿರ್ಬಂಧದ ಪ್ರತೀಕವಾಗಲಿ. ಇದು ಮಾರಕ ವೈರಸ್ ವಿರುದ್ಧ ಮುಂಬರುವ ದಿನಗಳಲ್ಲಿ ನಮ್ಮ ಹೋರಾಟಕ್ಕೆ ಮುನ್ನುಡಿಯಾಗಲಿಎಂದು ನುಡಿದ ಪ್ರಧಾನಿ, ’ ವಿಚಾರದಲ್ಲಿ ದೇಶವಾಸಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯssಸರ್ಕಾರಗಳು, ಸಾಮಾಜಿಕ ಸಂಘಟನೆಗಳು, ಸ್ಕೌಟ್ ಮತ್ತು ಗೈಡ್ ಸಂಘಟನೆಗಳು ಮುಂದಿನ ಎರಡು ದಿನಗಳಲ್ಲಿ ಕಾರ್ಯ ತತ್ಪರವಾಗಬೇಕುಎಂದು ಹೇಳಿದರು.

ಜನತಾ ಕರ್ಫ್ಯೂ ದಿನವಾದ ಭಾನುವಾರ ಸಾಯಂಕಾಲ ಗಂಟೆಗೆ ನಾವೆಲ್ಲರೂ ನಮ್ಮ ನಮ್ಮ ಮನೆಯ ಬಾಗಿಲ ಮುಂದೆ ನಿಂತು ಅಥವಾ ಬಾಲ್ಕನಿಯಲ್ಲಿ ನಿಂತು ಕೋವಿಡ್ ೧೯ ವಿರುದ್ಧ ಹೋರಾಡುವಲ್ಲಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ಆರೋಗ್ಯ ಪಾಲನಾ ಕಾರ್ಯಕರ್ತರು, ಪತ್ರಕರ್ತರು ಹಾಗೂ ಸಮಾಜದ ಇತರೇ ಸೇವಾವರ್ಗದ ವ್ಯಕ್ತಿಗಳಿಗೆ ಕೃತಜ್ಞತೆ ಸಲ್ಲಿಸಬೇಕುಎಂದು ಪ್ರಧಾನಿ ಮೋದಿ ದೇಶದ ಜನರಿಗೆ ಮನವಿ ಮಾಡಿದರು.

ಮಾರ್ಚ್ ೨೨ರಂದು ಎಲ್ಲರೂ ಸಂಜೆ ಗಂಟೆಗೆ ಮನೆಯ ಬಾಗಿಲ ಬಳಿ ಬಂದು, ಮಹಡಿಯಲ್ಲಿ ನಿಂತುಕೊಂಡು ಐದು ನಿಮಿಷ ಚಪ್ಪಾಳೆ ಹೊಡೆದು ನಮಗಾಗಿ ದುಡಿಯುತ್ತಿರುವವರಿಗೆ ಧನ್ಯವಾದ ಅರ್ಪಿಸೋಣ. ಸೇವಾ ಧರ್ಮದಲ್ಲಿ ತೊಡಗಿರುವವರನ್ನು ನಾವು ಸ್ಮರಿಸೋಣಎಂದು ಅವರು ಹೇಳಿದರು.

ಇಂದಿನಿಂದ ಪ್ರತಿಯೊಬ್ಬರೂ ಪ್ರತಿದಿನವೂ ಸಾಧ್ಯವಾದರೆ ಕನಿಷ್ಠ ೧೦ ಮಂದಿ ಕರೆ ಮಾಡಿಜನತಾ ಕರ್ಫ್ಯೂಬಗ್ಗೆ ಮತ್ತು ಕೊರೋನಾ ವೈರಸ್ ಹರಡದಂತೆ ಕೈಗೊಳ್ಳಲಾಗಿರುವ ಮುಂಜಾಗರೂಕತಾ ಕ್ರಮಗಳ ಬಗ್ಗೆ ವಿವರಿಸೋಣಎಂದು ಪ್ರಧಾನಿ ಸಲಹೆ ಮಾಡಿದರು.

ಜ್ವರ, ನೆಗಡಿ, ಕೆಮ್ಮು ಅಥವಾ ಗಂಟಲು ನೋವು ಕಂಡುಬಂದರೆ ಯಾವುದೇ ಕಾರಣಕ್ಕೂ ಭಯಪಡಬೇಡಿ. ನಿಮ್ಮ ಕುಟುಂಬದ ವೈದ್ಯರು, ವೈದ್ಯ ಸ್ನೇಹಿತರು ಅಥವಾ ಕುಟುಂಬದಲ್ಲೇ ಇರುವ ವೈದ್ಯರಿಗೆ ದೂರವಾಣಿ ಕರೆ ಮಾಡಿ ಸಲಹೆ ಪಡೆಯಿರಿ. ಸುಮ್ಮನೆ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಬೇಡಎಂದು ಅವರು ಹೇಳಿದರು.

ಕೆಲವು ತಿಂಗಳುಗಳಿಂದ ನಾವು ಇದರ ಬಗ್ಗೆ ಹೋರಾಡುತ್ತಿದ್ದೇವೆ. ಈಗ ಸಮರೋಪಾದಿಯಲ್ಲಿ ಮುನ್ನೆಚ್ಚರಿಕೆ ಅಗತ್ಯವಾಗಿದೆ. ಕೊರೊನಾ ವೈರಸ್ ಮನುಕುಲವನ್ನೇ ಸಂಕಟಕ್ಕೆ ಸಿಲುಕಿಸಿದೆ. ಪ್ರಥಮ ಹಾಗೂ ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲೂ ಸಹ ವಿಶ್ವದ ಎಲ್ಲಾ ರಾಷ್ಟ್ರಗಳೂ ರೀತಿಯ ಆತಂಕಕ್ಕೆ ಒಳಗಾಗಿರಲಿಲ್ಲಎಂದು ಪ್ರಧಾನಿ ಹೇಳಿದರು.

ಕೊರೊನಾ ಸೋಂಕು ಹಬ್ಬಿದ ದೇಶದಲ್ಲಿ ಅತಿ ಕೆಲವೇ ದಿನಗಳಲ್ಲಿ ಕಬಂಧ ಬಾಹು ಚಾಚಿದೆ. ಈಗ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಭಾರತದಲ್ಲಿ ಕೆಲವೇ ದಿನಗಳಲ್ಲಿ ವೈರಸ್ ಹರಡಿದೆ. ಇದರ ವಿರುದ್ಧ ಹೋರಾಡಬೇಕಾದರೆ ಎರಡು ಪ್ರಮುಖ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಅವರು ನುಡಿದರು.

ನಾವು ಸಂಕಲ್ಪ ತೊಡೋಣ. ಸಂಯಮದಿಂದ ಇರೋಣ. ವೈರಸ್ ನಿಯಂತ್ರಣಕ್ಕೆ ಸಂಕಲ್ಪ ತೊಡೋಣ. ಯಾವುದೇ ಕಾರಣಕ್ಕೂ ಸಂಯಮ ಕಳೆದುಕೊಳ್ಳುವುದು ಬೇಡ. ಈಗ ಕೊರೊನಾಗೆ ಔಷಧ ಕಂಡುಹಿಡಿಯದ ಕಾರಣ ನಾವು ಸ್ವಯಂ ಪರ್ಯಾಯ ಕ್ರಮ ಕೈಗೊಳ್ಳಬೇಕಾಗಿದೆಎಂದು ಮೋದಿ ಹೇಳಿದರು.

ನಾವು ಸ್ವಸ್ಥವಾಗಿರೋಣ. ಇಡೀ ಜಗತ್ತನ್ನು ಸ್ವಸ್ಥವಾಗಿಸೋಣಎಂದು ಮನವಿ ಮಾಡಿದ ಪ್ರಧಾನಿಮುಂದಿನ ಕೆಲವು ವಾರಗಳ ಕಾಲ ಎಲ್ಲರೂ ಮನೆಯಲ್ಲಿದ್ದರೆ ಎಲ್ಲವೂ ಕ್ಷೇಮ. ಅಗತ್ಯ ಇದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ. ಮನೆಯಲ್ಲಿ ಹಿರಿಯರು, ಕಿರಿಯರು ಇದ್ದರೆ ಅವರನ್ನು ಹೊರಗೆ ಬಿಡಲೇ ಬೇಡಿ. ಇದನ್ನು ಕೆಲವು ವಾರಗಳ ಕಾಲ ಅಭ್ಯಾಸ ಮಾಡಿಎಂದು ಸೂಚಿಸಿದರು.

ಪ್ರತಿ ಬಾರಿ ನಾನು ನಿಮ್ಮನ್ನು ಏನಾದರೂ ಕೇಳಿದಾಗ ಅದನ್ನು ಕೊಟ್ಟು ಆಶೀರ್ವದಿಸಿದ್ದೀರಿ. ಈಗ ನಾನು ಮತ್ತೊಮ್ಮೆ ನಿಮ್ಮನ್ನು ಕೇಳುತ್ತಿದ್ದೇನೆ. ನಿಮ್ಮ ಮುಂದಿನ ಕೆಲವು ದಿನಗಳು, ಕೆಲವು ವಾರಗಳು ನನಗೆ ಬೇಕಾಗಿವೆ. ಕೊರೊನಾ ವೈರಸ್ಗಾಗಿ ಇದುವರೆಗೆ ಯಾವುದೇ ಔಷಧ ಕಂಡುಹಿಡಿಯಲಾಗಿಲ್ಲ. ಹೀಗಾಗಿ ನಾವೆಲ್ಲರೂ ಎಚ್ಚರದಿಂದಿರಬೇಕುಎಂದು ಅವರು ನುಡಿದರು.

ಕೆಲವು ಪ್ರಾಕೃತಿಕ ಸಮಸ್ಯೆಗಳು ಕೇವಲ ಒಂದು ರಾಜ್ಯ, ಒಂದು ದೇಶಕ್ಕೆ ಸೀಮಿತವಾಗಿರುತ್ತಿದ್ದವು. ಆದರೆ ಬಾರಿ ಕೊರೊನಾ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಇದರ ವಿರುದ್ಧ ನಾವು ಹೋರಾಡಬೇಕಾಗಿದೆಎಂದು ಪ್ರಧಾನಿ ಹೇಳಿದರು.

ಕೋವಿಡ್ ೧೯ ಬೇರೆ ದೇಶಗಳಲ್ಲಿ ಹಬ್ಬಿರುವ ರೀತಿಯನ್ನು ನಾವು ನೋಡಿದಲ್ಲಿ ಅದು ಇದ್ದಕ್ಕಿದ್ದಂತೆ ಸಾಂಕ್ರಾಮಿಕವಾಗಿ ಹಬ್ಬಿದೆ.  ತನ್ನ ನಾಗರಿಕರನ್ನು ಹೆಚ್ಚು ಪ್ರತ್ಯೇಕವಾಗಿರಿಸಿದ ರಾಷ್ಟ್ರಗಳು ಮಹಾಮಾರಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದ್ದರಿಂದ  ಇದಕ್ಕೆ ಭಾರತದಲ್ಲಿ ನಿಮ್ಮೆಲ್ಲರ ಭಾಗೀದಾರಿಕೆ ಅತ್ಯಗತ್ಯವಾಗಿದೆಎಂದು ಪ್ರಧಾನಿ ಹೇಳಿದರು.

ನಮ್ಮಲ್ಲಿ ಮಹಾಮಾರಿಯನ್ನು ಎದುರಿಸುವಲ್ಲಿ ಎರಡು ವಿಷಯಗಳು ಪ್ರಮುಖವಾಗಿರುತ್ತದೆ ಒಂದುಸಂಕಲ್ಪಮತ್ತು ಇನ್ನೊಂದುಸಂಯಮ. ನಾವು ಸ್ವಸ್ಥವಾಗಿದ್ದರೆ ಜಗತ್ತು ಸ್ವಸ್ಥ್ಯವಾಗಿರುತ್ತದೆ ಎಂಬುದು ನಮ್ಮ ಮೂಲಮಂತ್ರವಾಗಲಿ.  ಕಠಿಣ ಸಂದರ್ಭದಲ್ಲಿ ನಾವು ಮಹಾಮಾರಿಯ ಸಂಪರ್ಕಕ್ಕೆ ಬರುವುದಿಲ್ಲ ಹಾಗೂ ಇನ್ನೊಬ್ಬರ ಸಂಪರ್ಕಕ್ಕೂ ನಾವು ಬರಗೊಡುವುದಿಲ್ಲ ಎಂಬ ಸಂಕಲ್ಪವನ್ನು ನಾವೆಲ್ಲರೂ ಕೈಗೊಳ್ಳಬೇಕಾಗಿದೆ. ಮುಂದಿನ ಕೆಲವು ದಿನಗಳವರೆಗೆ ನಾವು ನಮ್ಮನ್ನು ಪ್ರತ್ಯೇಕವಾಗಿರಿಸಿಕೊಳ್ಳೋಣ. ಮತ್ತು ನಮ್ಮ ಕೆಲಸಗಳನ್ನು ಮನೆಯಿಂದಲೇ ಮಾಡಿಕೊಳ್ಳಲು ಪ್ರಯತ್ನಿಸೋಣಎಂದು ಪ್ರಧಾನಿ ಕರೆ ಕೊಟ್ಟರು.

ಸಂದರ್ಭದಲ್ಲಿ ದೇಶದಲ್ಲಿರುವ ಆಸ್ಪತ್ರೆಗಳಲ್ಲಿ ಯಾವುದೇ ಒತ್ತಡ ಉಂಟಾಗದಂತೆ ನೋಡಿಕೊಳ್ಳಬೇಕು. ವೈದ್ಯಕೀಯ ನೆರವು ಅಗತ್ಯವಿರುವವರು ತಮ್ಮ ಕುಟುಂಬ ವೈದ್ಯರಲ್ಲಿ ದೂರವಾಣಿ ಮೂಲಕವೇ ಆರೋಗ್ಯ ಸಲಹೆಯನ್ನು ಪಡೆದುಕೊಳ್ಳಿ ಎಂದು ಹೇಳಿದ ಪ್ರಧಾನಿಕೇಂದ್ರ ಹಣಕಾಸು ಮಂತ್ರಿಗಳ ಮುಂದಾಳುತ್ವದಲ್ಲಿವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದ್ದು. ಕಾರ್ಯಪಡೆ ದೇಶದ ಆರ್ಥಿಕ ಸ್ಥಿತಿಯ ಅವಲೋಕನವನ್ನು ಕ್ಷಣ ಕ್ಷಣಕ್ಕೂ ಮಾಡುತ್ತಿರುತ್ತದೆ ಎಂದು ಹೇಳಿದರು.

ಇದಕ್ಕೂ ಮುನ್ನ ಅಧಿಕಾರಿಗಳ ಜತೆ ಸಭೆ ನಡೆಸಿದ ಮೋದಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದರು.

ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸಲು ಸರ್ಕಾರ ಆರಂಭಿಸಿರುವ ಕ್ರಮಗಳಿಗೆ ವ್ಯಕ್ತಿಗಳು, ಸ್ಥಳೀಯ ಸಮುದಾಯಗಳು ಮತ್ತು ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದರು.

No comments:

Advertisement