ಗ್ರಾಹಕರ ಸುಖ-ದುಃಖ

My Blog List

Monday, March 9, 2020

ಬೆಂಗಳೂರಿನಲ್ಲಿ ಮೊದಲ ಕೊರೊನಾವೈರಸ್ ಪ್ರಕರಣ ಪತ್ತೆ

ಬೆಂಗಳೂರಿನಲ್ಲಿ ಮೊದಲ ಕೊರೊನಾವೈರಸ್  ಪ್ರಕರಣ ಪತ್ತೆ
ಬೆಂಗಳೂರು ಶಾಲಾ ಮಕ್ಕಳಿಗೆ ರಜೆ ಘೋಷಣೆ
ಬೆಂಗಳೂರು: ರಾಜ್ಯದಲ್ಲಿ ಮೊದಲ ಕೊರೊನಾವೈರಸ್ ಸೋಂಕು ದೃಡಪಟ್ಟ ಪ್ರಕರಣ ವರದಿಯಾಗಿದ್ದು, ಬೆಂಗಳೂರಿಗೆ ಅಮೆರಿಕದಿಂದ ಬಂದ ವ್ಯಕ್ತಿಯಲ್ಲಿ ಕೊರೊನಾವೈರಸ್ ಪತ್ತೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್  2020 ಮಾರ್ಚ್ 09ರ ಸೋಮವಾರ ಖಚಿತಪಡಿಸಿದರು.

೪೦ ವರ್ಷದ ಟೆಕ್ಕಿಯಲ್ಲಿ ಕೊರೊನಾವೈರಸ್ ಪತ್ತೆಯಾಗಿದ್ದು, ಅಮೆರಿಕದಿಂದ ಮಾರ್ಚ್ ೧ರಂದು ಬೆಳಗ್ಗೆ .೩೦ಕ್ಕೆ ಬೆಂಗಳೂರಿಗೆ ಆಗಮಿಸಿದ್ದರು. ಕೊರೊನಾವೈರಸ್ ಸೋಂಕಿತ ವ್ಯಕ್ತಿ, ಆತನ ಪತ್ನಿ, ಮಗು, ಚಾಲಕನನ್ನು ಪ್ರತ್ಯೇಕವಾಗಿ ಇಡಲಾಯಿತು.

ಸೋಂಕಿತನನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಜಯನಗರದ ರಾಜೀವಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

ಶಾಲೆಗಳಿಗೆ ರಜೆ: ಮಧ್ಯೆ, ನಗರದಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಶಾಲೆಗಳಿಗೆ ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿತು.

ಸೋಮವಾರದಿಂದ ಜಾರಿಗೆ ಬರುವಂತೆ ಪ್ರಿ ಎಲ್ಕೆಜಿ, ಎಲ್ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಸರ್ಕಾರ ಈಗಾಗಲೇ ರಜೆ ಘೋಷಿಸಿದೆ. ಬೆಂಗಳೂರು ಉತ್ತರ, ದಕ್ಷಿಣ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಇದು ಅನ್ವಯವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದರು..

ಭಾರತದಲ್ಲಿ ಇದುವರೆಗೂ ೪೪ ಕೊರೊನಾ ಪ್ರಕರಣಗಳು ಕಂಡುಬಂದಿದ್ದು, ಬೆಂಗಳೂರು ಪ್ರಕರಣ ಸೇರಿ ಒಟ್ಟು ಪ್ರಕರಣಗಳ ಸಂಖ್ಯೆ ೪೫ಕ್ಕೆ ಏರಿಕೆಯಾಗಿದೆ. ಶಂಕಿತ ಪ್ರಕರಣಗಳು ಕೂಡ ಕಂಡು ಬರುತ್ತಿದ್ದು ತೀವ್ರ ನಿಗಾ ವಹಿಸಲಾಗುತ್ತಿದೆ. ಇದುವರೆಗೂ ವಿಶ್ವಾದ್ಯಂತ ಕೊರೊನಾಗೆ ,೮೩೧ ಜನ ಬಲಿಯಾಗಿದ್ದು, ೬೦ಕ್ಕೂ ಹೆಚ್ಚು ದೇಶಗಳಿಗೆ ಕೊರೊನಾ ಹಬ್ಬಿದೆ.

No comments:

Advertisement