My Blog List

Tuesday, March 10, 2020

ಭಾರತದಲ್ಲಿ 53ಕ್ಕೆ ಏರಿದ ಕೋವಿಡ್ -೧೯

ಕೊರೋನಾ: ಕರ್ನಾಟಕದಲ್ಲಿ , ಕೇರಳದಲ್ಲಿ ಹೊಸ ಪ್ರಕರಣ
ಭಾರತದಲ್ಲಿ 53ಕ್ಕೆ ಏರಿದ  ಕೋವಿಡ್ -೧೯
ನವದೆಹಲಿ: ಕರ್ನಾಟಕದಲ್ಲಿ ಹೊಸದಾಗಿ ಮಂದಿ ಮತ್ತು ಕೇರಳದಲ್ಲಿ ಹೊಸದಾಗಿ ಮಂದಿಗೆ ಮಾರಕ ಕೊರೋನಾವೈರಸ್ ಸೋಂಕು ತಗುಲಿರುವುದು 2020 ಮಾರ್ಚ್ 10ರ ಮಂಗಳವಾರ ದೃಢ ಪಟ್ಟಿದ್ದು ಇದರೊಂದಿಗೆ ಭಾರತದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ ೪೪ರಿಂದ ೫೩ಕ್ಕೆ ಜಿಗಿದಿದೆ. ಕೊರೋನಾ ಸೋಂಕಿತರ  ಸಂಖ್ಯೆ ಕರ್ನಾಟಕದಲ್ಲಿ ೪ಕ್ಕೆ ಏರಿದರೆ, ಕೇರಳದಲ್ಲಿ ೧೨ಕ್ಕೆ ಏರಿದೆ.

ವೈರಸ್ ಸೋಂಕಿತರ ಸಂಖ್ಯೆ 2020 ಮಾರ್ಚ್ 10ರ ಮಂಗಳವಾರ ೧೨ಕ್ಕೇ ಏರುತ್ತಿದ್ದಂತೆಯೇ ಕೇರಳ ಸರ್ಕಾರವು ರಾಜ್ಯಾದ್ಯಂತ ಮಾರ್ಚ್ ೩೧ರವರೆಗೆ ೭ನೇ ತರಗತಿ ವರೆಗಿನ ಪರೀಕ್ಷೆಗಳನ್ನು ಅಮಾನತುಗೊಳಿಸಿತು. ಆದರೆ ,, ಮತ್ತು ೧೦ನೇ ತರಗತಿಗಳು ನಿಗದಿಯಂತೆಯೇ ನಡೆಯಲಿವೆ ಎಂದು ಸರ್ಕಾರ ತಿಳಿಸಿದೆ. ಬಹುತೇಕ ತುರ್ತು ಆರೋಗ್ಯ ಸ್ಥಿತಿಯನ್ನು ಘೋಷಿಸಿದ್ದು, ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸದಂತೆ ಜನತೆಗೆ ಸೂಚನೆ ನೀಡಿತು
ಕರ್ನಾಟಕ ಸರ್ಕಾರವು ಮತ್ತೆ ಮೂರು ಮಂದಿಗೆ ರಾಜ್ಯದಲ್ಲಿ ಕೋವಿಡ್ -೧೯ ಸೋಂಕು ತಗುಲಿರುವುದನ್ನು ದೃಢ ಪಡಿಸಿದ್ದು, ಕರ್ನಾಟಕದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರುಹೊಸದಾಗಿ ಸೋಂಕು ತಗುಲಿದವರ ಕುಟುಂಬ ಸದಸ್ಯರನ್ನು ಪ್ರತ್ಯೇಕಿಸಿ ಅವರ ಮೇಲೂ ನಿಗಾ ಇರಿಸಲಾಗಿದೆಎಂದು ತಿಳಿಸಿದರು.

ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸುವಂತೆ ಮತ್ತು ಸೋಂಕು ಹರಡದಂತೆ ತಡೆಯುವಲ್ಲಿ ಸಹಕರಿಸುವಂತೆ ನಾನು ಜನತೆಗೆ ಮನವಿ ಮಾಡುತ್ತೇನೆಎಂದು ಸಚಿವರು ಹೇಳಿದರು.

ಕೇರಳದ ಆರೋಗ್ಯ ಸಚಿವ ಕೆಕೆ ಶೈಲಜಾ ಅವರು ಕೇರಳದಲ್ಲಿ ಹೊಸದಾಗಿ ಸೋಂಕು ತಗುಲಿದವರನ್ನು ಇಟಲಿಯಿಂದ ಬಂದು ಪಟ್ಟಣಂತಿಟ್ಟದಲ್ಲಿ ವಾಸವಾಗಿರುವ ಮೂವರ ವಯೋವೃದ್ಧ ಹೆತ್ತವರೂ ಸೇರಿದ್ದಾರೆ ಎಂದು ಹೇಳಿದರು. ಇಟಲಿಯಿಂದ ಬಂದ ಮೂವರಿಗೆ ವಾರಾರಂಭದಲ್ಲಿ ಕೊರೋನಾವೈರಸ್ ಸೋಂಕು ತಗುಲಿದ್ದು ದೃಢ ಪಟ್ಟಿತ್ತು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರುತುಂಬಾ ಚಿಂತಿತರಾಗುವ ಅಗತ್ಯವಿಲ್ಲ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕಾದದ್ದು ಮತ್ತು ಜವಾಬ್ದಾರಿಯುತವಾಗಿ ವರ್ತಿಸಬೇಕಾದದ್ದು ಈಗಿನ ಅಗತ್ಯಎಂದು ಹೇಳಿದರು.

ಪ್ರಸ್ತುತ ೧೧೬ ಮಂದಿಯ ಮೇಲೆ ನಿಗಾ ಇರಿಸಲಾಗಿದೆ. ಹಿಂದೆ ಮೂರು ಪ್ರಕರಣಗಳು ವರದಿಯಾದಾಗ ನಿಭಾಯಿಸಿದ್ದಂತೆಯೇ ಈಗಲೂ ನಾವು ಪರಿಸ್ಥಿತಿಯನ್ನು ನಿಭಾಯಿಸುತ್ತೇವೆ ಎಂದು ಮುಖ್ಯಮಂತ್ರಿ ನುಡಿದರು.

ಮಧ್ಯೆ, ಕೊರೋನಾಪೀಡಿತ ಇರಾನಿನಿಂದ ೫೮ ಮಂದಿ ಭಾರತೀಯರನ್ನು ಮಂಗಳವಾರ ಭಾರತೀಯ ವಾಯುಪಡೆ (ಐಎಎಫ್) ವಿಮಾನದ ಮೂಲಕ ತಾಯ್ನಾಡಿಗೆ ವಾಪಸ್ ಕರೆತರಲಾಗಿದೆ.
ಇರಾನಿನಿಂದ ಭಾರತಕ್ಕೆ ಮರಳಿ ಕರೆತರಲಾದ ಎಲ್ಲ ಭಾರತೀಯ ನಾಗರಿಕರನ್ನೂ ದೆಹಲಿ ಸಮೀಪದ ಹಿಂಡನ್ನಲ್ಲಿ ವ್ಯವಸ್ಥೆ ಮಾಡಲಾಗಿರುವ ವೈದ್ಯಕೀಯ ಸವಲತ್ತು ಘಟಕದಲ್ಲಿ ಏಕಾಂಗಿ ವಾಸಕ್ಕೆ ಕಳುಹಿಸಲಾಗಿದೆ.

ರಾಷ್ಟ್ರದಲ್ಲಿ ಕೊರೋನಾವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರವು ಸಂಚಾರ-ಸಾಗಣೆ, ಏಕಾಂಗಿ ವಾರ್ಡ್ ವ್ಯವಸ್ಥೆ, ಮಾಹಿತಿ ನಿರ್ವಹಣೆ ಮತ್ತು ಅಪಾಯದ ಕುರಿತು ಸಂಪರ್ಕ ವ್ಯವಸ್ಥೆಗಳನ್ನು ತ್ವರಿತವಾಗಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ಪ್ರಯಾಣಿಕರನ್ನು ತಪಾಸಣೆ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಮಾನವ ಸಂಪನ್ಮೂಲವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.

ಸೋಮವಾರದವರೆಗೆ ಒಟ್ಟು ,೮೨೭ ವಿಮಾನಗಳ ,೪೧,೭೧೭ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಈವರೆಗೆ ವಿಮಾನ ನಿಲ್ದಾಣಗಳಲ್ಲಿ ತಪಾಸಿಸಲಾಗಿದ್ದು, ೫೪ ಪ್ರಯಾಣಿಕರನ್ನು ಐಡಿಎಸ್ಪಿ/ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಗಳವಾರ ಸಚಿವ ಸಂಪುಟದ ಸಭೆ ನಡೆಸಿ, ಕೊರೋನಾವೈರಸ್ ಸೋಂಕಿನ ನಿಭಾವಣೆಗಾಗಿ ಕೈಗೊಳ್ಳಲಾದ ಕ್ರಮಗಳ ಪರಿಶೀಲನೆ ನಡೆಸಿದರು.
ಕೊರೋನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ಅನುಸರಿಸಿ ಕೇರಳವು ಒಂದು ತಿಂಗಳ ಅವಧಿಗೆ ಕೆಲವು ತರಗತಿಗಳ ಅಮಾನತು ಮತ್ತು ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳ ರದ್ದು ಸೇರಿದಂತೆ  ಆರೋಗ್ಯ ರಕ್ಷಣೆ ನಿಟ್ಟಿನ ತುರ್ತು ಕ್ರಮಗಳನ್ನು ಘೋಷಿಸಿದೆ.

೧ರಿಂದ ೭ನೇ ತರಗತಿಗಳವರೆಗಿನ ಮಕ್ಕಳ ಶಾಲೆಗಳನ್ನು ರಾಜ್ಯಾದಂತ ಮಾರ್ಚ್ ೩೧ರವರೆಗೆ ಮುಚ್ಚಲಾಗಿದ್ದು, ಮಾಧ್ಯಮಿಕ ಶಿಕ್ಷಣದ ಕೇಂದ್ರೀಯ ಮಂಡಳಿ (ಸಿಬಿಎಸ್ ) ಮತ್ತು ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕಂಡರಿ ಎಜುಕೇಷನ್ (ಐಸಿಎಸ್ ) ಪರೀಕ್ಷೆಗಳನ್ನೂ ಅಮಾನತುಗೊಳಿಸಿದೆ.

ಆದಾಗ್ಯೂ, ೮ರಿಂದ ೧೦ನೇ ತರಗತಿ ಮತ್ತು ಹೈಯರ್ ಸೆಕಂಡರಿ ತರಗತಿಗಳ ಮಕ್ಲಳಿಗೆ ಪರೀಕ್ಷೆಗಳನ್ನು ನಡೆಸಲಾಗುವುದು, ವೈದ್ಯಕೀಯ ನಿಗಾದಲ್ಲಿ ಇರುವ ವಿದ್ಯಾರ್ಥಿಗಳಿಗೆ ವಿಶೇಷ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ.

ಎಲ್ಲ ಕಾಲೇಜುಗಳು, ಮದ್ರಸಾಗಳೂ ಮತ್ತು ಟ್ಯುಟೋರಿಯಲ್ಗಳನ್ನು ಕೂಡಾ ಮಾರ್ಚ್ ೩೧ರವರೆಗೆ ಮುಚ್ಚಲಾಗಿದೆ ಎಂದು ಮುಖ್ಯಮಂತ್ರಿ ನುಡಿದರು.

ಚಿತ್ರಮಂದಿರಗಳಿಗೂ ತಾತ್ಕಾಲಿಕವಾಗಿ ಚಿತ್ರ ಪ್ರದರ್ಶನ ಸ್ಥಗಿತಗೊಳಿಸುವಂತೆ ಸರ್ಕಾರ ಮನವಿ ಮಾಡಿದೆ.

ಎಲ್ಲ ಸಾರ್ವಜನಿಕ ಸಮಾರಂಭಗಳು, ಉತ್ಸವಗಳು, ಮದುವೆಗಳು ಇತ್ಯಾದಿಯಗಿ ಹೆಚ್ಚಿನ ಸಂಖ್ಯೆಯಲ್ಲಿ ಜನಸೇರುವ ಸಂದರ್ಭಗಳನ್ನು ಮುಂದೂಡಬೇಕು ಎಂದು ನುಡಿದ ಪಿಣರಾಯಿ ವಿಜಯನ್ ಎಲ್ಲ ಆಚರಣೆಗಳನ್ನೂ ಮನೆಗಳಿಗೇ ಸೀಮಿತಪಡಿಸುವಂತೆ ಕೂಡಾ ಜನತೆಗೆ ಮನವಿ ಮಾಡಿದರು.

ಗುರುವಾರ ಮಾಸಿಕ ಪೂಜೆಗಳಿಗಾಗಿ ತೆರೆಯಲ್ಪಡುವ ಶಬರಿಮಲೈಗೆ ಕೂಡಾ ಭೇಟಿ ನೀಡದಂತೆ ಮುಖ್ಯಮಂತ್ರಿ ಭಕ್ತರನ್ನು ಕೋರಿದರು.

ಕೇರಳದಲ್ಲಿ ೧೪೯ ಆಸ್ಪತ್ರೆಗಳಲ್ಲಿ ೧೧೧೬ ಮಂದಿಯನ್ನು ಕಣ್ಗಾವಲಿನಲ್ಲಿ ಇರಿಸಲಾಗಿದೆ ಎಂದು ಮುಖ್ಯಮಂತ್ರಿ ನುಡಿದರು.

ಭಾರತದಲ್ಲಿ ಮೊತ್ತ ಮೊದಲು ಕೊರೋನಾವೈರಸ್ ಸೋಕು ತಗುಲಿದ ಮೂರು ಪ್ರಕರಣಗಳು ಕೇರಳದಿಂದಲೇ ವರದಿಯಾಗಿದ್ದವು.  ಮೂರೂ ಮಂದಿ ಚಿಕಿತ್ಸೆಯ ಬಳಿಕ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದರು.

No comments:

Advertisement