ಗ್ರಾಹಕರ ಸುಖ-ದುಃಖ

My Blog List

Monday, March 30, 2020

ಕೊರೋನಾ ಪರಿಣಾಮ: ತೆಲಂಗಾಣದಲ್ಲಿ ವೇತನ ಕಡಿತ

ಕೊರೋನಾ ಪರಿಣಾಮ: ತೆಲಂಗಾಣದಲ್ಲಿ ವೇತನ ಕಡಿತ
ಹೈದರಾಬಾದ್:  ರಾಜ್ಯದಲ್ಲಿ 77 ಮಂದಿಗೆ ಕೊರೋನಾವೈರಸ್ ಸೋಂಕು ತಗುಲುತ್ತಿದ್ದಂತೆಯೇ ತೆಲಂಗಾಣ ಸರ್ಕಾರವು 2020 ಮಾರ್ಚ್ 30ರ ಸೋಮವಾರ ತನ್ನ ಎಲ್ಲ ನೌಕರರು, ಆಡಳಿತಾಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳ ವೇತನವನ್ನು ಕಡಿತಗೊಳಿಸಿತು.

ರಾಜ್ಯದ ಆರ್ಥಿಕ ಸ್ಥಿತಿ ಕುಸಿತದ ಕಾರಣ ಕನಿಷ್ಠ ಶೇಕಡಾ 10ರಿಂದ ಗರಿಷ್ಠ ಶೇಕಡಾ 75ರವರೆಗೆ ವೇತನ ಕಡಿತ ಮಾಡಲು ಪ್ರಗತಿ ಭವನದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಕರೆದಿದ್ದ  ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಯಿತು.

ರಾಜ್ಯದ ಕಂದಾಯ ಕುಸಿತ ಮತ್ತು ಕೇಂದ್ರದಿಂದ ಬರಬೇಕಾದ ಹಣದ ಪಾಲಿನ ಕೊರತೆ ಕಾರಣ  ಈ ನಿರ್ಧಾರ ಕೈಗೊಳ್ಳಲಾಯಿತು ಎನ್ನಲಾಗಿದೆ.

No comments:

Advertisement