Monday, March 30, 2020

ಕೋವಿಡ್ ಜಾಗತಿಕ ಸೋಂಕಿತರು ೭,೨೭,೦೮೦, ಸಾವಿನ ಸಂಖ್ಯೆ ೩೪,೬೧೦, ಇಸ್ರೇಲ್ ಪ್ರಧಾನಿಗೂ ಏಕಾಂಗಿವಾಸ

ಕೋವಿಡ್ ಜಾಗತಿಕ ಸೋಂಕಿತರು ,೨೭,೦೮೦, ಸಾವಿನ ಸಂಖ್ಯೆ ೩೪,೬೧೦, ಇಸ್ರೇಲ್ ಪ್ರಧಾನಿಗೂ ಏಕಾಂಗಿವಾಸ
ನವದೆಹಲಿ: ವಿಶ್ವಾದ್ಯಂತ ಕೊರೋನಾವೈರಸ್ ಸೋಂಕು ಬಾಧಿಸಿರುವವರ ಸಂಖ್ಯೆ ,೨೭,೦೮೦ಕ್ಕೆ ಏರಿಕೆಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ ೩೪,೬೧೦ಕ್ಕೆ ತಲುಪಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಚೀನಾದಲ್ಲಿ ಆರಂಭವಾದ ಸಾಂಕ್ರಾಮಿಕ ಸೋಂಕು ಇದೀಗ ವಿಶ್ವದ ೧೮೩ ರಾಷ್ಟ್ರಗಳು ಮತ್ತು ಪ್ರದೇಶಗಳಿಗೆ ವ್ಯಾಪಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಏಕಾಂಗಿವಾಸಕ್ಕೆ ಒಳಗಾಗಿದ್ದಾರೆ ಎಂದು ವರದಿಗಳು 2020 ಮಾರ್ಚ್ 30ರ ಸೋಮವಾರ ತಿಳಿಸಿದವು.

ಇಟಲಿ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ೧೦,೭೭೯ಕ್ಕೆ ಏರಿದ್ದರೆ, ಸೋಂಕಿನಿಂದ ಬಾಧಿತರಾದ ಪ್ರಕರಣಗಳು ೯೭,೬೮೯ಕ್ಕೆ ಏರಿವೆ. ಸ್ಪೇನಿನಲ್ಲಿ ,೩೪೦ ಮಂದಿ ಸಾವನ್ನಪ್ಪಿದ್ದರೆ, ಒಟ್ಟು ಸೋಂಕಿತ ಪ್ರಕರಣಗಳು ೮೫,೧೯೫ಕ್ಕೆ ಏರಿದೆ. ಚೀನಾದಲ್ಲಿ ೮೧,೪೭೦ ಸೋಂಕಿನ ಪ್ರಕರಣ ಮತ್ತು ,೩೦೩ ಸಾವುಗಳು ದಾಖಲಾಗಿದ್ದರೆ, ಇರಾನಿನಲ್ಲಿ ,೭೫೭ ಸಾವು ಸಂಭವಿಸಿದ್ದು, ೪೧,೪೯೫ ಮಂದಿಗೆ ಸೋಂಕು ತಗುಲಿದೆ. ಫ್ರಾನ್ಸಿನಲ್ಲಿ ,೬೦೬ ಸಾವು ಮತ್ತು ೪೦,೧೭೪ ಸೋಂಕಿನ ಪ್ರಕರಣಗಳು ದಾಖಲಾಗಿವೆ.

ಭಾರತದಲ್ಲಿ ಹೊಸ ೯೨ ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ ೧೦೭೧ಕ್ಕೆ ಏರಿದೆ. ಮೃತರ ಸಂಖ್ಯೆ ೨೯ಕ್ಕೆ ಏರಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ೨೧೫ಕ್ಕೇ ಏರಿದೆ. ಪಾಕಿಸ್ತಾನದಲ್ಲಿ ೧೬೬೪ ಸೋಂಕು, ೧೮ ಸಾವು ವರದಿಯಾಗಿವೆ. ಪಾಕಿಸ್ತಾನದಲ್ಲಿ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲು ಚೀನಾ ಮುಂದಾಗಿದೆ.

ನೆತನ್ಯಾಹುಗೆ ಏಕಾಂಗಿವಾಸ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಹಾಯPರೊಬ್ಬರಿಗೆ ಕೊರೋನಾವೈರಸ್ ಸೋಂಕು ಬಾಧಿಸಿದ್ದು ಖಚಿತಪಟ್ಟ ಹಿನ್ನೆಲೆಯಲ್ಲಿ ನೆತನ್ಯಾಹು ಅವರು ಸೋಮವಾರದಿಂದ ಏಕಾಂತವಾಸ ಆರಂಭಿಸಿದ್ದಾರೆ. ಸದರಿ ಸಹಾಯಕ ಕಳೆದ ವಾರ ನೆತನ್ಯಾಹು ಅವರು ಪಾಲ್ಗೊಂಡಿದ್ದ ಸಂಸತ್ ಅಧಿವೇಶನದಲ್ಲಿ ಹಾಜರಿದ್ದುದಾಗಿ ವರದಿಗಳು ಹೇಳಿವೆ. ಕೊರೋನಾವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತುರ್ತು ಸಮ್ಮಿಶ್ರ ಸರ್ಕಾರ ರಚಿಸುವ ನಿಟ್ಟಿನಲ್ಲಿ ನೆತನ್ಯಾಹು ಅವರು ವಿರೋಧಿ ಶಾಸನಕರ್ತರ ಜೊತೆಗೆ ಅಧಿವೇಶನದಲ್ಲಿ ಚರ್ಚಿಸಿದ್ದರು.

No comments:

Advertisement