Monday, March 30, 2020

ಕೊರೋನಾ ವಿರುದ್ಧ ಚೀನಾ ’ಸೂಪರ್ ಕ್ಯೂರ್’?

ಕೊರೋನಾ ವಿರುದ್ಧ ಚೀನಾ  ಸೂಪರ್ ಕ್ಯೂರ್?
ಬೀಜಿಂಗ್: ಸುಮಾರು ೩೨,೦೦೦ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡು, ವಿಶ್ವವನ್ನು ಗಡ ಗಡ ನಡುಗಿಸುತ್ತಿರುವ ಮಾರಕ ಕೊರೋನಾವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕಾಗಿ ಚೀನೀ ವಿಜ್ಞಾನಿಗಳುಸೂಪರ್ ಶಸ್ತ್ರವೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮಗ್ಲೋಬಲ್  ಟೈಮ್ಸ್ 2020 ಮಾರ್ಚ್ 30ರ ಸೋಮವಾರ ವರದಿ ಮಾಡಿತು. 

ಕೊರೋನಾವೈರಸ್ ವಿರುದ್ಧ ಹೋರಾಟಕ್ಕೆ ಹೊಸ ಆಯುಧವೊಂದನ್ನು ಚೀನೀ ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ವೈರಸ್ಸನ್ನು ಹೀರಿಕೊಂಡು ನಿಷ್ಕ್ರಿಯಗೊಳಿಸುವಂತಹ ನ್ಯಾನೋವಸ್ತುವೊಂದನ್ನು ತಾವು ಪತ್ತೆ ಹಚ್ಚಿದ್ದು, ಇದು ಕೊರೋನಾವೈರಸ್ಸನ್ನು ಕೊಲ್ಲುವಲ್ಲಿ ಶೇಕಡಾ ೯೬.-೯೯. ರಷ್ಟು ದಕ್ಷತೆ ಹೊಂದಿದೆ ಎಂಬುದಾಗಿ ವಿಜ್ಞಾನಿಗಳು ಹೇಳುತ್ತಾರೆ ಎಂದು ಟೈಮ್ಸ್ ವರದಿ ತಿಳಿಸಿತು.

ನೂತನ ಶಸ್ತ್ರವು ಔಷಧವಲ್ಲ ಅಥವಾ ರಾಸಾಯನಿಕ ಮಿಶ್ರಣವಲ್ಲ, ಬದಲಿಗೆ ಒಂದು ನ್ಯಾನೋ ವಸ್ತು (ಅತಿ ಸೂಕ್ಷ್ಮ ವಸ್ತು) ಎಂದು ಮಾಧ್ಯಮ ಹೇಳಿತು.
ಉತ್ಪಾದನಾ ಪ್ರಕ್ರಿಯೆಗಳು, ಉತ್ಪನ್ನಗಳು ಮತ್ತು ಬಣ್ಣಗಳು, ಫಿಲ್ಟರುಗಳು, ಇನ್‌ಸ್ಯುಲೇಷನ್ ಮತ್ತು ಲ್ಯೂಬ್ರಿಕೆಂಟ್ ಅಡಿಟಿವ್‌ಗಳಂತಹ ಆರೋಗ್ಯ ಕಾಳಜಿ ಉತ್ಪನ್ನಗಳಲ್ಲಿ ನ್ಯಾನೋವಸ್ತುಗಳನ್ನು ಬಳಸಲಾಗುತ್ತದೆ.

ಆರೋಗ್ಯ ಕಾಳಜಿಗೆ ಕಿಣ್ವದಂತಹ (ಎನಜೈಮ್) ಗುಣಗಳಿರುವ ನ್ಯಾನೋಜೈಮ್‌ಗಳು ಅಥವಾ ನ್ಯಾನೋವಸ್ತುಗಳನ್ನು ಬಳಸಲಾಗುತ್ತದೆ.

ನ್ಯಾನೋವಸ್ತುಗಳ ನಿರ್ದಿಷ್ಟ ವಿವರಣೆ ಬಗ್ಗೆ ಇದಮಿತ್ಥಂ ಎಂಬ ಸರ್ವಾನುಮತದ ವಿವರಣೆಯನ್ನು ವಿಜ್ಞಾನಿಗಳು ನೀಡಿಲ್ಲ, ಆದರೆ ನ್ಯಾನೋಮೀಟರ್‌ಗಳಲ್ಲಿ ಅಳತೆ ಮಾಡಬಹುದಾದ ಅವುಗಳ ಸೂಕ್ಷ್ಮ ಗಾತ್ರವನ್ನು ಆಧರಿಸಿ ಅವುಗಳ ಗುಣಲಕ್ಷಣಗಳನ್ನು ಭಾಗಶಃ ನಿರ್ಧರಿಸಲು ಸಾಧ್ಯ ಎಂಬುದಾಗಿ ಒಪ್ಪಿದ್ದಾರೆ ಎಂದು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಯುಎಸ್ ಎನ್ ಐಎಚ್) ಹೇಳಿದೆ.

ದೇಹದಲ್ಲಿನ ನಿರ್ದಿಷ್ಟ ಅಂಗಾಂಗಗಳು ಅಥವಾ ಕ್ಯಾನ್ಸರ್ ಕೋಶಗಳಂತಹ ಕೋಶಗಳ ಮೇಲೆ ಗುರಿಇಡಲು ಮತ್ತು ಚಿಕಿತ್ಸಾ ವಿಧಾನದ (ಥೆರೆಪಿ) ಪರಿಣಾಮಕಾರಿತ್ವವನ್ನು ಹೆಚ್ಚಿಸುವ ಸಲುವಾಗಿ ಫಾರ್ಮಾಸ್ಯೂಟಿಕಲ್ಸ್ ವಿನ್ಯಾಸಕ್ಕೆ ನ್ಯಾನೋ ತಂತ್ರಜ್ಞಾನವನ್ನು ಬಳಸಬಹುದು ಎಂದು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಹೇಳುತ್ತದೆ.

ವಿನ್ಯಾಸಗೊಳಿಸಲಾದ (ಎಂಜಿನೀಯರ್ಡ್) ನ್ಯಾನೊವಸ್ತುಗಳು ಉತ್ತಮ ಪ್ರಯೋಜನಗಳನ್ನು ನೀಡುತ್ತವೆಯಾದರೂ, ‘ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ನಮಗೆ ಬಹಳ ಕಡಿಮೆ ತಿಳಿದಿದೆ. ಉದಾಹರಣೆಗೆ ಬೆಳ್ಳಿಯಂತಹ ಸುಪರಿಚಿತ ವಸ್ತುಗಳು ಸಹ ನ್ಯಾನೊ ಗಾತ್ರಕ್ಕೆ ವಿನ್ಯಾಸಗೊಂಡಾಗ  ಅಪಾಯವನ್ನುಂಟುಮಾಡಬಹುದುಎಂದು ಸಂಸ್ಥೆ ಹೇಳುತ್ತದೆ.

ವಿಶ್ವದ ಇತರ ಭಾಗಗಳಲ್ಲಿ ಕೊರೋನಾವೈರತ್ ತನ್ನ ತಾಂಡವವನ್ನು ಇನ್ನೂ ಮುಂದುವರೆಸಿರುವಾಗಲೇ  ಚೀನಾದಲ್ಲಿ ಅದು ನಿಯಂತ್ರಣಕ್ಕೆ ಬಂದಿದ್ದು, ಕೆಲ ದಿನಗಳ ಹಿಂದೆ ಅಲ್ಲಿನ ವೈದ್ಯರು ಆಧುನಿಕ ಔಷಧ (ಆಲೋಪಥಿ) ಮತ್ತು ಚೀನೀ ಪರಂಪರಾಗತ ಔಷಧದ ಸಂಯೋಜನೆ ಮೂಲಕ ತಾವು ಕೊರೋನಾವೈರಸ್ ಸೋಂಕನ್ನು ನಿಯಂತ್ರಣಕ್ಕೆ ತಂದುದಾಗಿ ಹೇಳಿದ್ದರು.

No comments:

Advertisement