My Blog List

Sunday, March 1, 2020

‘ನಿಮ್ಮ ಮೂಗಿನ ಕೆಳಗೆ..’: ಅಮಿತ್ ಶಾಗೆ ಟಿಎಂಸಿ ಎದಿರೇಟು..!

ನಿಮ್ಮ ಮೂಗಿನ ಕೆಳಗೆ..: ಅಮಿತ್ ಶಾಗೆ ಟಿಎಂಸಿ ಎದಿರೇಟು
ಕೋಲ್ಕತ: ವಿವಿಧ ವಿಷಯಗಳನ್ನು ಎತ್ತಿ ಮಮತಾ ಬ್ಯಾನರ್ಜಿ ಸರ್ಕಾರವನ್ನು ಚುಚ್ಚಿ, ೨೦೨೧ರ ವಿಧಾನಸಭಾ ಚುನಾವಣೆಯಲ್ಲಿ ದೀದಿ ಸರ್ಕಾರವನ್ನು ಉರುಳಿಸುವಂತೆ ಕರೆ ನೀಡಿದ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಅಮಿತ್ ಶಾ ಅವರಿಗೆ 2020 ಮಾರ್ಚ್  01ರ ಭಾನುವಾರ ಎದಿರೇಟು ನೀಡಿದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿಮ್ಮ ಮೂಗಿನ ಕೆಳಗೆ ಏನು ನಡೆದಿದೆ ನೋಡಿಕೊಳ್ಳಿ ಎಂದು ಮೂದಲಿಸಿತು.

ಬಂಗಾಳಕ್ಕೆ ಬೋಧನೆ ಮಾಡುವ ಬದಲು, ಅಮಿತ್ ಶಾ ಅವರೇ ನೀವು ನಿಮ್ಮ ಮೂಗಿನ ಕೆಳಗೇ ದೆಹಲಿ ಹಿಂಸಾಚಾರದಲ್ಲಿ ೫೦ಕ್ಕೂ ಹೆಚ್ಚು ಮುಗ್ಧ ಜೀವಗಳನ್ನು ರಕ್ಷಿಸಲು ವಿಫಲರಾದುದಕ್ಕಾಗಿ ವಿವರಣೆ ನೀಡಬೇಕಾಗಿತ್ತು ಮತ್ತು ಕ್ಷಮೆ ಕೇಳಬೇಕಾಗಿತ್ತು ಎಂದು ಮುಖ್ಯಮಂತ್ರಿಯ ಅಳಿಯ ಮತ್ತು ಟಿಎಂಸಿ ಯುವ ವಿಭಾಗದ ಮುಖ್ಯಸ್ಥ ಅಭಿಷೇಕ್ ಬ್ಯಾನರ್ಜಿ ಟ್ವೀಟ್ ಮಾಡಿದರು.

ಬಂಗಾಳವು ಬಿಜೆಪಿಯು ಹರಡಲು ಯತ್ನಿಸುತ್ತಿರುವ ಧರ್ಮಾಂಧತೆ ಮತ್ತು ದ್ವೇಷದಿಂದ ಮುಕ್ತವಾಗಿದ್ದು ಉತ್ತಮ ರಾಜ್ಯವಾಗಿದೆ ಎಂದೂ ಅಭಿಷೇಕ್ ಬರೆದರು.

ಅಮಿತ್ ಶಾ ಅವರು ಕೋಲ್ಕತದ ಶಾಹಿದ್ ಮೀನಾರ್ ಮೈದಾನದಲ್ಲಿ ಭಾನುವಾರ ಮಧ್ಯಾಹ್ನ ಮಾಡಿದ ತಮ್ಮ ಭಾಷಣದಲ್ಲಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಹೆಸರು ಉಲ್ಲೇಖಿಸದೆಯೇ ಟೀಕಿಸಿದ್ದರು. ಅಭಿಷೇಕ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿದ ಶಾ ಮಮತಾ ಬ್ಯಾನರ್ಜಿ ಅವರು ವಂಶ ರಾಜಕೀಯ ನಿರತರಾಗಿದ್ದಾರೆ ಎಂದು ಟೀಕಿಸಿ, ಅಳಿಯನ ಭ್ರಷ್ಟಾಚಾರ ಕೊನೆಗೊಳಿಸುವಂತೆ ಆಗ್ರಹಿಸಿದ್ದರು.

ಇಡೀ ಪಕ್ಷದಲ್ಲಿ ಅಳಿಯನಿಂದ ಸರಪಂಚನವರೆಗೆ (ಪಂಚಾಯತ್ ಮುಖ್ಯಸ್ಥ) ಭ್ರಷ್ಟಾಚಾರ ವ್ಯಾಪಿಸಿದೆ ಎಂದು ಶಾ ಕೆಣಕಿದ್ದರು.

ಯಾರೇ ಶಾಹಜಾದ ಮತ್ತು ರಾಜಕುಮಾರ ಬಂಗಾಳದ ಮುಂದಿನ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಶಾ ಹೇಳಿದ್ದರು.

೨೦೨೧ರ ಪಶ್ಚಿಮ ಬಂಗಾಳ ವಿಧಾನಸಭೆಗೆ ಮುಂಚಿತವಾಗಿ ಬರಲಿರುವ, ರಾಜ್ಯ ರಾಜಕೀಯದ ದಿಕ್ಸೂಚಿ ಎಂದೇ ಪರಿಗಣಿಸಲಾಗಿರುವ ಏಪ್ರಿಲ್ - ಮೇ ತಿಂಗಳ ಪೌರ ಸಂಸ್ಥೆ ಚುನಾವಣೆಗಳಿಗೆ ಮುನ್ನ ರಾಜ್ಯದಲ್ಲಿ ರಾಜಕೀಯ ಬಿಸಿ ಏರುತ್ತಿದೆ.

ಭಾನುವಾರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಶಾ ೪೨ ಲೋಕಸಭಾ ಸ್ಥಾನಗಳ ಪೈಕಿ ೧೮ ಸ್ಥಾನಗಳನ್ನು ಗೆದ್ದು, ಟಿಎಂಸಿಯ ಬಲವನ್ನು ೨೨ಕ್ಕೆ ಕುಗ್ಗಿಸಿರುವ ಬಿಜೆಪಿಯು ಪಶ್ಚಿಮ ಬಂಗಾಳದ ಎರಡನೇ ಅತ್ಯಂತ ಪ್ರಬಲವಾದ ಪಕ್ಷವಾಗಿ ಉದಯಿಸಿದೆ ಮತ್ತು ಮೂರನೇ ಎರಡು ಬಹುಮತದೊಂದಿಗೆ ರಾಜ್ಯದಲ್ಲಿ ಮುಂದಿನ ಸರ್ಕಾರವನ್ನು ರಚಿಸಲಿದೆ ಎಂದು ಪ್ರತಿಪಾದಿಸಿದ್ದರು.

No comments:

Advertisement