My Blog List

Wednesday, March 25, 2020

ಕಾಬೂಲ್ ಗುರುದ್ವಾರದ ಮೇಲೆ ಐಸಿಸ್ ಉಗ್ರರ ದಾಳಿ: ೨೭ ಜನರ ಬಲಿ

ಕಾಬೂಲ್ ಗುರುದ್ವಾರದ ಮೇಲೆ ಐಸಿಸ್ ಉಗ್ರರ ದಾಳಿ:  ೨೭ ಜನರ ಬಲಿ
ಕಾಬೂಲ್: ಭಾರೀ ಶಸ್ತ್ರ ಸಜ್ಜಿತ ಉಗ್ರರ ಗುಂಪು ಗುರುದ್ವಾರದ ಮೇಲೆ ಏಕಾಏಕಿ ದಾಳಿ ನಡೆಸಿ ೨೭ ಮಂದಿಯನ್ನು ಹತ್ಯೆಗೈದ  ಘಟನೆ ಅಪ್ಘಾನಿಸ್ಥಾನದ  ಕಾಬೂಲ್ ಶೋರ್ ಬಜಾರ್ ಪ್ರದೇಶದಲ್ಲಿ  2020 ಮಾರ್ಚ್ 25ರ ಬುಧವಾರ ಘಟಿಸಿತು.

ಸಿಖ್ ಗುರುದ್ವಾರದ ಮೇಲೆ ದಾಳಿ ನಡೆಸಿರುವ ಘಟನೆಯನ್ನು ಭಾರತಹೇಡಿ ಕೃತ್ಯ’ ಎಂಬುದಾಗಿ  ಖಂಡಿಸಿತು.

ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳಿದ  ಕೇಂದ್ರ ಸರ್ಕಾರ ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿತು.  ಅಫ್ಘಾನಿಸ್ತಾನದಲ್ಲಿರುವ ಎಲ್ಲಾ ಹಿಂದೂ ಮತ್ತು ಸಿಖ್ ಸಮುದಾಯದ ಕುಟುಂಬಗಳಿಗೆ ಎಲ್ಲಾ ರೀತಿಯ ನೆರವು ನೀಡಲು ಭಾರತ ಸಿದ್ದವಾಗಿದೆ ಎಂದು ಸರ್ಕಾರ ತಿಳಿಸಿತು.

ಕಾಬೂಲ್ ನಲ್ಲಿರುವ ಸಿಖ್ ಗುರುದ್ವಾರದ ಮೇಲೆ ನಡೆಸಿರುವ ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿರುವುದಾಗಿ ಎಸ್ ಐಟಿಇ ಇಂಟೆಲಿಜೆನ್ಸ್ ಗ್ರೂಪ್ ತಿಳಿಸಿತು.   ದಾಳಿಯ ಹಿಂದೆ ಪಾಕಿಸ್ತಾನದ ಐಎಸ್ ಕೈವಾಡ ಇದ್ದಿರಬಹುದು ಎಂದು ಭಾರತದ ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿತು.

No comments:

Advertisement