My Blog List

Tuesday, March 31, 2020

ಚೀನಾ ನಿರ್ಮಿತ ಸಲಕರಣೆಗಳ ಗುಣಮಟ್ಟ ಹಲವಾರು ವೈರೋಪ್ಯ ರಾಷ್ಟ್ರಗಳ ದೂರು

ಚೀನಾ ನಿರ್ಮಿತ ಸಲಕರಣೆಗಳ ಗುಣಮಟ್ಟ
ಹಲವಾರು ವೈರೋಪ್ಯ ರಾಷ್ಟ್ರಗಳ ದೂರು
ನವದೆಹಲಿ: ವಿಶ್ವವ್ಯಾಪಿ ಕೊರೋನವೈರಸ್ ವಿರುದ್ಧ ಹೋರಾಡಲು ಚೀನಾ ಪೂರೈಸುತ್ತಿರುವ ಸಲಕರಣೆಗಳ ಗುಣಮಟ್ಟದ ಬಗ್ಗೆ ಹಲವಾರು ಯುರೋಪಿಯನ್ ರಾಷ್ಟ್ರಗಳು ತೀವ್ರ  2020 ಮಾರ್ಚ್ 31ರ ಮಂಗಳವಾರ ಆಕ್ಷೇಪ ವ್ಯಕ್ತ ಪಡಿಸಿದವು.

ಕಳೆದ ವಾರಾಂತ್ಯದಲ್ಲಿ ಚೀನಾದಿಂದ ಆಮದು ಮಾಡಿಕೊಳ್ಳಲಾದ ಉಪಕರಣಗಳ ಕಳಪೆ ಗುಣಮಟ್ಟದಿಂದ ಎದುರಿಸಬೇಕಾಗಿ ಬಂದ ಸಮಸ್ಯೆಗಳ ಬಗ್ಗೆ ನೆದರ್ಲ್ಯಾಂಡ್ಸ್  ದೂರಿತು. ದೇಶವು ಚೀನಾದಿಂದ ಸಹಸ್ರಾರು ಮುಖಗವಸುಗಳನ್ನು ಆಮದು ಮಾಡಿಕೊಂಡಿತ್ತು.

ಇದೇ ವೇಳೆಗೆ, ಸ್ಪೇನ್ ಚೀನಾದ ಉತ್ಪಾದಕರಿಂದ ಸರಬರಾಜು ಮಾಡಲಾದ ದೋಷಯುಕ್ತ ಆಮದು ಪರೀಕ್ಷಾ ಕಿಟ್‌ಗಳ ಬಗ್ಗೆ ದೂರು ನೀಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಚೀನಾದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಹಲವಾರು ದೇಶಗಳು ಅನುಮಾನಗಳನ್ನು ವ್ಯಕ್ತಪಡಿಸಿವೆ ಮತ್ತು ಕೆಲವು ಸಮಸ್ಯೆಗಳಿರಬಹುದು ಎಂದು ಚೀನಾದ ವಿದೇಶಾಂಗ ಸಚಿವಾಲಯ ಅದಕ್ಕೆ ಸಮಜಾಯಿಷಿ ನೀಡಿದೆ.

"ಹೆಚ್ಚಿನ ಸಂಖ್ಯೆಯ ಚೀನೀ ತಯಾರಕರು ಇತರ ದೇಶಗಳಲ್ಲಿನ ರೋಗಿಗಳ ಜೀವ ಉಳಿಸುವ ನಿಟ್ಟಿನಲ್ಲಿ ನೆರವಗಲು ಹಗಲಿರುಳು ಎನ್ನದೆ ಕೆಲಸ ಮಾಡುತ್ತಿದ್ದಾರೆ. ನಮ್ಮ ಪ್ರಾಮಾಣಿಕತೆ ಮತ್ತು ನೆರವು ನಿಜ. ಪ್ರಕ್ರಿಯೆಯಲ್ಲಿ ಸಮಸ್ಯೆಗಳು ಸಂಭವಿಸಿದಲ್ಲಿ, ಚೀನಾದ ಕಡೆಯವರು ಸಂಬಂಧಿತ ಇಲಾಖೆಗಳೊಂದಿಗೆ ಮಾತನಾಡುತ್ತಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಧ್ಯೆ ಅಮೆರಿಕದಾದ್ಯಂತ ರಾಜ್ಯಗಳು ಅಗತ್ಯ ವೈದ್ಯಕೀಯ ಸರಬರಾಜುಗಳನ್ನು ಪಡೆಯಲು ಪರಸ್ಪರಹೋರಾಡುತ್ತಿವೆ" ಎಂದು , ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕ್ಯುಮೊ ಮಂಗಳವಾರ ಹೇಳಿದರು.

ದೇಶದಲ್ಲಿ ಕೊರೊನಾವೈರಸ್ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿವೆ ಮತ್ತು ಹೀಗಾಗಿ ಹೆಚ್ಚಿನ ರಾಜ್ಯಗಳು ಚೀನಾದಿಂದ ಉಪಕರಣಗಳನ್ನು ಖರೀದಿಸಲು ಬಯಸುತ್ತಿವೆ ಎಂದು ಅವರು ನುಡಿದರು.

"ನಮಗೆ ತ್ವರಿತ ಸರಬರಾಜಿನ ಅಗತ್ಯವಿದೆ. ಅವುಗಳನ್ನು ಅವಲಂಬಿಸಿಯೇ ನಾವು ಕೆಲಸ ಮಾಡುತ್ತಿದ್ದೇವೆ ... ನಮ್ಮಲ್ಲಿ  ೫೦ ರಾಜ್ಯಗಳಿವೆ. ಎಲ್ಲರೂ ಸರಬರಾಜು ಪಡೆಯಲು ಪೈಪೋಟಿಯಲ್ಲಿದ್ದಾರೆ. ಫೆಡರಲ್ ಸರ್ಕಾರ ಕೂಡಾ ಉಪಕರಣನ್ನು ಪಡೆಯಲು ಪೈಪೋಟಿಗೆ ನಿಂತಿದೆ.  ಖಾಸಗಿ ಆಸ್ಪತ್ರೆಗಳು ಸಹ ಸರಬರಾಜಿಗಾಗಿ ತಹತಹಿಸುತ್ತಿವೆ ಎಂದು ಕ್ಯುಮೊ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಹೀಗಾಗಿ ಅಕ್ಷರಶಃ ಒಂದೇ ರೀತಿಯ ನಿಖರವಾದ ವಸ್ತುಗಳನ್ನು ಖರೀದಿಸಲು ನಾವು ಯತ್ನಿಸುತ್ತಿದ್ದೇವೆ. ವಿಪರ್‍ಯಾಸವೆಂದರೆ ಸೋಂಕಿನ ಮೂಲಸ್ಥಳವಾದ ಚೀನಾದಿಂದಲೇ ಉಪಕರಣಗಳನ್ನು ನಾವು ಆಮದು ಮಾಡಿಕೊಳ್ಳಬೇಕಾಗಿದೆ. ಆದ್ದರಿಂದ ನಾವು ವಸ್ತುಶಃ ನಮ್ಮ ನಮ್ಮಲ್ಲೇ ಪೈಪೋಟಿ ನಡೆಸುತ್ತಿದ್ದೇವೆ ಎಂದು ಅವರು ನುಡಿದರು.

ಕಳೆದ ವರ್ಷ ಚೀನಾದ ವುಹಾನ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಮಾರಕ ಕೊರೋನವೈರಸ್ ಅಮೆರಿಕದಲ್ಲಿ  ,೩೦೫ ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು ೮೧,೫೧೮ ಜನರಿಗೆ ಸೋಂಕು ತಟ್ಟಿದೆ.

ಹೊಸ ವೈರಸ್ ಸೋಂಕುನ ಪ್ರಕರಣಗಳು ಕಡಿಮೆಯಾಗಿರುವುದರಿಂದ ಮತ್ತು ಅದರ  ಉಪಕರಣಗಳ ಕಾರ್ಖಾನೆಗಳನ್ನು ಮತ್ತೆ ತೆರೆಯಲು ಮುಂದಾಗುತ್ತಿರುವುದರಿಂದ ಹಂತದಲ್ಲಿ ಚೀನಾ ನೆಚ್ಚಿನ ಸಂಭಾವ್ಯ ಪೂರೈಕೆದಾರರಾಗಿ ಹೊರಹೊಮ್ಮುತ್ತಿದೆ.

No comments:

Advertisement