ಸರ್ಜಿಕಲ್ ದಾಳಿ, ಬಾಲಾಕೋಟ್ ವೈಮಾನಿಕ ಕಾರ್ಯಾಚರಣೆ:
ಭಾರತ ಈಗ ಅಮೆರಿಕ, ಇಸ್ರೇಲ್ಗೆ ಸಮ: ಅಮಿತ್ ಶಾ
ಕೋಲ್ಕತ/ ನವದೆಹಲಿ: ಸರ್ಜಿಕಲ್ ದಾಳಿ ಮತ್ತು ಬಾಲಾಕೋಟ್ ವಾಯುದಾಳಿ ಕಾರ್ಯಾಚರಣೆಗಳ ಬಳಿಕ ತನ್ನ ಸೈನಿಕರ ಸಾವಿನ ಸೇಡು ತೀರಿಸಿಕೊಳ್ಳಲು ವೈರಿ ನೆಲದೊಳಕ್ಕೆ ನುಗ್ಗಿ ಪ್ರತೀಕಾರಗೈದು ವಾಪಸ್ ಬರುವ ಸಾಮರ್ಥ್ಯ ಹೊಂದಿದ ಅಮೆರಿಕ ಮತ್ತು ಇಸ್ರೇಲ್ನ್ನು ಭಾರತವು ಸರಿಗಟ್ಟಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ 2020 ಮಾರ್ಚ್ 01ರ ಭಾನುವಾರ ಕೋಲ್ಕತದಲ್ಲಿ ಹೇಳಿದರು.
ಸರ್ಜಿಕಲ್ ದಾಳಿ ಮತ್ತು ಬಾಲಾಕೋಟ್ ವಾಯುದಾಳಿಗೆ ಮುನ್ನ ಜಗತ್ತಿನಲ್ಲಿ ತನ್ನ ಸೈನಿಕರ ಹತ್ಯೆಯ ಸೇಡು ತೀರಿಸಲು ವೈರಿ ನೆಲವನ್ನು ಪ್ರವೇಶಿಸಿ ಪ್ರತೀಕಾರಗೈಯುವ ಸಾಮರ್ಥ್ಯ ಇರುವ ರಾಷ್ಟ್ರಳೆಂದರೆ ಅಮೆರಿಕ ಮತ್ತು ಇಸ್ರೇಲ್ ಮಾತ್ರ ಎಂಬ ನಂಬಿಕೆ ಇತ್ತು. ಆದರೆ ಈಗ, ಈ ಪಟ್ಟಿಗೆ ಭಾರತದ ಹೆಸರೂ ಸೇರ್ಪಡೆಯಾಗಿದೆ ಎಂದು ನಾನು ನಂಬುತೇನೆ ಎಂದು ಶಾ ನುಡಿದರು.
ಕೋಲ್ಕೊತದ ರಾಜರ್ಹತ್ನಲ್ಲಿ ಎನ್ಎಸ್ಜಿಯ ೨೯ ವಿಶೇಷ ಸಂಯೋಜಿತ ಸಮೂಹ ಸಮುಚ್ಚಯದ ಉದ್ಘಾಟನಾ ಸಮಾರಂಭದಲ್ಲಿ ಗೃಹ ಸಚಿವರು ಮಾತನಾಡುತ್ತಿದ್ದರು.
ಬೆಳಗ್ಗೆ ೧೧ ಗಂಟೆ ಸುಮಾರಿಗೆ ಕೋಲ್ಕತಕ್ಕೆ ಬಂದಿಳಿದ ಶಾ, ನೇರವಾಗಿ ರಾಜರ್ಹತ್ಗೆ ತೆರಳಿದರು. ಅವರು ಮಾನೆಸರ್, ಹೈದರಾಬಾದ್, ಚೆನೈ ಮತ್ತು ಮುಂಬೈಯಲ್ಲಿ ಕೂಡಾ ಸರಣಿ ಎನ್ಎಸ್ಜಿ ಸವಲತ್ತುಗಳನ್ನು ಉದ್ಘಾಟಿಸಿದರು.
ಮುಂದಿನ ಐದು ವರ್ಷಗಳಲ್ಲಿ ಎನ್ಎಸ್ಜಿಯ ಸರ್ಕಾರದ ಮುಂದಿಟ್ಟಿರುವ ಎಲ್ಲ ಮನವಿಗಳನ್ನೂ ಈಡೇರಿಸಲಾಗುವುದು. ಎನ್ಎಸ್ಜಿಯನ್ನು ಸಂಪೂರ್ಣ ಕಮಾಂಡೋ ಪಡೆಯನ್ನಾಗಿ ಮಾಡಲಾಗುವುದು. ತರಬೇತಿ ಇರಲಿ, ಅಧುನಿಕ ಶಸ್ತ್ರಾಸ್ತ್ರಗಳಿರಲಿ, ಕುಟುಂಬ ಸದಸ್ಯರ ಸವಲತ್ತುಗಳಿರಲಿ ಎಲ್ಲವನ್ನೂ ಒದಗಿಸಲಾಗುವುದು. ಭಾರತವು ಎನ್ಎಸ್ಜಿಯನ್ನು ವಿಶ್ವದ ಇತರ ಪಡೆಗಳಿಗಿಂತ ಎರಡು ಹೆಜ್ಜೆಗಳಷ್ಟು ಮುಂದಕ್ಕೆ ಒಯ್ಯುವುದು ಎಂದು ಅವರು ನುಡಿದರು.
’ಭಾರತವು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಈಗ ಪೂರ್ವಭಾವಿ ರಕ್ಷಣಾ ನೀತಿಯನ್ನು ಅಭಿವೃದ್ಧಿ ಪಡಿಸಿದೆ ಮತ್ತು ಭಯೋತ್ಪಾದನೆ ಬಗ್ಗೆ ಶೂನ್ಯ ಸಹನೆ ನೀತಿಯನ್ನು ಅನುಸರಿಸುತ್ತಿದೆ ಎಂದು ಗೃಹ ಸಚಿವರು ಹೇಳಿದರು.
ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ಭಾರತದ ರಕ್ಷಣಾ ನೀತಿ ಮತ್ತು ವಿದೇಶಾಂಗ ನೀತಿಯಲ್ಲಿ ವಿಶಿಷ್ಟ ಬದಲಾವಣೆ ತರಲಾಗಿದೆ ಎಂದು ಅವರು ನುಡಿದರು.
’ಮೋದಿಜಿ ಪ್ರಧಾನಿಯಾದ ಬಳಿಕ ಭಾರತವು ದೀರ್ಘಕಾಲದಿಂದ ಕಾದಿದ್ದ ಪೂರ್ವಭಾವಿ ರಕ್ಷಣಾ ನೀತಿಯನ್ನು ನಾವು ಅಭಿವೃದ್ಧಿ ಪಡಿಸಿದ್ದೇವೆ. ೭೦ ವರ್ಷಗಳ ಕಾಲ ನಮ್ಮ ವಿದೇಶಾಂಗ ನೀತಿ ಮತ್ತು ರಕ್ಷಣಾ ನೀತಿ ಮಧ್ಯೆ ಯಾವುದೇ ಪ್ರತ್ಯೇಕತೆ ಇರಲಿಲ್ಲ. ಮೋದಿಜಿ ಅವರ ಕೈಕೆಳಗೆ ಈ ಎರಡು ನೀತಿಗಳ ಮಧ್ಯೆ ಸ್ಪಷ್ಟವಾದ ವ್ಯತ್ಯಾಸವನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದರು.
’ನಾವು ಇಡೀ ವಿಶ್ವದಲ್ಲಿ ಶಾಂತಿಯನ್ನು ಬಯಸುತ್ತೇವೆ. ನಮ್ಮ ೧೦,೦೦೦ ವರ್ಷಗಳ ಇತಿಹಾಸದಲ್ಲಿ ಭಾರತವು ಎಂದೂ ಯಾರ ಮೇಲೂ ದಾಳಿ ನಡೆಸಿಲ್ಲ. ಆದರೆ ನಮ್ಮ ಶಾಂತಿಯನ್ನು ಭಗ್ನಗೊಳಿಸಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ, ನಮ್ಮ ಗಡಿಗಳನ್ನು ಉಲ್ಲಂಘಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ನಮ್ಮ ಯೋಧರ ಜೀವ ತೆಗೆಯುವ ಯಾರೇ ಆಗಿದ್ದರೂ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ’ ಎಂದು ಅಮಿತ್ ಶಾ ಗುಡುಗಿದರು.
ದೇಶದಲ್ಲಿ ’ವಿಭಜನೆ’ ಸೃಷ್ಟಿಸುವವರು ಮತ್ತು ಶಾಂತಿಯನ್ನು ಹಾಳು ಮಾಡುವವರು ಎನ್ಎಸ್ಜಿಗೆ ಹೆದರಲೇಬೇಕು ಎಂದು ಕೂಡಾ ಅವರು ನುಡಿದರು.
’ಪ್ರಧಾನಿ ಮೋದಿಯವರ ಕೈಕೆಳಗೆ ನಾವು ಭಯೋತ್ಪಾದನೆ ವಿರುದ್ಧ ಶೂನ್ಯ ಸಹನೆ ನೀತಿ ಅನುಸರಿಸುತ್ತಿದ್ದೇವೆ ಮತ್ತು ಇದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಎನ್ಎಸ್ಜಿಯು ಮುಂಚೂಣಿಯ ಪಾತ್ರವನ್ನು ವಹಿಸಬೇಕು. ಅವರು (ಭಯೋತ್ಪಾದಕರು) ಇಲ್ಲಿಗೆ ಬರಲು ಭಯ ಪಡುವಂತೆ ಮತ್ತು ಇಲ್ಲಿಗೆ ಬರುವುದನ್ನು ನಿಲ್ಲಿಸುವಂತೆ ನಿಮ್ಮ ಅಸ್ತಿತ್ವವನ್ನು ನೀವು ತೋರಿಸಬೇಕು’ ಎಂದು ಶಾ ಹೇಳಿದರು.
’ರಾಷ್ಟ್ರವನ್ನು ವಿಭಜಿಸಬಯಸುವವರು, ದೇಶಕ್ಕೆ ಹಾನಿ ಮಾಡುವವರು ಮತ್ತು ಶಾಂತಿಯನ್ನು ಹಾಳುಮಾಡುವವರು ಎನ್ಎಸ್ಜಿ ಇದೆ ಎಂದರೆ ಭಯಪಡಬೇಕು. ಆದರೂ ಅವರು ಬಂದರೆ, ಅವರೊಂದಿಗೆ ಹೋರಾಡಿ ಅವರನ್ನು ಪರಾಭವಗೊಳಿಸುವುದು ಎನ್ಎಸ್ಜಿಯ ಹೊಣೆ’ ಎಂದು ಗೃಹ ಸಚಿವರು ನುಡಿದರು.
ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರವು ತನ್ನ ಭದ್ರತಾ ಸಂಸ್ಥೆಗಳ ನಿರೀಕ್ಷೆಗಳನ್ನು ಈಡೇರಿಸುವುದು ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದ ಶಾ, ’ಯುದ್ಧಗಳನ್ನು ಗೆಲ್ಲವುದು ಶೌರ್ಯದಿಂದ ಹೊರತು ಉಪಕರಣಗಳಿಂದ ಅಲ್ಲ’ ಎಂದು ಹೇಳಿದರು.
ಐದು ವರ್ಷಗಳ ಒಳಗಾಗಿ ಅವುಗಳನ್ನು ಈಡೇರಿಸಲು ನಾವು ಯತ್ನಿಸುತ್ತೇವೆ. ನಾವು ನಿಮಗೆ ಉತ್ತಮ ವಸತಿ ಒದಗಿಸುತ್ತೇವೆ. ನಿಮ್ಮ ಕುಟುಂಬದ ಅಗತ್ಯಗಳ ಕಾಳಜಿಯನ್ನು ಸರ್ಕಾರವೇ ವಹಿಸಲಿದೆ. ನಾವು ನಿಮಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಲಕರಣೆಗಳನ್ನು ಒದಗಿಸುತ್ತೇವೆ. ಆದರೆ ಸಮರವನ್ನು ಗೆಲ್ಲುವುದು ಶೌರ್ಯದಿಂದ ಹೊರತು ಸಲಕರಣೆಗಳಿಂದ ಅಲ್ಲ’ ಎಂದು ಶಾ ನುಡಿದರು.
’ಈ ಕೆಚ್ಚದೆಯು ಸಮರಗಳನ್ನು ಗೆಲ್ಲುತ್ತದೆ, ಸಲಕರಣೆಗಳು ತಮ್ಮ ಪಾತ್ರಗಳನ್ನು ಮಾತ್ರ ವಹಿಸುತ್ತವೆ. ಸಲಕರಣೆ ಮತ್ತು ತಂತ್ರಜ್ಞಾನ ಎಂದಿಗೂ ಈ ಶೌರ್ಯಕ್ಕೆ ಬದಲಿಯಾಗದು’ ಎಂದು ಗೃಹ ಸಚಿವರು ಹೇಳಿದರು.
ಎನ್ಎಸ್ಜಿ ವಿಸ್ತರಣೆ ಬಗ್ಗೆ ಮಾತನಾಡುತ್ತಾ, ೨೦೦೮ರ ಮುಂಬೈ ದಾಳಿಗಳ ಬಳಿಕ ತನ್ನ ಎನ್ಎಸ್ಜಿ ಜಾಲದ ವಿಸ್ತರಣೆಗೆ ರಾಷ್ಟ್ರವು ನಿರ್ಧರಿಸಿದೆ ಎಂದು ಶಾ ನುಡಿದರು.
’ಇಡೀ ರಾಷ್ಟ್ರದಲ್ಲಿ ಎನ್ಎಸ್ಜಿ ತನ್ನ ಅಸ್ತಿತ್ವವನ್ನು ಕ್ರಮಕ್ರಮವಾಗಿ ಸಾಬೀತು ಪಡಿಸಿದೆ. ಈ ಉದ್ಘಾಟನೆಯ ಬಳಿಕ ಸಮನ್ವಯ ಇನ್ನಷ್ಟು ಉತ್ತಮಗೊಳ್ಳಲಿದೆ’ ಎಂದು ಗೃಹ ಸಚಿವರು ಹೇಳಿದರು.
ಶಾ ಅವರು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಆರಂಭಿಸಲಾಗುವ ರಾಜ್ಯವ್ಯಾಪಿ ಆಂದೋಳನಕ್ಕೆ ಚಾಲನೆ ನೀಡಲಾಗುವ ಸಮಾವೇಶದಲ್ಲಿ ಕೂಡಾ ಮಾತನಾಡುವರು. ’ಅರ್ ನೊವ್ ಅನ್ನೇ’ ಅಥವಾ ’ಅನ್ಯಾಯ ಇನ್ನಿಲ್ಲ’ ಶೀರ್ಷಿಕೆಯ ಈ ಅಭಿಯಾನವು ಮಮತಾ ಬ್ಯಾನರ್ಜಿ ಸರ್ಕಾರದ ತಪ್ಪುಗಳು ’ದೋಷಾರೋಪ ಪಟ್ಟಿ’ಯನ್ನು ಕೂಡಾ ಮಾಡಲಿದೆ.
No comments:
Post a Comment