My Blog List

Saturday, March 28, 2020

ವಲಸೆ ಕಾರ್ಮಿಕರಿಗೆ sಸಕಲ ಸವಲತ್ತು: ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆದೇಶ

ವಲಸೆ ಕಾರ್ಮಿಕರಿಗೆ sಸಕಲ ಸವಲತ್ತು:  ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆದೇಶ
ನವದೆಹಲಿ: ಕೇಂದ್ರ ಸರ್ಕಾರವು ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ಡೌನ್) ಜಾರಿಯಲ್ಲಿ ಸಮರ್ಪಕ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ, ಪರಿಣಾಮವಾಗಿ ವಲಸೆ ಕಾರ್ಮಿಕರ ದೈನಂದಿನ ಆದಾಯಕ್ಕೆ ಭಾರೀ ಕುತ್ತು ಉಂಟಾಗಿದೆ ಎಂಬ ವ್ಯಾಪಕ ಟೀಕೆಗಳ ಹಿನ್ನೆಲೆಯಲ್ಲಿ ತಮ್ಮ ತಮ್ಮ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ವಸತಿ, ಆಹಾರ, ಬಟ್ಟೆ, ವೈದ್ಯಕೀಯ ಆರೈಕೆ ಇತ್ಯಾದಿ ಒದಗಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಆಡಳಿತಗಳಿಗೆ 2020 ಮಾರ್ಚ್ 28ರ ಶನಿವಾರ ಆದೇಶ ನೀಡಿತು.

ವಲಸೆ ಕಾರ್ಮಿಕರು ಸೇರಿದಂತೆ ವಸತಿ ರಹಿತರಿಗೆ ಆಹಾರ ಮತ್ತು ಆಶ್ರಯ ಸೇರಿದಂತೆ ಸಮರ್ಪಕ ಬೆಂಬಲವನ್ನು ನೀಡಲು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶುಕ್ರವಾರ, ನಿರ್ದೇಶನ ನೀಡಿತ್ತು.

ಶನಿವಾರ ಕೇಂದ್ರ ಸರ್ಕಾರವು ತನ್ನ ಅದೇಶವನ್ನು ಪರಿಷ್ಕರಿಸಿ ಬಟ್ಟೆ ಮತ್ತು ವೈದ್ಯಕೀಯ ಆರೈಕೆಯನ್ನು ಕೂಡಾ ಇವುಗಳ ವ್ಯಾಪ್ತಿಗೆ ಸೇರಿಸಿತು. ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಇತ್ಯರ್ಥವಾಗುವವರೆಗೂ ತಾತ್ಕಾಲಿಕ ಪುನರ್ವಸತಿ ಮುಂದುವರೆಯುತ್ತದೆ ಎಂದು ಕೇಂದ್ರ ಹೇಳಿತು.

ಜಂಟಿ ಕಾರ್ಯದರ್ಶಿ ಸಂಜೀವ್ ಕುಮಾರ್ ಜಿಂದಾಲ್ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಆಡಳಿತಗಳಿಗೆ ಬರೆದ ಪತ್ರದಲ್ಲಿ, ವಲಸೆ ಕಾರ್ಮಿಕರು ಸೇರಿದಂತೆ ವಸತಿ ರಹಿತ ಜನರಿಗೆ ಪರಿಹಾರ ಕ್ರಮಗಳು ಅನ್ವಯವಾಗಬೇಕು, ದಿಗ್ಬಂಧನ (ಲಾಕ್ ಡೌನ್) ಕ್ರಮಗಳಿಂದಾಗಿ ಸಿಲುಕಿಕೊಂಡವರಿಗೆ ಮತ್ತು ಪರಿಹಾರ ಶಿಬಿರಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಅವರಿಗೆ ಆಶ್ರಯ ನೀಡಲಾಗಿದ್ದು, ಅವರಿಗೆ ಆಹಾರವನ್ನು ಒದಗಿಸಲು ಸೂಚಿಸಲಾಗಿದೆ ಎಂದು ತಿಳಿಸಲಾಗಿದೆ.

ಕೋವಿಡ್ -೧೯ ಸಾಂಕ್ರಾಮಿಕ ಸೋಂಕು ಹರಡದಂತೆ ತಡೆಯುವ ಸಲುವಾಗಿ ಘೋಷಿಸಲಾದ ರಾಷ್ಟ್ರವ್ಯಾಪಿ ದಿಗ್ಬಂಧನ ಶನಿವಾರ ನಾಲ್ಕನೇ ದಿನವನ್ನು ಪ್ರವೇಶಿಸಿದ್ದು, ಸಹಸ್ರಾರು ವಲಸೆ ಕಾರ್ಮಿಕರು ಉದ್ಯೋಗವಿಲ್ಲದೆ ತಮ್ಮ ಹಳ್ಳಿಗಳಿಗೆ ವಾಪಸಾಗತೊಡಗಿದ್ದಾರೆ.  ಸಾರ್ವಜನಿಕ ಸಾರಿಗೆಯನ್ನು ಸಹ ಸ್ಥಗಿತಗೊಂಡಿರುವುದರಿಂದ ಹಲವರು ನೂರಾರು ಕಿಮೀಗಳ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಲು ಆರಂಭಿಸಿರುವ ವರದಿಗಳು ದೇಶದ ಹಲವು ಭಾಗಗಳಿಂದ ಬಂದಿವೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಿ. ಚಿದಂಬರಂ ಮತ್ತಿತತರರು ಸರ್ಕಾರವು ಸೂಕ್ತ ಸಿದ್ಧತೆ ಇಲ್ಲದೆ ದಿಗ್ಬಂಧನ ಘೋಷಿಸಿ, ವಸತಿ ರಹಿತರು, ವಲಸೆ ಕಾರ್ಮಿಕರು ದೊಡ್ಡ ಬಿಕ್ಕಟ್ಟು ಎದುರಿಸುವಂತೆ ಮಾಡಿದೆ ಎಂದು ಟೀಕಿಸಿದ್ದರು.

No comments:

Advertisement