Saturday, March 28, 2020

ಪಂಜಾಬ್: ಸೂಪರ್ ಪ್ರಸಾರಕನಿಂದ ಹಳ್ಳಿಗಳ ೧೫,೦೦೦ ಮಂದಿಗೆ ನಿರ್ಬಂಧ

ಪಂಜಾಬ್: ಸೂಪರ್ ಪ್ರಸಾರಕನಿಂದ ಹಳ್ಳಿಗಳ ೧೫,೦೦೦ ಮಂದಿಗೆ ನಿರ್ಬಂಧ
ಅಮೃತಸರ: ಸಿಖ್ ಧಾರ್ಮಿಕ ಮುಖಂಡ ಕೋವಿಡ್ -೧೯ಕ್ಕೆ ಬಲಿಯಾದ ಬಳಿಕ ಸೂಪರ್ ಪ್ರಸಾರಕ (ಸೂಪರ್-ಸ್ಪ್ರೆಡರ್)  ಗುರುವಿನಿಂದ ಕೊರೋನವೈರಸ್ ಸೋಂಕು ತಗುಲಿರಬಹುದೆಂಬ ಶಂಕೆಯಲ್ಲಿ ಕನಿಷ್ಠ ೧೫,೦೦೦ ಜನರು ಪಂಜಾಬಿನಲ್ಲಿ ಕಟ್ಟುನಿಟ್ಟಿನ ನಿರ್ಬಂಧಕ್ಕೆ ಒಳಗಾದರು.
೭೦ ವರ್ಷದ ಗುರು ಬಲದೇವ್ ಸಿಂಗ್ ಅವರು ಪಂಜಾಬ್ ರಾಜ್ಯದ ಒಂದು ಡಜನ್ನಿಗೂ ಹೆಚ್ಚು ಹಳ್ಳಿಗಳಲ್ಲಿ ಉಪದೇಶಕ್ಕೆ ಹೋಗುವುದಕ್ಕೆ ಮುನ್ನ ಯುರೋಪಿನ ಕೊರೋನಾ ವೈರಸ್ ಕೇಂದ್ರ ಬಿಂದುವಾದ ಇಟಲಿ ಮತ್ತು ಜರ್ಮನಿಗೆ ಪ್ರವಾಸ ಮಾಡಿ ಆಗಷ್ಟೇ ಹಿಂದಿರುಗಿದ್ದರು.

ಯುರೋಪಿನಿಂದ ವಾಪಸಾದ ಬಳಿಕ ಏಕಾಂಗಿವಾಸದ ಆದೇಶಗಳನ್ನು ನಿರ್ಲಕ್ಷಿಸಿದ್ದ ಗುರುಬಲದೇವ್ ಸಿಂಗ್ ಮತು ಅವರ ಇಬ್ಬರು ಸಹಚರರು ಹಳ್ಳಿ ಹಳ್ಳಿಗಳಲ್ಲಿ ಧರ್ಮ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. ಕೊರೋನಾವೈರಸ್ಸಿಗೆ ಬಲಿಯಾದ ಸಿಂಗ್ ಜೊತೆಗೆ ಇದ್ದ ಒಟ್ಟು ೧೯ ಸಹಚರರಿಗೂ ಸೋಂಕು ತಗುಲಿರುವುದು ಖಚಿತ ಪಟ್ಟಿದೆ.

ತಂಡ ಧರ್ಮ ಪ್ರಚಾರ ಮಾಡಿದ ೧೫ ಹಳ್ಳಿಗಳಲ್ಲಿ ೧೫,೦೦೦-೨೦,೦೦೦ ಮಂದಿ ಇದ್ದು, ಅಧಿಕಾರಿಗಳು ಇದೀಗ ಎಲ್ಲ ಹಳ್ಳಿಗಳಲ್ಲೂ ದಿಗ್ಬಂಧನ ಹಾಕಿದ್ದಲ್ಲದೆ ಅಲ್ಲಿನ ಜನರೆಲ್ಲರಿಗೂ ಏಕಾಂತವಾಸಕ್ಕೆ ಆಜ್ಞಾಪಿಸಿದ್ದಾರೆ.

ಬಲದೇವ್ ಸಿಂಗ್ ಅವರು ಅನಾರೋಗ್ಯಕ್ಕೆ ತುತ್ತಾಗಿ ಸಾಯುವವರೆಗೂ ತಂಡ ಅವರ ಜೊತೆಯಲ್ಲೇ ಇದ್ದುಕೊಂಡು ಹಳ್ಳಿಗಳಲ್ಲಿ ಧರ್ಮ ಪ್ರಚಾರ ನಿರತವಾಗಿತ್ತು ಎಂದು ಬಂಗಾ ಜಿಲ್ಲೆಯ ಜಿಲ್ಲಾಧಿಕಾರಿ ಗೌರವ್ ಜೈನ್  2020 ಮಾರ್ಚ್ 28ರ ಶನಿವಾರ ಹೇಳಿದರು.

No comments:

Advertisement