My Blog List

Friday, April 10, 2020

ಭಾರತ: ಕೊರೋನಾ ಸಾವಿನ ಸಂಖ್ಯೆ 206ಕ್ಕೆ ಏರಿಕೆ, ಲಕ್ಷ ದಾಟಿದ ಜಾಗತಿಕ ಸಾವು

ಭಾರತ: ಕೊರೋನಾ ಸಾವಿನ ಸಂಖ್ಯೆ 206ಕ್ಕೆ  ಏರಿಕೆ, ಲಕ್ಷ ದಾಟಿದ ಜಾಗತಿಕ ಸಾವು, ಮುಖ್ಯಮಂತ್ರಿಗಳ ಜೊತೆ ಮತ್ತೆ ಪ್ರಧಾನಿ ಚರ್ಚೆ
ನವದೆಹಲಿ: ಭಾರತದಲ್ಲಿ ಕಳೆದ ೨೪ ಗಂಟೆಗಳಲ್ಲಿ ಕೊರೋನಾವೈರಸ್ಸಿಗೆ ೩೭ ಮಂದಿ ಬಲಿಯಾಗಿದ್ದು, ವಿಶ್ವಾದ್ಯಂತ ಬಲಿಯಾದವರ ಸಂಖ್ಯೆ 1 ಲಕ್ಷ ದಾಟಿತು. ಭಾರತದಲ್ಲಿ ಸೋಂಕಿನ ೮೯೬ ಹೊಸ ಪ್ರಕರಣಗಳು ವರದಿಯಾಗಿವೆ. ಪರಿಣಾಮವಾಗಿ ದೇಶದ ಕೊರೋನಾವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ,೭೬೧ಕ್ಕೆ ಏರಿಕೆಯಾಗಿದ್ದು ಸಾವಿನ ಸಂಖ್ಯೆ ೨೦೬ಕ್ಕೆ ಏರಿದೆ. ೫೧೬ ಮಂದಿ ಗುಣಮುಖರಾಗಿ ಅಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಕಳೆದ ೪೮ ಗಂಟೆಗಳ ಅವಧಿಯಲ್ಲಿ ಸುಮಾರು ,೪೮೭ ಕೋವಿಡ್-೧೯ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವಾಲಯ 2020  ಏಪ್ರಿಲ್ 10ರ ಶುಕ್ರವಾರ ತಿಳಿಸಿತು.

ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು 2020 ಏಪ್ರಿಲ್ 12ರ ಭಾನುವಾರ ಸಂಜೆ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು (ಲಾಕ್ ಡೌನ್) ಏಪ್ರಿಲ್ ೧೪ರ ಬಳಿಕ ವಿಸ್ತರಿಸುವ ಬಗ್ಗೆ ತಮ್ಮ ನಿರ್ಧಾರವನ್ನು ಪ್ರಕಟಿಸುವ ನಿರೀಕ್ಷೆ ಇದೆ. ಪ್ರಧಾನಿಯವರು  2020 ಏಪ್ರಿಲ್  11ರ ಶನಿವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಂವಹನ ನಡೆಸಿದ ಬಳಿಕ ದಿಗ್ಬಂಧನ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವರು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿದವು.

ಕೊರೋನಾವೈರಸ್ ಹರಡುವಿಕೆಯನ್ನು ತಡೆಗಟ್ಟಲು ದಿಗ್ಬಂಧನವನ್ನು ವಿಸ್ತರಿಸುವಂತೆ ಈಗಾಗಲೇ ಹಲವಾರು ರಾಜ್ಯಗಳು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದಿಗ್ಬಂಧನ ವಿಸ್ತರಣೆಗೆ ಒಲವು ತಾಳಿದೆ ಎಂದು ಮೂಲಗಳು ಸುಳಿವು ನೀಡಿವೆ.

ಒಡಿಶಾದ ಬಳಿಕ ದಿಗ್ಬಂಧನವನ್ನು ಏಪ್ರಿಲ್ ೩೦ರವರೆಗೆ ವಿಸ್ತರಿಸುವ ನಿರ್ಣಯ ಕೈಗೊಳ್ಳುವ ಮೂಲಕ ಶುಕ್ರವಾರ ಪಂಜಾಬ್ ದಿಗ್ಬಂಧನ ವಿಸ್ತರಿಸಿದ ಎರಡನೇ ರಾಜ್ಯವಾಯಿತು. ತಮಿಳುನಾಡಿನಲ್ಲಿ ತಜ್ಞರ ಸಮಿತಿಯು ದಿಗ್ಬಂಧನ ವಿಸ್ತರಣೆಗೆ ಶಿಫಾರಸು ಮಾಡಿದ್ದು ರಾಜ್ಯ ಸರ್ಕಾರವು ಶನಿವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.

ಸಮುದಾಯ ವರ್ಗಾವಣೆ ಇಲ್ಲ:
ದೇಶದಲ್ಲಿ ರೋಗಾಣುವಿನ ಸಮುದಾಯ ವರ್ಗಾವಣೆ ಎಲ್ಲೂ ಸಂಭವಿಸಿಲ್ಲ. ಜನರು ಭಯಭೀತರಾಗುವ ಅಗತ್ಯವಿಲ್ಲ. ಆದರೆ ಎಚ್ಚರಿಕೆಯಿಂದ ಇರಬೇಕು. ಮುದಾಯ ವರ್ಗಾವಣೆಯ ಸಣ್ಣ ಸುಳಿವು ಲಭಿಸಿದರೂ ನಾವು ಜನರಿಗೆ ಮೊದಲು ತಿಳಿಸುತ್ತೇವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿತು.

ಗುರುವಾರ ೧೬,೨೦೨ ಪರೀಕ್ಷೆಗಳನ್ನು ನಡೆಸಲಾಗಿದೆ. ಕೇವಲ . ಪ್ರಕರಣಗಳು ಮಾತ್ರ ಪಾಸಿಟಿವ್ ಆಗಿದ್ದವು. ಸಂಗ್ರಹಿಸಲಾಗಿರುವ ಮಾದರಿಗಳ ಆಧಾರ, ಸೋಂಕಿನ ಪ್ರಮಾಣ ಅಷ್ಟೊಂದು ಹೆಚ್ಚೇನೂ ಇಲ್ಲ. ತುರ್ತು ರೋಗಪತ್ತೆ ಕಿಟ್‌ಗಳನ್ನು  (ರಾಪಿಡ್ ಡಯಾಗ್ನಾಸ್ಟಿಕ್ ಕಿಟ್) ಕೂಡಾ ಮಂಜೂರು ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್‍ಯದರ್ಶಿ ಲವ ಅಗರವಾಲ್ ನುಡಿದರು.

ಹೈಡ್ರಾಕ್ಸಿಕ್ಲೊರೋಕ್ವಿನ್ ರಫ್ತು, ಆತಂಕ ಬೇಡ: ಹೈಡ್ರಾಕ್ಸಿಕ್ಲೊರೋಕ್ವಿನ್ ರಫ್ತಿನಿಂದ ಯಾವುದೇ ತೊಂದರೆಯಾಗುವುದಿಲ್ಲ, ಬಗ್ಗೆ ಆತಂಕ ಬೇಕಾಗಿಲ್ಲ. ಹೈಡ್ರಾಕ್ಸಿಕೊರೋಕ್ವಿನ್ ಗೆ ಬಹಳಷ್ಟು ಬೇಡಿಕೆಗಳು ಬಂದಿವೆ. ಹಲವಾರು ರಾಷ್ಟ್ರಗಳೂ ನಿರ್ದಿಷ್ಟವಾಗಿ ಔಷಧಕ್ಕೆ ಕೋರಿಕೆ ಇಟ್ಟಿವೆ. ನಮ್ಮ ಅಗತ್ಯಕ್ಕೆ ಬೇಕಾಗುವಷ್ಟು ದಾಸ್ತಾನು ಇರುವುದನ್ನು ಗಮನಿಸಿದ ಬಳಿಕವೇ ಹೆಚ್ಚುವರಿ ಔಷಧವನ್ನು ರಫ್ತು ಸಲುವಾಗಿ ಬಿಡುಗಡೆ ಮಾಡಲು ಸಚಿವರ ತಂಡ ನಿರ್ಧರಿಸಿದೆ, ಇದೊಂದು ನಿರಂತರ ಪ್ರಕ್ರಿಯೆ ಎಂದು ಸಚಿವಾಲಯದ ಅಧಿಕಾರಿ ದಮ್ಮು ರವಿ ಹೇಳಿದರು.

ಮಧ್ಯೆ, ಸೆರೋಲಾಜಿಕಲ್ ಪರೀಕ್ಷಾ ಕಿಟ್‌ಗಳ ಸರಕು ದೇಶಕ್ಕೆ ಇನ್ನೂ ಬಂದಿಲ್ಲ, ಕನಿಷ್ಠ ಬಾರಿ ನೆನಪೋಲೆ ಕಳುಹಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮೂಲಗಳು ತಿಳಿಸಿದವು.

ರಾಜ್ಯವಾರು ಕೋವಿಡ್ ಸಾವು-ನೋವಿನ ಪ್ರಕರಣಗಳು:
ಮಹಾರಾಷ್ಟ್ರದಲ್ಲಿ ೨೫, ದೆಹಲಿಯಲ್ಲಿ ಮತ್ತು ಗುಜರಾತ್ ಹಾಗೂ ಜಾರ್ಖಂಡಿನಲ್ಲಿ ತಲಾ ಮೂರು ಕೋವಿಡ್-೧೯ ಸಾವಿನ ಪ್ರಕರಣಗಳು ವರದಿಯಾಗಿವೆ.

ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚು ಕೋವಿಡ್ ಸಾವುಗಳು ವರದಿಯಾಗಿದ್ದು ಈವರೆಗೆ ೯೭ ಸಾವುಗಳು ಸಂಭವಿಸಿವೆ. ಗುಜರಾತಿನಲ್ಲಿ ೧೭, ಮಧ್ಯಪ್ರದೇಶದಲ್ಲಿ ೧೬, ದೆಹಲಿಯಲ್ಲಿ ೧೨, ತಮಿಳುನಾಡು ಮತ್ತು ಪಂಜಾಬಿನಲ್ಲಿ ತಲಾ ಸಾವುಗಳು ಸಂಭವಿಸಿದ್ದರೆ ತೆಲಂಗಾಣದಲ್ಲಿ ಸಾವುಗಳು ವರದಿಯಾಗಿವೆ.

ಪಶ್ಚಿಮ ಬಂಗಾಳ ಮತ್ತು ಕರ್ನಾಟಕದಲ್ಲಿ ತಲಾ ಸಾವುಗಳು ದಾಖಲಾಗಿವೆ. ಆಂಧ್ರಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶದಲ್ಲಿ ತಲಾ ಸಾವುಗಳು, ಹರಿಯಾಣ ಮತ್ತು ರಾಜಸ್ಥಾನದಲ್ಲಿ ತಲ ಸಾವುಗಳು ವರದಿಯಾಗಿವೆ.

ಕೇರಳದಿಂದ ಸಾವುಗಳು, ಬಿಹಾರ, ಹಿಮಾಚಲ ಪ್ರದೇಶ, ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳಿಂದ ತಲಾ ಒಂದು ಸಾವುಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯದ ಅಂಕಿಸಂಖ್ಯೆಗಳು ತಿಳಿಸಿವೆ.

೬೪೧೨ ಸೋಂಕಿನ ಪ್ರಕರಣಗಳಲಿ ೭೧ ವಿದೇಶೀ ಪ್ರಜೆಗಳೂ ಸೇರಿದ್ದಾರೆ. ಗುರುವಾರ ಸಂಜೆಯವರೆಗೆ ಒಟ್ಟು  ೧೬೯ ಸಾವಿನ ಪ್ರಕರಣಗಳು ದಾಖಲಾಗಿದ್ದವು.

ಆದಾಗ್ಯೂ ಪಿಟಿಐ ಸುದ್ದಿ ಸಂಸ್ಥೆಯ ವರದಿ ಪ್ರಕಾರ ಗುರುವಾರ ಸಂಜೆಯವೇಳೆಗೆ ಕನಿಷ್ಠ ,೬೪೦ ಸೋಂಕು ಮತ್ತು ೨೨೭ ಸಾವುಗಳು ಸಂಭವಿಸಿವೆ ಎನ್ನಲಾಗಿತ್ತು.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಸಂಖ್ಯೆಗಳ ಪ್ರಕಾರ ದೇಶದಲ್ಲಿ ಅತ್ಯಂತ ಹೆಚ್ಚಿನ- ,೩೬೪ ಕೊರೋನಾದೃಢಪಟ್ಟ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿವೆ. ನಂತರದ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ೮೩೪, ದೆಹಲಿಯಲ್ಲಿ ೭೨೦ ಪ್ರಕರಣಗಳು ದಾಖಲಾಗಿವೆ.

ರಾಜಸ್ಥಾನದಲ್ಲಿ ಕೊರೋನಾಸೋಂಕಿನ ಪ್ರಕರಣಗಳು ೪೬೩ಕ್ಕೆ ಏರಿದ್ದರೆ, ತೆಲಂಗಾಣದಲ್ಲಿ ೪೪೨ಕ್ಕೇ ಏರಿವೆ. ಉತ್ತರ ಪ್ರದೇಶದಲ್ಲಿ ಈವರೆಗೆ ೪೧೦ ಪ್ರಕರಣಗಳು ದಾಖಲಾಗಿದ್ದರೆ, ಕೇರಳದಲ್ಲಿ ೩೫೭, ಆಂಧ್ರಪ್ರದೇಶದಲ್ಲಿ ೩೪೮ ಪ್ರಕರಣಗಳು ವರದಿಯಾಗಿವೆ.

ಮಧ್ಯಪ್ರದೇಶದಲ್ಲಿ ೨೫೯, ಗುಜರಾತಿನಲ್ಲಿ ೨೪೧, ಕರ್ನಾಟಕದಲ್ಲಿ ೧೮೧, ಹರಿಯಾಣದಲ್ಲಿ ೧೬೯, ಜಮ್ಮು ಮತ್ತು ಕಾಶ್ಮೀರದಲ್ಲಿ ೧೫೮, ಪಶ್ಚಿಮ ಬಂಗಾಳದಲ್ಲಿ ೧೧೬, ಪಂಜಾಬಿನಲ್ಲಿ ೧೦೧ ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಒಡಿಶಾದಲ್ಲಿ ೪೪, ಬಿಹಾರದಲ್ಲಿ ೩೯, ಉತ್ತರಾಖಂಡದಲ್ಲಿ ೩೫ ಮತ್ತು ಅಸ್ಸಾಮಿನಲ್ಲಿ ೨೯ ಪ್ರಕರಣಗಳು ದಾಖಲಾಗಿವೆ.

ಚಂಡೀಗಢ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ೧೮ ಪ್ರಕರಣಗಳು, ಲಡಾಖ್‌ನಲ್ಲಿ ೧೫, ಜಾರ್ಖಂಡ್‌ನಲ್ಲಿ ೧೩, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ತಲಾ ೧೧ ಹಾಗೂ ಛತ್ತೀಸ್ ಗಢದಲ್ಲಿ ೧೦ ಪ್ರಕರಣಗಳು ವರದಿಯಾಗಿವೆ. ಗೋವಾದಲ್ಲಿ , ಪುದುಚೆರಿಯಲ್ಲಿ , ಮಣಿಪುರದಲ್ಲಿ , ತ್ರಿಪುರ, ಮಿಜೋರಂ ಮತ್ತು ಅರುಣಾಚಲ ಪ್ರದೇಶದಲ್ಲಿ ತಲಾ ಪ್ರಕರಣಗಳು ದಾಖಲಾಗಿವೆ.

ತಮಿಳುನಾಡು ತಜ್ಞರ ಸಮಿತಿ ವರದಿ: ಮಧ್ಯೆ ತಮಿಳುನಾಡಿನಲ್ಲಿ ೧೯ ಸದಸ್ಯರ ತಜ್ಞರ ಸಮಿತಿಯು ದಿಗ್ಬಂಧನವನ್ನು ಏಪ್ರಿಲ್ ೧೪ರಿಂದ ಎರಡು ವಾರಗಳ ಅವಧಿಗೆ ವಿಸ್ತರಿಸುವಂತೆ ಸಲಹೆ ಮಾಡಿದೆ. ಸಮಿತಿಯು ತನ್ನ ಶಿಫಾರಸುಗಳ ವರದಿಯನ್ನು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರಿಗೆ ಸಲ್ಲಿಸಿತು.

ತಮಿಳುನಾಡು ಸಚಿವ ಸಂಪುಟವು ಶನಿವಾರ ಸಂಜೆ ಗಂಟೆ ಸಭೆ ಸೇರಿ ವಿಷಯವನ್ನು ಚರ್ಚಿಸಲಿದೆ. ಪಳನಿಸ್ವಾಮಿ ಅವರು ನಾಳೆ ಎಲ್ಲ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬಳಿಕ ಕೈಗೊಳ್ಳುವ ನಿರ್ಧಾರಕ್ಕಾಗಿ ಕಾದಿದ್ದಾರೆ ಎನ್ನಲಾಗಿದೆ.

ವಿಶ್ಯಾದ್ಯಂತ ಕೊರೋನಾ ಸಾವು-ನೋವು
ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೧೬,೨೭,೮೯೬, ಸಾವು ೧,೦೦,೦೯೦
ಚೇತರಿಸಿಕೊಂಡರವರು- ,೬೬,೪೬೯
ಅಮೆರಿಕ ಸೋಂಕಿತರು ,೭೦,೯೫೮, ಸಾವು ೧೬,೮೦೪
ಸ್ಪೇನ್ ಸೋಂಕಿತರು ,೫೭,೦೨೨, ಸಾವು ೧೫,೮೪೩
ಇಟಲಿ ಸೋಂಕಿತರು ,೪೩,೬೨೬, ಸಾವು ೧೮,೨೭೯
ಜರ್ಮನಿ ಸೋಂಕಿತರು ,೧೯,೪೦೧, ಸಾವು ,೬೦೭
ಚೀನಾ ಸೋಂಕಿತರು ೮೧,೯೦೭, ಸಾವು ,೩೩೬
ಸ್ಪೇನಿನಲ್ಲಿ ೩೯೬, ಬೆಲ್ಜಿಯಂನಲ್ಲಿ ೪೯೬ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement