Thursday, April 23, 2020

ವಿಶ್ವ ಆರೋಗ್ಯ ಸಂಸ್ಥೆಗೆ ಭಾರತ ಅಧ್ಯಕ್ಷ: ಮೇ ೨೨ರಂದು ನಿರ್ಧಾರ

ವಿಶ್ವ ಆರೋಗ್ಯ ಸಂಸ್ಥೆಗೆ ಭಾರತ ಅಧ್ಯಕ್ಷ:  ಮೇ ೨೨ರಂದು ನಿರ್ಧಾರ
ನವದೆಹಲಿ: ಇಡೀ ಜಗತ್ತು ಕೊರೋನಾವೈರಸ್ (ಕೋವಿಡ್-೧೯) ವಿರುದ್ಧ ಸಮರ ನಡೆಸುತ್ತಿರುವ ಹೊತ್ತಿನಲ್ಲೇ ಭಾರತವು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್ ) ಕೇಂದ್ರ ಕಚೇರಿಯಲ್ಲಿ ನಾಯಕತ್ವದ ಪಾತ್ರ ವಹಿಸಲಿದೆ ಎಂಬ ವರ್ತಮಾನ ಬಂದಿದೆ.

ಮುಂದಿನ ತಿಂಗಳು ನಡೆಯಲಿರುವ ಜಾಗತಿಕ ಆರೋಗ್ಯ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಕುರಿತು ನಿರ್ಧಾರವಾಗಲಿದೆ ಎಂದು ಸುದ್ದಿ ಮೂಲಗಳು 2020 ಏಪ್ರಿಲ್ 23ರ ಗುರುವಾರ ತಿಳಿಸಿದವು.

ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಕ್ಷರಾಗಿ ಭಾರತವನ್ನು ನಾಮನಿರ್ದೇಶನ ಮಾಡುವ ವಿಚಾರ ವಿಶ್ವ ಆರೋಗ್ಯ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಪ್ರಸ್ತಾಪಗೊಳ್ಳಲಿದೆ ಎಂದು ಮೂಲಗಳು ಹೇಳಿವೆ. ಸಾರ್ಸ್-ಕೋವ್- ಮಾರಕ ವೈರಾಣು ಹರಡುವುದನ್ನು  ತಡೆಯಲು ವಿಶ್ವ ಆರೋಗ್ಯ ಸಂಸ್ಥೆ ಶತಾಯಗತಾಯ ಹೋರಾಟ ನಡೆಸುತ್ತಿರುವ ಹೊತ್ತಿನಲ್ಲೇ ಸಂಸ್ಥೆಯ ಆಡಳಿತದ ಹೊಣೆ ಭಾರತದ ಹೆಗಲಿಗೆ ಏರುವ ಸಾಧ್ಯತೆಗಳು ಬಲವಾಗಿವೆ ಎಂದು ಮೂಲಗಳು ಹೇಳಿವೆ.

ಕೊರೋನಾವೈರಸ್ ಸಾಂಕ್ರಾಮಿಕ ರೋಗವು ಈಗಾಗಲೇ ವಿಶ್ವಾದ್ಯಂತ ,೮೦,೦೦೦ಕ್ಕಿಂತಲೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿದೆ. ೨೬ ಲಕ್ಷಕ್ಕಿಂತಲ್ಲೂ ಹೆಚ್ಚಿನ ಮಂದಿಗೆ ಸಾಂಕ್ರಾಮಿಕದ ಸೋಂಕು ತಗುಲಿದೆ. ಪರಿಣಾಮವಾಗಿ ವಿಶ್ವಾದ್ಯಂತ ದೇಶಗಳು ದಿಗ್ಬಂಧನಗಳ (ಲಾಕ್ ಡೌನ್) ಮೊರೆ ಹೋಗಿದ್ದು, ಜಗತ್ತು ವರ್ಷ ಟ್ರಿಲಿಯನ್ ಡಾಲರುಗಳಿಗೂ ಹೆಚ್ಚಿನ ಆರ್ಥಿಕ ನಷ್ಟ ಅನುಭವಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಹಾಸಭೆಯ ಬಳಿಕ ನಡೆಯಲಿರುವ ಮೊದಲ ಆಡಳಿತ ಮಂಡಳಿ ಸಭೆಯಲ್ಲಿ ಮೇ ೨೨ರಂದು ಭಾರತವು ಮುಂಚೂಣಿಯ ಹುದ್ದೆಯನ್ನು ವಹಿಸಿಕೊಳ್ಳುವ ಸಾಧ್ಯತೆ ಇದೆ.

ಪ್ರಸ್ತುತ ಹುದ್ದೆಯನ್ನು ಜಪಾನ್ ಹೊಂದಿದ್ದು, ಒಂದು ವರ್ಷದ ಅವಧಿ ಪೂರ್ಣಗೊಳ್ಳುವುದರೊಂದಿಗೆ ತೆರವಾಗುವ ಸ್ಥಾನಕ್ಕೆ ಭಾರತ ಆಯ್ಕೆಯಾಗಲಿದೆ ಎಂದು ದೆಹಲಿ ಮತ್ತು ಜಿನೇವಾದ ರಾಜತಾಂತ್ರಿಕರು ದೃಢಪಡಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಕ್ಷ ಸ್ಥಾನ ಭಾರತಕ್ಕೆ ಬರುತ್ತದೆ ಎಂಬುದು ಕಳೆದ ವರ್ಷವೇ ಖಚಿತವಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಸಮೂಹವು ಮೂರು ವರ್ಷದ ಅವಧಿಗೆ ಆಡಳಿತ ಮಂಡಳಿಗೆ ಭಾರತವನ್ನು ಸರ್ವಾನುಮತದಿಂದ ಆಯ್ಕೆ ಮಾಡಿದಾಗಲೇ ಇದು ಸ್ಪಷ್ಟವಾಗಿತ್ತು.

ಸಮೂಹವು ಆಗಲೇ ಪ್ರಾದೇಶಿಕ ಸಮೂಹಗಳ ಮಧ್ಯೆ ಪ್ರತೀವರ್ಷ ರೊಟೇಷನ್ ಆಧಾರದಲ್ಲಿ ಬದಲಾಗುವ ಅಧ್ಯಕ್ಷ ಸ್ಥಾನಕ್ಕೆ ಭಾರತವನ್ನು ನಾಮನಿರ್ದೇಶನ ಮಾಡಿತ್ತು. ವಿಶ್ವವು ಚೀನಾದ ವುಹಾನ್ ನಗರದಲ್ಲಿ ಜನಿಸಿ ವಿಶ್ವಾದ್ಯಂತ ತ್ವರಿತವಾಗಿ ಹಬ್ಬಿದ ಕೋವಿಡ್-೧೯ರ ಬಗ್ಗೆ ಜಗತ್ತು ಎಚ್ಚತ್ತುಕೊಳ್ಳುವುದಕ್ಕೆ ಮುನ್ನವೇ ನಿರ್ಧಾರವನ್ನು ಮಾಡಲಾಗಿತ್ತು.

No comments:

Advertisement