My Blog List

Tuesday, April 21, 2020

ಕೊರೋನಾ ಕ್ಷಿಪ್ರ ಪರೀಕ್ಷಾ ಕಿಟ್ 2 ದಿನ ಬಳಸಬೇಡಿ: ಐಸಿಎಂಆರ್ ಸೂಚನೆ

ಕೊರೋನಾ ಕ್ಷಿಪ್ರ ಪರೀಕ್ಷಾ ಕಿಟ್  2 ದಿನ ಬಳಸಬೇಡಿ: ಐಸಿಎಂಆರ್ ಸೂಚನೆ
ನವದೆಹಲಿ: ಕನಿಷ್ಠ ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ - ಎರಡು ರಾಜ್ಯಗಳಿಂದ ದೋಷಗಳ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಕೋವಿಡ್-೧೯ ಕ್ಷಿಪ್ರ ಪರೀಕ್ಷಾ ಕಿಟ್ಗಳ ಬಳಕೆಯನ್ನು ಅಮಾನತುಪಡಿಸುವಂತೆ ಕೇಂದ್ರದ ಮುಂಚೂಣಿಯ ವೈದ್ಯಕೀಯ ಸಂಶೋಧನಾ ಸಂಸ್ಥೆಯು (ಐಸಿಎಂಆರ್)  2020 ಏಪ್ರಿಲ್ 21ರ ಮಂಗಳವಾರ  ರಾಜ್ಯಗಳಿಗೆ ಸೂಚಿಸಿತು.

ರಫ್ತು ಪ್ರತಿಕಾಯ ಪರೀಕ್ಷಾ ಕಿಟ್ಗಳು ತಪ್ಪು ಫಲಿತಾಂಶ ನೀಡುತ್ತಿವೆ ಎಂದು ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ ಎರಡು ರಾಜ್ಯಗಳು ದೂರಿದ್ದವು.

ಮುಂದಿನ ಎರಡು ದಿನಗಳ ಅವಧಿಯಲ್ಲಿ ಎಂಟು ಐಸಿಎಂಆರ್ ಸಂಸ್ಥೆಗಳು ವಿವಿಧ ರಾಜ್ಯಗಳಲ್ಲಿ ಕ್ಷಿಪ್ರ ಪರೀಕ್ಷಾ ಕಿಟ್ ಗಳನ್ನು ಮೌಲ್ಯ ಮಾಪನ ಪರೀಕ್ಷೆಗೆ ಒಳಪಡಿಸಲಿವೆ ಮತ್ತು ಕೆಲವೊಂದು ಕಿಟ್ಗಳೇನದರೂ ದೋಷಪೂರಿತವಾಗಿವೆಯೇ ಎಂಬುದಾಗಿ ಪರಿಶೀಲಿಸುವುವು. ಅದರ ಫಲಿತಾಂಶವನ್ನು ಅನುಸರಿಸಿ ರಾಜ್ಯಗಳು ಮತ್ತು ಜನಸಾಮಾನ್ಯರಿಗೆ ಹಿಮ್ಮಾಹಿತಿ ನೀಡಲಾಗುವುದು ಎಂದು ಐಸಿಎಂಆರ್ ಉನ್ನತ ವಿಜ್ಞಾನಿ ಡಾ. ಗಂಗಾ ಖೇಡ್ಕರ್ ನುಡಿದರು.

ಕ್ಷಿಪ್ರ ಪರೀಕ್ಷಾ ಕಿಟ್ಗಳು ಕಡಿಮೆ ಪತ್ತೆ ಮಾಡುತ್ತಿವೆ ಎಂಬುದಾಗಿ ಒಂದು ರಾಜ್ಯವು ಸೋಮವಾರ ನಮಗೆ ದೂರು ನೀಡಿದೆ. ಆದ್ದರಿಂದ ನಾವು ಮಂಗಳವಾರ ಮೂರು ರಾಜ್ಯಗಳಿಂದ ಹಿಮ್ಮಾಹಿತಿ ಪಡೆದಿದ್ದೇವೆಎಂದು ಡಾ. ಖೇಡ್ಕರ್ ಹೇಳಿದರು.

ಆರ್ ಟಿ-ಪಿಸಿಆರ್ ಪಾಸಿಟಿವ್ ಮಾದರಿಗಳು (ಕ್ಷಿಪ್ರ ಪರೀಕ್ಷಾ ಕಿಟ್ಗಳ ಮೂಲಕ ಪರೀಕ್ಷಿಸಿದಾಗ) ತುಂಬಾ ವ್ಯತ್ಯಾಸಗಳನ್ನು ತೋರಿಸಿದವು. ವ್ಯತ್ಯಾಸ ಶೇಕಡಾ ೬ರಿಂದ ಶೇಕಡಾ ೭೧ರಷ್ಟಿತ್ತು ಎಂದು ಅವರು ನುಡಿದರು.

ಇಷ್ಟೊಂದು ವ್ಯತ್ಯಾಸಗಳು ಒಳ್ಳೆಯದಲ್ಲ, ಆದ್ದರಿಂದ ಬಗ್ಗೆ ತನಿಖೆ ಮಾಡಬೇಕಾಗಿದೆ. ಆದಾಗ್ಯೂ ವೈರಸ್ ಹೊಸತಾದ್ದರಿಂದ ಕೆಲವು ದೋಷಗಳು ನಿರೀಕ್ಷಿತವೇ ಎಂದು ಐಸಿಎಂಆರ್ ತಜ್ಞ ಹೇಳಿದರು.

ಹೊಸ ಪರೀಕ್ಷೆಗಳು ಮೊದಲ ತಲೆಮಾರಿನ ಎಲಿಸಾವನ್ನು ಕಚ್ಛಾ ರೂಪದಲ್ಲಿ ತೋರಿಸುವಂತಹ ದೋಷವನ್ನು ಪ್ರದರ್ಶಿಸಿತು., ಆದರೆ ಇವುಗಳನ್ನು ನಿರ್ಲಕ್ಷಿಸುವಂತಿಲ್ಲ ಎಂದು ಅವರು ನುಡಿದರು.

ಕ್ಷಿಪ್ರ ಪರೀಕ್ಷಾ ಕಿಟ್ಗಳ ಕಳಪೆ ಸಾಮರ್ಥ್ಯದ ಬಗ್ಗೆ ಮೊದಲು ದೂರು ನೀಡಿದ ಎರಡು ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ ಒಂದು ಮತ್ತು ಎರಡನೇ ರಾಜ್ಯ ರಾಜಸ್ಥಾನ. ಐಸಿಎಂಆರ್ ತನ್ನ ಜಾಲದ ಮೂಲಕ ಕ್ಷಿಪ್ರ ಪರೀಕ್ಷಾ ಕಿಟ್ಗಳನ್ನು ರಾಜ್ಯಗಳಿಗೆ ಒದಗಿಸಿತ್ತು. ಪಶ್ಚಿಮ ಬಂಗಾಳದ ಬಳಿಕ ರಾಜಸ್ಥಾನ ಕೂಡಾ ಕ್ಷಿಪ್ರ ಪರೀಕ್ಷಾ ಕಿಟ್ಗಳ ಬಳಕೆಯನ್ನು ಮಂಗಳವಾರ ಅಮಾನತುಗೊಳಿಸಿತ್ತು.

ಕ್ಷಿಪ್ರ ಪರೀಕ್ಷಾ ಕಿಟ್ಗಳನ್ನು ರಾಜ್ಯಗಳಿಗೆ ಕಳುಹಿಸುವ ಮುನ್ನ ದೆಹಲಿಯಲ್ಲಿ ಪರೀಕ್ಷಿಸಲಾಗಿತ್ತು. ಆಗ ಅವು ಶೇಕಡಾ ೭೧ರಷ್ಟು ನಿಖರತೆಯನ್ನು ತೋರಿಸಿದ್ದವು.

ಕೋವಿಡ್-೧೯ ಪ್ರತಿಕಾಯಗಳು ಬೆಳವಣಿಗೆ ಹೊಂದಲು ದಿನಗಳನ್ನು ತೆಗೆದುಕೊಳ್ಳುವುದರಿಂದ ಪ್ರತಿಶತ ನಿಖರತೆಯು ಸಮಯದೊಂದಿಗೆ ಹೆಚ್ಚುತ್ತದೆ ಎಂದು ಅವರು ಹೇಳಿದರು.

ಕಿಟ್ ಗಳು ಅಸಮರ್ಪಕವಾಗಿ ಕಾರ್ ನಿರ್ವಹಿಸುತ್ತಿರುವುದು ಕಂಡು ಬಂದಲ್ಲಿ ವಿಷಯವನ್ನು ಸರಬರಾಜು ಸಂಸ್ಥೆಗಳ ಜೊತೆ ಪ್ರಸ್ತಾಪಿಸಬಹುದು ಎಂದು ಗಂಗಾಖೇಡ್ಕರ್ ನುಡಿದರು.

ಕ್ಷಿಪ್ರ ಪರೀಕ್ಷಾ ಕಿಟ್ಗಳು ನಿಮಿಷಗಳ ಒಳಗಾಗಿ ಫಲಿತಾಂಶ ನೀಡುತ್ತವೆ, ಆದ್ದರಿಂದ ಪರೀಕ್ಷಾ  ಸಾಮರ್ಥ್ಯ ವರ್ಧನೆಯಲ್ಲಿ ಮತ್ತು ರೋಗ ಹತೋಟಿ ತಂತ್ರ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಪರಿಗಣಿಸಲಾಗಿದೆ.

No comments:

Advertisement