My Blog List

Tuesday, April 21, 2020

ರಾಷ್ಟ್ರಪತಿ ಭವನದ 500 ಮಂದಿಗೆ ಏಕಾಂಗಿವಾಸ

ಭಾರತದಲ್ಲಿ ಕೊರೋನಾ ಸೋಂಕು ೧೮,೯೮೫, ಸಾವು ೬೦೩
ರಾಷ್ಟ್ರಪತಿ ಭವನದ 500 ಮಂದಿಗೆ ಏಕಾಂಗಿವಾಸ
ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕು ಪೀಡಿತರ ಸಂಖ್ಯೆ ೧೮,೯೮೫ಕ್ಕೆ ತಲುಪಿದ್ದು,  ಸೋಂಕಿಗೆ ಬಲಿಯಾದವರ ಸಂಖ್ಯೆ ೬೦೩ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ 2020 ಏಪ್ರಿಲ್ 21ರ ಮಂಗಳವಾರ ತಿಳಿಸಿತು. ಇದೇ ವೇಳೆಗೆ ಕೊರೋನಾಸೋಂಕು ರಾಷ್ಟ್ರಪತಿ ಭವನಕ್ಕೂ ಕಾಡಿದ್ದು, ೧೨೫ ಕುಟುಂಬಗಳನ್ನು ಕ್ವಾರಂಟೈನ್ಗೆ ಒಳಪಡಿಸಲಾಯಿತು.
ಕಳೆದ ೨೪ಗಂಟೆಗಳ ಅವಧಿಯಲ್ಲಿ ೧೩೨೯ ಹೊಸ ಕೋವಿಡ್-೧೯ ವೈರಸ್ ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿದ್ದು, ಒಂದೇ ದಿನ ೪೪ ಸಾವುಗಳು ವರದಿಯಾದವು..

ದೇಶದಲ್ಲಿ ಈವರೆಗೆ ,೨೫೧ ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಈವರೆಗೆ ಅತಿ ಹೆಚ್ಚು ೪೬೬೯ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಸೋಂಕಿನಿಂದ ಈಗಾಗಲೇ ೨೩೨ ಮಂದಿ ಸಾವಿಗೀಡಾಗಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಸಾವು ಕೂಡಾ ಮಹಾರಾಷ್ಟ್ರದಲ್ಲೇ ದಾಖಲಾಗಿದೆ. ದೆಹಲಿಯಲ್ಲಿ ಒಟ್ಟು ೨೦೮೧. ಪ್ರಕರಣಗಳು, ೪೭ ಮಂದಿ ಸಾವು; ತಮಿಳುನಾಡಿನಲ್ಲಿ ೧೫೨೦ ಪ್ರಕರಣಗಳು, ೧೭ ಮಂದಿ ಸಾವು; ರಾಜಸ್ಥಾನದಲ್ಲಿ ೧೫೭೬ ಪ್ರಕರಣಗಳು, ೨೫ ಸಾವು ಸಂಭವಿಸಿದೆ.

ಕರ್ನಾಟಕದಲ್ಲಿ ಹತ್ತು ಕೊರೋನಾವೈರಸ್ ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಒಟ್ಟು ೪೧೮ ಮಂದಿಗೆ ಕೋವಿಡ್ ೧೯ ಸೋಂಕು ದೃಢಪಟ್ಟಿದ್ದು, ೧೭ ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ ೧೨೯ ಮಂದಿ ಗುಣಮುಖರಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ರಾಷ್ಟ್ರಪತಿ ಭವನಕ್ಕೂ ಕಾಡಿದ  ಸೋಂಕು
ರಾಷ್ಟ್ರಪತಿ ಭವನದಲ್ಲಿ ಒಂದು ಕೊರೋನಾವೈರಸ್  ಸೋಂಕಿತ ಪ್ರಕರಣ ವರದಿಯಾಗಿದ್ದು, ಬೆನ್ನಲ್ಲೇ ರಾಷ್ಟ್ರಪತಿ ಭವನದಲ್ಲಿರುವ ಸುಮಾರು ೧೨೫ ಕುಟುಂಬಗಳ ೫೦೦ ವ್ಯಕ್ತಿಗಳನ್ನು ಕ್ವಾರಂಟೈನ್ಗೆ ಕಳುಹಿಸಲಾಯಿತು ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿತು.

ರಾಷ್ಟ್ರಪತಿ ಭವನದ ಶುಚಿತ್ವ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಸಂಬಂಧಿ ಮಹಿಳೆಗೆ  ಕೋವಿಡ್ ೧೯ ಪಾಸಿಟಿವ್ ವರದಿ ಬಂದಿದ್ದು, ಅಧಿಕೃತ ಉದ್ಯೋಗಿಯಲ್ಲದಿದ್ದರೂ ರಾಷ್ಟ್ರಪತಿ ಭವನದ ಸಂಕೀರ್ಣದಲ್ಲೆ ವಾಸಿಸುತ್ತಿದ್ದರು ಎಂದು ವರದಿ ತಿಳಿಸಿದೆ.

ಶುಚಿತ್ವ ಕೆಲಸ ಮಾಡುತ್ತಿದ್ದ ಮಹಿಳೆಯ ಸೊಸೆಯ ತಾಯಿ ಹಿಂದೆ ಕೋವಿಡ್ ೧೯ ಸೋಂಕಿಗೆ ಬಲಿಯಾಗಿದ್ದರು. ಅಂತ್ಯಕ್ರಿಯೆಯಲ್ಲಿ ಕುಟುಂಬದ ಹಲವರು ಭಾಗವಹಿಸಿದ್ದರು. ಹೀಗಾಗಿ ಅವರ ಮನೆಯನ್ನು ಕಳೆದ ಶನಿವಾರದಿಂದ ಸೀಲ್ ಮಾಡಲಾಗಿದ್ದು, ಇಡೀ ಕುಟುಂಬವನ್ನು ಕ್ವಾರಂಟೈನ್ನಲ್ಲಿ ಇಡಲಾಗಿತ್ತು.

ಅದೇ ದಿನ ಸಿಬ್ಬಂದಿಯ ಅಕ್ಕಪಕ್ಕದ ೩೦ ಮನೆಗಳ ಮಂದಿಯನ್ನು ತೀವ್ರ ಕ್ವಾರಂಟೈನ್ಗೆ ಒಳಪಡಿಸಿ ಸರ್ಕಾರದಿಂದಲೇ ಆಹಾರ ಪೂರೈಸಲಾಗುತ್ತಿತ್ತು. ಇತ್ತೀಚಿನ ಬೆಳವಣಿಗೆಯ ಬಳಿಕ ಮತ್ತೆ ೯೫ ಕ್ಕಿಂತ ಹೆಚ್ಚಿನ ಕುಟುಂಬಗಳನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದ್ದು, ಯಾರೊಬ್ಬರನ್ನೂ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ.

ದಿಗ್ಬಂಧs  ಉಲ್ಲಂಘನೆ: ೭೧,೦೦೦ ಜನರ ವಿರುದ್ಧ ದೂರು
ಕೊರೋನಾವೈರಸ್ ತಡೆಗಟ್ಟುವ ಸಲುವಾಗಿ ಜಾರಿಗೊಳಿಸಲಾದ ದಿಗ್ಬಂಧನ ಆದೇಶವನ್ನು ಉಲ್ಲಂಘಿಸಿದ ಸುಮಾರು ೭೧ ಸಾವಿರ ಜನರ ವಿರುದ್ಧ ದೂರು ದಾಖಲಿಸಿದ್ದು, ೨೪ ಸಾವಿರಕ್ಕೂ ಅಧಿಕ ಮಂದಿ ವಿರುದ್ಧ ಎಫ್ ಐಆರ್ ದಾಖಲಿಸಿರುವುದಾಗಿ ಉತ್ತರಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಲಾಕ್ಡೌನ್ ಆದೇಶ ಉಲ್ಲಂಘಿಸಿ, ಅನುಚಿತವಾಗಿ ವರ್ತಿಸಿದವರ ವಿರುದ್ಧ ಭಾರತೀಯ ದಂಡ ಸಂಹಿತೆ ೧೮೮ರ ಅನ್ವಯ ದೂರು ದಾಖಲಿಸಲಾಗಿದೆ ಎಂದು ವರದಿ ತಿಳಿಸಿತು.

ಆದೇಶ ಉಲ್ಲಂಘಿಸಿದ ೭೧,೭೮೨ ಮಂದಿಯಲ್ಲಿ ೨೪, ೪೪೬ ಜನರ ವಿರುದ್ಧ ಎಫ್ಐಆರ್ ದಾಖಲಿಸಿರುವುದಾಗಿ ಹೆಚ್ಚುವರಿ ಗೃಹ ಕಾರ್ಯದರ್ಶಿ ಅವನೀಶ್ ಅವಸ್ಥಿ ತಿಳಿಸಿದ್ದಾರೆ. ಆದರೆ, ಜೈಲಿನಲ್ಲಿ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಇವರನ್ನೆಲ್ಲಾ ಜಾಮೀನಿನಲ್ಲಿ ಬಿಡುಗಡೆ ಮಾಡಲಾಯಿತು ಎಂದ ಅವರು ವಿವರಿಸಿದರು.

ಆದೇಶ ಮೀರಿ ಲಾಕ್ಡೌನ್ ಉಲ್ಲಂಘಿಸಿದವರಿಂದ . ಕೋಟಿ ರೂಪಾಯಿಗಿಂತಲೂ ಅಧಿಕವಾಗಿ ದಂಡ ವಸೂಲಿ ಮಾಡಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರಪ್ರದೇಶದಲ್ಲಿ ,೧೮೪ ಮಂದಿಗೆ ಕೋವಿಡ್ ೧೯ ಸೋಂಕು ತಗುಲಿದ್ದು, ೧೪೦ ಮಂದಿ ಗುಣಮುಖರಾಗಿದ್ದಾರೆ. ೧೮ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಕೊರೋನಾವೈರಸ್ ವಿರುದ್ಧ ದೇಶ ಒಗ್ಗಟ್ಟಿನಿಂದ ಹೋರಾಡುತ್ತಿರುವ ಪರಿಣಾಮದಿಂದ ಧನಾತ್ಮಕ ಫಲಿತಾಂಶ ಬಂದಿದ್ದು, ಕಳೆದ ೧೪ ದಿನಗಳಿಂದ ದೇಶದ ೬೦ ಜಿಲ್ಲೆಗಳಲ್ಲಿ ಒಂದೇ ಒಂದು ಕೋವಿಡ್ ೧೯ ವೈರಸ್ ಹೊಸ ಪ್ರಕರಣ ವರದಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.

ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶದ ಪ್ರಕಾರ, ಕೋವಿಡ್ ೧೯ ವೈರಸ್ ವಿರುದ್ಧದ ಹೋರಾಟದಲ್ಲಿ ಸಮಾಧಾನಕರ ಮುನ್ನಡೆ ಎಂಬಂತೆ ದೇಶದಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುವ ಪ್ರಮಾಣವು . ದಿನಗಳಿಗೆ ಇಳಿಕೆಯಾಗಿದೆ ಎಂದು ತಿಳಿಸಿತ್ತು.

ವಿಶೇಷವೆಂದರೆ, ಕರ್ನಾಟಕ ಸೇರಿದಂತೆ ೧೮ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಿದೆ. ಕರ್ನಾಟಕದಲ್ಲಿ ಸೋಂಕು ದ್ವಿಗುಣಗೊಳ್ಳುವ ಅವಧಿ . ದಿನಗಳಾಗಿದ್ದರೆ, ದೆಹಲಿಯಲ್ಲಿ ಇದು . ದಿನಗಳು ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ತಿಳಿಸಿದ್ದರು.

ರಾಷ್ಟ್ರವ್ಯಾಪಿ ದಿಗ್ಬಂಧನಕ್ಕೆ ಮುನ್ನ ಸೋಂಕು . ದಿನಗಳಿಗೊಮ್ಮೆ ದ್ವಿಗುಣಗೊಳ್ಳುತ್ತಿತ್ತು. ಆದರೆ, ಈಗ ಜನರ ಚಲನವಲಗಳಿಗೆ ನಿರ್ಬಂಧದ ಕಡಿವಾಣ ಬಿದ್ದಿರುವ ಕಾರಣ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಲು . ದಿನಗಳು ಬೇಕಾಗುತ್ತಿವೆ ಎಂದು ವಿವರಿಸಿದ್ದರು.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೨೫,೦೫,೪೩೩, ಸಾವು ,೭೧,೮೫೧
ಚೇತರಿಸಿಕೊಂಡವರು- ,೫೯,೬೩೩
ಅಮೆರಿಕ ಸೋಂಕಿತರು ,೯೪,೨೯೭, ಸಾವು ೪೨,೫೬೪
ಸ್ಪೇನ್ ಸೋಂಕಿತರು ,೦೪,೧೭೮, ಸಾವು ೨೧,೨೮೨
ಇಟಲಿ ಸೋಂಕಿತರು ,೮೧,೨೨೮,  ಸಾವು ೨೪,೧೧೪
ಜರ್ಮನಿ ಸೋಂಕಿತರು ,೪೭,೫೯೩, ಸಾವು ,೮೬೯
ಚೀನಾ ಸೋಂಕಿತರು ೮೨,೭೫೮, ಸಾವು ,೬೩೨
ಇಂಗ್ಲೆಂಡ್ ಸೋಂಕಿತರು ,೨೪,೭೪೩, ಸಾವು ೧೬,೫೦೯
ನೆದರ್ ಲ್ಯಾಂಡ್ಸ್ನಲ್ಲಿ  ೧೬೫, ಬೆಲ್ಜಿಯಂನಲ್ಲಿ ೧೭೦, ಸ್ಪೇನಿನಲ್ಲಿ ೪೩೦, ಸ್ವೀಡನ್ನಲ್ಲಿ ೧೮೫, ಒಟ್ಟಾರೆ ವಿಶ್ವಾದ್ಯಂತ ,೪೫೪ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement