My Blog List

Sunday, April 19, 2020

ಕೊರೊನಾ: ವಿಶ್ವಾದ್ಯಂತ ೧.೬೨ ಲಕ್ಷ ದಾಟಿದ ಸಾವು

ಕೊರೊನಾ: ವಿಶ್ವಾದ್ಯಂತ ೧.೬೨ ಲಕ್ಷ ದಾಟಿದ ಸಾವು
ವಾಷಿಂಗ್ಟನ್: ಕೊರೊನಾವೈರಸ್ (ಕೋವಿಡ್-೧೯) ಸೋಂಕಿಗೆ ವಿಶ್ವಾದ್ಯಂತ ಬಲಿಯಾದವರ ಸಂಖ್ಯೆ 2020 ಏಪ್ರಿಲ್ 19ರ ಭಾನುವಾರ  .೬೨ ಲಕ್ಷ ದಾಟಿತು. ೧೯೩ ದೇಶಗಳಲ್ಲಿ ಈವರೆಗೆ ೨೩.೫೫ ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ವೈರಸ್ ಸೋಂಕು ಕಾಣಿಸಿಕೊಂದ್ದು, ಸುಮಾರು ಲಕ್ಷ ಮಂದಿ ಗುಣಮುಖರಾಗಿದ್ದಾರೆ.

ಜಾನ್ಸ್ ಹಾಪ್ಕಿನ್ಸ್ ಮಾಹಿತಿ ಪ್ರಕಾರ, 2020 ಏಪ್ರಿಲ್ 19ರ ಭಾನುವಾರ  ರಾತ್ರಿ ೦೯ ಗಂಟೆ ವೇಳೆಗೆ ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ,೩೫೫,೬೭೬ಕ್ಕೆ ಏರಿಕೆಯಾಯಿತು.  ೧೬೨,೦೩೨ ಮಂದಿ ಮೃತರಾಗಿದ್ದು ೬೦೫,೧೪೩ ಮಂದಿ ಚೇತರಿಸಿಕೊಂಡಿದ್ದಾರೆ.

ಸ್ಪೇನಿನಲ್ಲಿ ೧೯೫,೯೪೪ ಮಂದಿಗೆ ಸೋಂಕು ತಗುಲಿದ್ದು, ೨೦,೪೫೩ ಜನ ಮೃತರಾಗಿದ್ದಾರೆ. ೭೭,೩೫೭ ಜನ ಗುಣಮುಖರಾಗಿದ್ದಾರೆ. ಇಟಲಿಯಲ್ಲಿ ಸೋಂಕಿತರ ಸಂಖ್ಯೆ ೧೭೫,೯೨೫ ತಲುಪಿದ್ದು, ೨೩,೨೨೭ ಮಂದಿ ಸಾವಿಗೀಡಾಗಿದ್ದಾರೆ. ೪೪,೯೨೭ ಜನ ಚೇತರಿಸಿದ್ದಾರೆ.

ಅಮೆರಿಕದಲ್ಲಿ ೭೩೫,೩೬೬ ಪ್ರಕರಣ ದಾಖಲಾಗಿದ್ದು, ೩೯,೦೯೫ ಮಂದಿ ಮೃತರಾಗಿದ್ದಾರೆ. ೬೬,೮೫೪ ಜನ ಗುಣಮುಖರಾಗಿದ್ದಾರೆ.

ನ್ಯೂಯಾರ್ಕಿನಲ್ಲಿ  ಸಾವಿನ ಸಂಖ್ಯೆ ಇಳಿಮುಖ: ನ್ಯೂಯಾರ್ಕಿನಲ್ಲಿ ಕೋವಿಡ್-೧೯ರಿಂದಾಗಿ ಪ್ರತಿದಿನ ಕನಿಷ್ಠ ೫೫೦ ಮಂದಿ ಮೃತರಾಗುತ್ತಿದ್ದರು. ಎರಡು ವಾರಗಳಲ್ಲಿ ಇದೇ ಮೊದಲ ಬಾರಿಗೆ ದಿನದ ಸಾವಿನ ಪ್ರಮಾಣ ೫೫೦ಕ್ಕಿಂತ ಕಡಿಮೆ ದಾಖಲಾಗಿದೆ ಎಂದು ಗವರ್ನರ್ ಆಂಡ್ರ್ಯೂ ಕುಮೊ ತಿಳಿಸಿದರು.
ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಇಳಿಮುಖವಾಗುತ್ತಿರುವುದು ಒಳ್ಳೆಯ ಸುದ್ದಿ. ತುರ್ತು ನಿಗಾ ಘಟಕಗಳಿಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಕಡಿಮೆಯಾಗಿದೆ’ ಎಂದು ಅವರು ಹೇಳಿದರು.
ಅಮೆರಿಕದಲ್ಲಿ ಕೊರೊನಾ ಸೋಂಕಿನ ಹಾಟ್ ಸ್ಪಾಟ್ ಆಗಿರುವ ನ್ಯೂಯಾರ್ಕಿನಲ್ಲಿ ಈವರೆಗೆ ,೩೧,೨೬೩ ಪ್ರಕರಣಗಳು ದೃಢಪಟ್ಟಿದ್ದು, ,೮೯೦ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.

ಭಾರತದಲ್ಲಿ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆ ಪ್ರಕಾರ, 2020 ಏಪ್ರಿಲ್ 19ರ ಭಾನುವಾರ ಸಂಜೆ ವೇಳೆಗೆ ಸೋಂಕಿತರ ಸಂಖ್ಯೆ ೧೬,೧೧೬ಕ್ಕೆ ಏರಿಕೆಯಾಗಿದೆ. ಈವರೆಗೆ ಒಟ್ಟು ೫೧೯ ಜನ ಮೃತಪಟ್ಟಿದ್ದು, ,೩೦೨ ಮಂದಿ ಚೇತರಿಸಿಕೊಂಡಿದ್ದಾರೆ.

No comments:

Advertisement