Wednesday, April 22, 2020

ಮುಖ್ಯಮಂತ್ರಿಗಳ ಜೊತೆ ಮತ್ತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್

ರಾಷ್ಟ್ರವ್ಯಾಪಿ ಲಾಕ್ಡೌನ್: ಏ.೨೭ರ ಸೋಮವಾರ ಮುಖ್ಯಮಂತ್ರಿಗಳ ಜೊತೆ ಮತ್ತೆ ಪ್ರಧಾನಿ ವಿಡಿಯೋ ಕಾನ್ಫರೆನ್ಸ್
ನವದೆಹಲಿ: ಕೊರೋನಾವೈರಸ್ ಸೋಂಕು ಹರಡದಂತೆ ತಡೆಯುವ ಸಲುವಾಗಿ ವಿಧಿಸಲಾಗಿರುವ ರಾಷ್ಟ್ರವ್ಯಾಪಿ ದಿಗ್ಬಂಧನವು (ಲಾಕ್ಡೌನ್) ಅಂತಿಮವಾರಕ್ಕೆ ಪ್ರವೇಶಿಸುತ್ತಿದ್ದಂತೆಯೇ ಏಪ್ರಿಲ್ ೨೭ರ ಸೋಮವಾರ ಮತ್ತೊಮ್ಮೆ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು  2020 ಏಪ್ರಿಲ್  22ರ ಬುಧವಾರ ತೀರ್ಮಾನಿಸಿದರು.

ಮೇ ೩ರವರೆಗೆ ವಿಸ್ತರಿಸಲಾಗಿರುವ ದಿಗ್ಬಂಧನವನ್ನು ತೆರವುಗೊಳಿಸುವ ಬಗ್ಗೆ ಪ್ರಧಾನಿಯವರು ರಾಜ್ಯಗಳ ಅಭಿಪ್ರಾಯ ಕೇಳುವ ಸಾಧ್ಯತೆಗಳಿವೆ.

ಇದಕ್ಕೆ ಮುನ್ನ ಬುಧವಾರ ಸರ್ಕಾರವು ಆರೋಗ್ಯ ಕಾರ್ಯಕರ್ತರನ್ನು ಹಿಂಸಾತ್ಮಕ ದಾಳಿಗಳಿಂದ ರಕ್ಷಿಸುವ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿತ್ತು.

ಏಪ್ರಿಲ್ ೨೦ರಂದು ತೆಲಂಗಾಣ ರಾಜ್ಯ ಸಚಿವ ಸಂಪುಟವು ರಾಜ್ಯದಲ್ಲಿನ ದಿಗ್ಬಂಧನವನ್ನು ಮೇ ೭ರವರೆಗೆ ವಿಸ್ತರಿಸುವ ತೀರ್ಮಾನ ಕೈಗೊಂಡಿತ್ತು.

ದೇಶದಲ್ಲಿ ಕೊರೋನಾವೈರಸ್ ಸೋಂಕಿನ ಪ್ರಕರಣಗಳು ಬುಧವಾರ ೨೦,೪೭೧ಕ್ಕೇ ಏರಿದ್ದು, ಒಟ್ಟು ಸಾವಿನ ಸಂಖ್ಯೆ ೬೫೨ ತಲುಪಿದೆ. ಮಹಾರಾಷ್ಟ್ರ ಅತ್ಯಂತ ಹೆಚ್ಚು ಬಾಧಿತ ರಾಜ್ಯವಾಗಿದ್ದು ಸೋಂಕಿತರ ಸಂಖ್ಯೆ ,೧೯೧ಕ್ಕೇ ಏರಿದೆ. ಇದೊಂದೇ ರಾಜ್ಯದಲ್ಲಿ ೨೫೧ ಸಾವುಗಳು ಸಂಭವಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆಸಲಿರುವ ನಾಲ್ಕನೇ ಸಂವಹನ ಇದಾಗಿದ್ದು, ಮೂರನೇ ಸಂವಹನ ಕಾಲದಲ್ಲಿ ಅವರು ಬಹುತೇಕ ಮುಖ್ಯಮಂತ್ರಿಗಳು ಮಾರ್ಚ್ ೨೫ರಂದು ಜಾರಿಗೊಳಿಸಲಾದ ದಿಗ್ಬಂಧನವನ್ನು ವಿಸ್ತರಿಸುವಂತೆ ಕೋರಿದರು ಎಂದು ತಿಳಿಸಿದ್ದರು.

ಭಾರತವು ಜೀವ ಮತು ಜಗತ್ತಿನ ಮಧ್ಯೆ ಸಮತೋಲನ ಸಾಧಿಸಬೇಕಾಗಿದೆ ಎಂದು ಹೇಳಿದ ಪ್ರಧಾನಿ ದಿಗ್ಬಂಧನವನ್ನು ಮೇ ೩ರವರೆಗೆ ವಿಸ್ತರಿಸುವ ನಿರ್ಧಾರ ಕೈಗೊಂಡಿದ್ದರು. ಆದರೆ ಏಪ್ರಿಲ್ ೨೦ರ ಬಳಿಕ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ, ನಿರ್ಮಾಣ ಚಟುವಟಿಕೆಗಳ ಆರಂಭಕ್ಕೆ ಒತ್ತು ನೀಡಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದರು.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೨೫,೮೫,೩೯೨, ಸಾವು ,೭೯,೮೬೬
ಚೇತರಿಸಿಕೊಂಡವರು- ,೦೫,೭೫೪
ಅಮೆರಿಕ ಸೋಂಕಿತರು ,೧೯,೩೨೧, ಸಾವು ೪೫,೩೫೬
ಸ್ಪೇನ್ ಸೋಂಕಿತರು ,೦೮,೩೮೯, ಸಾವು ೨೧,೭೧೭
ಇಟಲಿ ಸೋಂಕಿತರು ,೮೩,೯೫೭,  ಸಾವು ೨೪,೬೪೮
ಜರ್ಮನಿ ಸೋಂಕಿತರು ,೪೮,೯೨೫, ಸಾವು ,೧೨೭
ಚೀನಾ ಸೋಂಕಿತರು ೮೨,೭೮೮, ಸಾವು ,೬೩೨
ಇಂಗ್ಲೆಂಡ್ ಸೋಂಕಿತರು ,೩೩,೪೯೫, ಸಾವು ೧೮,೧೦೦
ಇಂಗ್ಲೆಂಡಿನಲ್ಲಿ  ೭೬೩, ಬೆಲ್ಜಿಯಂನಲ್ಲಿ ೨೬೪, ಸ್ಪೇನಿನಲ್ಲಿ ೪೩೫, ಸ್ವೀಡನ್ನಲ್ಲಿ ೧೭೨, ನೆದರ್ ಲ್ಯಾಂಡ್ಸ್ನಲ್ಲಿ ೧೩೮ ಒಟ್ಟಾರೆ ವಿಶ್ವಾದ್ಯಂತ ,೪೦೭ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement