My Blog List

Saturday, April 4, 2020

ಪ್ರಧಾನಿ ಕರೆಯಿಂದ ವಿದ್ಯುತ್ ಗ್ರಿಡ್ಡಿಗೆ ಅಪಾಯ ಇಲ್ಲ; ಆತಂಕ ಬೇಕಿಲ್ಲ: ಕೇಂದ್ರ ಸ್ಪಷ್ಟನೆ

ಪ್ರಧಾನಿ ಕರೆಯಿಂದ ವಿದ್ಯುತ್  ಗ್ರಿಡ್ಡಿಗೆ ಅಪಾಯ ಇಲ್ಲ; ಆತಂಕ ಬೇಕಿಲ್ಲ: ಕೇಂದ್ರ ಸ್ಪಷ್ಟನೆ

ನವದೆಹಲಿ: ಏಪ್ರಿಲ್ ೫ರ ಭಾನುವಾರ ರಾತ್ರಿ ಗಂಟೆಗೆ ಎಲ್ಲ ಲೈಟುಗಳನ್ನೂ ಆರಿಸಿ, ’ಜ್ಯೋತಿಬೆಳಗುವ ಮೂಲಕ ಕೊರೋನಾವೈರಸ್ ವಿರೋಧಿ ಹೋರಾಟದಲ್ಲಿ ದೇಶದ ಒಗ್ಗಟ್ಟನ್ನು ಜಗತ್ತಿಗೆ ಸಾಬೀತು ಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟಿರುವ ಕರೆಯಿಂದ ದೇಶದ ವಿದ್ಯುತ್ ಜಾಲದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗಬಹುದೆಂಬ ಆತಂಕದ ಅಗತ್ಯವಿಲ್ಲ ಎಂದು ವಿದ್ಯುತ್ ಸಚಿವಾಲಯವು 2020 ಏಪ್ರಿಲ್ 04ರ ಶನಿವಾರ ಸ್ಪಷ್ಟ ಪಡಿಸಿತು.

ಪ್ರಧಾನಿಯವರ ಕರೆಯಂತೆ ದೇಶಾದ್ಯಂತ ಏಕಾಏಕಿ ದೀಪಗಳನ್ನು ಆರಿಸಿದರೆ ವಿದ್ಯುತ್ ಜಾಲದಲ್ಲಿ ಅಸ್ಥಿರತೆ ಉಂಟಾಗಿ ವಿದ್ಯುತ್ ಜಾಲಕ್ಕೆ (ಪವರ ಗ್ರಿಡ್) ಧಕ್ಕೆ ಉಂಟಾಗಬಹುದು ಎಂಬ ಅನುಮಾನಗಳುತಪ್ಪು ಅಭಿಪ್ರಾಯಗಳುಎಂದು ವಿದ್ಯುತ್ ಇಲಾಖೆ ಹೇಳಿತು.

ಭಾರತೀಯ ವಿದ್ಯುಚ್ಚಕ್ತ್ತಿ ಜಾಲವು ಅತ್ಯಂತ ದೃಢ ಹಾಗೂ ಸ್ಥಿರವಾದುದಾಗಿದ್ದು ಬೇಡಿಕೆಯಲ್ಲಿನ ವ್ಯತ್ಯಾಸಗಳನ್ನು  ನಿಭಾಯಿಸುವ ಸೂಕ್ತ ವ್ಯವಸ್ಥೆಗಳು ಮತ್ತು ಶಿಷ್ಟಾಚಾರಗಳನ್ನು ಹೊಂದಿದೆ ಎಂದು ವಿದ್ಯುತ್ ಸಚಿವಾಲಯದ ಪ್ರಕಟಣೆ ತಿಳಿಸಿತು.

ದೀಪಗಳನ್ನು ಆರಿಸುವಂತೆ ನೀಡಿರುವ ಕರೆಯು ಸ್ವಯಂ ಇಚ್ಛೆಯದ್ದಾಗಿದ್ದು, ಬೀದಿ ದೀಪಗಳು, ಅಥವಾ ಕಂಪ್ಯೂಟರ್, ಟಿವಿ, ಫ್ಯಾನ್,  ರಿಫ್ರಿಜರೇಟರ್‌ನಂತಹ ವಿದ್ಯುತ್ ಉಪಕರಣಗಳಿಗೆ ಮತ್ತು ಮನೆಗಳಲ್ಲಿನ ಹವಾನಿಯಂತ್ರಿತ ವ್ಯವಸ್ಥೆಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಿಕೆ ತಿಳಿಸಿತು.

ಕೇವಲ ದೀಪಗಳನ್ನು ಮಾತ್ರವೇ ಆರಿಸಬೇಕುಎಂದು ಹೇಳಿಕೆ ಸ್ಪಷ್ಟ ಪಡಿಸಿತು.

ಆಸ್ಪತ್ರೆಗಳು ಮತ್ತು ಸಾರ್ವಜನಿಕ ಬಳಕೆ ಸ್ಥಳಗಳು, ಮುನಿಸಿಪಲ್ ಸೇವೆಗಳು, ಕಚೇರಿUಳು, ಪೊಲೀಸ್ ಠಾಣೆಗಳು, ಉತ್ಪಾದನಾ ಘಟಕಗಳು ಇತ್ಯಾದಿ ಅಗತ್ಯ ಸೇವೆಗಳಲ್ಲಿನ ಎಲ್ಲ ದೀಪಗಳು ಆರದೆ ಹಾಗೆಯೇ ಇರುತ್ತವೆ ಎಂದೂ ಹೇಳಿಕೆ ತಿಳಿಸಿತು.

ಪ್ರಧಾನಿಯವರ ಕರೆಯು ಮನೆಗಳಿಗೆ ಮಾತ್ರವೇ ಅನ್ವಯಿಸುತ್ತದೆ ಎಂದೂ ಸಚಿವಾಲಯ ಸ್ಪಷ್ಟ ಪಡಿಸಿತು.

ಸಾರ್ವಜನಿಕ ಸುರಕ್ಷತೆಯ ಸಲುವಾಗಿ ಬೀದಿ ದೀಪಗಳನ್ನು ಆರಿಸದೆ ಹಾಗೆಯೇ ಉರಿಸಲು ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ಸಲಹೆ ಮಾಡಲಾಗಿದೆ ಎಂದೂ ಹೇಳಿಕೆ ಸ್ಪಷ್ಟ ಪಡಿಸಿತು.

ಏಪ್ರಿಲ್ ೫ರ ರಾತ್ರಿ ಗಂಟೆಗೆ ಎಲ್ಲ ದೀಪಗಳನ್ನೂ ಆರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ ತಮ್ಮ ವಿಡಿಯೋ ಸಂದೇಶದಲ್ಲಿ ಕರೆ ನೀಡಿದ್ದರು. ದೀಪ, ಹಣತೆ, ಕ್ಯಾಂಡಲ್, ಟಾರ್ಚ್ ಅಥವಾ ಮೊಬೈಲ್ ಫ್ಲ್ಯಾಷ್ ಲೈಟುಗಳನ್ನು ನಿಮಿಷಗಳ ಕಾಲ ಬೆಳಗಿ ಕೊರೋನಾವೈರಸ್ ವಿರೋಧಿ ಹೋರಾಟದಲ್ಲಿ ರಾಷ್ಟ್ರದ ಒಗ್ಗಟ್ಟಿನ ಸಂಕಲ್ಪವನ್ನು ಪ್ರದರ್ಶಿಸುವಂತೆ ಪ್ರಧಾನಿ ದೇಶದ ಜನತೆಗೆ ಮನವಿ ಮಾಡಿದ್ದರು.

ನಾನು ಏಪ್ರಿಲ್ ೫ರಂದು ರಾತ್ರಿ ಗಂಟೆಗೆ ನಿಮ್ಮ ನಿಮಿಷಗಳನ್ನು ಬಯಸುತ್ತೇನೆ. ನಿಮ್ಮ ಮನೆಗಳಲ್ಲಿನ ಎಲ್ಲ ದೀಪಗಳನ್ನೂ ಆರಿಸಿ, ದೀಪ, ಹಣತೆ, ಕ್ಯಾಂಡಲ್, ಟಾರ್ಚ್ ಅಥವಾ ಮೊಬೈಲ್ ಫೋನಿನ ಫ್ಲಾಷ್ ಲೈಟುಗಳನ್ನು ನಿಮಿಷಗಳ ಕಾಲ ನಿಂತುಕೊಂಡು ಬೆಳಗಬೇಕುಎಂದು ಮೋದಿ ಹೇಳಿದ್ದರು.


No comments:

Advertisement