ಗ್ರಾಹಕರ ಸುಖ-ದುಃಖ

My Blog List

Saturday, April 4, 2020

ಅಟಲ್ ಜಿ ಹಾಡಿದ ವಿಡಿಯೋ ಟ್ವೀಟ್: ಜ್ಯೋತಿ ಬೆಳಗಲು ನೆನಪಿಸಿದ ಮೋದಿ

ಅಟಲ್ ಜಿ  ಹಾಡಿದ ವಿಡಿಯೋ ಟ್ವೀಟ್: ಜ್ಯೋತಿ ಬೆಳಗಲು ನೆನಪಿಸಿದ ಮೋದಿ

ನವದೆಹಲಿ:  ಆವೋ ಫಿರ್ ಸೆ ದೀಪ್ ದಿಯಾ ಜಲಾಯೇ’ (ಬನ್ನಿ ಮತ್ತೊಮ್ಮೆ ಜ್ಯೋತಿ ಬೆಳಗೋಣ) ಎಂಬ ತಮ್ಮ ಕವನವನ್ನು ಸ್ವತಃ ಹಾಡುವುದನ್ನು ತೋರಿಸುವ ಮಾಜಿ ಪ್ರಧಾನಿ ಮತ್ತು ಹಿರಿಯ ಬಿಜೆಪಿ ನಾಯಕ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ ೫ರ ಭಾನುವಾರ ರಾತ್ರಿ ಗಂಟೆಗೆ ಜ್ಯೋತಿ ಬೆಳಗುವ ಕಾರ್‍ಯವನ್ನು 2020 ಏಪ್ರಿಲ್ 04ರ ಶನಿವಾರ ಜನತೆಗೆ ನೆನಪಿಸಿದರು.

ಭಾನುವಾರ ರಾತ್ರಿ ಗಂಟೆಗೆ ತಮ್ಮ ಮನೆಗಳಲ್ಲಿ ಎಲ್ಲ ಲೈಟುಗಳನ್ನೂ ಆರಿಸಿ ನಿಮಿಷಗಳ ಕಾಲ ದೀಪ, ಹಣತೆ, ಕ್ಯಾಂಡಲ್, ಟಾರ್ಚ್ ಅಥವಾ ಮೊಬೈಲ್ ಫ್ಲಾಷ್ ಲೈಟನ್ನು ಬೆಳಗುವ ಮೂಲಕ ಕೊರೋನಾವೈರಸ್ ವಿರೋಧಿ ಸಮರದಲ್ಲಿ ರಾಷ್ಟ್ರದ ಒಗ್ಗಟ್ಟು ಪ್ರದರ್ಶಿಸುವಂತೆ ಮನವಿ ಮಾಡಿದ ಒಂದು ದಿನದ ಬಳಿಕ ಪ್ರಧಾನಿ ಮೋದಿಯವರು  ಅಟಲ್ ಜಿ ಕವನ ಹಾಡುವ ವಿಡಿಯೋವನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡರು.

ಜ್ಯೋತಿ ಬೆಳಗುವ ಉತ್ಸಾಹದಲ್ಲಿ ತಮ್ಮ ಮನೆಗಳಿಂದ ಹೊರಬರದಂತೆ ಜನತೆ ಎಚ್ಚರಿಕೆ ನೀಡಿದ ಪ್ರಧಾನಿ, ಚಟುವಟಿಕೆಯಲ್ಲಿ ಪಾಲ್ಗೊಳ್ಳುವಾಗ ಸಾಮಾಜಿಕವಾಗಿ ಒಟ್ಟಾಗಬೇಡಿ ಎಂದು ಹೇಳಿದರು. ’ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಲಕ್ಷ್ಮಣ ರೇಖೆಯನ್ನು ಯಾರೂ ದಾಟಬಾರದುಎಂದು ಅವರು ನುಡಿದರು.

ಕಳೆದ ತಿಂಗಳು ಮೋದಿಯವರು ಮಾರ್ಚ್ ೨೨ರಂದುಜನತಾ ಕರ್ಫ್ಯೂ ಆಚರಿಸಿ ಸಂಜೆ ಗಂಟೆಗೆ ಐದು ನಿಮಿಷಗಳ ಕಾಲ ಚಪ್ಪಾಳೆ ತಟುವುದು, ಶಂಖ ಊದುವುದು ಇಲ್ಲವೇ ಜಯಗಂಟೆ ಭಾರಿಸುವುದೇ ಇತ್ಯಾದಿ ಕ್ರಿಯೆಗಳ ಮೂಲಕ ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ಅಗತ್ಯ ಸೇವಾದಾರರನ್ನು ಪ್ರೋತ್ಸಾಹಿಸುವಂತೆ ಕರೆ ನೀಡಿದ್ದರು.

ಕರೆಗೆ ವ್ಯಾಪಕವಾಗಿ ಜನರು ಓಗೊಟ್ಟಿದ್ದರು. ಎಲ್ಲ ವಯೋಮಾನದ ಮಂದಿ ಉಪಕ್ರಮದಲ್ಲಿ ಪಾಲ್ಗೊಂಡಿದ್ದರು ಮತ್ತು ಆದಿನಜನತಾ ಕರ್ಫ್ಯೂಜಾರಿಗೊಳಿಸಿದ್ದರು.

ಬಳಿಕ ಕೊರೋನಾವೈರಸ್ ಹರಡದಂತೆ ತಡೆಯುವ ಸಲುವಾಗಿ ಭಾರತವು ಮಾರ್ಚ್ ೨೫ರಿಂದ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಔಟ್) ಜಾರಿಗೊಳಿಸಿದೆ. ದೇಶದಲ್ಲಿ ಈವರೆಗೆ ಸುಮಾರು ೩೦೦೦ ಕೊರೋನಾವೈರಸ್ ಸೋಂಕು ತಗುಲಿದ ಪ್ರಕರಣಗಳು ವರದಿಯಾಗಿದ್ದು, ೬೮ ಸಾವುಗಳು ಸಂಭವಿಸಿವೆ.

ಅಟಲ್ ಜಿ ಕವನ ಹಾಡುವ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:


No comments:

Advertisement