My Blog List

Thursday, April 30, 2020

ಕೊರೋನಾ: ಭಾರತದಲ್ಲಿ ಚೇತರಿಕೆ ದರ ಶೇಕಡಾ ೨೫.೧೯ಕ್ಕೆ ಏರಿಕೆ

ಕೊರೋನಾ:  ಭಾರತದಲ್ಲಿ ಚೇತರಿಕೆ ದರ  ಶೇಕಡಾ ೨೫.೧೯ಕ್ಕೆ ಏರಿಕೆ
ಸೋಂಕು ೩೩,೬೧೦, ಸಾವಿನ ಸಂಖ್ಯೆ ೧೦೭೫ಕ್ಕೆ ಏರಿಕೆ
ನವದೆಹಲಿ: ಭಾರತದಲ್ಲಿ ಕೋರೋನಾ ಪಾಸಿಟಿವ್ ರೋಗಿಗಳ ಚೇತರಿಕೆ ಪ್ರಮಾಣ ಕಳೆದ ಎರಡು ವಾರಗಳ ಅವಧಿಯಲ್ಲಿ ದುಪ್ಪಟ್ಟಾಗಿದೆ, ೧೪ ದಿನಗಳ ಹಿಂದೆ ಚೇತರಿಕೆಯ ಪ್ರಮಾಣ ಶೇಕಡಾ ೧೩ರಷ್ಟು ಇದ್ದುದು, ಈಗ ಶೇಕಡಾ ೨೫.೧೯ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ 2020 ಏಪ್ರಿಲ್ 30ರ ಗುರುವಾರ ತಿಳಿಸಿತು.

ಇದೇ ವೇಳೆಗೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧೮೨೩ ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿನ ಪ್ರಕರಣಗಳ ಸಂಖ್ಯೆ ೩೩,೬೧೦ಕ್ಕೆ ಏರಿದೆ. ೨೪ ಗಂಟೆಗಳ ಅವಧಿಯಲ್ಲಿ ೬೭ ಸಾವುಗಳು ವರದಿಯಾಗಿದ್ದು ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ ೧೦೭೫ಕ್ಕೆ ಏರಿದೆ. ಒಟ್ಟು ಸೋಂಕಿತರಲ್ಲಿ ,೩೭೩ ಮಂದಿ ಗುಣಮುಖರಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ೨೪,೧೬೨ ಎಂದು ಸಚಿವಾಲಯ ಹೇಳಿತು.
ಕೋವಿಡ್ -೧೯ ರೋಗಿಗಳು ಚೇತರಿಸಿಕೊಳ್ಳುತ್ತಿರುವ ಪ್ರಮಾಣ ಹೆಚ್ಚುತ್ತಿರುವ ಆಶಾದಾಯಕ ಪ್ರವೃತ್ತಿ ಕಳೆದ ಕೆಲವು ದಿನಗಳಿಂದ ಕಂಡು ಬರುತ್ತಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ೬೩೦ ಮಂದಿ ಚೇತರಿಸಿದ್ದಾರೆ.
ಒಟ್ಟು
ಚೇತರಿಕೆಯ ಪ್ರಮಾಣ ಶೇಕಡಾ ೨೫.೧೯ಕ್ಕೆ ಏರಿದೆ. ಹೀಗಾಗಿ ಕಳೆದ ೧೪ ದಿನಗಳ ಅವಧಿಯಲ್ಲಿ ರಾಷ್ಟ್ರದ ಕೋವಿಡ್ ಚೇತರಿಕೆ ಪ್ರಮಾಣ ಶೇಕಡಾ ೧೩ರಿಂದ ಈಗಿನ ಶೇಕಡಾ ೨೫ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಭಾರತದಲ್ಲಿ ಪ್ರಸ್ತುತ ಸಾವಿನ ಪ್ರಮಾಣ ಶೇಕಡಾ .೨ರಷ್ಟಿದೆ. ಮೃತರಲ್ಲಿ ಶೇಕಡಾ ೬೫ರಷ್ಟು ಮಂದಿ ಪುರುಷರಾಗಿದ್ದರೆ, ಶೇಕಡಾ ೩೫ರಷ್ಟು ಮಂದಿ ಮಹಿಳೆಯರು ಎಂದು ಅವರು ಹೇಳಿದರು.

ಚಿಕಿತ್ಸಾ ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ ನಾವು ಸರ್ಕಾರಿ ಮಾರ್ಗಸೂಚಿ ಪ್ರಕಾರ ಆರ್ಟಿ ಪಿಸಿಆರ್ ಪರೀಕ್ಷೆಯನ್ನು ಮಾತ್ರವೇ ಮಾಡುತ್ತಿದ್ದೇವೆ ಎಂದು ಅಗರವಾಲ್ ನುಡಿದರು. 

ಕೇವಲ ಒಂದು ದಿನದ ಹಿಂದೆ, ಬುಧವಾರ, ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಅವರು ಕೋವಿಡ್ -೧೯ ಪಾಸಿಟಿವ್ ಪ್ರಕರಣಗಳು ಈಗ ೧೧. ಗಳಿಗೆ ಒಮ್ಮೆ ದ್ವಿಗುಣಗೊಳ್ಳುತ್ತಿವೆ ಎಂದು ಹೇಳಿದ್ದರು, ಮತ್ತು ದೇಶದಲ್ಲಿ ಕೊರೋನಾ ಸಾಂಕ್ರಾಮಿಕ ಕಾಯಿಲೆಯಿಂದ ಸಂಭವಿಸುವ ಮರಣ ಪ್ರಮಾಣವು ಸುಮಾರು ರಷ್ಟು  ಮಾತ್ರ ಇದೆ ಎಂದಿದ್ದರು.

ಕೊರೋನವೈರಸ್ ರೋಗಿಗಳ ಜಾಗತಿಕ ಮರಣ ಪ್ರಮಾಣವು ಶೇಕಡಾ ರಷ್ಟಿದ್ದರೂ, ಭಾರತದ ಮರಣ ಪ್ರಮಾಣವು ಶೇಕಡಾ ರಷ್ಟಿದ್ದು, ಕಾಯಿಲೆಯಿಂದ ಬಳಲುತ್ತಿರುವ ಎಲ್ಲರಿಗೂ ಭರವಸೆಯನ್ನು ನೀಡುತ್ತದೆ.

ಈವರೆಗೆ ಮಾರಣಾಂತಿಕ ಕಾಯಿಲೆಗೆ ಬಲಿಯಾದ ಕೋವಿಡ್ -೧೯ ರೋಗಿಗಳಲ್ಲಿ ಶೇಕಡಾ ೮೬ ರಷ್ಟು ಜನರು ತೀವ್ರವಾದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಅಸ್ವಸ್ಥ ಸ್ಥಿತಿಗಳನ್ನು ಹೊಂದಿದ್ದರು ಎಂದು ಸಚಿವರು ಹೇಳಿದ್ದರು.

ಕರ್ನಾಟಕದಲ್ಲಿ:  ಕರ್ನಾಟಕದಲ್ಲಿ ೩೦ ಹೊಸ ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ ಏಪ್ರಿಲ್ ೨೯ರ ಸಂಜೆ :೦೦ ರಿಂದ ಏಪ್ರಿಲ್ ೩೦ರ  ಸಂಜೆ :೦೦ ರವರೆಗೆ ೩೦ ಹೊಸ ಕೊರೋನಾ ಪ್ರಕರಣಗಳು ದೃಢ ಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ ೫೬೫ ಕ್ಕೆ ಏರಿದೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೩೨,೪೮,೬೮೫ ಸಾವು ,೨೯,೩೯೯
ಚೇತರಿಸಿಕೊಂಡವರು- ೧೦,೧೬,೯೭೮
ಅಮೆರಿಕ ಸೋಂಕಿತರು ೧೦,೬೭,೩೮೨, ಸಾವು ೬೧,೮೪೯
ಸ್ಪೇನ್ ಸೋಂಕಿತರು ,೩೯,೬೩೯, ಸಾವು ೨೫,೫೪೩
ಇಟಲಿ ಸೋಂಕಿತರು ,೦೩,೫೯೧,  ಸಾವು ೨೭,೬೮೨
ಜರ್ಮನಿ ಸೋಂಕಿತರು ,೬೧,೯೮೫, ಸಾವು ,೫೦೪
ಚೀನಾ ಸೋಂಕಿತರು ೮೨,೮೬೨, ಸಾವು ,೬೩೩
ಇಂಗ್ಲೆಂಡ್ ಸೋಂಕಿತರು ,೬೫,೨೨೧, ಸಾವು ೨೬,೦೯೭

ಅಮೆರಿಕದಲ್ಲಿ ೧೯೩, ಇರಾನಿನಲ್ಲಿ ೭೧, ಬೆಲ್ಜಿಯಂನಲ್ಲಿ ೯೩, ಸ್ಪೇನಿನಲ್ಲಿ ೨೬೮, ನೆದರ್ ಲ್ಯಾಂಡ್ಸ್ನಲ್ಲಿ ೮೪, ರಶ್ಯಾದಲ್ಲಿ ೧೦೧, ಸ್ವೀಡನ್ನಲ್ಲಿ ೧೨೪, ಮೆಕ್ಸಿಕೋದಲ್ಲಿ ೧೬೩, ಒಟ್ಟಾರೆ ವಿಶ್ವಾದ್ಯಂತ ,೩೬೯ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement