Thursday, April 30, 2020

ಮೋದಿ ಟ್ವಿಟರ್ ಖಾತೆ ಫಾಲೋ ವಿವಾದ: ಶ್ವೇತಭವನದ ಸ್ಪಷ್ಟನೆ

ಮೋದಿ ಟ್ವಿಟರ್ ಖಾತೆ  ಫಾಲೋ ವಿವಾದ:  ಶ್ವೇತಭವನದ  ಸ್ಪಷ್ಟನೆ
ವಾಷಿಂಗ್ಟನ್: ಫೆಬ್ರುವರಿ ತಿಂಗಳಲ್ಲಿ ಭಾರತ ಭೇಟಿಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಟ್ವಿಟರ್ ಖಾತೆಗಳನ್ನು ಫಾಲೋ ಮಾಡಿ ಆತ್ಮೀಯ ಟ್ವೀಟುಗಳನ್ನು  ಹಂಚಿಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದ್ದಕಿದ್ದಂತೆ ಖಾತೆಗಳನ್ನು ದಿಢೀರನೆ ಅನ್ ಫಾಲೋ ಮಾಡುವ ಮೂಲಕ ರಾಜಕೀಯ ವಲಯದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ಕೋವಿಂದ ಅವರ ಟ್ವಿಟ್ಟರ್ ಖಾತೆಗಳನ್ನು ಅನ್ ಫಾಲೋ ಮಾಡಿದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಶ್ನಿಸಿದ ಬೆನ್ನಲ್ಲೇ ಶ್ವೇತಭವನವು  2020 ಏಪ್ರಿಲ್ 30ರ ಗುರುವಾರ ತನ್ನ ವರ್ತನೆಗೆ ಸ್ಪಷ್ಟನೆ ನೀಡಿತು.
ಯಾವುದೇ ದೇಶಕ್ಕೆ ಪ್ರವಾಸ ಮಾಡುವ ವೇಳೆಯಲ್ಲಿ ಆಯಾ ದೇಶದ ಗಣ್ಯರು ಮತ್ತು ಅವರ ಕಚೇರಿಯ ದೈನಂದಿನ ಬೆಳವಣಿಗೆಗಳ ಮಾಹಿತಿ ಪಡೆಯಲು ಅಮೆರಿಕ ರ್ಕಾರ ಹೊಸ ಖಾತೆಗಳನ್ನು ಫಾಲೋ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದು, ಇದರಿಂದ ಪ್ರವಾಸಕ್ಕೆ ಅನುಕೂಲ ಆಗುತ್ತದೆ. ಪ್ರವಾಸದ ನಂತರ ಗಣ್ಯರ ಖಾತೆಗಳನ್ನು ಅನ್ ಫಾಲೋ ಮಾಡಲಾಗುತ್ತದೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟ ಪಡಿಸಿದರು.

ಇದೇ ಮಾದರಿಯಲ್ಲಿ ಫಾಲೋ ಮಾಡಲಾಗಿದ್ದ ನರೇಂದ್ರ ಮೋದಿ, ರಾಮನಾಥ್ ಕೋವಿಂದ್, ಪ್ರಧಾನಿ ಕಾರ್ಯಾಲಯ, ಅಮೆರಿಕದಲ್ಲಿನ ಭಾರತದ ರಾಯಭಾರ ಕಚೇರಿಯ ಟ್ವಿಟರ್ ಖಾತೆಗಳು ಸೇರಿದಂತೆ ಒಟ್ಟು ಆರು ಖಾತೆಗಳನ್ನು ಈಗ ಅನ್ ಫಾಲೋ ಮಾಡಿದ್ದೇವೆ ಎಂದು ಅಧಿಕಾರಿ ಸಮಜಾಯಿಷಿ ನೀಡಿದರು.
ಶ್ವೇತಭವನವು ಅನ್ ಫಾಲೋ ಮಾಡಿರುವುದು ಕೇಳಿ ನನಗೆ ಆತಂಕ ಹಾಗೂ ಅಚ್ಚರಿಯಾಗಿದೆ. ಕುರಿತು ವಿದೇಶಾಂಗ ಸಚಿವಾಲಯ ಪರಿಶೀಲಿಸುವುದೇ?’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮೂಲಕ ಸರ್ಕಾರದ ಕಾಲೆಳೆದಿದ್ದರು.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವಿ ಮೇರೆಗೆ ಭಾರತವು ಮಲೇರಿಯಾ ರೋಗಕ್ಕೆ ನೀಡುವ ಹೈಡ್ರಾಕ್ಸಿಕ್ಲೊರೋಕ್ವಿನ್ ಮಾತ್ರೆ ಮತ್ತಿತರ ಔಷಧವನ್ನು ಕೊರೋನಾಸೋಂಕಿಗೆ ಚಿಕಿತ್ಸೆ ಒದಗಿಸುವ ಸಲುವಾಗಿ ಅಮೆರಿಕಕ್ಕೆ ಕಳುಹಿಸಿಕೊಟ್ಟಿತ್ತು. ಮಾತ್ರೆಗಳನ್ನು ಸ್ವೀಕರಿಸಿದ ಟ್ರಂಪ್ ಭಾರತದ ಸಹಾಯವನ್ನು ಎಂದೂ ಮರೆಯವುದಿಲ್ಲ ಎಂದು ಹೊಗಳಿದ್ದರು.

ಆದರೆ ಇದಾದ ಕೆಲವೇ ದಿನಗಳಲ್ಲಿ ಅಮೆರಿಕದ ಶ್ವೇತಭವನ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ ಮೂಲಕ ಪ್ರಧಾನಿ ಮೋದಿ, ಪ್ರಧಾನಿ ಕಚೇರಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ರಾಷ್ಟ್ರಪತಿ ಭವನ, ಅಮೆರಿಕದಲ್ಲಿರುವ ಭಾರತದ ರಾಯಭಾರ ಕಚೇರಿ ಹಾಗೂ ಭಾರತದಲ್ಲಿರುವ ಅಮೆರಿಕದ ರಾಯಭಾರ ಕಚೇರಿಯನ್ನು ಫಾಲೋ ಮಾಡತೊಡಗಿತ್ತು.

ಭಾರತದ ಪ್ರಮುಖ ಆರು ಅಕೌಂಟ್ಗಳನ್ನು ಫಾಲೋ ಮಾಡಿದ ಪರಿಣಾಮವಾಗಿ ಶ್ವೇತಭವನದ ಟ್ವಿಟ್ಟರ್ ಅಕೌಂಟ್ಗೆ ೨೧. ಮಿಲಿಯನ್ ಹೊಸ ಫಾಲೋವರ್ಸ್ಗಳು ಸೇರ್ಪಡೆಗೊಂಡಿದ್ದರು. ಅಲ್ಲದೇ ಶ್ವೇತಭವನ ಫಾಲೋ ಮಾಡುತ್ತಿದ್ದ ವಿದೇಶಿ ಅಕೌಂಟ್ಗಳ ಸಂಖ್ಯೆ ೧೯ ಕ್ಕೆ ಏರಿಕೆಯಾಗಿತ್ತು.

ಇದೀಗ ದಿಢೀರನೇ ತಾನು ಫಾಲೋ ಮಾಡುವ ವಿದೇಶಿ ನಾಯಕರ ಸಂಖ್ಯೆಯನ್ನು ೧೩ಕ್ಕೆ ಇಳಿಸಿಕೊಂಡಿರುವ ಶ್ವೇತಭವನ ತನ್ನ ಫಾಲೋವರ್ಸ್ಗಳ ಸಂಖ್ಯೆಯನ್ನು . ಮಿಲಿಯನ್ಗೆ ಕಡಿತ ಮಾಡಿಕೊಂಡಿತು. ಅಂದರೆ ಪ್ರಧಾನಿ ಮೋದಿ ಅವರನ್ನೂ ಸೇರಿಸಿ ಒಟ್ಟು ಆರು ಅಕೌಂಟ್ಗಳನ್ನು ಶ್ವೇತಭವನ ಅನ್ಫಾಲೋ ಮಾಡಿತ್ತು.

No comments:

Advertisement