My Blog List

Saturday, April 4, 2020

ದೆಹಲಿ ಮಸೀದಿಗಳಲ್ಲಿ ಅವಿತಿದ್ದಾರೆ ೮೦೦ಕ್ಕೂ ಹೆಚ್ಚು ತಬ್ಲಿಘಿ ಕಾರ್‍ಯಕರ್ತರು

ದೆಹಲಿ ಮಸೀದಿಗಳಲ್ಲಿ ಅವಿತಿದ್ದಾರೆ ೮೦೦ಕ್ಕೂ ಹೆಚ್ಚು ತಬ್ಲಿಘಿ ಕಾರ್‍ಯಕರ್ತರು

ನವದೆಹಲಿ: ಕೇಂದ್ರ ದೆಹಲಿಯ ತಬ್ಲಿಘಿ ಜಮಾತ್ ಕೇಂದ್ರ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ಆರೋಗ್ಯ ಕಾರ್‍ಯಕರ್ತರು ವಾರಾರಂಭದಲ್ಲಿ ,೩೦೦ ಮಂದಿಯನ್ನು ತೆರವುಗೊಳಿಸಿದಾಗ, ಪೊಲೀಸ್ ತನಿಖೆಗಳು ದೆಹಲಿಯ ಇತರ ಮಸೀದಿಗಳಲ್ಲಿ ಇನ್ನಷ್ಟು ವಿದೇಶೀಯರು ವಾಸ್ತವ್ಯದಲ್ಲಿದ್ದಾರೆ ಎಂಬ ತೀರ್‍ಮಾನಕ್ಕೆ ಬಂದಿದ್ದವು. ಆದರೆ ಈಗ ಹೀಗೆ ಇತರ ಮಸೀದಿಗಳಲ್ಲಿ ಅಡಗಿರುವವರ ಸಂಖ್ಯೆ ೮೦೦ನ್ನೂ ಮೀರಿದೆ ಎಂಬ ವರದಿಗಳು  2020 ಏಪ್ರಿಲ್ 04ರ ಶನಿವಾರ  ಬಂದಿದ್ದು ಇದು ಭಾರೀಕೋವಿಡ್ ಸ್ಫೋಟಅಪಾಯದ ಗಂಟೆಯನ್ನು ಮೊಳಗಿಸಿತು.

ಮಾರ್ಚ್ ೩೧ರಂದು ನಿಜಾಮುದ್ದೀನ್ ಪ್ರದೇಶದ ಮರ್ಕಜ್ ಕಟ್ಟಡವ ತೆರವು ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆಯೇ ದೆಹಲಿ ಪೊಲೀಸರು ದೆಹಲಿ ಸರ್ಕಾರಕ್ಕೆ ತುರ್ತು ಸಂದೇಶವನ್ನು ಕಳುಹಿಸಿ ನಗರದ ವಿವಿಧ ಮಸೀದಿಗಳಲ್ಲಿ ಇರುವ ಉಳಿದ ಜಮಾತ್ ಕಾರ್‍ಯಕರ್ತರನ್ನು ಪತ್ತೆ ಹಚ್ಚಲು ನೆರವು ನೀಡುವಂತೆ ಕೋರಿದ್ದರು. ಪೊಲೀಸ್ ಸಂದೇಶದಲ್ಲಿ ೧೬ ಮಸೀದಿಗಳನ್ನು ಪಟ್ಟಿ ಮಾಡಲಾಗಿತ್ತು.

ತನಿಖೆಗಾರರು ೧೮೭ ವಿದೇಶೀಯರು ಮತ್ತು ಸುಮಾರು ಎರಡು ಡಜನ್ ಭಾರತೀಯ ಪ್ರಜೆಗಳನ್ನು ಜಮಾತ್ ಕೇಂದ್ರ ಕಚೇರಿಯಿಂದ ಇತರ ಮಸೀದಿಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸುಳಿವು ನೀಡಿದ್ದರು.

ಆದರೆ ಲೆಕ್ಕಾಚಾರ ಸಂಪೂರ್ಣ ತಪ್ಪು ಎಂಬುದು ಈಗ ಬೆಳಕಿಗೆ ಬಂದಿದೆ.

ಪೊಲೀಸರು, ಆರೋಗ್ಯ ಕಾರ್‍ಯಕರ್ತರು ಮತ್ತು ನಾಗರಿಕ ಸೇವಕರನ್ನು ಒಳಗೊಂಡ ತಂಡಗಳು ನಾಲ್ಕು ದಿನಗಳಲ್ಲಿ ನಡೆಸಿದ ಒಗ್ಗಟ್ಟಿನ ಶೋಧ ಕಾರ್‍ಯಾಚರಣೆಯ ಪರಿಣಾಮವಾಗಿ ಇದೀಗ ರಾಷ್ಟ್ರ ರಾಜಧಾನಿಯಲ್ಲಿನ ಜಮಾತ್‌ಗೆ ಸಂಬಂಧಿಸಿದ ೮೦೦ಕ್ಕೂ ಹೆಚ್ಚು ವಿದೇಶೀಯರನ್ನು ಪತ್ತೆ ಹಚ್ಚಲಾಗಿದೆ. ಕೆಲವು ಮಸೀದಿಗಳಲ್ಲಿ ಶೋಧನೆಯನ್ನು ಅವರು ಇನ್ನೂ ಮಾಡಬೇಕಷ್ಟೇ.

೮೦೦ ಮಂದಿಯ ಪೈಕಿ ಹಲರಿಗೆ ಈಗಾಗಲೇ ಕೊರೋನಾವೈರಸ್ ಸೋಂಕು ಬಾಧಿಸಿರಬಹುದು, ಅಷ್ಟೇ ಅಲ್ಲ ಅಂತಹವರು ಇತರ ಅನೇಕರಿಗೂ ಸೋಂಕನ್ನು ಅಂಟಿಸಿರಬಹುದುಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಜಮಾತ್ ಕಾರ್‍ಯಕರ್ತರನ್ನು ಸರ್ಕಾರವು ರಾಜಧಾನಿಯಾದ್ಯಂತ ನಡೆಸುತ್ತಿರುವ ಹಲವಾರು ಕ್ವಾರಂಟೈನ್ ಘಟಕಗಳಿಗೆ ದಾಖಲಿಸಿದೆ. ಮಸೀದಿಗಳಲ್ಲಿ ಅಡಗಿದ್ದವರನ್ನು ಇನ್ನೂ ಪರೀಕ್ಷಿಸಬೇಕಾಗಿದೆ. ಒಂದೆರಡು ದಿನಗಳಲ್ಲಿ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ.

ದೆಹಲಿ ಸರ್ಕಾರದ ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಬೆಳವಣಿಗೆಯನ್ನು ದೃಢ ಪಡಿಸಿದ್ದಾರೆ. ಆದರೆ ಪತ್ತೆ ಹಚ್ಚಲಾಗಿರುವ ವಿದೇಶೀಯರ ಸಂಖ್ಯೆಯನ್ನು ತಾವು ಹೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ನಾವು, ಇನ್ನೂ ಕ್ಷೇತ್ರದಿಂದ  ಅಂತಿಮ ವರದಿ ಪಡೆಯುವ ಪ್ರಕ್ರಿಯೆಯಲ್ಲಿ ಇದ್ದೇವೆಎಂದು ಅವರು ನುಡಿದರು.

ಕೆಲವು ಜಿಲ್ಲೆಗಳಿಂದ ಕೆಲವು ಅಂಕಿಸಂಖ್ಯೆಗಳು ನಮಗೆ ಲಭಿಸಿವೆ. ಈಶಾನ್ಯ ಜಿಲ್ಲೆಯಲ್ಲಿ ೧೦೦ ವಿದೇಶೀಯರು, ಆಗ್ನೇಯ ಜಿಲ್ಲೆಯಲ್ಲಿ ೨೦೦, ದಕ್ಷಿಣ ಜಿಲ್ಲೆಯಲ್ಲಿ ೧೭೦ ಮತ್ತು ಪಶ್ಚಿಮ ಜಿಲ್ಲೆಯಲ್ಲಿ ಮಂದಿ ವಿದೇಶೀಯರು ಪತ್ತೆಯಾಗಿದ್ದಾರೆ ಎಂದು ಭದ್ರತಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಮರ್ಕಜ್ ಕಟ್ಟಡದಲ್ಲಿ ಲಭಿಸಿದ್ದ ರಿಜಿಸ್ಟರುಗಳಲ್ಲಿನ ಮಾಹಿತಿ ಮೂಲಕ ೨೧೦೦ ವಿದೇಶೀ ಪ್ರಜೆಗಳು ಮಾರ್ಚ್ ೧ರಿಂದ ೧೮ರ ನಡುವಣ ಅವಧಿಯಲ್ಲಿ ಮೂಲ ಕೇಂದ್ರವನ್ನು ತಲುಪಿದ್ದರು ಎಂಬುದನ್ನು ಭದ್ರತಾ ಸಂಸ್ಥೆಗಳು ಖಚಿತ ಪಡಿಸಿಕೊಂಡಿವೆ. ಪೈಕಿ ೨೧೬ ಮಂದಿ ತೆರವು ಕಾರ್‍ಯಾಚರಣೆ ವೇಳೆಯಲ್ಲಿ ಜಮಾತ್ ಕೇಂದ್ರ ಕಚೇರಿಯಲ್ಲಿ ಇದ್ದರು ಮತ್ತು ೮೨೪ ಮಂದಿಚಿಲಾಅಥವಾಮತಾಂತರಚಟುವಟಿಕೆಗಳಿಗೆ ಹೊರಟು ಬಿಟ್ಟಿದ್ದರು.

ಉಳಿದ ೯೦೦ಕ್ಕೂ ಹೆಚ್ಚು ವಿದೇಶೀಯರು ಬಹುತೇಕ ನಗರದಲ್ಲಿನ ಇತರ ಮಸೀದಿಗಳಲ್ಲಿ ಅಡಗಿದ್ದಾರೆ ಎಂಬುದು ನಮ್ಮ ನಂಬಿಕೆ. ಇವರ ಬಗ್ಗೆ ಬಗ್ಗೆ ಮುಂದಿನ ಕ್ರಮವೇನು ಎಂಬ ಬಗ್ಗೆ ನಮ್ಮಲ್ಲಿ ಇನ್ನೂ ಚಿಂತನೆ ನಡೆದಿದೆಎಂದು ಅವರು ನುಡಿದರು.

ಮರ್ಕಜ್ ನಿಂದ ಜಮಾತ್ ಕಾರ್‍ಯಕರ್ತರನ್ನು ಈವಾರ ತೆರವುಗೊಳಿಸಿದ ವೇಳೆಗಾಗಲೇ ೨೪ ಮಂದಿಗೆ ಕೊರೋನಾವೈರಸ್ ಸೋಂಕು ತಗುಲಿತ್ತು ಮತ್ತು ಸುಮಾರು ೨೦೦ ಮಂದಿಯಲ್ಲಿ ರೋಗಲಕ್ಷಣಗಳು ಕಾಣಿಸಿದ್ದವು ಎಂದು ಅಧಿಕಾರಿಗಳು ನೆನಪಿಸಿದರು. ದೆಹಲಿ ಸರ್ಕಾರಕ್ಕೆ ಎಲ್ಲ ಪರೀಕ್ಷಾ ವರದಿಗಳು ತಲುಪಿಲ್ಲ. ಆದರೆ ಮರ್ಕಜ್‌ಗೆ ಸಂಬಂಧಿಸಿದ ಪ್ರಕರಣಗಳು ಈಗಾಗಲೇ ದೆಹಲಿಯ ಒಟ್ಟು ಕೊರೋನಾವೈರಸ್ ರೋಗಿಗಳ ಮೂರನೇ ಎರಡರಷ್ಟು ಪ್ರಮಾಣಕ್ಕೆ ಏರಿವೆ ಎಂದು ದೆಹಲಿ ಸರ್ಕಾರದ ಮೂಲಗಳು ಹೇಳಿವೆ.

ಶನಿವಾರ ಸಂಜೆಯವರೆಗೆ ನಗರದಲ್ಲಿ ಕೊರೋನಾವೈರಸ್ ದೃಢಪಟ್ಟ ೩೮೬ ಪ್ರಕರಣಗಳನ್ನು ದೆಹಲಿ ಸರ್ಕಾರ ಲೆಕ್ಕ ಹಾಕಿದೆ.ಅವುಗಳ ಪೈಕಿ ೨೫೯ ಪ್ರಕರಣಗಳು ಮರ್ಕಜ್ ಮಸೀದಿಗೆ ಸಂಬಂಧಪಟ್ಟ ಪ್ರಕರಣಗಳು. ದೇಶದ ವಿವಿಧ ಭಾಗಗಳಿಂದ ಬಂದಿರುವ ವರದಿಗಳು ಪ್ರಕಾರ ನಿಜಾಮುದ್ದೀನ್ ಮರ್ಕಜ್ ಸಮಾವೇಶಕ್ಕೆ ಹಾಜರಾಗಿದ್ದ ಸಾಕಷ್ಟು ಮಂದಿಗೆ ಕೊರೋನಾವೈರಸ್ ಸೋಂಕು ತಗುಲಿದೆ.

ದೆಹಲಿಯಲ್ಲಿ ಸಂಭವಿಸಿದ ಕೊರೋನಾವೈರಸ್ ಸಾವುಗಳ ಪೈಕಿ ಸಾವುಗಳು ಕೂಡಾಕೊರೋನಾ ವೈರಸ್ ಹಾಟ್ ಸ್ಪಾಟ್ಎಂಬುದಾಗಿ ಪರಿಗಣಿತವಾಗಿರುವ ಮರ್ಕಜ್ ಸಮಾವೇದ ಜೊತೆ ಸಂಬಂಧ ಹೊಂದಿದೆ ಎಂದು ವರದಿಗಳು ಹೇಳಿವೆ.

No comments:

Advertisement