ಕಾಬೂಲ್ ಗುರುದ್ವಾರ ದಾಳಿ: ಸೂತ್ರಧಾರಿ ಫರೂಕಿ ಬಂಧನ
ಕಾಬೂಲ್ ಗುರುದ್ವಾರ ದಾಳಿ: ಸೂತ್ರಧಾರಿ ಫರೂಕಿ ಬಂಧನ
ನವದೆಹಲಿ: ಕಾಬೂಲ್ ಗುರುದ್ವಾರದ ಮೇಲೆ ಮಾರ್ಚ್ ೨೫ರಂದು ನಡೆದ ದಾಳಿಯ ಸೂತ್ರಧಾರಿ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾವಿನ್ಸ್ (ಐಎಸ್‌ಕೆಪಿ) ಭಯೋತ್ಪಾದಕ ಸಂಘಟನೆಯ ಸ್ವಯಂಘೋಷಿತ ಅಮೀರ್ ಮೌಲವಿ ಅಬ್ದುಲ್ಲ ಅಕ ಅಸ್ಲಂ ಫರೂಖಿಯನ್ನು ಅಪ್ಘನ್ ಭದ್ರತಾ ಪಡೆಗಳು 2020 ಏಪ್ರಿಲ್ 04ರ ಶನಿವಾರ ವಿಶೇಷ ಕಾರ್‍ಯಾಚರಣೆಯೊಂದರಲ್ಲಿ ಬಂಧಿಸಿದವು.
ಪಾಕಿಸ್ತಾನಿ ಪ್ರಜೆಯಾದ ಮೌಲವಿ ಅಬ್ದುಲ್ಲ ಈ ಹಿಂದೆ ಲಷ್ಕರ್-ಇ-ತಯ್ಬಾ(ಎಲ್ ಇಟಿ) ಮತ್ತು ಆಗಿನ ತೆಹ್ರೀಕ್ -ಇ- ತಾಲಿಬಾನ್ ಭಯೋತ್ಪಾದಕ ಗುಂಪುಗಳ ಜೊತೆಗೆ ಕೆಲಸ ಮಾಡಿದ್ದು,
೨೦೨೯ರ ಏಪ್ರಿಲ್‌ನಲ್ಲಿ ಮೌಲವಿ ಜಿಯಾ-ಉಲ್-ಹಕ್ ಅಕ ಅಬು ಒಮರ್ ಖೊರಾಸಾನಿ ಜಾಗದಲ್ಲಿ ಐಎಸ್ ಕೆಪಿ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡಿದ್ದ.
ಹಖ್ಖಾನಿ ಜಾಲ ಮತ್ತು ಎಲ್ ಇಟಿ ಸೂಚನೆ ಮೇರೆಗೆ ಕಾಸರಗೋಡಿನ ನಿವಾಸಿ ಮುಶಿನ್ ಟಿಕಾರಿಪುರ ಮತ್ತು ಇನ್ನೊಬ್ಬ ಉರ್ದು ಪಂಜಾಬಿ ಮಾತನಾಡುವ ವ್ಯಕ್ತಿಯನ್ನು ಬಳಸಿಕೊಂಡು ಮೌಲವಿ ಫರೂಕಿ, ಕಾಬೂಲಿನ ೨೭ ಮಂದಿ ಮುಗ್ಧ ಸಿಕ್ ಪುರುಷರು ಹಾಗೂ ಮಹಿಳೆಯರನ್ನು ಕಾಬೂಲಿನ ಶೋರ್ ಬಜಾರ್ ಪ್ರದೇಶದ ಗುರುದ್ವಾರದಲ್ಲಿ ಕೊಲ್ಲಿಸಿದ್ದ. ಹತ್ಯಾಕಾಂಡದಲ್ಲಿ ಕಾಸರಗೋಡಿನ ಯುವಕನಾದ ಮುಶಿನ್ ಸಾವನ್ನಪ್ಪಿದ್ದು, ಆತನ ತಾಯಿಗೆ ಮಗನ ಸಾವಿನ ಬಗ್ಗೆ ತಿಳಿಸಲಾಗಿತ್ತು.
No comments:
Post a Comment