My Blog List

Saturday, April 4, 2020

ಕೊರೊನಾ ವಿರುದ್ಧ ಅಮೆರಿಕಾ-ಭಾರತ ಒಗ್ಗಟ್ಟಿನ ಹೋರಾಟ

ಕೊರೊನಾ ವಿರುದ್ಧ ಅಮೆರಿಕಾ-ಭಾರತ ಒಗ್ಗಟ್ಟಿನ ಹೋರಾಟ
ನವದೆಹಲಿ:  ಜಾಗತಿಕ ತಲ್ಲಣ ಸೃಷ್ಟಿಸಿರುವ ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಒಗ್ಗೂಡಿ ಹೋರಾಡಲು ಭಾರತ ಮತ್ತು ಅಮೆರಿಕಾ ನಿರ್ಧರಿಸಿವೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ೨೦೨೦ ಏಪ್ರಿಲ್ ೦೪ರ ಶನಿವಾರ ಪ್ರಧಾನಿ ನರೇಂದ್ರ ಮೋದಿ ಸುದೀರ್ಘ ಮಾತುಕತೆ ನಡೆಸಿದರು. ಈ ವೇಳೆ ಕೋವಿಡ್-೧೯ ವಿರುದ್ಧ ಎರಡೂ ರಾಷ್ಟ್ರಗಳು ತಮ್ಮ ಸಹಭಾಗಿತ್ವವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ನಿರ್ಧಾರಕ್ಕೆ ಬಂದವು.

‘ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸುದೀರ್ಘ ದೂರವಾಣಿ ಸಂಭಾಷಣೆ ನಡೆಸಿದೆ. ನಾವು ಉತ್ತಮ ಚರ್ಚೆ ನಡೆಸಿದೆವು ಮತ್ತು ಕೋವಿಡ್-೧೯ ವಿರುದ್ಧ ಹೋರಾಡಲು ಭಾರತ - ಅಮೆರಿಕಾ ಸಹಭಾಗಿತ್ವದ ಸಂಪೂರ್ಣ ಶಕ್ತಿಯನ್ನು ಬಳಸಿಕೊಳ್ಳಲು ಒಪ್ಪಿದೆವು’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ಟೀಟ್ ಮಾಡಿದರು.

No comments:

Advertisement