My Blog List

Monday, April 27, 2020

ಆರ್ಥಿಕ ಚಟುವಟಿಕೆಗೆ ಕಿಕ್, ಕೊರೋನಾಕ್ಕೂ ಬ್ರೇಕ್, ದ್ವಿಮುಖ ತಂತ್ರದತ್ತ ಮೋದಿ ಚಿತ್ತ

ಆರ್ಥಿಕ ಚಟುವಟಿಕೆಗೆ ಕಿಕ್,  ಕೊರೋನಾಕ್ಕೂ  ಬ್ರೇಕ್,  ದ್ವಿಮುಖ ತಂತ್ರದತ್ತ ಮೋದಿ ಚಿತ್ತ
ನವದೆಹಲಿ: ಜನರ ಪ್ರಾಣಗಳ ರಕ್ಷಣೆಯ ಜೊತೆಗೇ ಕೊರೋನಾವೈರಸ್ಸಿನಿಂದಾಗಿ ವಸ್ತುಶಃ ಸ್ಥಗಿತಗೊಂಡಿರುವ ಆರ್ಥಿಕತೆಯ ಪುನಾರಂಭಕ್ಕೆ ಅವಕಾಶ ನೀಡುವಂತಹ ದ್ವಿಮುಖ ತಂತ್ರವನ್ನು ರೂಪಿಸುವತ್ತ ಭಾರತ ಗಮನ ಹರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಏಪ್ರಿಲ್ 27ರ ಸೋಮವಾರ ಇಲ್ಲಿ ರಾಜ್ಯ ಮುಖ್ಯಮಂತ್ರಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸಿನಲ್ಲಿ ಹೇಳಿದರು.

ಎಲ್ಲ ಮುಖ್ಯಮಂತ್ರಿಗಳು ಅಥವಾ ಅವರ ಪ್ರತಿನಿಧಿಗಳು ವಿಡಿಯೋ ಸಂವಹನದಲ್ಲಿ ಪಾಲ್ಗೊಂಡಿದ್ದರು. ಸಮಯಾಭಾವದ ಕಾರಣ ಪಾಲ್ಗೊಂಡಿದ್ದವರ ಪೈಕಿ ಮಂದಿಗೆ ಮಾತ್ರ ಮಾತನಾಡಲು ಅವಕಾಶ ಲಭಿಸಿತು.

ತನ್ನ ಅಭಿಪ್ರಾಯ ವ್ಯಕ್ತ ಪಡಿಸಲು ಅವಕಾಶ ಪಡೆದ ಮೇಘಾಲಯ ಸಾಂಕ್ರಾಮಿಕ ಹರಡದಂತೆ ತಡೆಯುವ ಸಲುವಾಗಿ ಘೋಷಿಸಲಾಗಿರುವ ರಾಷ್ಟ್ರವಾಪಿ ದಿಗ್ಬಂಧನವನ್ನು ಮೇ ೩ರ ಆಚೆಗೂ ವಿಸ್ತರಿಸಬೇಕು ಎಂದು ಸಲಹೆ ಮಾಡಿತು. ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳು ನಿರ್ಬಂಧಗಳು ಇರಬೇಕು ಎಂದು ಕೋರಿದವು, ಆದರೆ ನಿರ್ಣಯವನ್ನು ಪ್ರಧಾನಿಗೆ ಬಿಟ್ಟವು ಎಂದು ಅಧಿಕಾರಿಗಳು ತಿಳಿಸಿದರು.

ಮಿಜೋರಂ, ಪುದುಚೆರಿ, ಉತ್ತರಾಖಂಡ, ಒಡಿಶಾ, ಬಿಹಾರ ಮತ್ತು ಹರಿಯಾಣ ದಿಗ್ಬಂಧನ ತೆರವುಗೊಳಿಸಲು ಬೆಂಬಲ ನೀಡಿದವು. ಪ್ರಧಾನಿ ಮೋದಿಯವರು ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಮಾರ್ಚ್ ೨೫ರಂದು ಜಾರಿಗೊಳಿಸಿದ್ದರು. ಬಳಿಕ ಅದನ್ನು ಮೇ ೩ರವರೆಗೆ ವಿಸ್ತ್ತರಿಸಿದ್ದರು.

ಜನರ ಜೀವಗಳು ಮತ್ತು ಬದುಕಗಳನ್ನು ಸಮತೊಲನಗೊಳಿಸುವುದು ಭಾರತ ಎದುರಿಸುತ್ತಿರುವ ಪ್ರಮುಖ ಸವಾಲು ಎಂದು ತಮ್ಮ ಭಾಷಣದಲ್ಲಿ ಪ್ರಧಾನಿ ಹೇಳಿದರು. ಆರ್ಥಿಕ ಚಟುವಟಿಕೆ ಸ್ಥಗಿತಗೊಂಡದ್ದರಿಂದ ಅಸಂಘಟಿತ ವಲಯಗಳ ಕಾರ್ಮಿಕರು ಭವಿಷ್ಯ ಅಯೋಮಯವಾಗಿದೆ ಮತ್ತು ಸಂಘಟಿತ ವಲಯದಲ್ಲಿ ಕೂಡಾ ಲಕ್ಷಾಂತರ ಉದ್ಯೋಗಗಳು ಸಮಸ್ಯೆಗೆ ಸಿಲುಕಿವೆ. ಇದೇ ವೇಳೆಗೆ ಆರೋಗ್ಯ ರಕ್ಷಣಾ ಸಿಬ್ಬಂದಿ ಮುಂಚೂಣಿಯಲ್ಲಿ ನಿಂತುಕೊಂಡು ರೋಗ ಪ್ರಸರಣವನ್ನು ತಗ್ಗಿಸಲು ಹೋರಾಟ ನಿರತರಾಗಿದ್ದಾರೆ ಎಂದು ಪ್ರಧಾನಿ ನುಡಿದರು.

ಒಂದೆಡೆಯಲ್ಲಿ ನಾವು ಜೀವಗಳನ್ನು ರಕ್ಷಿಸುವ ಬಗೆ ಹೇಗೆ ಎಂಬ ಸವಾಲು ಎದುರಿಸುತ್ತಿದ್ದೇವೆ. ಅದಕ್ಕೆ ಸರಿಸಮಾನವಾಗಿ ನಾವು ಇದರ ಆರ್ಥಿಕ ಪರಿಣಾಮದ ಬಗೆಗೂ ಗಮನ ಹರಿಸಬೇಕಾಗಿದೆ. ಹೀಗಾಗಿ ನಾವು ನಮ್ಮ ಆರ್ಥಿಕ ಚಟುವಟಿಕೆಗಳನ್ನು ಬಲಪಡಿಸಬೇಕಾಗಿದೆ.. (ಮತ್ತು) ವೈರಸ್ ವಿರುದ್ಧದ ನಮ್ಮ ಹೋರಾಟದ ಬಲವನ್ನೂ ಹೆಚ್ಚಿಸಬೇಕಾಗಿದೆಎಂದು ಪ್ರಧಾನಿ ಹೇಳಿದರು ಎಂದು ಮೂಲವೊಂದು ತಿಳಿಸಿತು.

ರೋಗದಿಂದ ಬಾಧಿತವಾದ ಕ್ಷೇತ್ರಗಳು ಆರ್ಥಿಕ ರಂಗದಲ್ಲೂ ಗರಿಷ್ಠ ಮಟ್ಟದ ಪರಿಣಾಮವನ್ನು ಅನುಭವಿಸುತ್ತವೆ. ಏಪ್ರಿಲ್ ೨೦ರಿಂದ ಷರತ್ತಿನ ಮತ್ತು ಸೀಮಿತ ಚಟುವಟಿಕೆಗಳ ಪುನಾರಂಭದೊಂದಿಗೆ ಭಾರತದ ಸವಾಲುಗಳೂ ಹೆಚ್ಚಾಗಿವೆ. ಇದು ಕ್ಷೇತ್ರಗಳಲ್ಲಿ ಹೊಸ ಮಾದರಿಯ ಸವಾಲುಗಳಿಗೆ ಕಾರಣವಾಗಿದೆಯೇ ಎಂಬುದಾಗಿ ನಾವು ವಿಶ್ಲೇಷಿಸಬೇಕಾಗಿದೆ ಎಂದು ಪ್ರಧಾನಿ ನುಡಿದರು.

ಸರ್ಕಾರವು ವಿಂಗಡಿಸಿರುವ ಹಸಿರು ವಲಯ (ಪ್ರಕರಣ ರಹಿತ), ಕಿತ್ತಳೆ ವಲಯ (ಕೆಲವು ಪ್ರಕರಣಗಳು) ಮತ್ತು ಕೆಂಪು ವಲಯ (ಅತ್ಯಂತ ಹೆಚ್ಚಿನ ಪ್ರಕರಣಗಳು) - ಮೂರು ವಲಯಗಳಲ್ಲಿ ಅನುಸರಿಸಬೇಕಾದ ತಂತ್ರಗಳ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಮೋದಿ ಹೇಳಿದರು.

ರೆಡ್ ಝೋನ್ ಅಥವಾ ಕೆಂಪು ವಲಯಗಳು ಮತ್ತು ಹಾಟ್ ಸ್ಪಾಟ್‌ಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಪ್ರದೇಶಗಳಲ್ಲಿ ನಾವು ವಿಶೇಷ ತಂಡಗಳನ್ನು ರಚಿಸಬೇಕು ಎಂದು ನನ್ನ ಅನಿಸಿಕೆಎಂದು ಪ್ರಧಾನಿ ನುಡಿದರು.

ಕನಿಷ್ಠ ಎರಡು ಯಾರ್ಡ್‌ಗಳಷ್ಟು ಸಾಮಾಜಿಕ ಅಂತರ ಪಾಲನೆ ಸಮಯದ ಅಗತ್ಯವಾಗಿದೆ. ಸೋಂಕು ವೇಗವಾಗಿ ಹರಡುತ್ತಿರುವ ಹೊತ್ತಿನಲ್ಲಿ ಅಧಿಕಾರಿಗಳು ಸಾಮಾಜಿಕ ಅಂತರ ಪಾಲನೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ಮೋದಿ ಪುನರುಚ್ಚರಿಸಿದರು. ಮುಖಗವಸುಗಳನ್ನು ಧರಿಸುವ ಅಗತ್ಯವನ್ನೂ ಅವರು ಪ್ರತಿಪಾದಿಸಿದರು.

 ದೊ ಗಜ್ ದೂರಿ (ಎರಡು ಯಾರ್ಡ್‌ಗಳ ಅಂತರ) ಎಂಬುದು ಎಲ್ಲರ ಮಂತ್ರವಾಗಬೇಕು ಸಂದೇಶವನ್ನು ನಾವು ಹರಡುತ್ತಾ ಹೋಗಬೇಕು ಮತ್ತು ಇದು ನಮ್ಮೆಲ್ಲರಿಗೆ ಜೀವನದ ಪಾಠವಾಗಬೇಕು. ಇದೇ ರೀತಿ ಮುಖಗಸುಗಳು ನಮ್ಮ ಬದುಕಿನ ಪ್ರಮುಖ ಪಾಠವಾಗಬೇಕುಎಂದು ಪ್ರಧಾನಿ ಹೇಳಿದರು.

ಸೋಂಕಿನ ಸಂಖ್ಯೆಗಳನ್ನು ಆದರಿಸಿ ರಾಜ್ಯಗಳ ವಿರುದ್ಧ ಯಾವುದೇ ತಾರತಮ್ಯ ಇರಬಾರದು. ಎಲ್ಲರನ್ನೂ ಸಮಾನವಾಗಿ ಕಾಣಬೇಕುಎಂದು ಮೋದಿ ನುಡಿದರು.

ಅತ್ಯಂತ ವಿನಯಪೂರ್ವಕವಾಗಿ ನಾನು ಮುಖ್ಯಮಂತ್ರಿಗಳಿಗೆ ಹೇಳಬಯಸುತ್ತೇನೆ, ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ನಿಮ್ಮ ರಾಜ್ಯವನ್ನು ತಪ್ಪಿತಸ್ಥ ಎಂಬುದಾಗಿ ನೋಡಲಾಗುವುದಿಲ್ಲ. ನಿಮ್ಮ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದಲ್ಲಿ, ನಿಮ್ಮನ್ನು ಮಹಾನ್ (ಸಾಧಕ) ಎಂಬುದಾಗಿಯೋ ನೋಡುವುದಿಲ್ಲ. ಇಂತಹ ಮನಃಸ್ಥಿತಿಯನ್ನು ನಾವು ಬಯಸುವುದಿಲ್ಲಎಂದು ಪ್ರಧಾನಿ ಹೇಳಿದರು.

ಸಾಂಕ್ರಾಮಿಕದ ಹೊರತಾಗಿ ಋತುಮಾನದ ರೋಗಗಳನ್ನು ನಿಭಾಯಿಸುವ ನಿಟ್ಟಿನಲ್ಲೂ ಸನ್ನದ್ಧರಾಗಿರಿ ಎಂದು ಆರೋಗ್ಯ ರಂಗದ ಅಧಿಕಾರಿಗಳಿಗೆ ಮೋದಿ ಸಲಹೆ ಮಾಡಿದರು.

ಜೂನ್ ತಿಂಗಳಲ್ಲಿ ನಿರ್ದಿಷ್ಟವಾಗಿ ಉಷ್ಣ ಸಂಬಂಧಿತ ರೋಗಗಳು ಕಾಡುತ್ತವೆ. ನಿಟ್ಟಿನಲ್ಲಿ ನಮ್ಮ ವ್ಯವಸ್ಥೆಗಳು ಸಿದ್ಧವಾಗಿರಬೇಕು. ಕೆಲವು ವ್ಯದ್ಯರು ತಮ್ಮ ಕ್ಲಿನಿಕ್‌ಗಳನ್ನು ಮುಚ್ಚಿದ್ದಾರೆ. ಅವರು ಮತ್ತೆ ಕಾರ್‍ಯಮಗ್ನರಾಗುವಂತೆ ನಾವು ಮಾಡಬೇಕು. ಕೊರೋನಾವೈರಸ್ ಕಾರಣಕ್ಕಾಗಿ ಎಲ್ಲ ಸೇವೆಗಳು ನಿಲ್ಲಬಾರದುಎಂದು ಪ್ರಧಾನಿ ನುಡಿದರು.

No comments:

Advertisement