Monday, April 27, 2020

ಮ್ಯೂಚುವಲ್ ಫಂಡ್‌ಗೆ ರಿಸರ್ವ್ ಬ್ಯಾಂಕಿನಿಂದ ಅಗ್ಗದ ಸಾಲ

ಮ್ಯೂಚುವಲ್ ಫಂಡ್‌ಗೆ ರಿಸರ್ವ್ ಬ್ಯಾಂಕಿನಿಂದ
೫೦ ಸಾವಿರ ಕೋಟಿ ರೂಪಾಯಿ ಅಗ್ಗದ ಸಾಲ
ನವದೆಹಲಿ: ಹೂಡಿಕೆ ನಗದೀಕರಿಸುವಂತೆ ಮ್ಯೂಚುವಲ್ ಫಂಡ್‌ಗಳ ಮೇಲೆ ಹೂಡಿಕೆದಾರರಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಹಣದ ದ್ರವ್ಯತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ ಮ್ಯೂಚುವಲ್ ಫಂಡ್ ಸಂಸ್ಥೆಗಳಿಗೆ ೫೦,೦೦೦ ಕೋಟಿ ರೂಪಾಯಿಗಳ ವಿಶೇಷ ಅಗ್ಗದ ಸಾಲ ಒದಗಿಸುವ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2020 ಏಪ್ರಿಲ್ 27ರ ಸೋಮವಾರ ನೆರವಿನ ಹಸ್ತ ಚಾಚಿತು.

ಕಳೆದ ವಾರ ಅಮೆರಿಕ ಮೂಲದ ಫ್ರ್ಯಾಂಕ್ಲಿನ್ ಟೆಂಪಲ್ಟನ್ ಕಂಪನಿಯು ತನ್ನ ಆರು ಮ್ಯೂಚುವಲ್ ಫಂಡ್‌ಗಳನ್ನು  ರದ್ದು ಪಡಿಸಿದ ಪರಿಣಾಮವಾಗಿ ಮ್ಯೂಚುವಲ್ ಫಂಡ್ ಹಣಹೂಡಿಕೆದಾರರಲ್ಲಿ ತಲ್ಲಣ ಸೃಷ್ಟಿಯಾಗಿತ್ತು.

ಇದರ ಜೊತೆಗೆ ಕೋವಿಡ್-೧೯ ಹಿನ್ನೆಲೆಯಲ್ಲಿ ಆರಂಭವಾದ ದಿಗ್ಬಂಧನದಿಂದ (ಲಾಕ್ ಡೌನ್) ಮ್ಯೂಚುವಲ್ ಫಂಡ್ ವಲಯದಲ್ಲಿ ಹೂಡಿಕೆ ಹಿಂಪಡೆಯುವ ಒತ್ತಡ ಹೆಚ್ಚಾಗತೊಡಗಿತ್ತು.

ಕಾರಣಗಳಿಂದಾಗಿ ಆತಂPಕ್ಕೆ ಒಳಗಾಗಿದ್ದ ಹೂಡಿಕೆದಾರರ ವಿಶ್ವಾಸ ಸಂವರ್ಧನೆಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿಶೇಷ ನೆರವು ಒದಗಿಸುವ ಕ್ರಮ ಕೈಗೊಂಡು, ಮ್ಯೂಚುವಲ್ ಫಂಡಿಗಾಗಿ ೫೦,೦೦೦ ಕೋಟಿ ರೂಪಾಯಿಗಳ ವಿಶೇಷ ಹಣದ ದ್ರವ್ಯತೆಯ ಸೌಲಭ್ಯವನ್ನು (ಸ್ಪೆಶ್ಯಲ್ ಲಿಕ್ವಿಡಿಟಿ ಫೆಸಿಲಿಟಿ) ಘೋಷಿಸಿತು.  

ರಿಸರ್ವ್ ಬ್ಯಾಂಕ್ ಘೋಷಣೆಯ ಪ್ರಕಾರ, ೯೦ ದಿನಗಳ ರೆಪೊ ಕಾರ್ಯಾಚರಣೆಯನ್ನು ನಿಗದಿತ ರೆಪೊ ದರದಲ್ಲಿ (ಹಣಕಾಸು ಸಂಸ್ಥೆಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ) ನಡೆಸಲಾಗುತ್ತದೆ. ಯೋಜನೆಯು ಮೇ ೧೧ ರವರೆಗೆ ಅಥವಾ ನಿಗದಿತ ಮೊತ್ತ ಸಂಪೂರ್ಣ ಬಳಕೆಯಾಗುವವರೆಗೂ ಲಭ್ಯವಿರುತ್ತದೆ ಎಂದು ಆರ್‌ಬಿಐ ಹೇಳಿದೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿರುವ ಆರ್ಥಿಕತೆಗೆ ಚೇತರಿಕೆ ನೀಡುವುದು ಇದರ ಹಿಂದಿನ ಉದ್ದೇಶವಾಗಿದೆ. ಹೂಡಿಕೆದಾರರ ಆತಂಕ ಕಡಿಮೆ ಮಾಡಲು ಶೀಘ್ರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮ್ಯೂಚುವಲ್ ಫಂಡ್ ಸಂಸ್ಥೆಗಳಿಗೆ ಅಗತ್ಯ ಹಣದ ದ್ರವ್ಯತೆಗಾಗಿ ೫೦,೦೦೦ ಸಾವಿರ ಕೋಟಿ ರೂಪಾಯಿಗಳ ಹಣವನ್ನು ಅಗ್ಗದ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ ಎಂದು ಕೇಂದ್ರೀಯ ಬ್ಯಾಕ್ ತಿಳಿಸಿತು.

ಸುದೀರ್ಘ ದಿಗ್ಬಂಧನದಿಂದಾಗಿ ಆರ್ಥಿಕ ಹೊಡೆತಕ್ಕೆ ಸಿಲುಕಿರುವ ವಿವಿಧ ವಲಯಗಳ ರಕ್ಷಣೆಗೆ ರಿಸರ್ವ್ ಬ್ಯಾಂಕ್ ಈಗಾಗಲೇ ಮುಂದಾಗಿತ್ತು. ಇದೀಗ ಮ್ಯೂಚುವಲ್ ಫಂಡ್‌ಗೂ ಆರ್ ಬಿಐ ಅಭಯಹಸ್ತ ಲಭಿಸಿದೆ.

ಚಿದಂಬರಂ ಸ್ವಾಗತಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡಿರುವ ೫೦,೦೦೦ ಕೋಟಿ ರೂಪಾಯಿಗಳ ನೆರವಿನ ನಿರ್ಧಾರವನ್ನು ಮಾಜಿ ಹಣಕಾಸು ಸಚಿ, ಕಾಂಗೆಸ್ ನಾಯಕ ಪಿ.ಚಿದಂಬರಂ ಸೇರಿದಂತೆ ಹಲವು ಆರ್ಥಿಕ ತಜ್ಞರು ಶ್ಲಾಘಿಸಿದರು.

No comments:

Advertisement