My Blog List

Friday, April 17, 2020

ಹೊಸದಾಗಿ ಸೇರಿದರು ಇವರು ಚೀನಾ ಕೊರೋನಾ ಸಾವಿನ ಪಟ್ಟಿಗೆ – ಹೇಗೆ?

ಹೊಸದಾಗಿ ಸೇರಿದರು ಇವರು ಚೀನಾ ಕೊರೋನಾ ಸಾವಿನ ಪಟ್ಟಿಗೆ ಹೇಗೆ?
ನವದೆಹಲಿ: ಕಮ್ಯೂನಿಸ್ಟ್ ಆಡಳಿತದ ಚೀನಾ ಎಂದಿಗೂ ಪಾರದರ್ಶಕವಲ್ಲ ಎಂಬುದಾಗಿ ಜಗತ್ತಿನ ಇತರ ರಾಷ್ಟ್ರಗಳ ನಿರಂತರ ಆರೋಪದ ಮಧ್ಯೆ ಅದನ್ನು ಪುಷ್ಟೀಕರಿಸುವಂತಹ ರೀತಿಯಲ್ಲಿ ಚೀನಾ ತನ್ನ ಕೋವಿಡ್ -೧೯ ಸೋಂಕಿನ ಮೃತರ ಸಂಖ್ಯೆಯನ್ನು  2020 ಏಪ್ರಿಲ್ 17ರ ಶುಕ್ರವಾರ ಏಕಾಏಕಿ ಪರಿಷ್ಕರಿಸಿತು,.

ಕೊರೋನಾವೈರಸ್ ಸಾವು-ನೋವುಗಳ ವಿವರವನ್ನು ಚೀನಾ ಮುಚ್ಚಿಟ್ಟಿದೆ ಎಂಬುದಾಗಿ ಅಮೆರಿಕ ಸೇರಿದಂತೆ ಅನೇಕ ದೇಶಗಳು ಆರೋಪ ಮಾಡಿರುವುದರ ನಡುವೆಯೇ, ಕೊರೋನಾಸೋಂಕಿಗೆ ಬಲಿಯಾದ ತನ್ನ ಪ್ರಜೆಗಳ ಪಟ್ಟಿಯನ್ನು ಚೀನಾ ಪರಿಷ್ಕರಿಸಿ ಅದಕ್ಕೆ ೧೦೦೦ಕ್ಕೂ ಹೆಚ್ಚು ಜನರ ಹೆಸರುಗಳನ್ನು ಸೇರ್ಪಡೆ ಮಾಡಿದೆ.

ಪರಿಷ್ಕೃತ ಪಟ್ಟಿಯ ಪ್ರಕಾರ ಕೊರೋನಾ ವೈರಸ್ ಮೊದಲ ದಾಂಗುಡಿ ಇಟ್ಟ ವುಹಾನ್ ಪ್ರಾಂತ್ಯದಲ್ಲಿ ಸಾವಿನ ಸಂಖ್ಯೆ ಶೇ. ೫೦ರಷ್ಟು ಹೆಚ್ಚಾಗಿದೆ.

ಚೀನಾ ಹಿಂದೆ ನೀಡಿದ್ದ ಮಾಹಿತಿ ಪ್ರಕಾರ, ದೇಶದಲ್ಲಿನ ಒಟ್ಟಾರೆ ಕೊರೋನಾ ಸಾವಿನ ಸಂಖ್ಯೆ ,೩೩೨ ಇತ್ತು. ವುಹಾನ್ ಪ್ರಾಂತ್ಯದಲ್ಲಿ ,೫೭೯ ಮಂದಿ ಸತ್ತಿದ್ದಾರೆ ಎಂದು ವರದಿಯಾಗಿತ್ತು. ಬಳಿಕ ಚೀನಾ ಆಡಳಿತ ಮತ್ತೆ ಪುನರ್ಪರಿಶೀಲನೆ ನಡೆಸಿ ವುಹಾನ್ ನಗರದಲ್ಲಿ ,೨೯೦ ಮಂದಿಯನ್ನು ಪಟ್ಟಿಗೆ ಹೊಸದಾಗಿ ಸೇರಿಸಿತು.

ಇಷ್ಟು ಜನರು ಕೊರೋನಾದಿಂದ ಸಾವನ್ನಪ್ಪಿದರೆಂಬ ಮಾಹಿತಿ ಆಡಳಿತಕ್ಕೆ ಸಿಕ್ಕಿರಲಿಲ್ಲ. ಈಗ ಅದು ಬೆಳಕಿಗೆ ಬಂದಿರುವುದರಿಂದ ಪಟ್ಟಿ ಪರಿಷ್ಕರಣೆ ಮಾಡಲಾಯಿತು ಎಂದು ಚೀನಾ ಪ್ರತಿಪಾದಿಸಿದೆ.
ಹೊಸ ಸೇರ್ಪಡೆ ಬಳಿಕ ಚೀನಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ ,೬೩೨ಕ್ಕೆ ಏರಿದೆ. ಚೀನಾದಲ್ಲೇ ಮೊದಲು ವೈರಸ್ ಹರಡಿದ್ದರೂ, ಇಲ್ಲಿ ನಿರೀಕ್ಷೆಗಿಂತ ಬೇಗ ತಹಬದಿಗೆ ಬಂದಿರುವುದು ಅಚ್ಚರಿ ತಂದಿದೆ.

ಪ್ರಸ್ತುತ ವಿಶ್ವಾದ್ಯಂತ ೨೦ ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ -೧೯ ಸೋಂಕು ತಗುಲಿದೆ. ಹೆಚ್ಚೂಕಡಿಮೆ ಒಂದೂವರೆ ಲಕ್ಷ ಜನರು ಅಸು ನೀಗಿದ್ಧಾರೆ. ಅಮೆರಿಕದಲ್ಲಿ ರುದ್ರತಾಂಡವ ಆಡುತ್ತಿರುವ ಕೋವಿಡ್-೧೯, ಆರೂಮುಕ್ಕಾಲು ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಕಾಣಿಸಿಕೊಂಡು ೩೪ ಸಾವಿರಕ್ಕೂ ಹೆಚ್ಚು ಮಂದಿಯನ್ನು ಆಹುತಿ ತೆಗೆದುಕೊಂಡಿದೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೨೨,೦೮,೮೨೧, ಸಾವು ,೪೮,೭೪೧
ಚೇತರಿಸಿಕೊಂಡವರು- ,೫೮,೭೧೫
ಅಮೆರಿಕ ಸೋಂಕಿತರು ,೭೯,೭೬೨, ಸಾವು ೩೪,೭೦೫
ಸ್ಪೇನ್ ಸೋಂಕಿತರು ,೮೪,೯೪೮, ಸಾವು ೧೯,೩೧೫
ಇಟಲಿ ಸೋಂಕಿತರು ,೬೮,೯೪೧ ಸಾವು ೨೨,೧೭೦
ಜರ್ಮನಿ ಸೋಂಕಿತರು ,೩೮,೩೬೯, ಸಾವು ,೧೦೫
ಚೀನಾ ಸೋಂಕಿತರು ೮೨,೬೯೨, ಸಾವು ,೬೩೨
ಇಂಗ್ಲೆಂಡ್ ಸೋಂಕಿತರು ,೦೮,೬೯೨, ಸಾವು ೧೪,೫೭೬
ಚೀನಾದಲ್ಲಿ ೧೨೯೦ (ಹೊಸ ಸೇರ್ಪಡೆ), ಬೆಲ್ಜಿಯಂನಲ್ಲಿ ೩೦೬, ಇಂಗ್ಲೆಂಡಿನಲ್ಲಿ ೮೪೭, ಒಟ್ಟಾರೆ ವಿಶ್ವಾದ್ಯಂತ ,೨೭೦ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement