ಮನುಷ್ಯನ ದುರಾಸೆಗೆ ಸ್ಥಗಿತವಾಯಿತು ಜೀವನ ‘ಚಕ್ರ..!’
(ಇದು ಸುವರ್ಣ ನೋಟ)
ಕೊರೋನಾವೈರಸ್ ಎಂಬ ಸೂಕ್ಷ್ಮ ವೈರಾಣು ವಾಸ್ತವವಾಗಿ ಕೆಲವು ಪ್ರಾಣಿ- ಪಕ್ಷಿ, ಸಸ್ತನಿ ಜಾತಿಯ ಬಾವಲಿಗಳಲ್ಲಿ ಇರುತ್ತದೆ ಎಂಬುದು ಇತ್ತೀಚಿನ ವರದಿ. ವೈರಿಯನ್ನು ಮಣಿಸಲು ಈ ವೈರಾಣುವನ್ನು ಜೈವಿಕ ಅಸ್ತ್ರವಾಗಿ ಬಳಸಬಹುದೇ ಎಂಬ ಬಗ್ಗೆ ಅಧ್ಯಯನ ನಡೆಸುತ್ತಿದ್ದ ರಾಷ್ಟ್ರಗಳಲ್ಲಿ ಚೀನಾ ಕೂಡಾ ಒಂದು. ಇಂತಹ ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸಲು ಚೀನಾ ಸ್ಥಾಪಿಸಿದ ಇಂತಹ ಒಂದು ಪ್ರಯೋಗಾಲಯ ವುಹಾನ್ ನಗರದ ಮಾರುಕಟ್ಟೆಯ ಪಕ್ಕದಲ್ಲೇ ಇದೆ.
ಈಗ ಬಂದಿರುವ ಹಲವು ಮೂಲಗಳನ್ನು ಉಲ್ಲೇಖಿಸಿರುವ ವರದಿಯೊಂದರ ಪ್ರಕಾರ ವೈರಸ್ಸಿನ ಬಗ್ಗೆ ವಿದ್ಯಾರ್ಥಿನಿಯೊಬ್ಬಳು ಅಧ್ಯಯನ ನಡೆಸುತ್ತಿದ್ದಾಗ ಅದು ಸೋರಿಕೆಯಾಗಿ ಆಕೆಯ ದೇಹವನ್ನು ಪ್ರವೇಶಿಸಿದ್ದೇ ಜಗತ್ತಿನಾದ್ಯಂತ ಇಂದು ಉಂಟಾಗಿರುವ ಮಹಾವಿಪ್ಲವಕ್ಕೆ ಕಾರಣವಂತೆ.
ಈ ವಿದ್ಯಾರ್ಥಿನಿಯಿಂದ ಆಕೆಯ ಬಾಯ್ ಫ್ರೆಂಡ್ ದೇಹವನ್ನು ಪ್ರವೇಶಿಸಿದ ಈ ವೈರಾಣು ಬಳಿಕ ಇವರು ವುಹಾನ್ ಪ್ರಾಣಿ ಮಾರುಕಟ್ಟೆಗೆ ಹೋದಾಗ ಇತರರಿಗೂ ಸೋಂಕಿತು. ಅಲ್ಲಿಂದ ಶುರುವಾಯಿತು ವೈರಾಣುವಿನ ರಣಯಾತ್ರೆ ಎಂಬುದು ಇತ್ತೀಚೆಗಿನ ವರದಿ.
ಕೊರೋನಾವೈರಸ್ಸಿನ ಈ ರಣಯಾತ್ರೆಯ ಪರಿಣಾಮವಾಗಿ ಈಗ ಇಡೀ ವಿಶ್ವವೇ ಸ್ಥಗಿತಗೊಂಡಿದೆ. ಜೀವನ ‘ಚಕ್ರ’ ನಿಂತೇ ಬಿಟ್ಟಿದೆ. ದುಡಿದು ಬದುಕು ಸಾಗಿಸುವ ಕೈಗಳು ಹೊತ್ತು ಊಟಕ್ಕಾಗಿ ಕೈಗಳನ್ನು ಚಾಚುತ್ತಿವೆ. ಅನ್ನ ಸಿಕ್ಕರೆ ಸಾಕು ಗಬಗಬನೆ ಉಂಡು ಬಳಿಕ ಮಾಡಲು ಬೇರೆ ಕೆಲಸವಿಲ್ಲದೆ ನಂತರದ ಊಟ ವಿತರಣೆಯ ಸಾಲಿನಲ್ಲಿ ಹೋಗಿ ಸೇರಿಕೊಳ್ಳುವ ಬದುಕು ಹಲವರದಾಗಿದೆ.
ನಿರ್ಜನ ರಸ್ತೆಗೆ ತಳ್ಳುಗಾಡಿಯ ‘ಫ್ರೇಮ್’ ಬಿದ್ದಿದೆ.
ಬೆಂಗಳೂರಿನ
ಬದುಕಿನ ‘ಚಕ್ರ’ ವಿಧಾನಸೌಧದ ಮುಂದೆಯೇ ಹೇಗೆ
ಸ್ಥಗಿತಗೊಂಡಿದೆ
ಎಂಬುದನ್ನು
ಹೇಳುವ ದೃಶ್ಯದ ಜೊತೆಗೆ ಇತರ
ನೋಟಗಳನ್ನು ಸೆರೆ ಹಿಡಿದಿದ್ದಾರೆ ಹಿರಿಯ
ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ.
ಸಮೀಪ
ದೃಶ್ಯದ ಅನುಭವಕ್ಕೆ ಫೊಟೋಗಳನ್ನು ಕ್ಲಿಕ್ಕಿಸಿ.
ಅಂದಹಾಗೆ, ವಾಟ್ಸಪ್ ಗಳಲ್ಲಿ ಹರಿದಾಡುತ್ತಿರುವ ಈ
ವಿಡಿಯೋ ವಿಶ್ವಾದ್ಯಂತ ‘ಜೀವನ ಚಕ್ರ’
ಸ್ಥಗಿತಗೊಂಡಿರುವುದನ್ನು
ತೋರಿಸುತ್ತದೆ.
ಕ್ಲಿಕ್ ಮಾಡುವ
ಮೂಲಕ ಮನುಷ್ಯನ ದುರಾಸೆಗೆ ಸಿಕ್ಕಿದ ಫಲದ
ಕಥೆಯನ್ನೂ ವೀಕ್ಷಿಸಿ.
No comments:
Post a Comment