Monday, April 6, 2020

ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ನಿಧನ

ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ನಿಧನ
ಬೆಂಗಳೂರು: ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ (೪೪) ಅವರು 2020 ಏಪ್ರಿಲ್ 06 ಸೋಮವಾರ  ನಿಧನರಾದರು.. ಅನಾರೋಗ್ಯದಿಂದ ಬಳಲುತ್ತಿದ್ದ ಬುಲೆಟ್ ಪ್ರಕಾಶ್ ಅವರು ನಗರದ ಫೋರ್ಟೀಸ್ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು.

ಬುಲೆಟ್ ಪ್ರಕಾಶ್ ಅವರು ಬಹು ಅಂಗಾಗ ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿದ್ದರು.  ಈದಿನ ಬೆಳಿಗ್ಗೆಯಿಂದಲೇ ಪ್ರಕಾಶ್ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಾ ಹೋಗಿತ್ತು. ಬುಲೆಟ್ ಪ್ರಕಾಶ್ ಅವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದರು.

ಕನ್ನಡ ಚಿತ್ರರಂಗದ ವಿಶಿಷ್ಟ ಹಾಸ್ಯನಟ: ಇದುವರೆಗೂ ೩೦೦ಕ್ಕೂ ಅಧಿಕ ಕನ್ನಡ ಸಿನೇಮಾಗಳಲ್ಲಿ ಅಭಿನಯಿಸಿರುವ ಬುಲೆಟ್ ಪ್ರಕಾಶ್ ಅವರು ತಮ್ಮ ವಿಶಿಷ್ಟ ದೇಹ ಮತ್ತು ಮ್ಯಾನರಿಸಂ ಮೂಲಕ ಚಿತ್ರರಸಿಕರ ಮನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಸಾಧು ಕೋಕಿಲ ಹಾಗೂ ಬುಲೆಟ್ ಪ್ರಕಾಶ್ ಕಾಮಿಡಿ ಕಾಂಬಿನೇಷನ್ ಹಲವು ಕನ್ನಡ ಚಿತ್ರಗಳಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿತ್ತು.

೨೦೧೫ರಲ್ಲಿ ಬುಲೆಟ್ ಪ್ರಕಾಶ್ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

No comments:

Advertisement