Monday, April 13, 2020

ಭಾರತ: ೯೩೦೦ ದಾಟಿದ ಕೊರೋನಾ ಪ್ರಕರಣ, ೩೨೪ ಸಾವು

ಭಾರತ: ೯೩೦೦ ದಾಟಿದ ಕೊರೋನಾ ಪ್ರಕರಣ, ೩೨೪ ಸಾವು
೨೫ ಜಿಲ್ಲೆಗಳಲ್ಲಿ ವಾರದಿಂದ ಹೊಸ ಕೇಸ್‌ ಇಲ್ಲ
ನವದೆಹಲಿ: ಭಾರತದಲ್ಲಿ ಮಾರಕ ಕೊರೋನಾವೈರಸ್ ಪಾಸಿಟಿವ್ ಪ್ರಕರಣಗಳು ,೩೦೦ನ್ನು ದಾಟಿದ್ದು, ಹೊಸದಾಗಿ ೫೧ ಮಂದಿ ಸಾವನ್ನಪ್ಪುವುದರೊಂದಿಗೆ ಮಾರಕ ವೈರಸ್ಸಿಗೆ ಬಲಿಯಾದವರ ಸಂಖ್ಯೆ ೩೨೪ಕ್ಕೆ ಏರಿದೆ. ಆದರೆ ೧೫ ಬಾಧಿತ ರಾಜ್ಯಗಳ ೨೫ ಜಿಲ್ಲೆಗಳಲ್ಲಿ ಒಂದೇ ಒಂದು ಹೊಸ ಪ್ರಕರಣ ವರದಿಯಾಗದೇ ಇರುವುದು ಆಶಾದಾಯಕ ಬೆಳವಣಿಗೆ ಎಂದು ಕೇಂದ್ರ ಸರ್ಕಾರ 2020 ಏಪ್ರಿಲ್ 13ರ ಸೋಮವಾರ ತಿಳಿಸಿತು.

ದೇಶದಲ್ಲಿ ಕೊರೋನಾಸೋಂಕು ತಗುಲಿದ ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ ,೯೮೭ ಆಗಿದ್ದು, ೮೫೬ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಇಲ್ಲವೇ ವಲಸೆ ಹೋಗಿದ್ದಾರೆ. ಒಟ್ಟು ಪ್ರಕರಣಗಳಲ್ಲಿ ೭೨ ವಿದೇಶೀಯರು ಸೇರಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿತು.

ಭಾನುವಾರ ಸಂಜೆಯ ಬಳಿಕ ವರದಿಯಾಗಿರುವ ೫೧ ಸಾವಿನ ಪ್ರಕರಣಗಳಲ್ಲಿ ೨೨ ಪ್ರಕರಣಗಳು ಮಹಾರಾಷ್ಟ್ರದಿಂದ, ಪ್ರಕರಣಗಳು ದೆಹಲಿಯಿಂದ, ಮೂರು ಪ್ರಕರಣಗಳು ಗುಜರಾತಿನಿಂದ, ಎರಡು ಪ್ರಕರಣಗಳು ಪಶ್ಚಿಮ ಬಂಗಾಳದಿಂದ ಹಾಗೂ ತಲಾ ಒಂದು ಪ್ರಕರಣ ತಮಿಳುನಾಡು, ಜಾರ್ಖಂಡ್ ಮತ್ತು ಆಂದ್ರಪ್ರದೇಶದಿಂದ ವರದಿಯಾದವು.

ಭಾರತದಲ್ಲಿ ಕೋವಿಡ್-೧೯ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಇದ್ದರೂ, ಕೊರೋನಾಸೋಂಕಿನ ಬಾಧೆಗೆ ಗುರಿಯಾಗಿರುವ ೧೫ ರಾಜ್ಯಗಳ ೨೫ ಜಿಲ್ಲೆಗಳಿಂದ ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂಬುದು ಗಮನಾರ್ಹ ಎಂದು ಕೇಂದ್ರ ಸರ್ಕಾರ ಬೊಟ್ಟು ಮಾಡಿತು.

ಹಿಂದೆ ಕೊರೋನಾವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದ ೧೫ ರಾಜ್ಯಗಳ ೨೫ ಜಿಲ್ಲೆಗಳಲ್ಲಿ ಕಳೆದ ೧೪ ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್‍ಯದರ್ಶಿ ಲವ ಅಗರವಾಲ್ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ನುಡಿದರು.

ಕಳೆದ ೨೪ ಗಂಟೆಗಳಲ್ಲಿ ಹೊಸ ೭೯೬ ಕೋವಿಡ್-೧೯ ಪ್ರಕರಣಗಳು ಮತ್ತು ೫೧ ಸಾವುಗಳು ವರದಿಯಾಗಿವೆ. ೧೯೮೫ ಪಾಸಿಟಿವ್ ಪ್ರPರಣಗಳೊಂದಿಗೆ ಅತ್ಯಂತ ಹೆಚ್ಚು ಬಾಧಿತ ರಾಜ್ಯಗಳಲ್ಲಿ ಮಹಾರಾಷ್ಟ್ರ ಈಗಲೂ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ,೧೫೪ ಪ್ರಕರಣಗಳೊಂದಿಗೆ ದೆಹಲಿ ೨ನೇ ಸ್ಥಾನದಲ್ಲೂ , ೧೦೪೩ ಸ್ಥಾನಗಳೊಂದಿಗೆ ತಮಿಳುನಾಡು ಮೂರನೇ ಸ್ಥಾನದಲ್ಲೂ ಮುಂದುವರೆದಿ. ಮುಂಬೈಯಲ್ಲಿ ೧೫೦ ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಅಗರವಾಲ್ ಹೇಳಿದರು.

ಕೋವಿಡ್ -೧೯ಕ್ಕೆ ಸಂಬಂಧಿಸಿದ ಮುಖ್ಯ ಕಾರ್‍ಯತಂತ್ರ ತಂಡವು (ಕೋರ್ ಸ್ಟ್ರಾಟಜಿ ಗ್ರೂಪ್) ಆಣ್ವಿಕ ಕಣ್ಗಾವಲು (ಮಾಲೆಕ್ಯುಲರ್ ಸರ್ವಿಲೆನ್ಸ್) ತ್ವರಿತ  ಮತ್ತು ಮಿತವೆಚ್ಚದ ರೋಗ ನಿರ್ಣಯ ಸಲಕರಣೆ ಮತ್ತು ಹೊಸ ಔಷಧಗಳ ಬಗ್ಗೆ ತೀವ್ರವಾಗಿ ಕಾರ್‍ಯ ನಿರತವಾಗಿದೆ ಎಂದು ಅವರು ನುಡಿದರು.

ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪರೀಕ್ಷಾ ಕಿಟ್‌ಗಳು ಇವೆ. ಪರೀಕ್ಷಾ ವೇಗವನ್ನು ಇನ್ನಷ್ಟು  ಹೆಚ್ಚಿಸಲಾಗುತ್ತಿದೆ ಎಂದೂ ಅವರು ಹೇಳಿದರು.

ಭಾನುವಾರ ನಾವು ,೦೬,೨೧೨ ಕೋವಿಡ್-೧೯ ಪರೀಕ್ಷೆಗಳನ್ನು ನಡೆಸಿದ್ದೇವೆ. ಚಿಂತಿಸುವ ಅಗತ್ಯವಿಲ್ಲ. ನಮ್ಮ ಬಳಿ ವಾರಗಳಿಗೆ ಸಾಕಾಗುವಷ್ಟು ಪರೀಕ್ಷಾ ಕಿಟ್‌ಗಳ ದಾಸ್ತಾನು ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಹಿರಿಯ ವಿಜ್ಞಾನಿ ರಮಣ್ ಗಂಗಾಖೇಡ್ಕರ್ ನುಡಿದರು.

ಚೀನಾದಿಂದ ಕೋವಿಡ್ -೧೯ ಪರೀಕ್ಷಾ ಕಿಟ್‌ಗಳ ಮೊದಲ ಸರಕು ಮಂಗಳವಾರ ಬರಲಿದೆ ಎಂದೂ ಗಂಗಾ ಖೇಡ್ಕರ್ ಹೇಳಿದರು.

ಭಾರತವು ಇತ್ತೀಚೆಗೆ ಹಲವಾರು ಖಾಸಗಿ ಪ್ರಯೋಗಾಲಯಗಳಿಗೂ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡುವ ಮೂಲಕ ಪರೀಕ್ಷೆಗಳನ್ನು ತ್ವರಿತಗೊಳಿಸಿದೆ. ಆದರೆ ಪರೀಕ್ಷಾ ಸವಲತ್ತುಗಳು ಹೆಚ್ಚುತ್ತಿದ್ದಂತೆಯೇ ಕಳಪೆ ಪರೀಕ್ಷೆಗಳು ಕೋವಿಡ್-೧೯ರ ಜೊತೆಗಿನ ಸಮರದಲ್ಲಿ ಅಪಾಯವನ್ನು ತಂದೊಡ್ಡಬಹುದು ಎಂಬ ಭೀತಿಯೂ ಎದುರಾಗಿದೆ.

ಸಾಂಕ್ರಾಮಿಕದ ನೈಜ ಪ್ರಮಾಣವನ್ನು ಅರಿಯಲು ಹೆಚ್ಚು ಪರೀಕ್ಷೆಗಳನ್ನು ನಡೆಸುವುದು ಮಾತ್ರವೇ ಪರಿಹಾರ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್ ) ಮುನ್ನ ಹೇಳಿತ್ತು.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿರು ೧೮,೭೩,೮೭೯, ಸಾವು ,೧೬,೦೪೬
ಚೇತರಿಸಿಕೊಂಡವರು- ,೩೫,೧೮೫
ಅಮೆರಿಕ ಸೋಂಕಿತರು ,೬೧,೧೬೪, ಸಾವು ೨೨,೧೩೪
ಸ್ಪೇನ್ ಸೋಂಕಿತರು ,೬೯,೪೯೬, ಸಾವು ೧೭,೪೮೯
ಇಟಲಿ ಸೋಂಕಿತರು ,೫೬,೩೬೩, ಸಾವು ೧೯,೮೯೯
ಜರ್ಮನಿ ಸೋಂಕಿತರು ,೨೭,೮೫೪, ಸಾವು ,೦೨೨
ಚೀನಾ ಸೋಂಕಿತರು ೮೨,೧೬೦, ಸಾವು ,೩೪೧
ಇಂಗ್ಲೆಂಡ್ ಸೋಂಕಿತರು ೮೮,೬೨೧, ಸಾವು ೧೧,೩೨೯
ಸ್ಪೇನಿನಲ್ಲಿ ೨೮೦, ಬೆಲ್ಜಿಯಂನಲ್ಲಿ ೩೦೩, ಇಂಗ್ಲೆಂಡಿನಲ್ಲಿ ೭೧೭, ಒಟ್ಟಾರೆ ವಿಶ್ವಾದ್ಯಂತ ,೮೫೨ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement