My Blog List

Monday, April 6, 2020

ಕಾಶ್ಮೀರ: ೫ ನುಸುಳುಕೋರರ ಹತ್ಯೆ, ಐವರು ಯೋಧರು ಹುತಾತ್ಮ, ಉಗ್ರರ ನುಗ್ಗಿಸಲು ಪಾಕ್ ಸಂಚು

ಕಾಶ್ಮೀರ:  ೫ ನುಸುಳುಕೋರರ ಹತ್ಯೆ, ಐವರು ಯೋಧರು ಹುತಾತ್ಮ, ಉಗ್ರರ ನುಗ್ಗಿಸಲು ಪಾಕ್ ಸಂಚು

ನವದೆಹಲಿ: ಇಡೀ ವಿಶ್ವದ  ದೃಷ್ಟಿ ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧದ ಸಮರಕ್ಕಾಗಿ ಕೇಂದ್ರೀಕೃತವಾಗಿರುವ ಹೊತ್ತಿನಲ್ಲೇ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳಾದ ಲಷ್ಕರ್--ತೊಯ್ಬಾ ಮತ್ತು ಜೈಶ್--ಮೊಹಮ್ಮದ್ ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಆಚೆ ಪಾಕಿಸ್ತಾನದ ಲಾಂಚ್ ಪ್ಯಾಡ್‌ಗಳಲ್ಲಿ ಭಯೋತ್ಪಾದಕರ ಜಮಾವಣೆಗೆ ಆರಂಭಿಸಿವೆ.

ಭಾನುವಾರ ನಡೆದ ಮೊದಲ ನುಸುಳುವಿಕೆ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದ್ದು ಕಾರ್‍ಯಾಚರಣೆಯಲ್ಲಿ ಐವರು ಭಯೋತ್ಪಾದಕರನ್ನು ಕೊಲ್ಲಲಾಗಿದೆ, ಕಾರ್‍ಯಾಚರಣೆಯಲ್ಲಿ ಸೇನೆಯ ಐವರು ಕಮಾಂಡರುಗಳೂ ಹುತಾತ್ಮರಾಗಿದ್ದಾರೆ ಎಂದು ಸೇನಾ ಮೂಲಗಳು 2020 ಏಪ್ರಿಲ್ 06ರ ಸೋಮವಾರ ತಿಳಿಸಿದವು.

ಗಡಿಯಾಚೆಯಿಂದ ಪ್ರಸ್ತುತ ವರ್ಷದ ಬೇಸಿಗೆಯಲ್ಲಿ ಮೊತ್ತ ಮೊದಲಿಗೆ ಗಡಿದಾಟಲು ಯತ್ನಿಸಿದ ಮೊದಲ ತಂಡಗಳ ಪೈಕಿ ಒಂದನ್ನು ಕುಪ್ವಾರದಲ್ಲಿನ ಸೈನಿಕರು ತಡೆದು ಸದ್ದಡಗಿಸಿದ್ದಾರೆ ಎಂದು  ಜಮ್ಮು -ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ ಬಾಗ್ ಸಿಂಗ್ ಹೇಳಿದರು.

ಮುರೀದ್ಕೆ ಮೂಲದ ಭಯೋತ್ಪಾದಕ ಗುಂಪು ಉತ್ತರ ಕಾಶ್ಮೀರದ ಉರಿ, ಕರ್ನಾ, ಕೇರನ್ ಮತ್ತು ಕಲಾ ರೂಸ್ ವಿಭಾಗಗಲ್ಲಿ ಭಯೋತ್ಪಾದಕರನ್ನು ನುಸುಳಿಸಲು ಸಜ್ಜಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥರು ಹೇಳಿದರು.

ಪೀರ್ ಪಂಜಾಲದ ದಕ್ಷಿಣ ಭಾಗ ಪರಿಸ್ಥಿತಿ ಕೂಡಾ ಮೆಂಧರ್, ಬಾಲಾಕೋಟ್, ಸಾವಜಿಯಾನ್, ನೌಶೇರಾ, ಸಾಂಬಾ ಮತ್ತು ಹೀರಾನಗರ ವಿಭಾಗಗಳಲ್ಲಿ ನುಸುಳುವಿಕೆಯ ಯತ್ನಗಳ ಪರಿಣಾಮವಾಗಿ ಪ್ರಕ್ಷುಬ್ಧವಾಗಿದೆ ಎಂದು ಅವರು ನುಡಿದರು.

ಕಳೆದ ಮೂರು ತಿಂಗಳ ಅವಧಿಯಲ್ಲಿ ಸುಮಾರು ೫೦ ಮಂದಿ ಭಯೋತ್ಪಾದಕರನ್ನು ಭಾರತೀಯ ಪಡೆಗಳು ತಟಸ್ಥಗೊಳಿಸಿರುವ ಹಿನ್ನೆಲೆಯಲ್ಲಿ  ಭಯೋತ್ಪಾದನೆಗೆ ಮತ್ತೆ ಬಲತುಂಬುವ ಸಲುವಾಗಿ ಕಾಶ್ಮೀರದಲ್ಲಿ ನಸುಳುವಿಕೆ ಯತ್ನಗಳಿಗೆ ಪಾಕಿಸ್ತಾನ ಮತ್ತೆ ಇಂಬು ನೀಡಿದೆ.

ಭದ್ರತಾ ಮೂಲಗಳ ಅಂದಾಜಿನ ಪ್ರಕಾರ ಕನಿಷ್ಠ ೨೪೨ಕ್ಕೆ ಕಡಿಮೆಯಿಲ್ಲದಷ್ಟು ಭಯೋತ್ಪಾದಕರು ಕಣಿವೆಯಲ್ಲಿ ಸಕ್ರಿಯರಾಗಿದ್ದಾರೆ. ಅವರ ಪೈಕಿ ೧೦೦ ಮಂದಿ ಲಷ್ಕರ್ ಮತ್ತು ಜೈಶ್--ಮೊಹಮ್ಮದ್ ಸಂಘಟನೆಗೆ ಸೇರಿದ ವಿದೇಶೀ ಭಯೋತ್ಪಾದಕರು.

ಮಾಹಿತಿಗಳ ಪ್ರಕಾರ ಲಷ್ಕರ್ ಸಂಘಟನೆಯು ನಸುಳುವಿಕೆಗೆ ಉತ್ತರ ಕಾಶ್ಮೀರದ ಮಾರ್ಗಗಳನ್ನು ಬಳಸಲು ಯತ್ನಿಸುತ್ತಿದ್ದು, ಜೈಶ್--ಮೊಹಮ್ಮದ್ ಗುಂಪುಗಳು ಜಮ್ಮು ವಿಭಾಗದ ಮೂಲಕ ನುಸುಳುವ ಯತ್ನದಲ್ಲಿವೆ.

ಕುಪ್ವಾರ ವಿಭಾಗದಲ್ಲಿ ಗಡಿಯಾಚೆ ತಟ್ಟಪಾಣಿಯಲ್ಲಿನ ಲಾಂಚ್ ಪ್ಯಾಡ್‌ಗಳಲ್ಲಿ ಶೂಗಳು ಮತ್ತು ಆಹಾರ ಸಂಗ್ರಹಿಸಿ ಇಟ್ಟಿರುವುದರ ಚಿತ್ರಗಳು ಲಭ್ಯವಾಗಿವೆ. ಇದು ನುಸಳುವಿಕೆ ಚಟುವಟಿಕೆ ಮುಂದಿನ ದಿನಗಳಲ್ಲಿ ತೀವ್ರಗೊಳ್ಳಲಿರುವುದರ ಸೂಚನೆ. ಪರ್ವತ ಪ್ರದೇಶದ ಕಣಿವೆಗಳಲ್ಲಿ ಹಿಮ ಕರಗಿದಾಗ ನುಸುಳುವಿಕೆ ಯತ್ನಗಳು ಆರಂಭವಾಗಬಹುದು ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಹೇಳಿದರು.

ಉಗ್ರಗಾಮಿತ್ವದತ್ತ ಸ್ಥಳೀಯ ಯುವಕರು ಒಲವು ಹೊಂದಿದ್ದರೂ, ಶಸ್ತ್ರಾಸ್ತ್ರಗಳ ಕೊರತೆ ಮತ್ತು ಸಂಪರ್ಕ ನಿಷೇಧದ ಪರಿಣಾಮವಾಗಿ ಭಯೋತ್ಪಾದಕ ಗುಂಪುಗಳಿಗೆ ಅವರನ್ನು ನೇಮಕ ಮಾಡಿಕೊಳ್ಳಲು ಸಾದ್ಯವಾಗಿಲ್ಲ ಎಂದು ಭಯೋತ್ಪಾದನೆ ನಿಗ್ರಹ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕಾಶ್ಮೀರದಲ್ಲಿ ಕಳೆದ ಆಗಸ್ಟ್ ಆದಿಯಲ್ಲಿ ರಾಜ್ಯದ ವಿಶೇಷ ಸ್ಥಾನಮಾನ ರದ್ದುಪಡಿಸುವ ನಿರ್ಧಾರವನ್ನು ಸಂಸತ್ತು ಕೈಗೊಳ್ಳುವುದಕ್ಕೆ ಸ್ವಲ್ಪ ಮುನ್ನ ಸಂಪರ್ಕ ದಿಗ್ಬಂಧನ ಜಾರಿಗೊಳಿಸಲಾಗಿತ್ತು. ಸಂದರ್ಭದಲ್ಲಿ ವಿಧಿಸಲಾಗಿದ್ದ ಇಂಟರ್ ನೆಟ್ ನಿಷೇಧ ಬಳಿಕ ಸರ್ಕಾರವು ಜನರಿಗೆ ೨ಜಿ ಮೊಬೈಲ್ ಜಾಲ ಬಳಸಲು ಅವಕಾಶ ನೀಡಿದಾಗ ಸಡಿಲಗೊಂಡಿತ್ತು. ಬಳಿಕ ಪ್ರದೇಶದಲ್ಲಿ ೪ಜಿ ಜಾಲದ ಪುನಃಸ್ಥಾಪನೆಗೆ ಜನರ ಆಗ್ರಹ ಕೇಳಿ ಬರುತ್ತಿದೆ.

ಆದಾಗ್ಯೂ, ಇಂಟರ್ ನೆಟ್ ಸಂಪರ್ಕದ ಮೇಲಿನ ನಿರ್ಬಂಧಗಳನ್ನು ಮುಂದುವರೆಸುವಂತೆ ಭದ್ರತಾ ಸಂಸ್ಥೆಗಳು ಸರ್ಕಾರಕ್ಕೆ ಸೂಚಿಸಿವೆ. ಭಯೋತ್ಪಾದಕರು ಪತ್ತೆ ಹಚ್ಚಲು ಕಷ್ಟಕರವಾದ ವೈರ್, ಟೆಲಿಗ್ರಾಂ ಮತ್ತು ಕೋನಿಯನ್ ಮಾದ್ಯಮಗಳನ್ನು ಸಂಪರ್ಕಕ್ಕಾಗಿ ಬಳಸುವ ಸಾದ್ಯತೆ ಇದೆ. ಇವುಗಳ ಬಳಕೆಗೆ -ಜಿ ಜಾಲ ಬೇಕಾಗುತ್ತದೆಯಾದ್ದರಿಂದ ಹಾಲಿ ನಿಯಂತ್ರಣಗಳನ್ನು ಮುಂದುವರೆಸಬೇಕು ಎಂದು ಭದ್ರತಾ ಸಂಸ್ಥೆಗಳು ಹೇಳಿವೆ.

ಘರ್ಷಣೆ: ಸೇನಾ ಕಮಾಂಡರ್‌ಗಳು ಹುತಾತ್ಮ,

ಮಧ್ಯೆ, ಭಾನುವಾರ ಕಾಶ್ಮೀರದ ಕೇರನ್ ವಿಭಾಗದ ಗಡಿ ನಿಯಂತ್ರಣ ರೇಖೆಯಲ್ಲಿ ಸೇನೆಯ ವಿಶೆಷ ಪಡೆಗಳ ಐವರು ಕಮಾಂಡರ್‌ಗಳು ಭಯೋತ್ಪಾದಕ ನುಸುಳುಕೋರರ ಜೊತೆಗಿನ ಘರ್ಷಣೆಯಲ್ಲಿ ಹುತಾತ್ಮರಾಗಿದ್ದು ಅಷ್ಟೇ ಸಂಖ್ಯೆಯ ಭಯೋತ್ಪಾದಕರೂ ಹತರಾಗಿದ್ದಾರೆ.

ಸೇನಾ ಕಮಾಂಡರ್‌ಗಳ ಪಾರ್ಥಿವ ಶರೀರ ಮತ್ತು ಭಯೋತ್ಪಾದಕರ ಶವಗು ಪರಸ್ಪರ ಕೇವಲ ಎರಡರಿಂದ ಮೂರು ಮೀಟರ್ ಗಳ ಅಂತರದಲ್ಲಿ ಪತ್ತೆಯಾಗಿವೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಅತ್ಯುಗ್ರ ಮುಖಾಮುಖಿ ಘರ್ಷಣೆಯಲ್ಲಿ ಎಲ್ಲ ಐದೂ ಮಂದಿ ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂದು ಸೋಮವಾರ ಸೇನೆಯ ಹೇಳಿಕೆಯೊಂದು ತಿಳಿಸಿದೆ.

ಪಾಕಿಸ್ತಾನ ಬೆಂಬಲಿತ ನುಸುಳುಕೋರರನ್ನು ಹಿಮ್ಮೆಟಿಸುವ ಕಾರ್‍ಯಾಚರಣೆಯನ್ನು ಭಾರತೀಯ ಸೇನೆ ಕೈಗೊಂಡಿತ್ತು. ಐವರ ತಂಡ ಭಾರೀ ಮಂಜಿನ ಮುಸುಕಿನಲ್ಲಿ ನುಸುಳಲು ಯತ್ನಿಸಿತ್ತು. ಪ್ಯಾರಾ ಎಸ್ ಎಫ್ ಘಟಕದ ವೃತ್ತಿಮರ ಜ್ಯೂನಿಯರ್ ಕಮಿಷನ್ಡ್ ಅಧಿಕಾರಿಯ ನೇತೃತ್ವದಲ್ಲಿ ನಾಲ್ವರು ಯೋಧರನ್ನು ಹೆಲಿಕಾಪ್ಟರ್ ಮೂಲಕ ಇಳಿಸಿ, ಉಗ್ರಗಾಮಿಗಳ ನುಸಳುವಿಕೆಯನ್ನು ತಡೆಯಲಾಯಿತು ಎಂದು ಸೇನೆ ತಿಳಿಸಿದೆ.

ಭಯೋತ್ಪಾದಕರ ನುಸುಳುವಿಕೆಯ ಮಾಹಿತಿ ಲಭಿಸಿದ ಬಳಿಕ ಕಾರ್‍ಯಚರಣೆ ನಡೆಸಲಾಯಿತು ಎಂದು ಸೇನಾ ಮೂಲಗಳು ಹೇಳಿವೆ.

ಮೂವರು ಕಮಾಂಡೋಗಳು ಕಾಳಗ ನಡೆದ ಸ್ಥಳದಲ್ಲಿಯೇ ಹುತಾತ್ಮರಾಗಿದ್ದರೆ, ಉಳಿದ ಇಬ್ಬರು ಸೇನಾ ಆಸ್ಪತ್ರೆಗೆ ಸೇರಿಸಿದ ಬಳಿಕ ಅಸು ನೀಗಿದರು ಎಂದು ಮೂಲಗಳು ಹೇಳಿವೆ.


No comments:

Advertisement