ಕೊರೋನಾ
ಕಾಟದ ಮಧ್ಯೆ ದೆಹಲಿಯಲ್ಲಿ ಲಘು ಭೂಕಂಪ
ನವದೆಹಲಿ:
ದೆಹಲಿ ಹಾಗೂ ಸುತ್ತ ಮುತ್ತಣ ಪ್ರದೇಶದಲ್ಲಿ 2020 ಏಪ್ರಿಲ್ 12ರ ಭಾನುವಾರ ಲಘು ಭೂಕಂಪ ಸಂಭವಿಸಿತು.
ಭೂಕಂಪದ ಕೇಂದ್ರ ಬಿಂದು ದೆಹಲಿ-ಉತ್ತರಪ್ರದೇಶ ಗಡಿ
ಪ್ರದೇಶ ಎಂದು ಗುರುತಿಸಲಾಯಿತು.
ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ ೩.೫ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ ೩.೫ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸಂಜೆ
೫.೪೫ರ ಸುಮಾರಿಗೆ ಸಂಭವಿಸಿದ ಲಘು ಭೂಕಂಪದಲ್ಲಿ ಯಾವುದೇ ಜೀವಹಾನಿ ಅಥವಾ ಅಸ್ತಿ, ಪಾಸ್ತಿ ಹಾನಿಯಾಗಿಲ್ಲ.
ಕೋವಿಡ್ ೧೯ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಘೋಷಿಸಿದ್ದರಿಂದ ಜನರು ಮನೆಗಳಲ್ಲಿ ಇದ್ದರು.
ಲಘು
ಭೂಕಂಪ ಸಂಭವಿಸಿದ ಘಟನೆ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಅಪ್ ಡೇಟ್ ಮಾಡುವ ಮೂಲಕ ಸುದ್ದಿಯನ್ನು
ಹಂಚಿಕೊಂಡಿರುವುದಾಗಿ ವರದಿ ತಿಳಿಸಿತು.
ಬಳಿಕ
ಭೂಕಂಪದ ವಿಷಯ ತಿಳಿಸಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ‘ಎಲ್ಲರೂ
ಸುರಕ್ಷಿರಾಗಿದ್ದಾರೆ ಎಂದು ಭಾವಿಸುವೆ’ ಎಂದು ಹೇಳಿದರು.
No comments:
Post a Comment