ಕೇಂದ್ರ ‘ಯೂ’ ಟರ್ನ್: ಇ-ಕಾಮರ್ಸ್ ಕಂಪೆನಿಗಳಿಂದ ಅಗತ್ಯೇತರ ವಸ್ತುಗಳ ಸರಬರಾಜು ನಿಷೇಧ
ನವದೆಹಲಿ: ಕೋವಿಡ್ -೧೯ ದಿಗ್ಬಂಧನ ಅವಧಿಯಲ್ಲಿ
(ಮೇ ೩ರ ವರೆಗೂ)
ಇ-ಕಾಮರ್ಸ್ ಕಂಪೆನಿಗಳಿಂದ ಅಗತ್ಯೇತರ ವಸ್ತುಗಳ ಸರಬರಾಜನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು 2020
ಏಪ್ರಿಲ್
19ರ ಭಾನುವಾರ ತಿಳಿಸಿತು.
’ಕೋವಿಡ್-೧೯ ವಿರುದ್ಧದ ಸಮರ ಸಲುವಾಗಿ ವಿಧಿಸಲಾಗಿರುವ ಲಾಕ್‌ಡೌನ್ ೨ ಅವಧಿಯಲ್ಲಿ ಇ-ಕಾಮರ್ಸ್ ಕಂಪೆನಿಗಳಿಂದ ಅಗತ್ಯೇತರ ವಸ್ತುಗಳ ಸರಬರಾಜು ನಿಷೇಧಕ್ಕೆ ಒಳಪಟ್ಟಿದೆ’ ಎಂದು ಗೃಹ ವ್ಯವಹಾರಗಳ ವಕ್ತಾರರು ನುಡಿದರು.
ಸರ್ಕಾರವು ಈ ಮುನ್ನ ಇ-ಕಾಮರ್ಸ್ ವ್ಯವಹಾರಗಳ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿತ್ತು.
ಇ-ಕಾಮರ್ಸ್ ಕಂಪೆನಿಗಳಿಗೆ ಮೇ ೩ಕ್ಕೆ ಮುಕ್ತಾಯಗೊಳ್ಳಲಿರುವ ದಿಗ್ಬಂಧನ ಅಂತ್ಯಗೊಳ್ಳುವುದಕ್ಕೂ ಮುನ್ನವೇ ವಹಿವಾಟು ಆರಂಭಿಸಲು ಸರ್ಕಾರ ಅನುಮತಿ ನೀಡಿತ್ತು.
ಸರ್ಕಾರ ನೀಡಿದ್ದ ಅನುಮತಿಯನ್ನು ಆಧರಿಸಿ ಫ್ಲಿಪ್‌ಕಾರ್ಟ್ ಈಗಾಗಲೇ ಸ್ಮಾರ್ಟ್ ಫೋನುಗಳಿಗಾಗಿ ಆರ್ಡರ್ ತೆಗೆದುಕೊಳ್ಳಲು ಆರಂಭಿಸಿತ್ತು.
ಮೊದಲ ಹಂತದ ಲಾಕ್ ಡೌನ್ ಅವಧಿಯಲ್ಲಿ ಇ-ಕಾಮರ್ಸ್ ಕಂಪೆನಿಗಳಿಗೆ ಅಗತ್ಯ ವಸ್ತುಗಳ ಸರಬರಾಜಿಗೆ ಮಾತ್ರ ಸೀಮಿತ ಅವಕಾಶ ನೀಡಲಾಗಿತ್ತು.
’ಕೇಂದ್ರ ಸರ್ಕಾರದ ಇತ್ತೀಚಿನ ನಿರ್ದೇಶನವನ್ನು ನಾವು ಅಧ್ಯಯನ ಮಾಡುತ್ತಿದ್ದೇವೆ’ ಎಂದು ಕ್ಷಿಯೋಮಿ ವಿಪಿ ಮನು ಕುಮಾರ್ ಜೈನ್ ಹೇಳಿದರು.
ಕಂಪೆನಿಯು ಈ ಮುನ್ನ ಕ್ಷಿಯೋಮಿಯ ಅಧಿಕೃತ ಇ-ಸ್ಟೋರ್ ಎಂಐ.ಕಾಮ್ ಮೂಲಕ ಆರ್ಡರ್ ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಪ್ರಕಟಿಸಿತ್ತು.
’ನಮಗೆ ಈಗಷ್ಟೇ ಗೃಹ ವ್ಯವಹಾರಗಳ ಸಚಿವಾಲಯದಿಂದ ಅಗತ್ಯೇತರ ವಸ್ತುಗಳ ಇ-ಕಾಮರ್ಸ್‌ನ್ನು ಅಮಾನತುಗೊಳಿಸಲಾಗಿದೆ ಎಂಬುದಾಗಿ ತಿಳಿಸಿರುವ ಹೊಸ ನಿರ್ದೇಶನ ಲಭಿಸಿದೆ.
ಇದು ಸೋಮವಾರದಿಂದ ಎಚ್‌ಟಿಟಿಪಿ://ಎಂಐ.ಕಾಮ್ ನಾಳೆಯಿಂದ ಆರಂಭಿಸುವ ನಮ್ಮ ನಿರ್ಧಾರದ ಮೇಲೆ ಪರಿಣಾಮ ಬೀರುತ್ತದೆ. ನಾವು ಇದನ್ನು ಅಧ್ಯಯನ ಮಾಡುತ್ತಿದ್ದೇವೆ ಮತ್ತು ಶೀಘ್ರವೇ ನಿಮಗೆ ಹೆಚ್ಚಿನ ಮಾಹಿತಿ ನೀಡುತ್ತೇವೆ. ಏನಿದ್ದರೂ ನಾವು ಸರ್ಕಾರದ ಎಲ್ಲ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುತ್ತೇವೆ’ ಎಂದು ಜೈನ್ ಟ್ವೀಟ್ ಮಾಡಿದರು.
ಇದು ಸೋಮವಾರದಿಂದ ಎಚ್‌ಟಿಟಿಪಿ://ಎಂಐ.ಕಾಮ್ ನಾಳೆಯಿಂದ ಆರಂಭಿಸುವ ನಮ್ಮ ನಿರ್ಧಾರದ ಮೇಲೆ ಪರಿಣಾಮ ಬೀರುತ್ತದೆ. ನಾವು ಇದನ್ನು ಅಧ್ಯಯನ ಮಾಡುತ್ತಿದ್ದೇವೆ ಮತ್ತು ಶೀಘ್ರವೇ ನಿಮಗೆ ಹೆಚ್ಚಿನ ಮಾಹಿತಿ ನೀಡುತ್ತೇವೆ. ಏನಿದ್ದರೂ ನಾವು ಸರ್ಕಾರದ ಎಲ್ಲ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುತ್ತೇವೆ’ ಎಂದು ಜೈನ್ ಟ್ವೀಟ್ ಮಾಡಿದರು.
ಗೃಹ ವ್ಯವಹಾರಗಳ ಸಚಿವಾಲಯದ ೨೦೨೦ ಏಪ್ರಿಲ್ ೧೫ ಮತ್ತು ಏಪ್ರಿಲ್ ೧೬ರ ಆದೇಶದ ಮುಂದುವರಿದ ಭಾಗವಾಗಿ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ರಾಷ್ಟ್ರೀಯ ಕಾರ್‍ಯಕಾರಿ ಸಮಿತಿಯ ಅಧ್ಯಕ್ಷನಾಗಿ ನಾನು ಸಮಗ್ರ ಪರಿಷ್ಕೃತ ಮಾರ್ಗದರ್ಶಿ ಸೂತ್ರಗಳಿಂದ ಈ ಕೆಳಗಿನವುಗಳನ್ನು ಹೊರತು ಪಡಿಸಲು ಈ ಮೂಲಕ ಆದೇಶ ನೀಡುತ್ತಿದ್ದೇನೆ.
ಭಾರತ ಸರ್ಕಾರದ ಸಚಿವಾಲಯಗಳು/ಇಲಾಖೆಗಳು,
ರಾಜ್ಯ
/ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು,
ರಾಜ್ಯ
/ ಕೇಂದ್ರಾಡಳಿತ ಪ್ರದೇಶ ಅಧಿಕಾರಿಗಳು ಕಟ್ಟು ನಿಟ್ಟಾಗಿ ಇವುಗಳನ್ನು ಪಾಲಿಸಬೇಕು’ ಎಂಬುದಾಗಿ ಗೃಹ ಕಾರ್‍ಯದರ್ಶಿಯವರು ಹೊರಡಿಸಿದ ಆದೇಶ ಹೇಳಿದೆ.
ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿದ ಕ್ಲಾಸ್ ೧೪ರ ಅಡಿಯಲ್ಲಿ ಸಬ್ ಕ್ಲಾಸ್(೫).
೫.
ಇ-ಕಾಮರ್ಸ್ ಕಂಪೆನಿಗಳು.
ಇ-ಕಾಮರ್ಸ್ ಆಪರೇಟರುಗಳು ಬಳಸುವ ವಾಹನಗಳಿಗೆ ಅಗತ್ಯ ಅನುಮತಿಗಳೊಂದಿಗೆ ಸಂಚರಿಸಲು ಅವಕಾಶ ನೀಡಲಾಗಿದೆ ಎಂದು ಆದೇಶದಲ್ಲಿ ಪಟ್ಟಿ ಮಾಡಲಾಗಿದೆ.
No comments:
Post a Comment