My Blog List

Sunday, April 19, 2020

ಕೊರೋನಾವೈರಸ್ ಮಾನವ ನಿರ್ಮಿತ: ಆರೋಪ ಅಲ್ಲಗಳೆದ ಚೀನಾ

ಕೊರೋನಾವೈರಸ್ ಮಾನವ ನಿರ್ಮಿತ: ಆರೋಪ  ಅಲ್ಲಗಳೆದ ಚೀನಾ
ಬೀಜಿಂಗ್: ಇಡೀ ವಿಶ್ವವನ್ನೇ ಗಡಗಡ ನಡುಗಿಸುತ್ತಿರುವ ಕೊರೋನಾವೈರಸ್ಸಿನ  ಉಗಮಕ್ಕೆ ಕಾರಣವಾಗಿದೆ ಎಂಬ ಹಿನ್ನೆಲೆಯಲಿ ತೀವ್ರ ಟೀಕೆಗೆ ಗುರಿಯಾಗಿರುವ  ಚೀನಾದ ವುಹಾನ್ ನಗರದಲ್ಲಿರುವ ಮುಂಚೂಣಿಯ ಚೀನೀ ವೈರಾಣು ಪ್ರಯೋಗಾಲಯವು ಇದೇ ಮೊತ್ತ ಮೊದಲ ಬಾರಿಗೆ ತನ್ನ ಮೇಲಿನ ಆರೋಪವನ್ನು 2020 ಏಪ್ರಿಲ್ 19ರ ಭಾನುವಾರ ತಳ್ಳಿಹಾಕಿತು.

ಮಾರಕ ಕೊರೋನವೈರಸ್  ತಮ್ಮ ಸಂಸ್ಥೆಯಿಂದಲೇ ಹುಟ್ಟಿಕೊಂಡಿದೆ ಎಂಬುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿಶ್ವಾದ್ಯಂತ ಹಲವರು ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ವೈರಾಣು ಸಂಸ್ಥೆಯ ನಿರ್ದೇಶಕ ಯುವಾನ್ ಝಿಮಿಂಗ್ ಅವರು ತಮ್ಮ ಮೊತ್ತ ಮೊದಲ ಪತ್ರಿಕಾ ಸಂದರ್ಶನ ನಡೆಸಿ ಕೊರೋನಾವೈರಸ್ಸಿನ ಹುಟ್ಟಿನ ಬಗೆಗಿನ ಎಲ್ಲ ವದಂತಿಗಳನ್ನೂ ನಿರಾಕರಿಸಿದರು.

ವಿಶ್ವಾದ್ಯಂತ ಈವರೆಗೆ ೨೩,೩೩,೧೬೦ ಮಂದಿಗೆ ಸೋಂಕು ತಗುಲಿ, ,೬೦,೭೯೦ ಮಂದಿಯನ್ನು ಬಲಿಪಡೆದಿರುವ  ಕೊರೋನಾವೈರಸ್ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಪಾರದರ್ಶಕವಾಗಿಲ್ಲ ಎಂಬ ಕಾರಣಕ್ಕಾಗಿ ಚೀನಾದ ಮೇಲೆ ಜಾಗತಿಕ ಟೀಕೆಗಳ ಅತಿಯಾದ ಒತ್ತಡ ಬಿದ್ದಿದೆ.

ಕೊರೋನಾವೈರಸ್ ವಿಶ್ವಾದ್ಯಂತ ವ್ಯಾಪಿಸುವ ಮುನ್ನ ವುಹಾನ್ ಪ್ರಯೋಗಾಲಯದಿಂದ ತಪ್ಪಿಸಿಕೊಂಡಿತ್ತು ಎಂಬ ಬಗೆಗಿನ ವರದಿಗಳನ್ನು ತಮ್ಮ ಆಡಳಿತವು ಪರಿಶೀಲಿಸುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದರು. ನಾವು ಬಗ್ಗೆ ಪರಿಶೀಲಿಸುತ್ತಿದ್ದೇವೆ. ಬಹಳಷ್ಟು ಮಂದಿ ಹೇಳುತ್ತಿರುವುದರಲ್ಲಿ ಅರ್ಥವಿದೆ ಎನ್ನಿಸುತ್ತಿದೆ ಎಂದು ಟ್ರಂಪ್ ಅವರು ವುಹಾನ್ ನಗರದಲ್ಲಿ ಪ್ರಯೋಗಾಲಯದಿಂದ ತಪ್ಪಿಸಿಕೊಂಡ ಕೊರೋನಾರೋಗದ ಬಗ್ಗೆ ತನಿಖೆ ನಡೆಸಲಾಗುತ್ತಿದೆಯೇ ಎಂಬ ಶ್ನೆಗೆ ಉತ್ತರಿಸುತ್ತಾ ಹೇಳಿದ್ದರು.

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಕೊರೋನಾವೈರಸ್ ಬೆಳಕಿಗೆ ಬಂದಂದಿನಿಂದಲೇ ವೈರಾಣು ಚೀನಾದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ಹುಟ್ಟಿಕೊಂಡಿದೆಯೇ ಅಥವಾ ಅಲ್ಲಿಗೆ ಸಮೀಪದ ಹುವನಾನ್ ಸಮುದ್ರ ಆಹಾರ ಮಾರುಕಟ್ಟೆಯಿಂದ ಹುಟ್ಟಿದೆಯೇ ಎಂಬ ಬಗ್ಗೆ ವ್ಯಾಪಕ ಊಹಾಪೋಗಳು ಹರಡಿವೆ.

ವುಹಾನ್೪, ನಿರ್ದಿಷ್ಟವಾಗಿ ಅದರ ಪಿ೪ ಪ್ರಯೋಗಾಲಯವು ಯಾವುದೇ ಅಪಾಯಕಾರಿ ವೈರಸ್‌ಗಳನ್ನು ನಿಭಾಯಿಸುವುದಕ್ಕೆ ಸಮರ್ಥವಾಗಿದೆ ಎಂದು ಸಂಸ್ಥೆಯ ನಿರ್ದೇಶಕರು ಪ್ರತಿಪಾದಿಸಿದ್ದಾರೆ.

ಪ್ರಯೋಗಾಲಯವು ಫೆಬ್ರುವರಿ ತಿಂಗಳಲ್ಲೇ ಹೇಳಿಕೆಯೊಂದರ ಮೂಲಕ ವದಂತಿಗಳನ್ನು ನಿರಾಕರಿಸಿದ್ದರೂ, ಅದರ ನಿರ್ದೇಶಕ ಯುವಾನ್ ಝಿಮಿಂಗ್ ಅವರು ಇದೇ ಮೊದಲ ಬಾರಿಗೆ ಭಾನುವಾರ ಮಾಧ್ಯಮ ಸಂದರ್ಶನ ನಡೆಸಿ ತಮ್ಮ ಸಂಸ್ಥೆಗೆ ಸಂಬಂಧಿಸಿದ ಎಲ್ಲ ವದಂತಿಗಳನ್ನು ನಿರಾಕರಿಸಿದರು.

ಸಂಸ್ಥೆಯಲ್ಲಿ ಯಾವ ಮಾದರಿಯ ಸಂಶೋಧನೆ ನಡೆಯುತ್ತಿದೆ ಮತ್ತು ವೈರಸ್ಸುಗಳನ್ನು ಮತ್ತು ಮಾದರಿಗಳನ್ನು ಸಂಸ್ಥೆಯು ಹೇಗೆ ನಿರ್ವಹಿಸುತ್ತಿದೆ ಎಂಬುದು ನಮಗೆ ಗೊತ್ತಿದೆ. ವೈರಸ್ ನಮ್ಮಿಂದ ಹೊರಬರುವ ಸಾಧ್ಯತೆಯೇ ಇಲ್ಲ ಎಂದು ಯುವಾನ್ ಹೇಳಿದರು. ನಮ್ಮಲ್ಲಿ ಕಟ್ಟುನಿಟ್ಟಾದ ನಿಯಂತ್ರಣ ವ್ಯವಸ್ಥೆ ಇದೆ. ಸಂಶೋಧನೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ನಮ್ಮಲ್ಲಿ ಇದೆ. ನಮಗೆ ಅದರ ಬಗ್ಗೆ ವಿಶ್ವಾಸ ಇದೆ ಎಂದು ನಿರ್ದೇಶಕರು ಹೇಳಿದರು.

ವುಹಾನ್‌ನಲ್ಲಿ ಇನ್‌ಸ್ಟಿಟ್ಯೂಟ್ ಆಫ್  ವೈರಾಲಜಿ ಮತ್ತು ಪಿ೪ ಸ್ಥಾಪನೆಯಾದಂದಿನಿಂದಲೂ ಕಟ್ಟು ನಿಟ್ಟಿನ ಕ್ರಮಗಳನ್ನು ಅನುಸರಿಸುತ್ತಿದೆ.ಆದರೆ ಕೆಲವರು ಉದೇಶಪೂರ್ವಕವಾಗಿ, ಯಾವುದೇ ಸಾಕ್ಷ್ಯಾಧಾರ ಅಥವಾ ಮಾಹಿತಿಯೂ ಇಲ್ಲದೆಯೇ ದಾರಿ ತಪ್ಪಿಸುತ್ತಿರುವುದು ದುರದೃಷ್ಟಕರ. ಇವೆಲ್ಲವೂ ಕೇವಲ ವದಂತಿಗಳನ್ನು ಆಧರಿಸಿದ್ದು, ಜನರನ್ನು ದಾರಿ ತಪ್ಪಿಸುವ ಮತ್ತು ನಮ್ಮ ಸಾಂಕ್ರಾಮಿಕ ನಿರೋಧಿ ಮತ್ತು ವೈಜ್ಞಾನಿಕ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಸಲುವಾಗಿ ನಡೆದಿರುವ ಯತ್ನ ಎಂದು ಯುವಾನ್ ನುಡಿದರು.

ಅವರು ಒಂದು ವಿಧದಲ್ಲಿ ತಮ್ಮ ಗುರಿ ಸಾಧಿಸಿರಬಹುದು, ಆದರೆ ಒಬ್ಬ ವಿಜ್ಞಾನಿಯಾಗಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ನಿರ್ವಾಹಕನಾಗಿ, ಅದು ಸಾಧ್ಯವಿಲ್ಲ ಎಂಬುದು ನನಗೆ ಗೊತ್ತಿದೆ ಎಂದು ಯುವಾನ್ ಹೇಳಿದರು.

ವೈರಸ್ ಮಾನವ ಸೃಷ್ಟಿ ಆಗಲು ಸಾಧ್ಯವಿಲ್ಲ. ಕೋವಿಡ್-೧೯ ಕೃತಕ ಎಂಬುದಾಗಿ ಸಾಬೀತು ಪಡಿಸುವಂತಹ ಯಾವುದೇ ಸಾಕ್ಷ್ಯಾಧಾರ ಇಲ್ಲ. ಅಲ್ಲದೆ ವೈರಾಣು ಸೃಷ್ಟಿಗೆ ಅಸಾಧಾರಣ ಬುದ್ದಿಮತ್ತೆ ಹಾಗೂ ಶ್ರಮ ಬೇಕಾಗುತ್ತದೆ ಎಂಬುದು ವಿಜ್ಞಾನಿಗಳ ನಂಬಿಕೆ. ನಮಗೆ, ಮಾನವರಿಗೆ ಇಂತಹ ವೈರಸ್ ಸೃಷ್ಟಿಯ ಸಾಮರ್ಥ್ಯ ಇದೆ ಎಂಬುದನ್ನು ಎಂದಿಗೂ ನಂಬಲು ಸಾಧ್ಯವಿಲ್ಲ ಎಂದು ಅವರು ನುಡಿದರು.

ವೈರಸ್ ಸ್ಪೋಟದ ಸ್ಫೋಟದ ಬಳಿಕ ತಮ್ಮ ಸಂಸ್ಥೆಯು ಕೋವಿಡ್-೧೯ರ ಜೆನೋಮ್ ಸೀಕ್ವೆನ್ಸ್‌ನ್ನು ಹಂಚಿಕೊಂಡಿತ್ತು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂ ಎಚ್ ) ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ಇತ್ತೀಚೆಗೆ ಬಗೆಗಿನ ಪ್ರಾಣಿ ಮಾದರಿ ಕುರಿತ ತಮ್ಮ ಸಂಶೋಧನೆಯನ್ನೂ ಬಹಿರಂಗಪಡಿಸಿವೆ. ವೈರಾಣು ಸಂಸ್ಥೆಯಾಗಿ ಮತ್ತು ಪಶು ವಿಜ್ಞಾನದ ಪ್ರಯೋಗಾ ಸಂಸ್ಥೆಯಾಗಿ ಪ್ರಾಣಿ ಮಾದರಿಗಳನ್ನು ನಾವೇ ಪ್ರಥಮವಾಗಿ ನಿರ್ಮಿಸಿದ್ದೇವೆ, ಆಗ ಸಂಚಿನ ಸಿದ್ಧಾಂತಗಳು ಇನ್ನೂ ಪ್ರಚಾರವಾಗಿರಲೇ ಇಲ್ಲ ಎಂದು ಯುವಾನ್ ಹೇಳಿದರು.

No comments:

Advertisement