My Blog List

Monday, April 27, 2020

ಚೇತರಿಸಿದವರಿಂದ ಕೊರೋನಾ ಸೋಂಕು ಪ್ರಸರಣ ಅಪಾಯವಿಲ್ಲ

ಚೇತರಿಸಿದವರಿಂದ  ಕೊರೋನಾ ಸೋಂಕು ಪ್ರಸರಣ ಅಪಾಯವಿಲ್ಲ
ನವದೆಹಲಿ: ಕೊರೋನಾವೈರಸ್ ಆರೋಗ್ಯ ಬಿಕ್ಕಟ್ಟಿನ ಮಧ್ಯೆ ಹಿಂದೆ ಕೋವಿಡ್-೧೯ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದ ಭಾರತದ ೧೬ ಜಿಲ್ಲೆಗಳಲ್ಲಿ ಕಳೆದ ೨೮ ದಿನಗಳಿಂದ ಯಾವುದೇ ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂಬ ಸುದ್ದಿ 2020 ಏಪ್ರಿಲ್ 27ರ ಸೋಮವಾರ ಬಂದಿತು. ಇದು ಚೇತರಿಸಿದವರಿಂದ ಸೋಂಕು ಪ್ರಸರಣದ ಅಪಾಯವಿಲ್ಲ ಎಂಬ ಚೇತೋಹಾರಿ ಅಂಶವನ್ನು ಬಹಿರಂಗ ಪಡಿಸಿದೆ.

ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದ ಮಹಾರಾಷ್ಟ್ರದ ಗೊಂಡಿಯಾ, ಕರ್ನಾಟಕದ ದಾವಣಗೆರೆ ಮತ್ತು ಬಿಹಾರದ ಲಖಿ ಸರಾಯಿ ಮೂರು ಜಿಲ್ಲೆಗಳು ಇದೀಗ ಸೋಂಕಿನ ಯಾವುದೇ ಹೊಸ ಪ್ರಕರಣಗಳು ಕಂಡು ಬರದ ಜಿಲ್ಲೆಗಳ ಪಟ್ಟಿಗೆ ಸೇರ್ಪಡೆಯಾಗಿವೆ ಎಂಬುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿಯಿಂದ ಬೆಳಕಿಗೆ ಬಂದಿದೆ.

೨೫ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ೮೫ ಜಿಲ್ಲೆಗಳಲ್ಲಿ ಕೋವಿಡ್ -೧೯ ಸೋಂಕಿನ ಯಾವುದೇ ಹೊಸ ಪ್ರಕರಣ ಕಳೆದ ೧೪ ದಿನಗಳಿಂದ ವರದಿಯಾಗಿಲ್ಲ.

ಕೋವಿಡ್-೧೯ ರೋಗಿಗಳಿಗೆ ಸಂಬಂಧಿಸಿದಂತೆ ಅಂಟಿರುವ ಕಳಂಕವನ್ನು ವ್ಯಾಪಕ ಪ್ರಚಾರದ ಮೂಲಕ ಅಳಿಸಬೇಕಾಗಿದೆ. ಚೇತರಿಸಿದ ರೋಗಿಗಳಿಂದ ರೋಗ ವರ್ಗಾವಣೆಯ ಅಪಾಯವಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಅವರು ವಾಸ್ತವವಾಗಿ ರೋಗ ವಾಸಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಬಲ್ಲರು. ಪ್ಲಾಸ್ಮಾ ಥೆರೆಪಿಯ ಮೂಲಕ ಅವರ ದೇಹದಲ್ಲಿನ ಪ್ರತಿಕಾಯಗಳ ಮೂಲಕ ಇತರರ ಸಂಕಷ್ಟ ನಿವಾರಣೆ ಸಾಧ್ಯಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್‍ಯದರ್ಶಿ ಲವ ಅಗರವಾಲ್ ಹೇಳಿದರು.

ಯಾವುದೇ ಸಮುದಾಯ ಅಥವಾ ಪ್ರದೇಶವನ್ನು ಕೊರೊನಾವೈರಸ್ ಸೋಂಕು ಪ್ರಕರಣದ ಕಾರಣಕ್ಕಾಗಿ ದೂಷಿಸಬಾರದು. ಆರೋಗ್ಯ ರಕ್ಷಣೆ ಮತ್ತು ಸ್ವಚ್ಛತಾ ಕಾರ್ಮಿಕರ ಮೇಲೆ ಯಾರೂ ದಾಳಿ ಮಾಡಬಾರದು, ಏಕೆಂದರೆ ಅವರು ಕೊರೋನಾವೈರಸ್ ಬಿಕ್ಕಟ್ಟನ್ನು ನಿಯಂತ್ರಣಕ್ಕೆ ತರಲು ನೆರವಾಗುತ್ತಿದ್ದಾರೆ ಎಂದು ಅಗರವಾಲ್ ನುಡಿದರು.

ದೇಶದಲ್ಲಿನ ಪರೀಕ್ಷಾ ಸಾಮರ್ಥ್ಯದ ಬಗ್ಗೆ ಪ್ರಸ್ತಾಪಿಸಿದ ಆರೋಗ್ಯ ಸಚಿವಾಲಯದ ಅಧಿಕಾರಿಐಸಿಎಂಆರ್ ಮಟ್ಟದಲ್ಲಿ, ನಮ್ಮ ಬಳಿ ಆರ್‌ಟಿ ಪಿಸಿಆರ್ ಪರೀಕ್ಷೆಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಮಾಣದಲ್ಲಿ ಕಿಟ್Uಳಿವೆ. ಸಾಕಷ್ಟು ಕಿಟ್‌ಗಳು ಲಭ್ಯ ಇರುವುದಷ್ಟೇ ಅಲ್ಲ, ಅಗತ್ಯ ಉಳ್ಳ ರಾಜ್ಯಗಳಿಗೆ ತಲುಪಿಸುವ ಸಾಮರ್ಥ್ಯವೂ ನಮಗಿದೆಎಂದು ಹೇಳಿದರು.

ಭಾರತದಲ್ಲಿ ಭಾನುವಾರ ಬೆಳಗ್ಗೆಯಿಂದ ೨೪ ಗಂಟೆಗಳಲ್ಲಿ ,೪೩೬ ಹೊಸ ಪ್ರಕರಣಗಳು ವರದಿಯಾಗಿದ್ದು ಒಟ್ಟು ಕೋವಿಡ್ -೧೯ ಸೋಂಕಿತರ ಪ್ರಕರಣಗಳ ಸಂಖ್ಯೆ ೨೮,೩೮೦ಕ್ಕೆ ಏರಿಕೆಯಾಗಿದೆ. ,೧೮೪ ರೋಗಿಗಳು ಗುಣಮುಖರಾಗಿದ್ದು, ಮಾರಕ ಸೋಂಕಿಗೆ ದೇಶದಲ್ಲಿ ೮೭೨ ಮಂದಿ ಬಲಿಯಾಗಿದ್ದಾರೆ, ಒಟ್ಟು ೬೦ ಹೊಸ ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಅಗರವಾಲ್ ನುಡಿದರು. ಕಳೆದ ಒಂದು ದಿನದಲ್ಲಿ ೩೮೧ ಮಂದಿ ಚೇತರಿಸಿಕೊಂಡಿದ್ದು ದೇಶದಲ್ಲಿ ಚೇತರಿಕೆಯ ಪ್ರಮಾಣ ಶೇಕಡಾ ೨೨.೧೭ಕ್ಕೆ ಏರಿದೆ ಎಂದು ಅವರು ವಿವರಿಸಿದರು.

ಸಬಲೀಕರಣ ಗುಂಪು -೫ರ ಅಧ್ಯಕ್ಷ ಪರಮೇಶ್ವರನ್ ಅಯ್ಯರ್ ಅವರು ಸರ್ಕಾರ, ಎನ್‌ಜಿಒ ಮತ್ತು ಕೈಗಾರಿಕೋದ್ಯಮಗಳ ಮೂಲಕ ಪ್ರತಿದಿನ . ಕೋಟಿ ಜನರಿಗೆ ಊಟ ಒದಗಿಸಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಭಾರತೀಯ ರೈಲ್ವೇಯು ಅಗತ್ಯ ವಸ್ತುಗಳ ಸರಬರಾಜು ಕೊಂಡಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಅದ್ಭುತ ಕೆಲಸ ಮಾಡಿದೆ ಎಂದೂ ಅಯ್ಯರ್ ಶ್ಲಾಘಿಸಿದರು.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ೩೦,೧೬,೮೬೦ ಸಾವು ,೦೭,೯೮೦
ಚೇತರಿಸಿಕೊಂಡವರು- ,೮೮,೬೩೪
ಅಮೆರಿಕ ಸೋಂಕಿತರು ,೮೮,೯೨೮, ಸಾವು ೫೫,೪೬೧
ಸ್ಪೇನ್ ಸೋಂಕಿತರು ,೨೯,೪೨೨, ಸಾವು ೨೩,೫೨೧
ಇಟಲಿ ಸೋಂಕಿತರು ,೯೭,೬೭೫ಸಾವು ೨೬,೬೪೪
ಜರ್ಮನಿ ಸೋಂಕಿತರು ,೫೮,೧೪೨, ಸಾವು ,೯೮೫
ಚೀನಾ ಸೋಂಕಿತರು ೮೨,೮೩೦, ಸಾವು ,೬೩೩
ಇಂಗ್ಲೆಂಡ್ ಸೋಂಕಿತರು ,೫೨,೮೪೦, ಸಾವು ೨೦,೭೩೨
ಇರಾನಿನಲ್ಲಿ ೯೬, ಬೆಲ್ಜಿಯಂನಲ್ಲಿ ೧೧೩, ಸ್ಪೇನಿನಲ್ಲಿ ೩೩೧, ಅಮೆರಿಕದಲ್ಲಿ ೪೮, ಸ್ವೀಡನ್‌ನಲ್ಲಿ ೮೦, ಮೆಕ್ಸಿಕೋದಲ್ಲಿ ೪೬, ಒಟ್ಟಾರೆ ವಿಶ್ವಾದ್ಯಂತ ,೦೬೫ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ

No comments:

Advertisement