ಗ್ರಾಹಕರ ಸುಖ-ದುಃಖ

My Blog List

Thursday, April 23, 2020

ಕೋವಿಡ್ ವಿರುದ್ಧ ವೈರಾಣು ನಿಗ್ರಹ ‘ಫವಿಪಿರವೀರ್’ : ಸಿಎಸ್‌ಐಆರ್ ಸನ್ನದ್ಧ

ಕೋವಿಡ್ ವಿರುದ್ಧ ವೈರಾಣು ನಿಗ್ರಹ ಫವಿಪಿರವೀರ್’ : ಸಿಎಸ್‌ಐಆರ್ ಸನ್ನದ್ಧ
ನವದೆಹಲಿ: ಕೊರೋನಾವೈರಸ್ (ಕೋವಿಡ್-೧೯) ಸೋಂಕಿನ ವಿರುದ್ಧ ಭರವಸೆದಾಯಕವಾದs ಹಾಗೂ ಚೀನಾ, ಜಪಾನ್ ಮತ್ತು ಯುರೋಪಿನಲ್ಲಿ ಬಳಸಲಾಗುತ್ತಿರುವ ಫವಿಪಿರವೀರ್  ವೈರಾಣು ನಿರೋಧೀ ಔಷzs ತಯಾರಿಯ ಸೂತ್ರ ಸಿದ್ಧವಾಗಿದ್ದು ಭಾರತವು ಅದರ ಉತ್ಪಾದನೆಗೆ ಸಜ್ಜಾಗಿದೆ ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್)  2020 ಏಪ್ರಿಲ್ 23ರ ಗುರುವಾರ ಹೇಳಿದೆ.

ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಚಾರವನ್ನು ಬಹಿರಂಗ ಪಡಿಸಿದರು. ಸಿಎಸ್‌ಐಆರ್ ಆಡಳಿತ ನಿರ್ದೇಶಕ ಡಾ. ಶೇಖರ್ ಸಿ ಮಾಂಡೆ ಅವರು ಖಾಸಗಿ ಫಾರ್ಮಾಸ್ಯೂಟಿಕಲ್ ಕಂಪೆನಿ ಒಂದಕ್ಕೆ ಸೂತ್ರವನ್ನು ನೀಡಲಾಗಿದ್ದು, ಕೋವಿಡ್-೧೯ ಬಳಕೆಗಾಗಿ ಔಷಧ ಉಪಯೋಗಕ್ಕೆ ಈಗ ಭಾರತದ ಔಷಧ ಮಹಾ ನಿಯಂತ್ರಕರು (ಡಿಜಿಸಿಐ) ಒಪ್ಪಿಗೆ ನೀಡಬೇಕಾಗಿದೆ ಎಂದು ಹೇಳಿದರು.

ಫವಿಪಿರವೀರ್ ಔಷಧವು ಇನ್‌ಫ್ಲುಯೆಂಜಾ ವೈರಾಣುಗಳ ವಿರುದ್ಧ ಉತ್ತಮ ಫಲಿತಾಂಶ ನೀಡಿದೆ. ಚೀನಾ, ಜಪಾನ್, ರಶ್ಯಾ ಮತ್ತು ಮಧ್ಯಪ್ರಾಚ್ಯ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಕೋವಿಡ್-೧೯ ವಿರುದ್ಧ ಅದನ್ನು ಬಳಸುವ ಸಾಧ್ಯತೆ ಬಗ್ಗೆ ಪರೀಕ್ಷೆಗಳು ನಡೆಯುತ್ತಿವೆ ಎಂದು ನುಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಆಧೀನದಲ್ಲಿ ಇರುವ ಭಾರತದ ಮುಂಚೂಣಿಯ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾಗಿರುವ ಸಿಎಸ್‌ಐಆರ್ ಕೋವಿಡ್ ವಿರುದ್ಧ ಬಳಸಬಹುದಾದ ೨೦ ವಿವಿಧ ಔಷಧಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ. ಜೊತೆಗೆ ಡಯಾಗ್ನಾಸ್ಟಿಕ್ ಕಿಟ್, ಹೊಸ ಮಾದರಿಯ ವೈದ್ಯಕೀಯ ಉಪಕರಣ, ಲಸಿಕೆ ತಯಾರಿ ವಿಚಾರದಲ್ಲೂ ಕೆಲಸ ಮಾಡುತ್ತಿದೆ ಎಂದ ಡಾ. ಮಾಂಡೆ ಹೇಳಿದರು.

ಔಷಧ ತಯಾರಿಸಲಿರುವ ಸಂಸ್ಥೆಯ ಹೆಸರು ಬಹಿರಂಗ ಪಡಿಸಲು ನಿರಾಕರಿಸಿದ ಅವರು ಜಪಾನ್ ಮತ್ತು ಚೀನಾ ಈಗಾಗಲೇ ಬಳಸುತ್ತಿರುವ ಔಷಧವನ್ನು ದೇಶದಲ್ಲೇ ತಯಾರಿಸಲು ಡಿಜಿಸಿಐ ಒಪ್ಪಿಗೆ ಕೊಟ್ಟಲ್ಲಿ ಖಾಸಗಿ ಕಂಪೆನಿಯ ಸಹಯೋಗದೊಂದಿಗೆ ನಾವು ಇದನ್ನು ಮಾರುಕಟ್ಟೆಗೆ ಬಿಡಲು ಸಾಧ್ಯ. ಇದು ಒಂದು ಉದಾಹರಣೆಯಷ್ಟೆ. ಇಂತಹ ೨೦ ಔಷಧಗಳ ತಯಾರಿ ಬಗ್ಗೆ ನಾವು ಕಾರ್ಯಮಗ್ನರಾಗಿದ್ದೇವೆ ಎಂದು ಹೇಳಿದರು.

No comments:

Advertisement