Saturday, April 18, 2020

ವುಹಾನ್ ಲ್ಯಾಬ್‌ನಿಂದ ಕೋವಿಡ್ ವೈರಸ್ ಸೋರಿಕೆ

ವುಹಾನ್ ಲ್ಯಾಬ್ನಿಂದ ಕೋವಿಡ್ ವೈರಸ್ ಸೋರಿಕೆ
ಸುದ್ದಿ ಸಂಸ್ಥೆ ವರದಿಗೆ ತಲೆಯಾಡಿಸಿದ ಟ್ರಂಪ್
ವಾಷಿಂಗ್ಟನ್: ಚೀನಾದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ  ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿಯಿಂದ ಆಕಸ್ಮಿಕವಾಗಿ ಕೊರೋನವೈರಸ್ (ಎನ್ಸಿಒವಿ) ಸೋರಿಕೆಯಾಗಿರಬಹುದು ಎಂಬ ಪಾಕ್ಸ್ ನ್ಯೂಸ್ ವರದಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ.

ಕೊರೋನಾವೈರಸ್ ಸಹಜವಾಗಿ ಕೆಲವು ಬಾವಲಿಗಳಲ್ಲಿ ಕಾಣಿಸುವ ವೈರಾಣು ಆಗಿದ್ದು ಜೈವಿಕ ಶಸ್ತ್ರಾಸ್ತ್ರವಲ್ಲ,  ಆದರೆ ವುಹಾನ್ ಪ್ರಯೋಗಾಲಯದಲ್ಲಿ (ಲ್ಯಾಬೋರೇಟರಿ) ಅದರ ಬಗ್ಗೆ ಅಧ್ಯಯನ ನಡೆಯುತ್ತಿತು ಎಂದು ಹೆಸರು ಉಲ್ಲೇಖಿಸದ ಮೂಲಗಳನ್ನು ಆಧರಿಸಿದ ತನ್ನ ವಿಶೇಷ ವರದಿಯಲ್ಲಿ ಫಾಕ್ಸ್ ನ್ಯೂಸ್ ತಿಳಿಸಿತ್ತು.

ಪ್ರಾಥಮಿಕ ಹಂತದಲ್ಲಿ ಲ್ಯಾಬೋರೇಟರಿಯಲ್ಲಿ ಕೆಲಸ ಮಾಡುತ್ತಿದ್ದ ಪೇಷಂಟ್ ಝೀರೋ ಗೆ ವರ್ಗಾವಣೆಗೊಳ್ಳುವ ಮೂಲಕ ವೈರಸ್ ಬಾವಲಿಯಿಂದ ಮನುಷ್ಯನಿಗೆ ಸೋಂಕಿದೆ. ಪ್ರಯೋಗಾಲಯದ ಸಿಬ್ಬಂದಿಗೆ ಆಕಸ್ಮಿಕವಾಗಿ ಸೋಂಕಿದ ವೈರಸ್ ಬಳಿಕ ವುಹಾನ್ ನಗರದಲ್ಲಿ ಪ್ರಯೋಗಾಲದಯ ಹೊರಗಿನ ಸಾಮಾನ್ಯರಿಗೂ ವರ್ಗಾವಣೆಯಾಗಿ ರೋಗ ಹರಡಿತು ಎಂದು ವರದಿ ತಿಳಿಸಿತ್ತು.

ವುಹಾನ್ ಹಸಿ ಮಾಂಸದ ಮಾರುಕಟ್ಟೆಯನ್ನು ವೈರಾಣುವಿನ ಜನ್ಮಸ್ಥಾನ ಎಂಬುದಾಗಿ ಮೊದಲಿಗೆ ಗುರುತಿಸಲಾಗಿತ್ತು. ಆದರೆ ಮಾರುಕಟ್ಟೆಯಲ್ಲಿ ಬಾವಲಿಗಳ ಮಾರಾಟ ನಡೆಯುತ್ತಿರಲಿಲ್ಲ ಎಂದು ಪಾಕ್ಸ್ ನ್ಯೂಸ್ ವರದಿ ಹೇಳಿತ್ತು. ಚೀನಾವು ಪ್ರಯೋಗಾಲಯದ ಕಡೆಗಿನ ಗಮನವನ್ನು ಬೇರೆ ಕಡೆಗೆ ಸೆಳೆಯುವ ಸಲುವಾಗಿ ವುಹಾನ್ ಹಸಿಮಾಂಸದ ಮಾರುಕಟ್ಟೆಯನ್ನು ದೂಷಿಸಿತು ಎಂದೂ ವರದಿ ಹೇಳಿತ್ತು.

ವೈರಾಣು ಸಮರವು ಅಮೆರಿಕದ ಸಾಮರ್ಥ್ಯಕ್ಕೆ ಸರಿಸಮ ಅಥವಾ ಇನ್ನೂ ಹೆಚ್ಚಿನದು ಆಗಬಲ್ಲುದೇ ಎಂಬುದನ್ನು ಗುರುತಿಸುವ ತನ್ನ ಪ್ರಯತ್ನವಾಗಿ ಚೀನಾದ ಕಮ್ಯೂನಿಸ್ಟ್ ಪಕ್ಷವು (ಸಿಸಿಪಿ) ಯತ್ನ ನಡೆಸಿತ್ತು ಎಂದು ವಿವಿಧ ಮೂಲಗಳನ್ನು ಉಲ್ಲೇಖಿಸಿದ ವರದಿ ತಿಳಿಸಿತ್ತು.

ಶ್ವೇತಭವನದಲ್ಲಿ ನಡೆದ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಪಾಕ್ಸ್ ನ್ಯೂಸ್ ವರದಿಗಾರನ ಪ್ರತಿಪಾದನೆಗಳ ಬಗ್ಗೆ ಪ್ರಶ್ನಿಸಿದಾಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊರೋನಾವೈರಸ್ ಸಹಜವಾಗಿ ಹುಟ್ಟುವಂತಹ ವೈರಸ್ ಆಗಿದ್ದರೂ, ಅದು ವುಹಾನ್ ನಗರದ ವೈರಾಲಜಿ ಲ್ಯಾಬೋರೇಟರಿಯಿಂದ ಹೊರಕ್ಕೆ ಬಂದಿದೆ, ಇದಕ್ಕೆ ಸುರಕ್ಷತಾ ಶಿಷ್ಟಾಚಾರಗಳ ಕೊರತೆಯೇ ಕಾರಣ, ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿಗೆ ಮೊದಲು ಸೋಂಕು ಹರಡಿತು, ಬಳಿಕ ಆಕೆಯ ಬಾಯ್ ಫ್ರೆಂಡಿಗೆ ವರ್ಗಾವಣೆಗೊಂಡಿತು, ಬಳಿಕ ವುಹಾನ್ ನಗರದ ಹಸಿ ಮಾಂಸದ ಮಾರುಕಟ್ಟೆಗೆ ಅವರು ಹೋದಾಗ ಮಾರುಕಟ್ಟೆಯಲ್ಲಿ ಹರಡಲು ಆರಂಭವಾಯಿತು ಎಂಬುದಾಗಿ ಹಲವು ಮೂಲಗಳು ಪತ್ರಿಕಾ ಸಂಸ್ಥೆಗೆ ತಿಳಿಸಿವೆ ಎಂದು ಟ್ರಂಪ್ ಹೇಳಿದರು.

ಅಧ್ಯಕ್ಷ ಟ್ರಂಪ್ ಅವರು ವರದಿಯನ್ನು ದೃಢಪಡಿಸಲಿಲ್ಲ ಅಥವಾ ನಿರಾಕರಿಸಲೂ ಇಲ್ಲ. ಹೆಚ್ಚು ಹೆಚ್ಚು ಕಥೆಗಳನ್ನು ನಾವು ಕೇಳುತ್ತಿದ್ದೇವ. ನೋಡೋಣ. ನಾವು ಭೀಕರ ಪರಿಸ್ಥಿತಿ ಬಗ್ಗೆ ವಿಸ್ತೃv ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಅಧ್ಯಕ್ಷರು ನುಡಿದರು.

ಚೀನೀ ಅಧ್ಯಕ್ಷ ಕ್ಷಿ ಜಿನ್ಪಿಂಗ್ ಜೊತೆಗಿನ ಇತ್ತೀಚಿನ ದೂರವಾಣಿ ಕರೆಯ ಸಂದರ್ಭದಲ್ಲಿ ಚೀನಾದ ಪ್ರಯೋಗಾಲಯದ ಸುರಕ್ಷತೆ ಬಗ್ಗೆ ವಿಚಾರಿಸಲಾಯಿತೇ ಎಂಬ ಪ್ರಶ್ನೆಗೆ, ನಾನು ಅವರ ಜೊತೆಗೆ ಪ್ರಯೋಗಾಲಯದ ಬಗ್ಗೆ ಏನು ಮಾತನಾಡಿದ್ದೇನೆ ಎಂಬ ಬಗ್ಗೆ ಈಗ ಚರ್ಚಿಸಲು ನಾನು ಬಯಸುವುದಿಲ್ಲ. ಈಗ ಅದು ಅನುಚಿತ ಎಂದು ಟ್ರಂಪ್ ಹೇಳಿದರು.

ಚೀನಾವು ಮೊದಲಿಗೆ ಕೊರೋನಾವೈರಸ್ ಸೋಂಕು ಹರಡಿದ್ದನ್ನೇ ಮುಚ್ಚಿ ಹಾಕುವ ಯತ್ನ ನಡೆಸಿತು ಎಂದು ಸುದ್ದಿ ಸಂಸ್ಥೆಯ ವರದಿ ತಿಳಿಸಿತ್ತು. ಇದು ಸರ್ಕಾರದ ಅತ್ಯಂತ ತುಟ್ಟಿಯಾದ ಮರೆಮಾಚುವಿಕೆ ಆಗಬಹುದು ಎಂದು ಮೂಲವೊಂದನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ಪ್ರಾರಂಭದಿಂದಲೇ ಜಾಗತಿಕ ಆರೋಗ್ಯ ಸಂಸ್ಥೆಯು (ಡಬ್ಲ್ಹೂಎಚ್) ಚೀನಾದ ಮುಚ್ಚಿ ಹಾಕುವ ಯತ್ನದಲ್ಲಿ ಭಾಗಿಯಾಗಿತ್ತು ಎಂದೂ ಸುದ್ದಿ ಸಂಸ್ಥೆಯ ವರದಿ ತಿಳಿಸಿತ್ತು.

ಮಾರಕ ವೈರಸ್ಗಳು ಮತ್ತು ಸಾಂಕ್ರಾಮಿಕ ರೋಗಗಳ ಅಧ್ಯಯನ ನಡೆಸಲಾಗುತ್ತಿರುವ ಚೀನೀ ಸರ್ಕಾರದ ವುಹಾನ್ ವೈರಾಲಜಿ ಸಂಸ್ಥೆಯಲ್ಲಿನ ಅಸಮರ್ಪಕ ಜೈವಿಕ ಸುರಕ್ಷತೆ ಬಗ್ಗೆ ಚೀನಾದಲ್ಲಿನ ಅಮೆರಿಕ ರಾಯಭಾರ ಕಚೇರಿ ಅಧಿಕಾರಿಗಳು ಎರಡು ವರ್ಷಗಳ ಹಿಂದೆಯೇ ಕಳವಳ ವ್ಯಕ್ತ ಪಡಿಸಿದ್ದರು ಎಂದು ವಾಷಿಂಗ್ಟನ್ ಪೋಸ್ಟ್ ಕೂಡಾ ಇತ್ತೀಚೆಗೆ ವರದಿ ಮಾಡಿತ್ತು.

ವುಹಾನ್ ಹಸಿಮಾಂಸದ ಮಾರುಕಟ್ಟೆಗೆ ಅತ್ಯಂತ ಸಮೀಪದಲ್ಲಿ ಇರುವ ಸಂಸ್ಥೆಯು ಚೀನಾ ಮೊತ್ತ ಮೊದಲ ಜೈವಿಕ ಸುರಕ್ಷತಾ ಮಟ್ಟದ ಐವಿ ಲ್ಯಾಬ್ ಆಗಿದ್ದು, ಅಲ್ಲಿ ಸುರಕ್ಷಿತ ಕಾರ್ ನಿರ್ವಹಣೆಗಾಗಿ ತರಬೇತಿ ಪಡೆದ ತಂತ್ರಜ್ಞರು ಹಾಗೂ ತನಿಖೆಗಾರರ ಅಗತ್ಯವಿದೆ ಎಂದು ಅಮೆರಿಕದ ವಿದೇಶಾಂಗ ಖಾತೆಯು ೨೦೧೮ರಲ್ಲೇ ಎಚ್ಚರಿಕೆ ನೀಡಿತ್ತು.

No comments:

Advertisement