My Blog List

Sunday, April 12, 2020

ಭಾರತ ಸೇನಾ ಕಾರ್ಯಾಚರಣೆ: ಉಗ್ರ ಲಾಂಚ್ ಪ್ಯಾಡ್ ಧ್ವಂಸ

ಭಾರತ ಸೇನಾ ಕಾರ್ಯಾಚರಣೆ: ಉಗ್ರ ಲಾಂಚ್ ಪ್ಯಾಡ್ ಧ್ವಂಸ

15 ಪಾಕ್ ಸೈನಿಕರು 8 ಭಯೋತ್ಪಾದಕರು ಹತ

ನವದೆಹಲಿ: ಕೇರನ್ ವಲಯದ ಗಡಿ ನಿಯಂತ್ರಣ ರೇಖೆಯ ಆಚೆ ಪಾಕಿಸ್ತಾನದ ದುದ್ನಿಯಲ್ ನಲ್ಲಿ ನಿರ್ಮಿಸಲಾಗಿದ್ದ ಭಯೋತ್ಪಾದಕ ಉಡಾವಣಾ ಶಿಬಿರಗಳ ಮೇಲೆ ಭಾರತೀಯ ಸೇನೆಯ ಫಿರಂಗಿದಳವು ಏಪ್ರಿಲ್ ೧೦ ರಂದು  ನಡೆಸಿದ ದಾಳಿಯಲ್ಲಿ ಎಂಟು ಭಯೋತ್ಪಾದಕರು ಮತ್ತು ೧೫ ಪಾಕಿಸ್ತಾನ ಸೇನಾ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಸಂಸ್ಥೆಯ ಮೂಲಗಳು  2020 ಏಪ್ರಿಲ್ 12ರ ಭಾನುವಾರ ತಿಳಿಸಿವೆ.

‘ಯಾರೂ ಶಿಕ್ಷೆಗೆ ಗುರಿಯಾಗದೆ ತಪ್ಪಿಸಿಕೊಳ್ಳುವಂತಿಲ್ಲ’ ಎಂಬ ಕಠಿಣ ಸಂದೇಶವನ್ನು ಈ ಮೂಲಕ ಪಾಕಿಸ್ತಾನಕ್ಕೆ ನೀಡಲಾಗಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ.

ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಗೆ ಪ್ರತೀಕಾರ ತೀರಿಸಿಕೊಳ್ಳಲು ಕಿಶಂಗಂಗಾ ನದಿಯ ದಂಡೆ ಮೇಲಿನ  ದುಧ್ನಿಯಲ್ ನ್ನು ಗುರಿಯಾಗಿಸಲಾಗಿತ್ತು. ಪರ್ವತ ಪಟ್ಟಣದಿಂದಲೇ  ಬಂದಿದ್ದ ಐವರು ಭಯೋತ್ಪಾದಕರನ್ನು ಮಟ್ಟ ಹಾಕುವ ಕಾರ್ಯಾಚರಣೆಯನ್ನು ಏಪ್ರಿಲ್ ರಂದು ಕೇರನ್ ವಲಯದಲ್ಲಿ ಭಾರತೀಯ ಸೇನೆಯ ವಿಶೇಷ ಪಡೆಗಳು ಆರಂಭಿಸಿದ್ದವು.

ಕಾರ್ಯಾಚರಣೆಯಲ್ಲಿ ಕೊಲ್ಲಲಾದ ಐವರು ಭಯೋತ್ಪಾದಕರಲ್ಲಿ, ಮೂವರು ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದವರು ಮತ್ತು ಉಳಿದ ಇಬ್ಬರು ಜೈಶ್--ಮೊಹಮ್ಮದ್ (ಜೆಎಂ) ಮೂಲಕ ತರಬೇತಿ ಪಡೆದಿದ್ದರು  ಎಂದು ಅವರ ಮುಖ ಪರಿಚಯವಿದ್ದ  ತಿಳಿಸಿದ್ದಾರೆ.  ಭಯೋತ್ಪಾದಕರ  ಗುರುತು ಪತ್ರೆ ಕಾರ್ಯ ಇನ್ನೂ ಮುಂದುವರೆದಿದೆ.

ವಾಸ್ತವಿಕ ಗಡಿಯಾಗಿರುವ ಗಡಿ ನಿಯಂತ್ರಣ ರೇಖೆಯ (ಎಲ್ ಒಸಿ) ಉದ್ದಕ್ಕೂ ಶಾರದಾ, ದುಧ್ನಿಯಲ್ ಮತ್ತು ಶಾಹಕೋಟ್  ಪ್ರದೇಶಗಳಲ್ಲಿ ಭಾರತೀಯ ಸೇನೆಯು ಗುಂಡು ಹಾರಿಸಿರುವುದನ್ನು ಪಾಕಿಸ್ತಾನೀ ಸೇನೆ ಖಚಿತಪಡಿಸಿತ್ತು. ಆದರೆ ೧೫ ವರ್ಷದ ಬಾಲಕಿ ಸೇರಿದಂತೆ ನಾಲ್ಕು ನಾಗರಿಕರಿಗೆ ಮಾತ್ರ ಗಂಭೀರ ಗಾಯಗಳಾಗಿವೆ ಎಂದು ಅದು ಹೇಳಿಕೊಂಡಿತ್ತು.

೨೦೨೦ ರಲ್ಲಿ ಭಾರತೀಯ ಸೇನೆಯು ೭೦೮ ಕದನ ವಿರಾಮ ಉಲ್ಲಂಘನೆ ಮಾಡಿದೆ  ಮತ್ತುಇಬ್ಬರು ನಾಗರಿಕರನ್ನು ಕೊಂದು ೪೨ ಜನರನ್ನು ಗಾಯಗೊಳಿಸಿದೆ ಎಂದು ಎಂದು ಇಸ್ಲಾಮಾಬಾದ್ ದೂಷಿಸಿತ್ತು.

 ಪಾಕಿಸ್ತಾನೀ ಸೇನೆಯು ಗಡಿ ನಿಯಂತ್ರಣಾ ರೇಖೆಯಲ್ಲಿ ಭಾರತೀಯ ಸೇನಾಪಡೆಯ ಗಡಿಠಾಣೆಗಳ  ಮೇಲೆ  ಫಿರಂಗಿ ದಾಳಿ ನಡೆಸಿತ್ತು ಎಂದೂ  ಪಾಕಿಸ್ತಾನಿ ಸೇನಾ ವಕ್ತಾರರು ಹೇಳಿಕೊಂಡಿದ್ದರು.
ಪಾಕಿಸ್ತಾನಿ ವಕ್ತಾರರ  ಹೇಳಿಕೆಯು ಪಾಕಿಸ್ತಾನದ ಕಡೆಯಲ್ಲಿ ಆಗಿರುವ  ಸಾವುನೋವುಗಳ ಪ್ರಮಾಣವನ್ನು ಮರೆಮಾಚುವ ಪ್ರಯತ್ನವಾಗಿದೆ ಎಂದು ಭಾರತೀಯ ಗುಪ್ತಚರ ವರದಿಗಳು ಹೇಳಿವೆ.  
ಏಪ್ರಿಲ್ ೧೦ ರಂದು ಭಾರತೀಯ ಸೇನೆಯು ಕೇರನ್ ವಲಯದಲ್ಲಿ ದೂರಗಾಮೀ ಶ್ರೇಣಿಯ  ಮದ್ದುಗುಂಡುಗಳನ್ನು ಬಳಸಿ ಗುರಿಗಳ ಮೇಲೆ ದಾಳಿ ನಡೆಸಿದಾಗ ಎಂಟು ಭಯೋತ್ಪಾದಕರೊಂದಿಗೆ ೧೫ ಪಾಕಿಸ್ತಾನ ಸೇನಾ ಸೈನಿಕರು ಸಾವನ್ನಪ್ಪಿದ್ದರು. ಇದಕ್ಕೂ  ಹೆಚ್ಚಾಗಿ ದುಧ್ನಿಯಲ್ ಪ್ರದೇಶದಲ್ಲಿ ಆಹಾರ ಮತ್ತು ಅಗತ್ಯ ವಸ್ತುಗಳ ಸಾಗಣೆ (ಲಾಜಿಸ್ಟಿಕ್ಸ್) ವಸ್ತುಗಳನ್ನು  ಸಂಗ್ರಹಿಸಿ ಇರಿಸಲಾಗಿದ್ದ ಸ್ಥಳಗಳು ಕೂಡಾ ಧ್ವಂಸವಾಗಿವೆ ಎಂದು ವರದಿಗಳು ಹೇಳಿವೆ.

ಲಷ್ಕರ್--ತೊಯ್ಬಾ,  ಜೈಶ್- ಇ- ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್  ಸಂಘಟನೆಗಳ ಸುಮಾರು ೧೬೦ ಭಯೋತ್ಪಾದಕರಾದ ಕಾಶ್ಮೀರಕ್ಕೆ ನುಸುಳಲು ಪ್ರದೇಶದಲ್ಲಿ ಕಾಯುತ್ತಿದ್ದರಿಂದ ಭಾರತೀಯ ಸೈನ್ಯಕ್ಕೆ  ಭಯೋತ್ಪಾದಕರ ಉಡಾವಣಾ ಶಿಬಿರಗಳನ್ನು ಗುರಿಯಾಗಿಸಿ ದಾಳಿ ನಡೆಸುವುದರ ಹೊರತು ಬೇರೆ ದಾರಿ ಇರಲಿಲ್ಲ ಎಂದು ಎಂದು ಪಾಕಿಸ್ತಾನ ವೀಕ್ಷಕರು ಹೇಳಿದ್ದಾರೆ.

ರಾಜೌರಿ ಮತ್ತು ಜಮ್ಮು ವಲಯದ ಪಿರ್ ಪಂಜಾಲ್ ದಕ್ಷಿಣ ಭಾಗಗಳಲ್ಲಿನ ಪರಿಸ್ಥಿತಿ ಕೂಡಾ ಭಿನ್ನವಾಗಿಲ್ಲ, ಅಲ್ಲಿ ೭೦ ಜೈಶ್ ಭಯೋತ್ಪಾದಕರು ಭಾರತಕ್ಕೆ ನುಸುಳಲು ಅವಕಾಶಕ್ಕಾಗಿ ಕಾಯುತ್ತಿರುವುದಾಗಿ ಗುಪ್ತಚರ ವರದಿಗಳು ಹೇಳಿವೆ.

ಬಾಲಾಕೋಟ್  ಮತ್ತು ಮೆಂಧರ್ ವಲಯಗಳಿಂದ ಕದನ ವಿರಾಮ ಉಲ್ಲಂಘನೆಯ  ವರದಿಗಳು  ಕಾಕತಾಳೀಯವಲ್ಲ,  ಗಡಿ ನಿಯಂತ್ರಣ ರೇಖೆಯ  ಉದ್ದಕ್ಕೂ ಫಿರಂಗಿದಾಳಿ ನಡೆದಿದೆ, ಇದೀಗ ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನ ಸ್ಥಿತಿ ಇದೆ’ ಎಂದು ವಕ್ತಾರರು ಹೇಳಿದರು.

ಭಯೋತ್ಪಾದಕರನ್ನು ಆಗಾಗ  ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳುವಂತೆ ಮಾಡುವುದು ಪಾಕಿಸ್ತಾನಿ ಸೇನೆಯ ನಿರಂತರ ಕೃತ್ಯವಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು ೨೪೨ ಭಯೋತ್ಪಾದಕರು ಇದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಅಂದಾಜು ಮಾಡಿವೆ.  ಹಿಂದಿನ ಅನುಭವದಂತೆ ಭಯೋತ್ಪಾದಕರ ಸಂಖ್ಯೆ  ೩೦೦ ದಾಟಿದ ತಕ್ಷಣವೇ ಹಿಂಸಾಚಾರ ಮತ್ತು ಭದ್ರತಾ ಪಡೆಗಳು ಹಾಗೂ ಪಾಕಿಸ್ತಾನದ ವಿರುದ್ಧ ಮಾತನಾಡುವ ರಾಜಕೀಯ ನಾಯಕರನ್ನು ಗುರಿಇಟ್ಟು ದಾಳಿಗಳು ಆರಂಭವಾಗುತ್ತವೆ ಎಂದು ಕಾಶ್ಮೀರ ತಜ್ಞರು ಹೇಳುತ್ತಾರೆ.

No comments:

Advertisement