Sunday, April 12, 2020

ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಆಸ್ಪತ್ರೆಯಿಂದ ಬಿಡುಗಡೆ

ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್  ಆಸ್ಪತ್ರೆಯಿಂದ ಬಿಡುಗಡೆ
ಲಂಡನ್: ಕೋವಿಡ್ -19 ಸೋಂಕಿನ ಹಿನ್ನೆಲೆಯಲ್ಲಿ ಸೈಟ್ ಥಾಮಸ್ ಆಸ್ಪತ್ರೆಗೆ ದಾಖಲಾಗಿದ್ದ ಇಂಗ್ಲೆಂಡ್ ಪ್ರಧಾನಿ  ಬೋರಿಸ್ ಜಾನ್ಸನ್ ಅವರು 2020 ಏಪ್ರಿಲ್ 12ರ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಕಿಂಗ್ ಹ್ಯಾಮ್ ಶೈರಿನ ಮನೆಗೆ ವಿಶ್ರಾಂತಿಯ ಸಲುವಾಗಿ ತೆರಳಿದರು. ತನ್ನ ಜೀವ ಕಾಪಾಡಿದ್ದಕ್ಕಾಗಿ ಅವರು ವೈದ್ಯರನ್ನು ಶ್ಲಾಘಿಸಿ ಧನ್ಯವಾದ ಅರ್ಪಿಸಿದರು.

ಶನಿವಾರ ಇಂಗ್ಲೆಂಡಿನಲ್ಲಿ ಕೊರೋನಾವೈರಸ್ ಸಾವಿನ ಸಂಖ್ಯೆ 9,875ಕ್ಕೆ ತಲುಪಿದ್ದು ವಾರಾಂತ್ಯದ ವೇಳೆಗೆ 10,000 ತಲುಪಬಹುದೆಂಬ ಭೀತಿ ವ್ಯಕ್ತವಾಗಿತ್ತು.

ಪ್ರಧಾನಿಯವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಚೆಕರ್ಸ್ ಗೆ ಚೇತರಿಕೆ ಸಲುವಾಗಿ ಕಳುಹಿಸಲಾಗಿದೆ. ಪ್ರಧಾನಿಯವರು ತತ್ ಕ್ಷಣವೇ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ೆಂದು ಡೌನಿಂಗ್ ಸ್ಟ್ರೀಟ್ ವಕ್ತಾರರು ಬಳಿಕ ತಿಳಿಸಿದರು.

No comments:

Advertisement