My Blog List

Sunday, April 5, 2020

ಈ ಪರಾವಲಂಬಿ ನಿರೋಧಿ ಔಷಧ: ಕೊರೋನಾವೈರಸ್ಸಿಗೆ ರಾಮಬಾಣ!

ಈ ಪರಾವಲಂಬಿ ನಿರೋಧಿ ಔಷಧ: ಕೊರೋನಾವೈರಸ್ಸಿಗೆ ರಾಮಬಾಣ!
ಮೆಲ್ಬೋರ್ನ್:  ಪ್ರಪಂಚದಾದ್ಯಂತ ಈಗಾಗಲೇ ಲಭ್ಯವಿರುವ ಪರಾವಲಂಬಿ ನಿರೋಧಿ  ಔಷಧವು ಪ್ರಯೋಗಾಲಯಗಳಲ್ಲಿ ಜೀವಕೋಶ ಸಂಸ್ಕರಣೆ ವಿಧಾನದಲ್ಲಿ (ಸೆಲ್ ಕಲ್ಚರ್)  ಬೆಳೆದ ಕೊರೋನಾವೈರಸ್ಸನ್ನು ಕೇವಲ ೪೮ ಗಂಟೆಗಳ ಒಳಗೆ ಕೊಲ್ಲುತ್ತದೆ ಎಂಬುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಸಂಶೋಧನೆಯು ಕೋವಿಡ್ -19 ವೈರಾಣು ವಿರುದ್ಧ ಹೊಸ ಕ್ಲಿನಿಕಲ್ ಚಿಕಿತ್ಸಾ ವಿಧಾನದ ಅಭಿವೃದ್ಧಿ ಮತ್ತು ಪ್ರಯೋಗಕ್ಕೆ ನಾಂದಿ ಹಾಡುವ ಸಾಧ್ಯತೆಗಳಿವೆ.
ಆಂಟಿವೈರಲ್ ರಿಸರ್ಚ್ ನಿಯತಕಾಲಿಕದಲ್ಲಿ 2020 ಏಪ್ರಿಲ್ 5ರ ಭಾನುವಾರ ಪ್ರಕಟವಾದ ಅಧ್ಯಯನದ ಪ್ರಕಾರ, ‘ಐವರ್ಮೆಕ್ಟಿನ್ ಎಂಬ ಔಷಧವು ಎಸ್‌ಎಆರ್‌ಎಸ್-ಸಿಒವಿ-2 ವೈರಸ್ಸನ್ನು ೪೮ ಗಂಟೆಗಳ ಒಳಗೆ ಜೀವಕೋಶದ ಸಂಸ್ಕರಣೆ ವಿಧಾನದಲ್ಲಿ ಬೆಳೆಯದಂತೆ ತಡೆಯಿತು.
‘ಒಂದೇ ಒಂದು ಪ್ರಮಾಣ (ಡೋಸ್) ಕೂಡಾ ಎಲ್ಲಾ ವೈರಲ್ ಆರ್‌ಎನ್‌ಎಗಳನ್ನು ೪೮ ಗಂಟೆಗಳ ಒಳಗೆ ನಿವಾರಣೆ ಮಾಡಬಹುದು ಮತ್ತು 2೪ ಗಂಟೆಗಳಲ್ಲಿ ಕೂಡಾ ಗಮನಾರ್ಹವಾದ ಇಳಿಕೆ ಕಂಡುಬಂದಿರುವುದನ್ನು ನಾವು ಕಂಡುಕೊಂಡಿದ್ದೇವೆ’ ಎಂದು ಆಸ್ಟ್ರೇಲಿಯಾದ ಮೊನಾಶ್ ವಿಶ್ವವಿದ್ಯಾಲಯದ ಅಧ್ಯಯನದ ಸಹ-ಲೇಖಕ ಕೈಲಿ ವ್ಯಾಗ್ಸ್ಟಾಫ್ ಹೇಳಿದರು.
ಐವರ್ಮೆಕ್ಟಿನ್ ಅನುಮೋದಿತ ಪರಾವಲಂಬಿ ವಿರೋಧಿ ಔಷಧವಾಗಿದ್ದು, ಎಚ್‌ಐವಿ, ಡೆಂಗ್ಯೂ, ಇನ್ಫ್ಲುಯೆಂಝಾ ಮತ್ತು ಜಿಕಾ ವೈರಸ್ ಸೇರಿದಂತೆ ವ್ಯಾಪಕ ಶ್ರೇಣಿಯ ವೈರಸ್‌ಗಳ ವಿರುದ್ಧ ಪರೀಕ್ಷಾ ಹಂತದಲ್ಲಿ ಪರಿಣಾಮಕಾರಿಯಾಗಿದೆ ಎಂದು ವಿಜ್ಞಾನಿಗಳು ನುಡಿದರು.
ಆದಾಗ್ಯೂ, ಅಧ್ಯಯನದಲ್ಲಿ ನಡೆಸಿದ ಪರೀಕ್ಷೆಗಳು ಆರಂಭಿಕ ಹಂತದಲ್ಲಿವೆ ಮತ್ತು ಜನರಲ್ಲಿ ಪರಿಣಾಮಕಾರಿತ್ವ ಬಗ್ಗೆ ಪ್ರಯೋಗಗಳನ್ನು ನಡೆಸುವ ಅವಶ್ಯಕತೆಯಿದೆ ಎಂದು ವ್ಯಾಗ್‌ಸ್ಟಾಫ್ ಎಚ್ಚರಿಸಿದರು.
ಐವರ್ಮೆಕ್ಟಿನ್’ನ್ನು ಬಹಳ ವ್ಯಾಪಕವಾಗಿ ಬಳಸಲಾಗುತ್ತದೆ ಮತ್ತು ಸುರಕ್ಷಿತ ಔಷಧವಾಗಿ ಪರಿಗಣಿಸಲಾಗಿದೆ. ಮಾನವರಲ್ಲಿ ನೀವು ಬಳಸಬಹುದಾದ ಪ್ರಮಾಣ (ಡೋಸೇಜ್) ಪರಿಣಾಮಕಾರಿಯಾಗುತ್ತದೆಯೇ ಎಂದು ನಾವು ಈಗ ಕಂಡುಹಿಡಿಯಬೇಕು - ಅದು ಮುಂದಿನ ಹಂತವಾಗಿದೆ’ ಎಂದು ವ್ಯಾಗ್‌ಸ್ಟಾಫ್ ಹೇಳಿದರು.
‘ಜಾಗತಿಕ ಸಾಂಕ್ರಾಮಿಕ ರೋಗವನ್ನು ಹೊಂದಿರುವ ಮತ್ತು ಅನುಮೋದಿತ ಚಿಕಿತ್ಸೆಯಿಲ್ಲದಿರುವ ಸಮಯದಲ್ಲಿ, ಪ್ರಪಂಚದಾದ್ಯಂತ ಈಗಾಗಲೇ ಲಭ್ಯವಿರುವ ಸಂಯುಕ್ತವನ್ನು ನಾವು ಹೊಂದಿದ್ದರೆ ಅದು ಜನರಿಗೆ ಬೇಗನೆ ಸಹಾಯಕ್ಕೆ ಬರುತ್ತದೆ’  ಎಂದು ಅವರು ಹೇಳಿದರು.

ಐವರ್ಮೆಕ್ಟಿನ್
ಔಷಧವು ವೈರಸ್ಸಿನ ಮೇಲೆ  ಯಾವ ರೀತಿ  ಕಾರ್ಯನಿರ್ವಹಿಸುತ್ತದೆ ಎಂಬುದು ತಿಳಿದಿಲ್ಲವಾದರೂ, ಇತರ ವೈರಸ್ಸುಗಳಲ್ಲಿನ ಅದರ ಕ್ರಿಯೆಯ ಆಧಾರದ ಮೇಲೆ,ವೈರಸ್ಸನ್ನು  ತೆರವುಗೊಳಿಸುವ ಔಷಧದ ಸಾಮರ್ಥ್ಯವು  ಅತಿಥಿ ಕೋಶಗಳನ್ನು ತಡೆಯುವ ಕೆಲಸ ಮಾಡುತ್ತದೆ ಎಂಬುದು ವಿಜ್ಞಾನಿಗಳ  ಅಭಿಪ್ರಾಯ ಎಂದು  ವ್ಯಾಗ್ ಸ್ಟಾಫ್ ಹೇಳಿದರು.
೨೦೨೦ ರ ಜನವರಿಯಲ್ಲಿ ಚೀನಾದ ಹೊರಗೆ ಸಾರ್ಸ್ –ಸಿಒವಿ2 (ಸಾರ್ಸ್ ಸಿಒವಿ2) ನ್ನು ಪ್ರಪ್ರಥಮವಾಗಿ ಪ್ರತ್ಯೇಕಿಸಿದ ತಂಡದ ವೈರಾಣುತಜ್ಞರ ತಂಡದ ಸದಸ್ಯನಾಗಿ,  ಕೋವಿಡ್-19ರ ವಿರುದ್ಧ ಐವರ್ಮೆಕ್ಟಿನ್ ಸಂಭಾವ್ಯ ಔಷಧವಾಗಿ ಬಳಕೆಗೆ ಬರುವಂತೆ ಮಾಡುವ ನಿರೀಕ್ಷೆ ನನ್ನದು. ಈ ಬಗ್ಗೆ ನಾನು ಅತ್ಯಂತ ಉತ್ಸುಕನಾಗಿದ್ದೇನೆ’   ಎಂದು ಈ ಅಧ್ಯಯನದ ಸಹಲೇಖಕರಾಗಿರುವ ಆಸ್ಟ್ರೇಲಿಯಾದ ರಾಯಲ್ ಮೆಲ್ಬೋರ್ನ್ ಆಸ್ಪತ್ರೆಯ ಲಿಯಾನ್ ಕ್ಯಾಲಿ ಹೇಳಿದರು.
ಕೋವಿಡ್-19ನ್ನು  ಎದುರಿಸುವಲ್ಲಿ ಐವರ್ಮೆಕ್ಟಿನ್ ಬಳಕೆಯು ಭವಿಷ್ಯದ ಕ್ಲಿನಿಕಲ್ ಪೂರ್ವ ಪರೀಕ್ಷೆಯ ಫಲಿತಾಂಶ ಮತ್ತು ಅಂತಿಮವಾಗಿ ಕ್ಲಿನಿಕಲ್ ಪ್ರಯೋಗಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದೂ ವಿಜ್ಞಾನಿಗಳು ಎಚ್ಚರಿಕೆಯ ಮಾತು ಹೇಳಿದ್ದಾರೆ.

No comments:

Advertisement